Weekly Horoscope: ಡಿ.08-14ರ ವರೆಗೆ ಈ ರಾಶಿಗಳ ಲೆಕ್ಕಾಚಾರ ಸಂಪೂರ್ಣ ಉಲ್ಟಾಪಲ್ಟ..ಎಚ್ಚರ!

ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಹೇಮಂತ ಋತು ಮಾರ್ಗಶಿರ ಮಾಸದ ಶುಕ್ಲಪಕ್ಷದ ಸಪ್ತಮಿಯಿಂದ ಹುಣ್ಣಿಮೆಯವರೆಗೆ

ಈ ವಾರದ ಚಂದ್ರನ ಸಂಚಾರ ಶತಭಿಷ ನಕ್ಷತ್ರದಿಂದ ಮೃಗಶಿರಾ ನಕ್ಷತ್ರದ ವರೆಗೆ

08/12/2024-14/12/2024ರ ವಾರ ಭವಿಷ್ಯ

Weekly Horoscope In Kannada From December 08 To December 14 2024
Photo Credit: WISE

ಮೇಷ ರಾಶಿಯ ವಾರ ಭವಿಷ್ಯ

ಶುಕ್ರ ಹತ್ತನೇ ಮನೆಯಲ್ಲಿದ್ದು ಸ್ವಲ್ಪ ಹಿನ್ನಡೆ ಮಾಡಿದರೂ ಶನಿ ಹನ್ನೊಂದನೇ ಮನೆಯಲ್ಲಿ ಧನಲಾಭ ಅಥವಾ ಒಳ್ಳೆಯದೇನಾದರೂ ಕೊಟ್ಟು ಜೀವನ ಭದ್ರ ಮಾಡುತ್ತಾನೆ. ಗುರು ಎರಡನೇ ಮನೆಯಲ್ಲಿ ಇದ್ದು ನಿಮ್ಮ ಪ್ರಯತ್ನಗಳು ಸಫಲವಾಗುವಂತೆ ಮಾಡುತ್ತಾನೆ. ಆರನೇ ಮನೆಯ ಕೇತು ಸಹ ನಿಮಗೆ ಯಶಸ್ಸು ಕೊಡುತ್ತಾನೆ. ಈ ವಾರದಲ್ಲಿ ಏನೋ ಒಂದು ಶುಭಸುದ್ದಿ ಇದೆ. ಸಮಯ ತುಂಬಾ ಚೆನ್ನಾಗಿದೆ.

Weekly Horoscope In Kannada From December 08 To December 14 2024
Photo Credit: WISE

ವೃಷಭ ರಾಶಿಯ ವಾರ ಭವಿಷ್ಯ

ಶುಕ್ರ ಒಂಬತ್ತನೇ ಮನೆಯಲ್ಲಿದ್ದು ಭಾಗ್ಯಗಳನ್ನು ಕೊಡುತ್ತಾನೆ. ವಿಹಾರ ಅಥವಾ ಪ್ರವಾಸ ಹೋಗಬಹುದು. ಹನ್ನೊಂದರಲ್ಲಿ ರಾಹು, ಮೂರರಲ್ಲಿ ಕುಜ ಸಮಯ ಬಹಳ ಚೆನ್ನಾಗಿದೆ. ಸಾಲ ತೀರಿಸುವಿರಿ. ನಿಮಗೆ ಪ್ರೀತಿಪಾತ್ರರ ಬಗ್ಗೆ ಶುಭ ಸುದ್ದಿ ಸಿಕ್ಕಿ ನೀವು ಖುಷಿಯಾಗುತ್ತೀರಿ. ಮನಸ್ಸಿಗೆ ನೆಮ್ಮದಿ ಇದೆ. ದೇವರ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ.

