Weekly Horoscope: ಆರೋಗ್ಯ, ಅಪಘಾತ, ಅನಾಹುತ..ಈ ರಾಶಿಗಳು ಎಚ್ಚರದಿಂದ ಇರಿ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಆಷಾಢ ಬಹುಳ ಅಮಾವಾಸ್ಯೆ ಯಿಂದ ಶ್ರಾವಣ ಶುದ್ದ ಸಪ್ತಮಿಯ ವರೆಗೆ.

ಈ ವಾರದ ಚಂದ್ರನ ಸಂಚಾರ ಪುಷ್ಯ ನಕ್ಷತ್ರದಿಂದ ಸ್ವಾತಿವರೆಗೆ

04/08/2024-10/08/2024ರ ವಾರ ಭವಿಷ್ಯ

Weekly Horoscope In Kannada From August 04 To August 10 2024

ಮೇಷ ರಾಶಿಯ ವಾರ ಭವಿಷ್ಯ

ಐದನೇ ಮನೆಯಲ್ಲಿ ಶುಕ್ರ ಬುಧ ಇದ್ದಾರೆ. ಲಾಭ ಸ್ಥಾನದಲ್ಲಿ ಶನಿ, ಧನಸ್ಥಾನದಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಅಂದುಕೊಂಡ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಹಣದ ಹರಿವು ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಶುಭಕಾಲ. ಚಂದ್ರನ ಸಂಚಾರ ಸಹ ನಿಮಗೆ ಈ ವಾರ ಅನುಕೂಲಕರವಾಗಿದೆ.

Weekly Horoscope In Kannada From August 04 To August 10 2024

ವೃಷಭ ರಾಶಿಯ ವಾರ ಭವಿಷ್ಯ

ನಾಲ್ಕನೇ ಮನೆಯಲ್ಲಿ ಬುಧ ಶುಕ್ರ ಲಾಭಸ್ಥಾನದಲ್ಲಿ ರಾಹು ಹಣದ ಹರಿವಿಗೆ ತೊಂದರೆ ಇಲ್ಲ. ಆದರೆ ಖರ್ಚುಗಳೂ ಇದೆ. ಸಂಭಾಳಿಸಿಕೊಂಡು ಹೋಗಬೇಕು. ಮೂರರಲ್ಲಿ ಸೂರ್ಯ ಇರುವುದು ಧೈರ್ಯದಿಂದ ಮುನ್ನಡೆಯುವಂತಹ ಶಕ್ತಿ ಕೊಡುತ್ತದೆ. ವಾಹನದಿಂದ ಲಾಭ ಇದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

Weekly Horoscope In Kannada From August 04 To August 10 2024

ಮಿಥುನ ರಾಶಿಯ ವಾರ ಭವಿಷ್ಯ

ಮೂರನೇ ಮನೆಯಲ್ಲಿ‌ ಬುಧ ಶುಕ್ರ ಇರುವುದೇ ಈಗ ನಿಮ್ಮ ಶಕ್ತಿ. ಬಾಕಿಯಂತೆ ಬೇರೆ ಗ್ರಹಗಳು ತಟಸ್ಥ. ನಾಲ್ಕನೇ ಮನೆಯಲ್ಲಿ ಕೇತು‌ ಇದ್ದು ತಾಯಿಗೆ ಒತ್ತಡವನ್ನು ಕೊಡುತ್ತಾನೆ. ತಾಯಿಗೆ ಕೆಲಸದ ಹೊರೆ ಜಾಸ್ತಿ. ಇನ್ನು ಕೊಂಚ ದಿನಗಳಲ್ಲಿ ಸೂರ್ಯ ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ವಿನ ಲಾಭ ಇದೆ.

