Weekly Horoscope 2025: ವಾರ ಭವಿಷ್ಯ: ಈ ರಾಶಿಯವರಿಗೆ ಇನ್ಮುಂದೆ ಕಷ್ಟದ ದಿನಗಳು ಬರಲ್ಲ
ಇದೀಗ ನಾವೆಲ್ಲಾ ಏಪ್ರಿಲ್ ತಿಂಗಳ ಮೂರನೇ ವಾರಕ್ಕೆ ಕಾಲಿಡುತ್ತಿದ್ದೇವೆ. ಪ್ರತೀ ವಾರ ಬಂದಂತೆಲ್ಲಾ ನಾವು ನಮ್ಮ ಆರ್ಥಿಕ ಜೀವನ, ವೃತ್ತಿ, ಕೌಟುಂಬಿಕ, ಪ್ರೇಮ ಜೀವನ ಹೇಗಿರಲಿದೆ ಎಂದು ತಿಳಿಯುವ ಮೂಲಕ ಮುನ್ನಡೆಯುತ್ತೇವೆ. ಹಾಗಾದರೆ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸದ ಬಹುಳ ಪಾಡ್ಯದಿಂದ ಸಪ್ತಮಿಯವರೆಗೆ ಅಂದರೆ 13.04.25 ರಿಂದ 20.04.25ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ? ಈ ವಾರದ ಚಂದ್ರನ ಸಂಚಾರ ಚಿತ್ತ ನಕ್ಷತ್ರದಿಂದ ಪೂರ್ವಾಷಾಢದ ವರೆಗೆ ಯಾವ ರಾಶಿಯವರಿಗೆನು ಫಲ ನೀಡಲಿದೆ ಎಮದು ತಿಳಿಯೋಣ.

ಮೇಷ ರಾಶಿ:
ಶನಿ ರಾಹು ಬುಧ ಶುಕ್ರ ನಾಲ್ಕು ಗ್ರಹಗಳೂ ವ್ಯಯಸ್ಥಾನದಲ್ಲಿಇದ್ದು ನಿಮಗೆ ಲಾಭವಿದ್ದರೂ ಖರ್ಚುಕೂಡ ಹೆಚ್ಚಾಗಿದೆ. ನಿಮ್ಮ ಎಣಿಕೆಯಂತೆ ಯಾವುದೂ ನಡೆಯದೆ ಎಲ್ಲ ಏರುಪೇರು ಆಗುತ್ತಿದೆ. ಹಿನ್ನಡೆಗಳು ಸಾಮಾನ್ಯವಾಗಿದೆ. ಆದರೆ ಗುರು ಎರಡನೇ ಮನೆಯಲ್ಲಿ ಇದ್ದು ನಿಮ್ಮನ್ನು ಕಾಪಾಡುತ್ತಾನೆ. ಪರಿಸ್ಥಿತಿ ಹದಗೆಡದಂತೆ ಕಾಯುತ್ತಾನೆ. ಆರನೇ ಮನೆಯಲ್ಲಿ ಕೇತು ಹಣಕಾಸಿನ ನೆರವನ್ನು ಕೊಡಿತ್ತಾನೆ.

ವೃಷಭ ರಾಶಿ:
ಈಗ ಗುರು ನಿಮ್ಮ ರಾಶಿಯಲ್ಲಿ ಇದ್ದು ನೀವು ಅಂದುಕೊಂಡ ಕೆಲಸಗಳು ನಿಮ್ಮನಿರ್ಧಾರದಂತೆ ನಡೆಯದೆ ಕೊಂಚ ಹಿನ್ನಡೆ ಉಂಟಾಗುತ್ತದೆ ಮನಸ್ಸಿಗೆ ಬೇಸರ ನಿರಾಸಕ್ತಿ ಇರುತ್ತದೆ. ಹಣದ ಹರಿವು ಉತ್ತಮವಾಗಿದೆ, ಲಾಭಸ್ಥಾನದಲ್ಲಿ ನಾಲ್ಕು ಗ್ರಹಗಳು ಇದ್ದು ನಿಮಗೆ ಲಾಭವನ್ನು ಕೊಡುತ್ತಿದೆ ಆದರೆ ಮನಸ್ಸಿಗೆ ಸಂತೋಷವಿಲ್ಲ. ಕೆಲವೇ ದಿನಗಳಲ್ಲಿ ಗುರು ಬದಲಾವಣೆ ಯಿಂದ ನಿಮ್ಮ ಮನಸ್ಸಿಗೆ ಉತ್ಸಾಹ ಉಲ್ಲಾಸ ಬರುತ್ತದೆ.

