ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shukra Rashi Parivartan 2022 : ಮಕರ ರಾಶಿಗೆ ಶುಕ್ರನ ಪ್ರವೇಶ, ದ್ವಾದಶ ರಾಶಿಗಳ ಮೇಲೆ ಹೇಗಿರಲಿದೆ ಶುಕ್ರನ ಪ್ರಭಾವ?

|
Google Oneindia Kannada News

ಜೀವನದಲ್ಲಿ ಎಲ್ಲಾ ಉತ್ತಮ ಮತ್ತು ಐಷಾರಾಮಿ ವಿಷಯಗಳನ್ನು ಶುಕ್ರ ಗ್ರಹವು ಆಳುತ್ತದೆ. ಇದು ವಾರದ ಐದನೇ ದಿನದಂದು ಆಗಮನವಾಗುತ್ತದೆ. ಅದುವೇ ಶುಕ್ರವಾರ. ಶುಕ್ರವು ಬಾಹ್ಯ ಪ್ರಪಂಚಕ್ಕೆ ನಮ್ಮ ಉತ್ತಮ ಮತ್ತು ಹೆಚ್ಚು ಆಕರ್ಷಕವಾದ ವಿಚಾರವನ್ನು ಸ್ತುತಪಡಿಸಲು ಸಹಾಯ ಮಾಡುವ ಗ್ರಹವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ, ಗುರುವಿನ ನಂತರ ಶುಕ್ರವನ್ನು ಎರಡನೇ ಅತ್ಯಂತ ಅನುಕೂಲಕರ ಗ್ರಹ ಎಂದು ಕರೆಯಲಾಗುತ್ತದೆ. ನಮ್ಮ ಜನ್ಮ ಕುಂಡಲಿಯಲ್ಲಿ ಶುಕ್ರನ ಸ್ಥಾನವು ಸಂಬಂಧದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಶುಕ್ರವು ಸಂಚಾರ ಮಾಡುವ ರಾಶಿಯ ಜನರಿಗೆ ಭೌತಿಕ ಸೌಕರ್ಯಗಳು, ಐಷಾರಾಮಿ ಮತ್ತು ಉತ್ತಮವಾದ ಜೀವನದ ವಸ್ತುಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಶುಕ್ರನು ಆಳುವ ವೃತ್ತಿಗಳಲ್ಲಿ ಜವಳಿ ಉದ್ಯಮ, ಸಿದ್ಧ ಉಡುಪುಗಳು, ಆಹಾರ, ರೆಸ್ಟೋರೆಂಟ್, ಹೋಟೆಲ್‌ಗಳು, ಪ್ರವಾಸ ಮತ್ತು ಪ್ರಯಾಣ, ಸಂಗೀತ, ರಂಗಭೂಮಿ, ಕಾವ್ಯ, ಸಾಹಿತ್ಯ, ಚಲನಚಿತ್ರ ಉದ್ಯಮ, ಜ್ಯೋತಿಷ್ಯ, ಛಾಯಾಗ್ರಹಣ ಮತ್ತು ಇತರ ಸೃಜನಶೀಲ ಕೆಲಸಗಳು ಸೇರಿವೆ.