Weekly Horoscope In Kannada From August 04 To August 10 2024

ಕಟಕ ರಾಶಿಯ ವಾರ ಭವಿಷ್ಯ

ಈಗ ನಿಮ್ಮ ರಾಶಿಯಲ್ಲೇ ಸೂರ್ಯ ಇದ್ದಾನೆ. ಉಷ್ಣಕ್ಕೆ ಸಂಬಂಧಿಸಿದ ತೊಂದರೆಗಳು ಬರಬಹುದು. ಎರಡನೇ ಮನೆಯಲ್ಲಿ ಬುಧ ಶುಕ್ರ ಇದ್ದು ಹಣದ ಹರಿವು‌ ಉತ್ತಮಪಡಿಸುತ್ತಾರೆ. ಮನೆಯಲ್ಲಿ ನೆಮ್ಮದಿ ಖುಷಿಯ ವಾತಾವರಣ ಇರುತ್ತದೆ. ಪ್ರಯಾಣ ಯೋಗ ಇದೆ. ಗುರುಗಳ ಸಾನಿಧ್ಯ ಗುರುಕೃಪೆ ಸಿಗುವ ಸಂದರ್ಭಗಳು ದೊರೆಯಬಹುದು.

Weekly Horoscope In Kannada From August 04 To August 10 2024

ಸಿಂಹ ರಾಶಿಯ ವಾರ ಭವಿಷ್ಯ

ಗುರು ಹತ್ತನೇ ಮನೆಯಲ್ಲಿ ಸೂರ್ಯ ಹನ್ನೆರಡನೇ ಮನೆಯಲ್ಲಿ ಇರುವುದರಿಂದ ಖರ್ಚು ಹೆಚ್ಚು. ಆದರೆ ಶುಕ್ರ ಬುಧ ನಿಮ್ಮ ರಾಶಿಯಲ್ಲೇ ಇದ್ದು ಸ್ವಲ್ಪಮಟ್ಟಿಗೆ ನಿಮಗೆ ಸಹಾಯ ಮಾಡುತ್ತಾರೆ. ಶನಿಯ ಏಳನೇ ಮನೆಯ ಸ್ಥಾನವೂ ನಿಮಗೆ ಅನುಕೂಲವಿಲ್ಲ. ಏನೇ ಫಲವೂ 50/50. ಶುಭಫಲಗಳಿಗಾಗಿ ಕಾಯಬೇಕು. ಈ ದಿನಗಳಲ್ಲಿ ನಿಮಗೆ ನಿಧಾನ ಫಲ.

Weekly Horoscope In Kannada From August 04 To August 10 2024

ಕನ್ಯಾ ರಾಶಿಯ ವಾರ ಭವಿಷ್ಯ

ಎಲ್ಲ ಗ್ರಹಗಳೂ ನಿಮಗೆ ಅನುಕೂಲವಾಗಿ ಇದ್ದರೂ ರಾಹು ಏಳನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುವುದರಿಂದ ಫಲ ನಿಧಾನವಾಗಿ‌ ಸಿಗುತ್ತದೆ. ಕೇತು ನಿಮ್ಮ ರಾಶಿಯಲ್ಲೇ ಇದ್ದಾನೆ. ಇದೂ ಕೂಡ ನಿಮಗೆ ವ್ಯತಿರಿಕ್ತ ಫಲ ಕೊಡುತ್ತದೆ. ಮುಖ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿದೆ. ‌ಶುಭಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ.

