Weekly Horoscope: ಜುಲೈ 07-13 ವಾರ ಭವಿಷ್ಯ.. ಅದೃಷ್ಟ ದೇವಿ ಕೈ ಹಿಡಿಯುವ ರಾಶಿಗಳಿವು?

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಶುದ್ಧ ಬಿದಿಗೆಯಿಂದ ಅಷ್ಠಮಿಯವರೆಗೆ.

ಈ ವಾರದ ಚಂದ್ರನ ಸಂಚಾರ ಪುಷ್ಯ ನಕ್ಷತ್ರದಿಂದ ಚಿತ್ತವರೆಗೆ.

07/06/2024-13/07/2024ರ ವಾರ ಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜುಲೈ 07 ರಿಂದ ಜುಲೈ 13 ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

Weekly Horoscope In Kannada From July 07 To July 13 2024

ಮೇಷ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ರಾಶ್ಯಾಧಿಪತಿ ಕುಜ, ಎರಡನೇ ಮನೆಯಲ್ಲಿ ಗುರು, ಮೂರರಲ್ಲಿ ಸೂರ್ಯ, ನಾಲ್ಕರಲ್ಲಿ ಬುಧ ಶುಕ್ರ, ವಾರ ಪೂರ್ತಿ ಚಂದ್ರನ ಶುಭ ಸಂಚಾರ ನಿಮಗೆ ಅದೃಷ್ಟದ ವಾರ. ಯಾವುದೇ ನಿಂತುಹೋದ ಕೆಲಸಗಳು ಈ ವಾರ ನೆರವೇರುತ್ತದೆ. ‌ಧನಾಗಮನ ತುಂಬಾ ಉತ್ತಮವಾಗಿದೆ. ‌ಶತ್ರುಗಳು ದೂರವಿರುತ್ತಾರೆ. ಸರ್ಕಾರದಿಂದ ತಂದೆಯಿಂದ ಲಾಭ ಇದೆ. ಮನಸ್ಸಿಗೆ ಖುಷಿ ಕೊಡುವ ಸಂಗತಿಗಳು ನಡೆಯುತ್ತದೆ.

Weekly Horoscope In Kannada From July 07 To July 13 2024

ವೃಷಭ ರಾಶಿಯ ವಾರ ಭವಿಷ್ಯ

ಹನ್ನೊಂದನೇ ಮನೆಯಲ್ಲಿ ರಾಹು, ಮೂರನೇ ಮನೆಯಲ್ಲಿ ಬುಧ ಶುಕ್ರ ಸಮಯ ಬಹಳ ಚೆನ್ನಾಗಿದೆ. ವಾಹನದಿಂದ ಲಾಭ, ವಾಹನ ಉದ್ಯಮಿಗಳಿಗೆ ಲಾಭ. ಹಣದ ಹರಿವು ಉತ್ತಮವಾಗಿದೆ. ಈ ವಾರದ ಚಂದ್ರನ ಸಂಚಾರ ಕೂಡ ನಿಮಗೆ ಶುಭಕರವಾಗಿದೆ. ಹಣನಷ್ಟವಾಗುವ ಒಂದು ಪಿತೂರಿಯಿಂದ ಪಾರಾಗುವಿರಿ. ಯಾವುದೇ ಸಂದರ್ಭದಲ್ಲೂ ಹೆದರದೆ ಮುನ್ನಡೆಯುತ್ತೀರಿ.

Weekly Horoscope In Kannada From July 07 To July 13 2024

ಮಿಥುನ ರಾಶಿಯ ವಾರ ಭವಿಷ್ಯ

ಹನ್ನೊಂದನೆಯ ಮನೆಯಲ್ಲಿ ಕುಜ, ಎರಡನೇ ಮನೆಯಲ್ಲಿ ಬುಧ ಶುಕ್ರ ಒಳ್ಳೆಯ ಯೋಗ. ಧನಲಾಭ ನಿಶ್ಚಿಂತೆ, ಸಮಾರಂಭಗಳು ಸುಗ್ರಾಸ ಭೋಜನ, ಬಂಧುಬಾಂಧವರೊಡನೆ ಸಮ್ಮಿಲನ ಎಲ್ಲವೂ ಇದೆ. ಚಂದ್ರನ ಸಂಚಾರ ಕೂಡ ಈ ವಾರ ನಿಮಗೆ ಅನುಕೂಲವಾಗಿದೆ.‌ ದೈವ ಹಾಗೂ ಧರ್ಮಕಾರ್ಯಗಳಿಗೆ ಹಣ ಖರ್ಚುಮಾಡುವಿರಿ. ಕುಟುಂಬ ಸೌಖ್ಯ ಚೆನ್ನಾಗಿದೆ