ಶುಕ್ರವು 27ನೇ ಫೆಬ್ರವರಿ 2022 ರಂದು ಭಾನುವಾರ ಬೆಳಗ್ಗೆ 09:53ಕ್ಕೆ ಮಕರ ರಾಶಿಯಲ್ಲಿ ಸಾಗಲಿದೆ. ಇದು ಶನಿಯ ಜೊತೆಯಲ್ಲಿ ಇರುತ್ತದೆ. ಶುಕ್ರನು ಲಾಭದಾಯಕ ಮನೆಯಲ್ಲಿ ಇರುವ ಕಾರಣ ಮಕರ ರಾಶಿಗೆ ಸಂತೋಷದಾಯಕ ಸಮಯ ಇದಾಗಲಿದೆ. ಮಕರ ರಾಶಿಯ ಮೇಲೆ ಶುಕ್ರ ಸಂಚಾರವು ಕೆಲವು ರಾಶಿಗಳಿಗೆ ಸಂತೋಷ ಮತ್ತು ಆರ್ಥಿಕ ಅದೃಷ್ಟವನ್ನು ತರುತ್ತದೆ. ಆದರೆ ಎಲ್ಲಾ ರಾಶಿಗಳಿಗೆ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ. ಕೆಲವು ರಾಶಿಯವರಿಗೆ ತೊಂದರೆ ಉಂಟಾಗಬಹುದು. ಆದರೆ ಸಾಮಾನ್ಯವಾಗಿ ಶುಕ್ರವು ವಿರಾಮ, ಪ್ರಣಯ, ಸೌಂದರ್ಯ, ಐಷಾರಾಮಿ ಮತ್ತು ಕಲೆಗಳನ್ನು ಸೂಚಿಸುತ್ತದೆ. ಹಾಗಾದರೆ ಮಕರ ರಾಶಿಗೆ ಶುಕ್ರನ ಪ್ರವೇಶವು ದ್ವಾದಶ ರಾಶಿಗಳ ಮೇಲೆ ಯಾವ ಪ್ರಭಾವ ಬೀರಲಿದೆ ಎಂದು ತಿಳಿಯಲು ಮುಂದೆ ಓದಿ...

Surya Gochar: ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಯಾವ ರಾಶಿಗಳಿಗೆ ಅದೃಷ್ಟ?Surya Gochar: ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಯಾವ ರಾಶಿಗಳಿಗೆ ಅದೃಷ್ಟ?

 ಮೇಷ ರಾಶಿಗೆ ಲಾಭ

ಮೇಷ ರಾಶಿಗೆ ಲಾಭ

ಶುಕ್ರನು ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ವೃತ್ತಿ, ಹೆಸರು ಮತ್ತು ಖ್ಯಾತಿಯ 10 ನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದಾಗಿ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಎಲ್ಲಾ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸ ಮಾಡುವ ವೃತ್ತಿಪರರು ಅಪೇಕ್ಷಿತ ಬೆಳವಣಿಗೆಯನ್ನು ಸಾಧಿಸುತ್ತಾರೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯು ಕೆಲಸದ ಸ್ಥಳದಲ್ಲಿ ನಿಮಗೆ ಫಲಪ್ರದ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯತ್ನವನ್ನು ನಿಮ್ಮ ವೃತ್ತಿಯಲ್ಲಿನ ಹಿರಿಯರು ಗುರುತಿಸುತ್ತಾರೆ. ಆರ್ಥಿಕವಾಗಿ, ನೀವು ಬಯಸಿದ ಬೆಳವಣಿಗೆಯನ್ನು ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳ ಮೂಲಕ ನೀವು ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಸಂಪತ್ತು, ಆಸ್ತಿಯನ್ನು ಸಂಗ್ರಹಿಸಲು ಬಹು ಅವಕಾಶಗಳನ್ನು ಪಡೆಯುತ್ತೀರಿ. ಶುಕ್ರ ಸಂಚಾರದ ಸಂದರ್ಭದಲ್ಲಿ ನೀವು ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಮಯವನ್ನು ಕಳೆಯುತ್ತೀರಿ. ನೀವು ಜೀವನ ಸಂಗಾತಿಯನ್ನು ಹುಡುಕುತ್ತಿದ್ದಾರೆ. ಆ ಪ್ರಯತ್ನ ಕೊನೆಯಾಗಲಿದೆ. ಉತ್ತಮ ಜೀವನ ಸಂಗಾತಿ ನಿಮ್ಮ ಜೊತೆಯಾಗಲಿದ್ದಾರೆ. ಶುಕ್ರನು ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಆಸ್ತಿಯ ವಿಷಯದಲ್ಲಿ ಲಾಭವನ್ನು ಹೊಂದುವಿರಿ. ಆದರೆ ಸಣ್ಣ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪೈಲ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದಾಗಿ ಆರೋಗ್ಯಕರ ಆಹಾರ ಸೇವಿಸಿ, ವ್ಯಾಯಾಮ ಮಾಡಿ.