Weekly Horoscope In Kannada From August 04 To August 10 2024

ತುಲಾ ರಾಶಿಯ ವಾರ ಭವಿಷ್ಯ

ಈಗ ಆರನೇ ಮನೆಯಲ್ಲಿ ರಾಹು, ಹನ್ನೊಂದನೇ ಮನೆಯಲ್ಲಿ ಬುಧ ಶುಕ್ರ ನಿಮಗೆ ನೆರವು ನೀಡುತ್ತಾರೆ. ಎಂಟನೇ ಮನೆಯಲ್ಲಿ ಗುರು ಕುಜ ನಿಮಗೆ ಈಗ ಉಪಕಾರಿಗಳಲ್ಲ. ಉದರಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಣಬಹುದು. ಎಚ್ಚರಿಕೆ ಇರಲಿ. ಹನ್ನೆರಡನೇ ಮನೆಯಲ್ಲಿ ಕೇತು ಇದ್ದಾನೆ, ಆಧ್ಯಾತ್ಮಿಕ ವಿಷಯಗಳಲ್ಲಿ ಈಗ ನಿಮ್ಮ ಮನಸ್ಸು ತೊಡಗಿಕೊಳ್ಳಬಹುದು. ಸಾಧು ಸನ್ಯಾಸಿಗಳ ದರ್ಶನ ಆಗಬಹುದು. ಹಣದ ಹರಿವು ಉತ್ತಮವಾಗಿದೆ. ಒಳ್ಳೆಯ ಸಂಗತಿಗಳಿಗೆ ಇನ್ನೂ ಕಸಲ ಕೂಡಿ ಬರಬೇಕು.

Weekly Horoscope In Kannada From August 04 To August 10 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಗುರುಬಲದ ಭದ್ರತೆ ಇರುವುದರಿಂದ ಯಾವುದೇ ಕಷ್ಟಗಳು ಎದುರಾದರೂ ಸುಲಭವಾಗಿ ಪಾರಾಗುವಿರಿ. ಹತ್ತನೇ ಮನೆಯಲ್ಲಿ ಬುಧ ಶುಕ್ರ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತಾರೆ. ಗುರು ಹಾಗೂ ಕುಜ ನೇರವಾಗಿ ನಿಮ್ಮ ರಾಶಿಯನ್ನು ನೋಡುವುದರಿಂದ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣುವಿರಿ. ನಿಮ್ಮನ್ನು ಜೀವನದ ಮತ್ತೊಂದು ಅಂತಸ್ತು ಏರುವಂತೆ ಮಾಡುತ್ತದೆ. ಸಮಾಜದಲ್ಲಿ ಮನ್ನಣೆ, ಗೌರವ ಸಂಪಾದಿಸುವಿರಿ.

Weekly Horoscope In Kannada From August 04 To August 10 2024

ಧನಸ್ಸು ರಾಶಿಯ ವಾರ ಭವಿಷ್ಯ

ಒಂಬತ್ತನೇ ಮನೆಯಲ್ಲಿ ಬುಧ ಶುಕ್ರ ಆರನೇ ಮನೆಯಲ್ಲಿ ಕುಜ ಮೂರನೇ ಮನೆಯಲ್ಲಿ ಶನಿ ಈಗ ನಿಮಗೆ ಸಹಾಯಕರಾಗಿರುವ ಗ್ರಹಗಳು. ಹಣದ ಹರಿವು ಉತ್ತಮವಾಗಿದೆಯಾದರೂ ಮಾನಸಿಕವಾಗಿ ಕುಗ್ಗುತ್ತೀರಿ. ಮನಸ್ಸಿಗೆ ಘಾಸಿಯಾಗುವಂಥ ಘಟನೆಗಳು ನಡೆಯುತ್ತವೆ. ನಂಬಿದ ಜನರಿಂದಲೇ ಮೋಸಹೋಗಬಹುದು ಅಥವಾ ನಿಮ್ಮ ಆಪ್ತರಿಂದಲೇ ನಿಮಗೆ ಅವಮಾನ ಆಗಬಹುದು. ಇಂಥ ಸಮಯದಲ್ಲಿ ಈಶ್ವರನ ಧ್ಯಾನ ಪೂಜೆ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ.