Weekly Horoscope In Kannada From December 08 To December 14 2024
Photo Credit: WISE

ಮಿಥುನ ರಾಶಿಯ ವಾರ ಭವಿಷ್ಯ

ಆರರಲ್ಲಿ ಸೂರ್ಯ ಬುಧ ಎಂಟರಲ್ಲಿ ಶುಕ್ರ ಸಮಯ ಮಧ್ಯಮ ಏಕೆಂದರೆ ಶನಿ, ಗುರು, ರಾಹು ಕೇತು ಯಾರ ಬಲವೂ ಇಲ್ಲ. ಈಗ ನಿಮ್ಮನ್ನು ನೀವೇ ಸಂಭಾಳಿಸಿಕೊಳ್ಳಬೇಕು. ಯಾರೂ ರಕ್ಷಣೆಗೆ ಇಲ್ಲ. ಖರ್ಚುಗಳು ಒತ್ತಡಗಳು ನಿಮ್ಮನ್ನು ಹೆದರಿಸುತ್ತವೆ ಆದರೆ ನೀವು ಗಟ್ಡು ಮನಸ್ಸಿನಿಂದ ಅವೆಲ್ಲವನ್ನೂ ನಿಭಾಯಿಸಿ ಮುನ್ನಡೆಯಿರಿ. ಮುಂದಿನ ದಿನಗಳು ಚೆನ್ನಾಗಿ ಇರುವುದರಿಂದ ಈಗಿನ ನಿಮ್ಮ ಪ್ರಯತ್ನಗಳು ಮುಂದೆ ಖಂಡಿತಾ ಶುಭಫಲ ಕೊಡುತ್ತದೆ.

Weekly Horoscope In Kannada From December 08 To December 14 2024
Photo Credit: WISE

ಕಟಕ ರಾಶಿಯ ವಾರ ಭವಿಷ್ಯ

ಮೂರರಲ್ಲಿ ಕೇತು ಶಕ್ತಿಯನ್ನೂ ಪರಾಕ್ರಮ ವನ್ನೂ ಕೊಡುತ್ತಾನೆ. ಹನ್ನೊಂದನೇ ಮನೆಯಲ್ಲಿ ಗುರು, ಐದನೇ ಮನೆಯಲ್ಲಿ ಬುಧ ಸೂರ್ಯ ಇಬ್ಬರೂ ನಿಮ್ಮ ಬೆಂಬಲಕ್ಕೆ ಇದ್ದಾರೆ. ಅಷ್ಟಮ ಶನಿಯ ಪ್ರಭಾವ ದಿನೇ ದಿನೇ ಕಡಿಮೆ ಆಗುತ್ತಿದೆ. ಸಂಪೂರ್ಣ ಶುಭಫಲಗಳಿಗೆ ಇನ್ನೂ ಸ್ವಲ್ಪ ಕಾಯಬೇಕು. ಈಗಲೇ ನಿಮಗೆ ಒಳ್ಳೆಯ ಸೂಚನೆಗಳು ಅನುಭವಕ್ಕೆ ಬಂದಿರುತ್ತದೆ. ಸಿಕ್ಕುಗಳು ಸಡಿಲವಾಗುತ್ತಿವೆ

Weekly Horoscope In Kannada From December 08 To December 14 2024

ಸಿಂಹ ರಾಶಿಯ ವಾರ ಭವಿಷ್ಯ

ಹತ್ತರಲ್ಲಿ ಗುರು, ಏಳರಲ್ಲಿ ಶನಿ ಎಂಟರಲ್ಲಿ ರಾಹು ಯಾವ ಗ್ರಹಗಳೂ ನಿಮಗೆ ಸಾಥ್ ಕೊಡುತ್ತಿಲ್ಲ. ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತೀರಿ.‌ ವೃತ್ತಿಯಲ್ಲಿ ಒತ್ತಡಗಳು ಇರುತ್ತದೆ. ಐದನೇ ಮನೆಯಲ್ಲಿ ಇರುವ ಬುಧ ನಿಮಗೆ ಈಗ ಸಧ್ಯಕ್ಕೆ ರಕ್ಷಣೆ ಕೊಡುತ್ತಾನೆ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ.