ಪರಿಹಾರ: ಶುಕ್ರವಾರ ದೇವಿ ಪಾವರ್ತಿ ಕ್ಷೇತ್ರದಲ್ಲಿ ಅಕ್ಕಿ ದಾನ ನೀಡಿ

 ವೃಷಭ ರಾಶಿ: ಪ್ರಣಯ ಜೀವನ ಉತ್ತಮ

ವೃಷಭ ರಾಶಿ: ಪ್ರಣಯ ಜೀವನ ಉತ್ತಮ

ವೃಷಭ ರಾಶಿಯಲ್ಲಿ ಶುಕ್ರನು ಮೊದಲ ಮತ್ತು ಆರನೇ ಮನೆಯ ಅಧಿಪತಿ ಆಗಿದ್ದು, ಆಧ್ಯಾತ್ಮಿಕತೆ, ಅದೃಷ್ಟ ಮತ್ತು ಅಂತಾರಾಷ್ಟ್ರೀಯ ಪ್ರಯಾಣಗಳ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಈ ಸಂಚಾರದಿಂದಾಗಿ ವೃಷಭ ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿ ಕಾಣಲಿದೆ. ಕಠಿಣ ಪರಿಶ್ರಮವು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ವೃತ್ತಿಪರ ಕ್ಷೇತ್ರದಲ್ಲಿ ಬಡ್ತಿ ಲಭಿಸುವ ಸಾಧ್ಯತೆ ಇದೆ. ನೀವು ಧಾರ್ಮಿಕ ಚಟುವಟಿಕೆಗಳು ಮತ್ತು ದಾನದ ಕಡೆಗೆ ಒಲವು ತೋರುತ್ತೀರಿ. ಅದರಿಂದಾಗಿ ನಿಮಗೆ ಆಂತರಿಕ ಶಾಂತಿ ಲಭಿಸಲಿದೆ. ಆರ್ಥಿಕವಾಗಿ, ಈ ಅವಧಿಯು ನಿಮಗೆ ಉತ್ತಮವಾಗಿರುತ್ತದೆ. ನೀವು ಉತ್ತಮ ಹೂಡಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ನೀವು ಬಯಸಿದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಪ್ರಣಯ ಜೀವನ ಉತ್ತಮವಾಗಿರಲಿದೆ. ದೀರ್ಘವಾದ ಪ್ರಯಾಣ ಮಾಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ.

ಪರಿಹಾರ: ಪೌರಾಣಿಕ ಪುಸ್ತಕಗಳನ್ನು ಓದಿ

 ಮಿಥುನ ರಾಶಿಯ ಮೇಲೆ ಮಿಶ್ರ ಪ್ರಭಾವ

ಮಿಥುನ ರಾಶಿಯ ಮೇಲೆ ಮಿಶ್ರ ಪ್ರಭಾವ

ಮಿಥುನ ರಾಶಿಯಲ್ಲಿ ಶುಕ್ರನು 12ನೇ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು, ದೀರ್ಘಾಯುಷ್ಯ, ಹಠಾತ್ ನಷ್ಟ/ಲಾಭ, ಅತೀಂದ್ರಿಯ ಮತ್ತು ಪಿತ್ರಾರ್ಜಿತ ಎಂಟನೇ ಮನೆಯಲ್ಲಿ ಸಾಗುತ್ತಾನೆ. ಈ ಸಂಚಾರದಿಂದಾಗಿ ಮಿಥುನ ರಾಶಿಯ ಮೇಲೆ ಮಿಶ್ರ ಪ್ರಭಾವ ಬೀರಲಿದೆ. ಹಿರಿಯರೊಂದಿಗೆ ವಾಗ್ವಾದ ನಡೆಯಲಿದೆ. ಕೋಪದಲ್ಲಿ ಏನೇ ಮಾತನಾಡುವಾಗಲೂ ಜಾಗೃತರಾಗಿರಿ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಘರ್ಷಣೆ ಮತ್ತು ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆಗಳಿದೆ. ನಿಮ್ಮ ವೈವಾಹಿಕ ಜೀವನ ಅಥವಾ ನಿಮ್ಮ ಸಂಬಂಧದ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು. ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮ ಅವಶ್ಯಕ. ಈ ಅವಧಿಯಲ್ಲಿ ನಿಮ್ಮ ಹಣಕಾಸಿನಲ್ಲಿ ನೀವು ಹಠಾತ್ ಲಾಭವನ್ನು ಪಡೆಯುವಿರಿ. ಆದರೆ ಖರ್ಚುಗಳ ಮೇಲೆ ನಿಗಾ ಇರಲಿ. ನೀವು ನಿಮ್ಮ ವೃತ್ತಿಯಲ್ಲಿ ಬೆಳೆಯುತ್ತೀರಿ. ನಿಮ್ಮ ಎಲ್ಲಾ ಶತ್ರುಗಳನ್ನು ಜಯಿಸುವಿರಿ ಮತ್ತು ಸ್ಪರ್ಧೆಯನ್ನು ಎದುರಿಸುವಿರಿ ಮತ್ತು ಅದನ್ನು ಗೆಲ್ಲುವಿರಿ. ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ಅವಧಿಯಲ್ಲ. ವಿಶೇಷವಾಗಿ ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ. ಯಾವುದೇ ಘರ್ಷಣೆ ಅಥವಾ ವಾದದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ.