ಮಿಥುನ ರಾಶಿ:
ಹನ್ನೊಂದನೇ ಮನೆಯಲ್ಲಿ ಸೂರ್ಯ ಇರುವುದು ಲಾಭವನ್ನು ತರುತ್ತದೆ. ರಾಜಕೀಯ ನಾಯಕರಿಗೆ ಬಹಳ ಒಳ್ಳೆಯ ಫಲ ನೀಡುತ್ತದೆ. ಅನೇಕ ಬದಲಾವಣೆಗಳನ್ನು ತರುತ್ತದೆ. ಹತ್ತನೇ ಮನೆಯಲ್ಲಿ ನಾಲ್ಲು ಗ್ರಹಗಳು ಇದ್ದು ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ. ವಾಹನದಿಂದ ಲಾಭ ಇದೆ. ಸರ್ಕಾರದಿಂದ ಯಾವುದಾದರೂ ಕೆಲಸ ಆಗಬೇಕಿದ್ದರೆ ಶೀಘ್ರದಲ್ಲಿ ಆಗುತ್ತದೆ. ಸ್ಥಾನ ಬದಲಾವಣೆ ಇದೆ.

ಕಟಕ ರಾಶಿ:
ಅಷ್ಠಮಶನಿಯಿಂದ ಬಿಡುಗಡೆಯಾಗಿದೆ ನವಮದಲ್ಲಿ ನಾಲ್ಕು ಗ್ರಹಗಳುಇದ್ದು ದೂರಪ್ಯಾಣ ವಿದೇಶ ಪ್ರಯಾಣ ಪ್ರವಾದಗಳನ್ನು ಸೂಚಿಸುತ್ತದೆ. ಹತ್ತನೇ ಮನೆಯಲ್ಲಿ ಉಚ್ಛ ಸೂರ್ಯ ನಿಂದ ವೃತ್ತಿಯಲ್ಲಿ ಯಶಸ್ಸಿದೆ. ಲಾಭದ ಗುರು ನಿಮಗೆ ಸಕಲ ಸೌಭಾಗ್ಯಗಳನ್ನೂ ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ನೀಚ ಕುಜ ಇದ್ದು ಕೊಂಚ ಕಿರಿಕಿರಿ ಇರುತ್ತದೆ.

ಸಿಂಹ ರಾಶಿ:
ಮಾತೃಸ್ಥಾನಾಧಿಪತಿ ಕುಜ 12 ನೇ ಮನೆಯಲ್ಲಿ ನೀಚನಾಗಿದ್ದಾನೆ ಆದ್ದರಿಂದ ತಾಯಿಯ ಆರೋಗ್ಯಕ್ಕೆ ಅಪಾಯ ಇದೆ. ಏಕದಂ ಏರುಪೇರು ಆಗಬಹುದು. ಪ್ರಾಣಾಪಾಯದಂತ ವಿಪತ್ತು ಸಂಭವಿಸಬಹುದು ಜಾಗ್ರತೆ ವಹಿಸಬೇಕು. ಹತ್ತನೇ ಮತ್ತು ಮೂರನೇ ಮನೆ ಅಧಿಪತಿ ಶುಕ್ರ, ಎರಡನೇ/ ಹನ್ನೊಂದನೇ ಅಧಿಪತಿ ಬುಧ, ರಾಹು, ಶನಿ ಎಲ್ಲರೂ ಎಂಟನೇ ಮನೆಯಲ್ಲಿ ಇರುವುದರಿಂದ ಮನೆಯಲ್ಲಿ ಅಶಾಂತಿ, ವೃತ್ತಿಯಲ್ಲಿ ಏರಿಳಿತಗಳು, ಹಣಕಾಸಿನ ತೊಂದರೆ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಗುರುಬಲ ಬರುವವರೆಗೂ ಕಾಯಬೇಕು. ಮನೆದೇವರ ನಾಮಸ್ಮರಣೆ ಮಾಡಿ.