Weekly Horoscope In Kannada From July 07 To July 13 2024

ಕಟಕ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಬುಧ ಶುಕ್ರ ಹಾಗೂ ಲಾಭಸ್ಥಾನದಲ್ಲಿ ಗುರು ಈಗ ನಿಮ್ಮ ಸಮಯ ಬಹಳ ಚೆನ್ನಾಗಿದೆ. ‌ಈ ವಾರದ ಚಂದ್ರನ ಸಂಚಾರ ಸಹ ವಾರದ ಕೊನೆಯಲ್ಲಿ ನಿಮಗೆ ಅನುಕೂಲಕರವಾಗಿರುತ್ತದೆ.‌ಮೂರನೇ ಮನೆಯ ಕೇತು ಶಕ್ತಿ ಪರಾಕ್ರಮವನ್ನೂ ಧನವನ್ನೂ ಕೊಡುತ್ತಾನೆ. ಶತ್ರುಗಳಿಂದ ನಿಮ್ಮನ್ನು ರಕ್ಷಿಸುತ್ತಾನೆ.‌ ನಿಂತು ಹೋಗಿದ್ದ ಕೆಲಸಗಳೆಲ್ಲ ಈಗ ಮುಂದುವರೆಯುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ‌

Weekly Horoscope In Kannada From July 07 To July 13 2024

ಸಿಂಹ ರಾಶಿಯ ವಾರ ಭವಿಷ್ಯ

ಹತ್ತನೇ ಮನೆಯಲ್ಲಿ ಗುರು ಅಷ್ಡು ಅನುಕೂಲನಲ್ಲ. ಆದರೆ ಲಾಭಸ್ಥಾನದಲ್ಲಿ ನಿಮ್ಮ ರಾಶಿಯ ಅಧಿಪತಿಯೆ ಇದ್ದಾನೆ. ಇದು ನಿಮಗೆ ಉತ್ತಮ ಫಲಗಳನ್ನು ಕೊಡುತ್ತದೆ. ಸರ್ಕಾರದಿಂದ ಲಾಭ ಇದೆ. ಗುರು ಹತ್ತನೇ ಮನೆಯಲ್ಲಿ ಇರುವುದು ವೃತ್ತಿ ಸಂಬಂಧವಾಗಿ ಸ್ವಲ್ಪ ಕಿರಿಕಿರಿ ಇರುತ್ತದೆ. ಆರೋಗ್ಯದಲ್ಲಿ ಏರುಪೇರುಗಳಾಗ ಬಹುದು. ಜಾಗ್ರತೆಯಿಂದ ಇರಿ. ಮಹತ್ತರವಾದ ಯಾವುದೇ ಹೂಡಿಕೆ ಬಂಡವಾಳವನ್ನು ಈಗ ಮಾಡಬೇಡಿ. ಖರ್ಚುಗಳು ಹೆಚ್ಚು. ಜಾಣತನದಿಂದ ನಿಭಾಯಿಸಿ.

Weekly Horoscope In Kannada From July 07 To July 13 2024

ಕನ್ಯಾ ರಾಶಿಯ ವಾರ ಭವಿಷ್ಯ

ನಿಮಗೆ ಈಗ ಅದೃಷ್ಟಕಾಲ. ಒಂಬತ್ತರಲ್ಲಿ ಗುರು ಹಾಗೂ ಲಾಭ ಸ್ಥಾನದಲ್ಲಿ ಬುಧ ಶುಕ್ರ ಇದ್ದು ಅಧಿಕ ಧನಲಾಭ ಕಾರ್ಯಸಿದ್ಧಿ ಇರುತ್ತದೆ. ‌ಯಾವುದೋ ಒಂದು ತಡೆ ಹಿಡಿದಿರುವ ಮುಖ್ಯ ಕೆಲಸ ಈಗ ಕೈಗೂಡುತ್ತದೆ.‌ ಹಣದ ಹರಿವು ಈಗ ಉತ್ತಮವಾಗಿದೆ. ವಾಹನದಿಂದ ಲಾಭ ಇದೆ. ವಾಹನ ಉದ್ದಿಮೆದಾರರಿಗೆ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಎಂಟನೇ ಮನೆಯಲ್ಲಿ ಕುಜ ಇರುವುದರಿಂದ ವಿದ್ಯುತ್ ಸಂಬಂಧ ಪಟ್ಟಹಾಗೆ ಎಚ್ಚರಿಕೆ ಇರಲಿ. ದೈಹಿಕ ಸಾಹಸ ಕಾರ್ಯಗಳನ್ನು ಮುಂದೂಡಿ.