ಪರಿಹಾರ: ವಿಧವೆಯರಿಗೆ ಅಥವಾ ಸಣ್ಣ ಹೆಣ್ಣು ಮಕ್ಕಳಿಗೆ ಸಿಹಿ ಆಹಾರ ನೀಡಿ

 ಕರ್ಕಾಟಕ ರಾಶಿ: ಗುರಿಗಳನ್ನು ಸಾಧಿಸುವಲ್ಲಿ ಸವಾಲು

ಕರ್ಕಾಟಕ ರಾಶಿ: ಗುರಿಗಳನ್ನು ಸಾಧಿಸುವಲ್ಲಿ ಸವಾಲು

ಕರ್ಕಾಟಕ ರಾಶಿಯಲ್ಲಿ ಶುಕ್ರವು ನಾಲ್ಕನೇ ಮತ್ತು 11 ನೇ ಮನೆಯ ಅಧಿಪತಿಯಾಗಿದ್ದು, ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಯಲ್ಲಿ ಸಾಗುತ್ತಾನೆ. ಮಕರ ರಾಶಿಯ ಮೇಲೆ ಶುಕ್ರನ ಸಂಚಾರದಿಂದಾಗಿ ಕರ್ಕಾಟಕ ರಾಶಿಯವರಿಗೆ ಗುರಿಗಳನ್ನು ಸಾಧಿಸುವಲ್ಲಿ ಸವಾಲುಗಳು ಎದುರಾಗಬಹುದು. ಆರ್ಥಿಕವಾಗಿ ಏಳನೇ ಮನೆಯಲ್ಲಿ ಶುಕ್ರನ ಸಂಚಾರವು ನಿಮಗೆ ಆದಾಯ ಮತ್ತು ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ಫಲಪ್ರದ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ನೀವು ಉತ್ತಮ ಬೋನಸ್ ಪಡೆಯುವ ಸಾಧ್ಯತೆಯಿದೆ. ಶುಕ್ರನ ಸಂಚಾರ ಹಣಕಾಸಿನ ಲಾಭವನ್ನು ಸಹ ತರಲಿದೆ. ನಿಮ್ಮ ಜೀವನದಲ್ಲಿ ಸಂಗಾತಿಯ ಮಹತ್ವ ಹೆಚ್ಚಾಗಲಿದೆ. ನಿಮಗೆ ಆರ್ಥಿಕವಾಗಿ ಸಹಾಯ ಮಾಡುವಲ್ಲಿ ನಿಮ್ಮ ಸಂಗಾತಿಯು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇದರಿಂದ ನೀವು ಮಾನಸಿಕ ತೃಪ್ತಿ ಮತ್ತು ಭದ್ರತೆಯನ್ನು ಹೊಂದಿರುತ್ತೀರಿ. ವಿವಾಹಿತ ದಂಪತಿಗಳು ಜೊತೆಯಾಗಿ ಅಮೂಲ್ಯ ಸಮಯವನ್ನು ಕಳೆಯುತ್ತಾರೆ. ವಿವಾಹಿತ ದಂಪತಿಗಳು ಮತ್ತು ಪ್ರೇಮಿಗಳ ಜೀವನದಲ್ಲಿ ವಿನೋದ, ಅನ್ಯೋನ್ಯತೆ ಮತ್ತು ಪ್ರಣಯ ಇರುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಮುಂಬರುವ ತಿಂಗಳುಗಳಲ್ಲಿ ನೀವು ಬಳಲುವ ಸಾಧ್ಯತೆಗಳಿದೆ. ಹಾಗಾಗಿ ಕಾಳಜಿ ವಹಿಸಿ.