Weekly Horoscope In Kannada From December 08 To December 14 2024

ಕನ್ಯಾ ರಾಶಿಯ ವಾರ ಭವಿಷ್ಯ

ಗುರು ಬಲ ಶನಿಬ ಲ ಇದೆ. ಆದರೆ ರಾಶಿಯಲ್ಲೇ ಕೇತು ಇದ್ದು ಆರೋಗ್ಯಕ್ಕೆ ಧಕ್ಕೆ ತರುತ್ತಾನೆ. ಸಂಗಾತಿಯೊಡನೆ ಸಾಮರಸ್ಯಕ್ಕೆ ಕೊಂಚ ಧಕ್ಕೆಯಾಗುತ್ತದೆ. ಮೂರಲ್ಲಿ ಸೂರ್ಯ, ಬುಧ, ಐದರಲ್ಲಿ ಶುಕ್ರ ನಿಮಗೆ ಶುಭಫಲಗಳನ್ನು ಕೊಡುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವೃತ್ತಿಯಲ್ಲಿ ಯಶಸ್ಸು ಇದೆ.

Weekly Horoscope In Kannada From December 08 To December 14 2024

ತುಲಾ ರಾಶಿಯ ವಾರ ಭವಿಷ್ಯ

ಈ ವಾರದಲ್ಲಿ ವಿಶೇಷ ಎಂದರೆ ಶುಕ್ರ ನಾಲ್ಕನೆ ಮನೆಯಲ್ಲಿದ್ದು ನಿಮಗೆ ಅನೇಕ ಸುಖಸಂತೋಷಗಳನ್ನು ಕೊಡುತ್ತಾನೆ. ವಾಹನದಿಂದ ಲಾಭ ಇದೆ. ವಾಹನ ಕೊಳ್ಳುವ ಯೋಗವೂ‌ ಇದೆ. ಚಿನ್ನಾಭರಣ, ಅಲಂಕಾರ ಸಾಮಗ್ರಿ ಮುಂತಾದುವನ್ನು ಕೊಳ್ಳುವ ಯೋಗ ಇದೆ. ರಾಹು ಆರನೇ ಮನೆಯಲ್ಲಿ ಇದ್ದು ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ.

Weekly Horoscope In Kannada From December 08 To December 14 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಗುರು ಏಳನೇ ಮನೆಯಲ್ಲಿ ಇದ್ದು ಮನೆಯಲ್ಲಿ ಮಂಗಳಮಯ ವಾತಾವರಣ ಇರುತ್ತದೆ. ಶುಭಕಾರ್ಯ ನಡೆಯುತ್ತದೆ.‌ ಸಂತಸದ ವಾತಾವರಣ ಇರುತ್ತದೆ. ಕ್ಷೇತ್ರ ದರ್ಶನದ ಅವಕಾಶ ಇದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ.‌ ಹಣದ ಹರಿವು ಉತ್ತಮವಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.

Weekly Horoscope In Kannada From December 08 To December 14 2024

ಧನಸ್ಸು ರಾಶಿಯ ವಾರ ಭವಿಷ್ಯ

ಮೂರನೇ ಮನೆಯಲ್ಲಿ ಶನಿ ಎರಡನೇ ಮನೆಯಲ್ಲಿ ಶುಕ್ರ ಇದ್ದಾರೆ. ಹಣಕಾಸಿಗೆ ತೊಂದರೆ ಇಲ್ಲ ಆದರೆ ಗುರು ಆರನೆಯ ಮನೆಯಲ್ಲಿ ಇರುವುದರಿಂದ ಮಾನಸಿಕ ಚಿಂತೆ ಕಳವಳ ಇರುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದು ತಾಯಿಯೊಡನೆ ವಿರೋಧಗಳು ಇರುತ್ತದೆ. ಸರಿಯಾದ ನಿದ್ರೆ ಊಟ ಇಲ್ಲದೆ ವೃಥಾ ಅಲೆದಾಟ ಇರುತ್ತದೆ. ಕೆಲವು ದಿನಗಳು ಕಳೆದರೆ ಗುರುಬಲ ಬಂದು ಪರಿಸ್ಥಿತಿಗಳು ತಿಳಿಯಾಗುತ್ತದೆ.