Weekly Horoscope In Kannada From July 07 To July 13 2024

ತುಲಾ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಎಂಟನೇ ಮನೆಯಲ್ಲಿ ಗುರು ಇರುವುದು ಕೊಂಚ ಆರೋಗ್ಯಕ್ಕೆ ಕುತ್ತು. ಏನೋ ಆತಂಕ ದೈಹಿಕ ಪೀಡನೆಗಳು ಇರುತ್ತದೆ. ಮನಸ್ಸಿಗೆ ಬೇಸರವಾಗುವ ಸಂಗತಿಗಳು ಇರುತ್ತದೆ. ಆದರೆ ಹತ್ತನೇ ಮನೆಯಲ್ಲಿ ಬುಧ ಶುಕ್ರ ನಿಮ್ಮನ್ನು ಕೊಂಚ ಮಟ್ಟಿಗೆ ಕಾಪಾಡುತ್ತಾರೆ. ಆರನೇ ಮನೆಯ ರಾಹು ಧನಲಾಭ ಕೊಡುತ್ತಾನೆ.‌ಯಾರನ್ನೂ ನಂಬಬೇಡಿ ನಿಮ್ಮ ಹುಶಾರಿಯಲ್ಲಿ ನೀವು ಇರಿ.

Weekly Horoscope In Kannada From July 07 To July 13 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಈಗ ಏಳನೇ ಮನೆಯ ಗುರು ಹಾಗೂ ಒಂಬತ್ತನೇ ಮನೆಯ ಬುಧಶುಕ್ರ ಹಾಗೂ ಆರನೇ ಮನೆಯ ಕುಜ ನಿಮಗೆ ಬಹಳ ಅನುಕೂಲ ಒದಗಿಸಿಕೊಡುತ್ತಾರೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ ಸಡಗರ ಇರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವೃತ್ತಿ ಸಂಬಂಧವಾಗಿ ದೂರದೂರಿಗೆ ಹೋಗ ಬೇಕಾಗಬಹುದು.‌

Weekly Horoscope In Kannada From July 07 To July 13 2024

ಧನಸ್ಸು ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ಗುರು ಎಂಟನೇ ಮನೆಯಲ್ಲಿ ಬುಧ ಶುಕ್ರ ನಾಲ್ಕನೇ ಮನೆಯಲ್ಲಿ ರಾಹು ಇದು ಯಾವುದೂ ನಿಮಗೆ ಸಕಾರಾತ್ಮಕವಾಗಿ ಇಲ್ಲ. ಆದರೆ ಶನಿ ಮೂರನೇ ಮನೆಯಲ್ಲಿ‌ಇರುವುದು ಲಾಭಕರವಾಗಿದೆ. ಧನಲಾಭ, ಹಣದ ಹರಿವು ಉತ್ತಮವಾಗಿದೆ. ಐದನೇ ಮನೆಯಲ್ಲಿ ಕುಜ ಸ್ವಂತ ಮನೆಯಲ್ಲಿ ಇದ್ದು ಮಗನಿಗೆ ಶ್ರೇಯಸ್ಸು. ಸೂರ್ಯ ಏಳನೇ ಮನೆಯಲ್ಲಿ ಇರುವುದು ಸಂಗಾತಿಯೊಂದಿಗಿನ ಅನ್ಯೋನ್ಯತೆಗೆ ಧಕ್ಕೆ ಇದೆ. ಶನಿ‌ಯ ಬಲದಿಂದ ಜೀವನ‌ಕೊಂಚ ಸರಾಗವಾಗಿ ಸಾಗುತ್ತದೆ.