ಕನ್ಯಾ ರಾಶಿ:
12ನೇ ಮನೆಯ ಅಧಿಪತಿ ಸೂರ್ಯ ಎಂಟನೇ ಮನೆಯಲ್ಲಿ ಇದ್ದಾನೆ. ಇದರಿಂದ ನಿಮಗೆ ಲಾಭವಾಗುತ್ತದೆ. ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ ಕೂಡ ಲಾಭ ತರುತ್ತದೆ. ಇದರ ಜೊತೆಗೆ ಗುರು ಒಂಬತ್ತನೇ ಮನೆಯಲ್ಲಿ ಇರುವುದು ಕೂಡ ನಿಮಗೆ ಶುಭಫಲಗಳನ್ನು ನೀಡುತ್ತದೆ. ವಿದೇಶ ಪ್ರಯಾಣ, ಧನಲಾಭ, ವೃತ್ತಿಯಲ್ಲಿ ಯಶಸ್ಸು, ಕೌಟುಂಬಿಕ ಸುಖಶಾಂತಿ ಮೊದಲಾದ ಸಪ್ಫಲಗಳು ಸಿಗಲಿದೆ.

ತುಲಾ ರಾಶಿ:
ಆರನೇ ಮನೆಯಲ್ಲಿ ನಾಲ್ಕುಗ್ರಹಗಳು ಇವೆ. ಶನಿಯೂ ಆರನೇ ಮನೆಯಲ್ಲಿ ಇರುವುದರಿಂದ ನಿಮಗೆ ಶಕ್ತಿ ಜಾಸ್ತಿ. ನೀವು ಅಂದುಕೊಂಡ ಕೆಲಸಗಳು ಸರಾಗವಾಗಿ ಆಗುತ್ತದೆ. ನಿಮಗೆ ಇದುವರೆಗೂ ಯಾವುದರಿಂದ ಚಿಂತೆ ನಷ್ಟ ಅನುಭವಿಸುತ್ತಿದ್ದೀರೋ ಅದರಿಂದ ಬಿಡುಗಡೆ ಸಿಗುತ್ತದೆ. ನಿಮ್ಮ ಕುಟುಂಬ ಸೌಖ್ಯ, ವೈಯುಕ್ತಿಕ ಅಭಿವೃದ್ಧಿ ಚೆನ್ನಾಗಿ ಇದೆ. ಒಳ್ಳೆಯದಿನಗಳನ್ನು ಇನ್ನೂ ಹೆಚ್ಚು ಕಾಣುವಿರಿ.

ವೃಶ್ಚಿಕ ರಾಶಿ:
ಈಗ ಗುರುಬಲ ಇದೆ ಆದರೂ ಪಂಚಮ ಶನಿಯ ಪ್ರಭಾವಕ್ಕೆ ಸಿಕ್ಕಿದ್ದೀರಿ. ಗುರುಬಲ ಇರುವುದರಿಂದ ಪಂಚಮ ಶನಿಯ ಬಿಸಿ ನಿಮ್ಮ ಅನುಭವಕ್ಕೆ ಬರುತ್ತಿಲ್ಲ. ಎಚ್ಚರಿಕೆಯಿಂದ ಇರಿ. ಸಾಲಗಾರರು ಕಾಡಿಸಬಹುದು. ವೃತ್ತಿಯಲ್ಲಿ ಏರುಪೇರು ಆಗಬಹುದು. ಕೋರ್ಟಿನ ವ್ಯಾಜ್ಯಗಳು ನಿಮ್ಮ ವಿರುದ್ಧ ಆಗಬಹುದು. ಸಹನೆ ಇರಲಿ. ಕುಟುಂಬದವರ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಸೂರ್ಯ ಆರನೇ ಮನೆಯಲ್ಲಿ ಇರುವುದರಿಂದ ಸರ್ಕಾರದಿಂದ ಲಾಭ ಇದೆ.