Weekly Horoscope In Kannada From August 04 To August 10 2024

ಮಕರ ರಾಶಿಯ ವಾರ ಭವಿಷ್ಯ

ಈಗ ಗುರು, ರಾಹು ಇಬ್ಬರೂ ನಿಮಗೆ ಅನುಕೂಲವಾಗಿ‌ ಇದ್ದಾರೆ. ಸರ್ಕಾರದಿಂದ ಹಣ ಬರುವುದಿದ್ದರೆ ಈಗ ಬರುತ್ತದೆ. ಸಾಕಷ್ಟು ಅವಕಾಶಗಳು ನಿಮ್ಮ ಮನೆ ಬಾಗಿಲಿಗೇ ಬರುತ್ತದೆ. ಆಯ್ಕೆ ನಿಮಗೆ ಸೇರಿದ್ದು. ನೆನೆಗುದಿಗೆ ಬಿದ್ದಿದ್ದ ಎಷ್ಡೋ ಕೆಲಸಗಳು ಈಗ ಚಾಲನೆ ಪಡೆದುಕೊಳ್ಳುತ್ತವೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಂಭವ ಇದೆ. ಹೊಸ ಕೆಲಸ ಸಿಗುವುದು ವಿವಾಹಾದಿ ಮಂಗಳ ಕಾರ್ಯಗಳು ನಡೆಯುತ್ತವೆ

Weekly Horoscope In Kannada From August 04 To August 10 2024

ಕುಂಭ ರಾಶಿಯ ವಾರ ಭವಿಷ್ಯ

ಈಗ ನಿಮಗೆ ನಾನಾ ಕಡೆಯಿಂದ ಭಯ ಅತಂತ್ರ ಸ್ಥಿತಿ ಎದುರಾಗುತ್ತದೆ. ಅಧಿಕಾರ ಕಳೆದುಕೊಳ್ಳುವುದು, ನೌಕರಿ ಕಳೆದುಕೊಳ್ಳುವ ಭಯ ಇರುತ್ತದೆ. ಗುರು ನಾಲ್ಕನೇ ಮನೆಯಲ್ಲಿ ನಿಮಗೆ ಅನುಕೂಲನಲ್ಲ. ಆರರಲ್ಲಿ ಸೂರ್ಯ ಸ್ವಲ್ಪ‌ ಮಟ್ಟಿನ ಬಲ‌ ಕೊಡುತ್ತಾನೆ. ಬಾಕಿಯಂತೆ ಯಾವ ಗ್ರಹಗಳೂ ನಿಮಗೆ ಅನುಕೂಲವಿಲ್ಲ. ನೀವು ದತ್ತಾತ್ರೇಯನ ದರ್ಶನ ಮಾಡಬೇಕು. ಹಣಕಾಸಿನ‌ ಮುಗ್ಗಟ್ಡು‌ ನಿಮ್ಮ ತಲೆ ಕೆಡಿಸುತ್ತದೆ. ಮನೆಯಲ್ಲಿ ಅಶಾಂತಿ ಯ ವಾತಾವರಣ ಇರುತ್ತದೆ.

Weekly Horoscope In Kannada From August 04 To August 10 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಹ ಈಗ ಗಂಭೀರ ಸಮಯ. ಯಾರೊಂದಿಗೂ ವಾದವಿವಾದ ಮಾಡಬೇಡಿ. ಮೂರರಲ್ಲಿ ಇರುವ ಕುಜ ಒಬ್ಬನೇ ಈಗ ನಿಮ್ಮ ಬಲ. ನಿಮ್ಮ ರಾಶಿಯಲ್ಲೇ ರಾಹು ಇರುವುದು ಸ್ವಲ್ಪ ಆರೋಗ್ಯಕ್ಕೆ ತೊಂದರೆ.‌ ಹಣಕಾಸಿನ ಮುಗ್ಗಟ್ಟು ಇರುತ್ತದೆ. ಯಾವ ಕೆಲಸವೂ ಬೇಗನೇ ಆಗುವುದಿಲ್ಲ. ತುಂಬಾ ಶ್ರಮವನ್ನೂ ಕಾಲವನ್ನೂ ಬೇಡುತ್ತದೆ. ಹಾಗಾಗಿಯೂ ಅರ್ಧ ಕೆಲಸ ಆಗಿ ಮನಸ್ಸಿಗೆ ತೃಪ್ತಿ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+