ಪರಿಹಾರ: ನಿಮ್ಮ ಸಂಗಾತಿಗೆ ಅಥವಾ ಪ್ರೇಮಿಗಳಿಗೆ ಗೌರವ ನೀಡಿ

 ಸಿಂಹ ರಾಶಿ: ನಷ್ಟ ಮತ್ತು ಖರ್ಚು ಹೆಚ್ಚಳ

ಸಿಂಹ ರಾಶಿ: ನಷ್ಟ ಮತ್ತು ಖರ್ಚು ಹೆಚ್ಚಳ

ಸಿಂಹ ರಾಶಿಯವರಿಗೆ, ಶುಕ್ರವು ಮೂರನೇ ಮತ್ತು ಹತ್ತನೇ ಮನೆಗೆ ಅಧಿಪತಿಯಾಗಿದ್ದಾನೆ. ಶತ್ರುಗಳು, ಸಾಲ, ರೋಗಗಳ ಆರನೇ ಮನೆಯಲ್ಲಿ ಶುಕ್ರನ ಸಂಚಾರ ಮಾಡುತ್ತಾನೆ. ವೃತ್ತಿಪರವಾಗಿ, ನಿಮ್ಮ ಹಿರಿಯರೊಂದಿಗೆ ಅಥವಾ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಕೆಲವು ವಾದಗಳನ್ನು ಅಥವಾ ವಿವಾದಗಳನ್ನು ಎದುರಿಸಬೇಕಾಗಬಹುದು. ಶುಕ್ರನು 12 ನೇ ಮನೆಯಲ್ಲಿ ಸಾಗುವುದರಿಂದ ನಷ್ಟ ಮತ್ತು ಖರ್ಚುಗಳು ಕೂಡಾ ಹೆಚ್ಚಲಿದೆ. ಈ ಅವಧಿಯಲ್ಲಿ ನಿಮ್ಮ ಸ್ನೇಹಿತರು ನಿಮಗೆ ದ್ರೋಹ ಮಾಡಬಹುದು. ಆದ್ದರಿಂದ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವುದು ಉತ್ತಮ. ವಿವಾಹಿತರು ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಂಬಂಧವನ್ನು ಸರಿಪಡಿಸಲು ಪ್ರಯತ್ನ ಮಾಡಿ. ಈ ಶುಕ್ರ ಸಂಚಾರ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರಿಯಾಗಿ ವಿದ್ಯಾಭ್ಯಾಸದ ಕಡೆ ಗಮನಹರಿಸಲು ಸಾಧ್ಯವಾಗದಿರಬಹುದು. ಆರೋಗ್ಯದ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಆಹಾರದ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಿ. ಜಂಕ್ ಫುಡ್ ಅನ್ನು ಸೇವಿಸದೆ ಇರುವುದು ಉತ್ತಮ. ನಿಯಮಿತವಾಗಿ ವ್ಯಾಯಾಮ ಮಾಡಿ. ಅದರಿಂದ ಫಿಟ್‌ ಹಾಗೂ ಆರೋಗ್ಯಕರವಾಗಿರಲು ಸಾಧ್ಯ.