Weekly Horoscope In Kannada From December 08 To December 14 2024

ಮಕರ ರಾಶಿಯ ವಾರ ಭವಿಷ್ಯ

ಸಾಡೆಸಾತಿಯ ಶನಿಯ ಪ್ರಭಾವ ಕಡಿಮೆ ಆಗಿದೆ. ಒಳ್ಳೆಯ ಸೂಚನೆಗಳು ಕಾಣುತ್ತಿವೆ.‌ ನಿಮ್ಮ ರಾಶಿಯಲ್ಲೇ ಯೋಗಕಾರಕ ಗ್ರಹ ಶುಕ್ರನಿದ್ದಾನೆ. ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಐದನೆ ಮನೆಯಲ್ಲಿ ಗುರು ಮೂರನೇ ಮನೆಯಲ್ಲಿ ರಾಹು ಸಮಯ ಬಹಳ‌ಚೆನ್ನಾಗಿದೆ.‌ ಹೊಸ ಅವಕಾಶಗಳು ಹುಡುಕಿ ಬರುತ್ತದೆ. ಸಭೆ ಸಮಾರಂಭಗಳಲ್ಲಿ ಸನ್ಮಾನ ಗೌರವ ಸಿಗುವಂಥ ಸಮಯ. ಕಷ್ಟದ ದಿನಗಳು ಕಳೆದಿವೆ ಸುಖದ ದಿನಗಳು ಖಂಡಿತಾ ಮುಂದೆ ಇದೆ.

Weekly Horoscope In Kannada From December 08 To December 14 2024

ಕುಂಭ ರಾಶಿಯ ವಾರ ಭವಿಷ್ಯ

ಗುರು ನಾಲ್ಕನೇ ಮನೆಯಲ್ಲಿ ಶನಿ ನಿಮ್ಮ ರಾಶಿಯಲ್ಲಿ, ಶುಕ್ರ ವ್ಯಯಸ್ಥಾನದಲ್ಲಿ ಖರ್ಚು ಬಹಳ ಜೋರಾಗಿ‌ಇದೆ. ನೀವು ಊಹಿಸದೆ ಇದ್ದ ಖರ್ಚುಗಳು ನಿಮ್ಮ ಮೇಲೆ ಬೀಳುತ್ತದೆ. ಬೇರೆ ಯಾವ ಗ್ರಹಬಲವೂ ಇಲ್ಲದಿರುವುದರಿಂದ ಕೊಂಚ ಜಾಗ್ರತೆ ವಹಿಸಿ. ಕಾರ್ಯಕ್ಷೇತ್ರದಲ್ಲಿ ಸಹ ಒತ್ತಡಗಳು, ಸಹೋದ್ಯೋಗಿಗಳೊಡನೆ ಕಿರಿಕಿರಿ ಇರುತ್ತದೆ. ಮಾಬೇಕೆಂದುಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಆಗದೇ ಇರುವುದು, ಆರೋಗ್ಯದಲ್ಲೂ ಸಣ್ಣಪುಟ್ಟ ಏರುಪೇರುಗಳು ಇರುತ್ತದೆ. ಸಂಭಾಳಿಸಿಕೊಳ್ಳಿ.‌

Weekly Horoscope In Kannada From December 08 To December 14 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಹ ಖರ್ಚುಗಳು ಹಾಗೂ ಅನಾರೋಗ್ಯ ಇದೆ. ಮನಸ್ಸಿನ‌ ನೆಮ್ಮದಿ ಕೆಡಿಸುವಂತಹ ಘಟನೆಗಳು ನಡೆಯಬಹುದು. ಎಚ್ಚರಿಕೆಯಿಂದ ಇರಿ.‌ ಒಂಬತ್ತನೇ ಮನೆಯಲ್ಲಿ ಬುಧ ಮತ್ತು ಹನ್ನೊಂದನೇ ಮನೆಯಲ್ಲಿ ಶುಕ್ರ ಇರುವುದು ಕೊಂಚ ಹಿತಕರ ಸ್ಥಿತಿಯನ್ನು ಕೊಡುತ್ತದೆ. ವಾಹನದಿಂದ ಲಾಭ ಇದೆ. ಚಿನ್ನ ಬೆಳ್ಳಿ ಆಭರಣ ವಸ್ತು‌ಕೊಳ್ಳುವ ಅವಕಾಶ ಇದೆ. ಸಾಡೆಸಾತಿ ಶನಿ ಇರುವುದರಿಂದ ನಡೆನುಡಿಯಲ್ಲಿ ಎಚ್ಚರಿಕೆ ಜಾಗರೂಕತೆ ಇರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+