ಧನಸ್ಸು ರಾಶಿ:
ಈಗ ಗುರು ಆರನೇ ಮನೆಯಲ್ಲಿಇರುವುದು ಬಹಳವಾಗಿ ಮಾನಸಿಕ ಹಿಂಸೆ. ಇನ್ನು ಕೆಲವು ದಿನಗಳು ಕಳೆದ ಮೇಲೆ ಗುರುಬಲ ಬರುತ್ತದೆ ರಾಹು ಸಹ ನಿಮಗೆ ಮೂರನೇ ಮನೆಯಾದ ಕುಂಭರಾಶಿ ಗೆ ಪ್ರವೇಶ ಮಾಡುತ್ತಾನೆ. ಆಗ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಿತ್ತದೆ. ಅಲ್ಲಿಯವರೆಗೂ ಕೊಂಚ ಕಷ್ಟಗಳು ಅಡೆತಡೆಗಳು ಎದುರಿಸಬೇಕಾಗುತ್ತದೆ. ಈಗ ನಾಲ್ಕನೇ ಮನೆಯಲ್ಲಿ ಶುಕ್ರ ವಾಹನದಿಂದ ಲಾಭ ಕೊಡಿಸುತ್ತಾನೆ.

ಮಕರ ರಾಶಿ:
ಮೂರನೇ ಮನೆಯಲ್ಲಿ ನಾಲ್ಕು ಗ್ರಹಗಳು ಇವೆ. ಇದು ನಿಮಗೆ ಒಳ್ಳೆಯ ಅಭಿವೃದ್ಧಿ ಯನ್ನು ತೋರಿಸುತ್ತಿದೆ. ಗುರುಬಲವು ಇದ್ದು ಎಲ್ಲ ಕೆಲಸಕಾರ್ಯಗಳೂ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುತ್ತದೆ. ಒಳ್ಳೆಯ ಹುದ್ದೆ ಪದವಿ ಅಧಿಕಾರ ಸಿಗುವ ಸಮಯ. ಆಸ್ತಿ ಕೊಳ್ಳುವ ಯೋಗ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಆರೋಗ್ಯ ಸುಧಾರಿಸುತ್ತದೆ. ನಾಲ್ಕರಲ್ಲಿ ಉಚ್ಚ ಸೂರ್ಯ ಪದವಿ ಅಧಿಕಾರ ವನ್ನು ಸೂಚಿಸುತ್ತಾನೆ

ಕುಂಭ ರಾಶಿ:
ಎರಡನೇ ಮನೆಯಲ್ಲಿ ನಾಲ್ಕು ಗ್ರಹಗಳಿದ್ದು ಧನಾಗಮನ ಉತ್ತಮವಾಗಿದೆ. ಕುಟುಂಬ ಸೌಖ್ಯ ಚೆನ್ನಾಗಿದೆ. ಈಗ ಶನಿ ಕೂಡ ನಿಮ್ಮ ರಾಶಿಯಿಂದ ಹೊರಗೆ ಬಂದಿದ್ದಾನೆ. ಇದು ನಿಮಗೆ ದೊಡ್ಡ ರಿಲೀಫ್. ಮುಂದೆ ಗುರುಬಲವೂ ಬಂದು ಜೀವನ ಅತ್ಯಂತ ಅರಾಮದಾಯಕ ಹಾಗೂ ಹಿತಕರ ಎನಿಸುತ್ತದೆ. ಪ್ರವಾಸ ವಿಹಾರ ಮೊದಲಾದ ಉಲ್ಲಾಸದಾಯಕ ಸಂಗತಿಗಳುಇವೆ. ನೌಕರಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ವಿದೇಶ ಯಾತ್ರೆ ಎಲ್ಲ ಸಂಭ್ರಮಗಳೂ ಇವೆ.

ಮೀನ ರಾಶಿ:
ಸಾಡೆಸಾತಿ ಶನಿ ಯ ಒಂದು ಘಟ್ಟ ಕಳೆದು ಮತ್ತೊಂದು ಮಜಲಿಗೆ ಬಂದಿದ್ದೀರಿ. ಸಾಕಷ್ಟು ಸವಾಲುಗಳು ಇನ್ನೂ ಇವೆ. ಖರ್ಚುಗಳು ಒತ್ತಡಗಳು ಇವೆ. ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮ ರಾಶಿಯಿಂದ ರಾಹು ಕುಂಭರಾಶಿ ಗೆ ಪ್ರವೇಶ ಮಾಡುತ್ತಾನೆ. ಕೇತುಆರನೇ ಮನೆಗೆ ಬರುತ್ತಾನೆ. ಕೇತುವಿನ ಸಿಂಹರಾಶಿ ಪ್ರವೇಶದಿಂದ ನಿಮಗೆ ಧನಲಾಭ ಇದೆ.
ಶುಭಮಸ್ತು












Click it and Unblock the Notifications