ಪರಿಹಾರ: ಶುಕ್ರನ ಬೀಜ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ

 ಕನ್ಯಾ ರಾಶಿ: ಮಿಶ್ರ ಫಲಿತಾಂಶ

ಕನ್ಯಾ ರಾಶಿ: ಮಿಶ್ರ ಫಲಿತಾಂಶ

ಕನ್ಯಾ ರಾಶಿಯಲ್ಲಿ ಶುಕ್ರವು ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದು, ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಈ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಪರ ರಂಗದಲ್ಲಿ ನೀವು ಅನುಕೂಲಕರ ಅವಧಿ ನಿಮ್ಮದಾಗಲಿದೆ. ನೀವು ಪ್ರಚಾರ ಅಥವಾ ಹೊಸ ಉದ್ಯೋಗ ಅವಕಾಶಗಳ ರೂಪದಲ್ಲಿ ಹೊಸ ಅವಕಾಶಗಳನ್ನು ಕಾಣಬಹುದು. ನೀವು ನಿಮ್ಮ ಪ್ರೇಮ ಜೀವನದಲ್ಲಿ ಅಥವಾ ನಿಮ್ಮ ವೈವಾಹಿಕ ಜೀವನದಲ್ಲಿ ಆನಂದದಾಯಕ ಸಮಯವನ್ನು ಅನುಭವಿಸುವಿರಿ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಬೆಳವಣಿಗೆಯು ನಿಮಗೆ ಮಾನಸಿಕ ತೃಪ್ತಿಯನ್ನು ನೀಡುತ್ತದೆ. ನೀವು ಜೀರ್ಣಾಂಗ ವ್ಯವಸ್ಥೆ, ಹಲ್ಲುಗಳು ಅಥವಾ ದವಡೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವ ಕಾರಣ ಆಹಾರದಲ್ಲಿ ಪತ್ಯ ಮಾಡಿ. ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಿರಿ.

ಪರಿಹಾರ: ಸಾಧ್ಯವಾದಷ್ಟು ಮದ್ಯ ಸೇವನೆ ಮಾಡದಿರಲು ಪ್ರಯತ್ನ ಮಾಡಿ

 ತುಲಾ ರಾಶಿ: ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ

ತುಲಾ ರಾಶಿ: ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ

ತುಲಾ ರಾಶಿಯವರಿಗೆ, ಶುಕ್ರವು ಮೊದಲ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದು, ಸಂತೋಷ ಮತ್ತು ಸಮೃದ್ಧಿಯ ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ಈ ಅವಧಿಯಲ್ಲಿ, ಕುಟುಂಬ ಜೀವನಕ್ಕೆ ಕುಟುಂಬ ಸಂಬಂಧಗಳು ಸುಧಾರಿಸುತ್ತವೆ ಮತ್ತು ನೀವು ಕುಟುಂಬಕ್ಕೆ ಹತ್ತಿರವಾಗಲು ಬಯಸುತ್ತೀರಿ. ಆದರೆ ನೀವು ಮನೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಈ ಸಂಚಾರದ ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ, ನಿಮ್ಮ ಪೋಷಕರು ನಿಮ್ಮ ಜೊತೆ ತುಂಬಾ ಸಂತೋಷದಿಂದ ಮತ್ತು ಪ್ರೀತಿಯಿಂದ ಇರುತ್ತಾರೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕೆಲಸ ಮತ್ತು ಪ್ರಯತ್ನಗಳು ನಿಮ್ಮ ಸಂಸ್ಥೆಯಲ್ಲಿ ಹೊಸ ಉತ್ತುಂಗಕ್ಕೆ ನೀವು ಏರಲು ಸಹಾಯಕವಾಗಲಿದೆ. ನೀವು ವೃತ್ತಿಪರ ಅಥವಾ ವೈಯಕ್ತಿಕ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿದ್ದರೆ, ಪ್ರಯಾಣವು ನಿಮಗೆ ಫಲಪ್ರದ ಫಲಿತಾಂಶಗಳನ್ನು ನೀಡುತ್ತದೆ. ಒಟ್ಟಾರೆಯಾಗಿ, ಇದು ನಿಮಗೆ ಉತ್ತಮ ಸಮಯವಾಗಿರುತ್ತದೆ. ಆದರೆ ಕೆಲವು ಮಾನಸಿಕ ಒತ್ತಡ ಮತ್ತು ಚಿಂತೆ ಉಂಟಾಗಬಹುದು. ಸವಾಲಿನ ಸಂದರ್ಭದಲ್ಲಿ ಪಾಸಿಟಿವ್‌ ಮನೋಭಾವ ನಿಮ್ಮಲ್ಲಿರಲಿ.