Weekly Horoscope In Kannada From July 07 To July 13 2024

ಮಕರ ರಾಶಿಯ ವಾರ ಭವಿಷ್ಯ

ಮೂರರಲ್ಲಿ ರಾಹು, ನಾಲ್ಕರಲ್ಲಿ ಕುಜ ಸ್ವಂತ ಮನೆಯಲ್ಲಿ, ಐದರಲ್ಲಿ ಗುರು, ಆರರಲ್ಲಿ ಸೂರ್ಯ ಏಳರಲ್ಲಿ ಬುಧ ಶುಕ್ರ ಸಮಯ ಬಹಳ ಚೆನ್ನಾಗಿದೆ. ನೀವು ಅಂದುಕೊಳ್ಳುವ ಕೆಲಸಗಳು ಈಗ ಕೈಗೂಡುವ ಸಮಯ. ಶಕ್ತಿ ಪರಾಕ್ರಮದಿಂದ ಏನನ್ನಾದರೂ ಸಾಧಿಸುತ್ತಿರಿ. ಹಣದ ಹರಿವು ಸರಾಗವಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ಹೊಸ ಕೆಲಸ ಸಿಗುವುದು ಮುಂತಾದ ಒಳ್ಳೆಯ ಸಂಗತಿಗಳು ಇವೆ.‌ ಯಾವುದೇ ಕೆಲಸ ಸರಾಗವಾಗಿ ಆಗುತ್ತದೆ. ಈಗ ಬದುಕಿನಲ್ಲಿ ಒಂದು ಹೊಸಬೆಳಕು ಕಾಣುವ ಸಮಯ.

Weekly Horoscope In Kannada From July 07 To July 13 2024

ಕುಂಭ ರಾಶಿಯ ವಾರ ಭವಿಷ್ಯ

ನಾಲ್ಕರಲ್ಲಿ ಗುರು, ಐದರಲ್ಲಿ ಸೂರ್ಯ, ಆರರಲ್ಲಿ ಬುಧ ಶುಕ್ರ ರಾಶಿಯಲ್ಲಿ ಶನಿ ಸಮಯ ಬಹಳ ಗಂಭೀರವಾಗಿದೆ. ನಿಮ್ಮ ಮೇಲೆ ಅಪವಾದಗಳು, ಅಣಕು ಮಾತುಗಳು, ವ್ಯಂಗ್ಯ ಬಾಣಗಳು ಬರುವ ಸಮಯ. ನೀವು ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ಇದ್ದಲ್ಲಿ ಯಾರೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ನೀವು ಹೂವು ಎಂದು ನಂಬಿದ್ದು ಹಾವಾಗುವ ಸಮಯ. ಬೇಡದ ರಗಳೆಗಳಲ್ಲಿ ಸಿಲುಕಬೇಡಿ. ಕೊಂಚ ತಗ್ಗಿದರೂ ಪಾರಾಗುವ ದಸರಿ ಹುಡುಕಿ.‌ ನಿಮ್ಮ ವರ್ಚಸ್ಸಿಗೆ ತಾತ್ಕಾಲಿಕ ಧಕ್ಕೆಯಾದರೂ ಪರವಾಗಿಲ್ಲ. ‌ಹಟಕ್ಕೆ ಬಿದ್ದು ಗೌರವ ಕಳೆದುಕೊಳ್ಳಬೇಡಿ.

Weekly Horoscope In Kannada From July 07 To July 13 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಾಡೆಸಾತಿ ಯ ಅವಾಂತರ ಇದ್ದರೂ ಐದನೇ ಮನೆಯಲ್ಲಿ ಬುಧ ಶುಕ್ರ ಇರುವುದು ಕೊಂಚ ತಾತ್ಕಾಲಿಕ ಉಪಶಮನ ಕೊಡುತ್ತದೆ. ಮನೆಯಲ್ಲಿ ಅಶಾಂತಿಯ ವಾತಾವರಣ. ಮನೆಯ ಸದಸ್ಯರಿಗೆ ಅನಾರೋಗ್ಯ ಹಣಕಾಸಿನ ಅಡಚಣೆ ನಿಮ್ಮನ್ನು ಹಣ್ಣು ಮಾಡುತ್ತದೆ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಮಯ. ಹೆದರಬೇಡಿ. ಆದಷ್ಟು ನಿಮ್ಮ ಪಾಡಿಗೆ ನೀವಿರಿ. ನೀವಾಯ್ತು ನಿಮ್ಮ ಕೆಲವಾಯ್ತು ಎಂಬಂತೆ ಕೊಂಚ ಎಲ್ಲರಿಂದಲೂ ಅಂತರ ಕಾಯ್ದುಕೊಳ್ಳಿ. ಹಣದ ಸಂಕಷ್ಟಗಳು ಇರುತ್ತದೆ. ‌ವಿವೇಚನೆಯಿಂದ ನಿಭಾಯಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+