ಪರಿಹಾರ: ಬೆರಳಿಗೆ ಯಾವುದೇ ಉಂಗುರ ಧರಿಸಿ

 ವೃಶ್ಚಿಕ ರಾಶಿ: ಆರೋಗ್ಯ ಸ್ಥಿತಿ ಉತ್ತಮ

ವೃಶ್ಚಿಕ ರಾಶಿ: ಆರೋಗ್ಯ ಸ್ಥಿತಿ ಉತ್ತಮ

ವೃಶ್ಚಿಕ ರಾಶಿಯಲ್ಲಿ ಶುಕ್ರನು 12ನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದು, ಧೈರ್ಯ, ಶೌರ್ಯ ಮತ್ತು ಸಣ್ಣ ಪ್ರವಾಸಗಳ ಮೂರನೇ ಮನೆಯಲ್ಲಿ ಸಂಚರಿಸುತ್ತಾನೆ. ಈ ಸಂಚಾರದ ಸಮಯದಲ್ಲಿ ನೀವು ಧೈರ್ಯಶಾಲಿಯಾಗಿರುತ್ತೀರಿ ಮತ್ತು ಇದು ನಿಮ್ಮ ಸಂವಹನ (ಮಾತು) ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತಿನ ಶೈಲಿಯಲ್ಲಿನ ಸುಧಾರಣೆಯು ನಿಮ್ಮ ವೃತ್ತಿಪರ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೌಶಲ್ಯ ಮತ್ತು ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ. ನೀವು ಹೆಚ್ಚು ಪ್ರಾಯೋಗಿಕರಾಗುತ್ತೀರಿ. ಇದು ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ. ನೀವು ಹಿಂದೆ ಮಾಡಿದ ಹೂಡಿಕೆಗಳಿಂದಾಗಿ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಆರ್ಥಿಕವಾಗಿ ಈ ಅವಧಿಯು ನಿಮಗೆ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ. ನೀವು ದೈನಂದಿನ ವ್ಯಾಯಾಮದಲ್ಲಿ ತೊಡಗಲಿದ್ದೀರಿ.

ಪರಿಹಾರ: ಪ್ರತಿ ಶುಕ್ರವಾರ ಮೊಸರಿನಿಂದ ಸ್ನಾನ ಮಾಡಿ

 ಧನು ರಾಶಿ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

ಧನು ರಾಶಿ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

ಧನು ರಾಶಿಯಲ್ಲಿ ಶುಕ್ರನು ಆರನೇ ಮತ್ತು 11 ನೇ ಮನೆಯ ಅಧಿಪತಿಯಾಗಿದ್ದು, ಸಂಪತ್ತು ಸಂಗ್ರಹಣೆ, ಕುಟುಂಬ ಮತ್ತು ಮಾತಿನ ಎರಡನೇ ಮನೆಯಲ್ಲಿ ಸಾಗುತ್ತಾನೆ. ಈ ಮಯದಲ್ಲಿ, ಆರ್ಥಿಕ ಸ್ಥಿರತೆ ಇರುತ್ತದೆ ಮತ್ತು ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ಕುಟುಂಬದಲ್ಲಿ ಸಮಾರಂಭ ನಡೆಯುವ ಸಾಧ್ಯತೆಗಳಿವೆ. ವೈವಾಹಿಕ ಜೀವನವು ಸಂತೋಷದಾಯಕವಾಗಿರಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಶಿಕ್ಷಕರನ್ನೂ ಮೆಚ್ಚಿಸುತ್ತಾರೆ. ಆರೋಗ್ಯದಲ್ಲಿ ಕೆಲವು ಸಣ್ಣ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳಿವೆ, ಆದ್ದರಿಂದ ನೀವು ಈ ಹಂತದಲ್ಲಿ ದಿನನಿತ್ಯದ ತಪಾಸಣೆಗಳನ್ನು ಮಾಡಬೇಕು. ಶುಕ್ರನು ಎಂಟನೇ ಮನೆಯನ್ನು ಸಹ ಸಾಗುತ್ತಾನೆ. ಇದು ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಹಠಾತ್ ಬದಲಾವಣೆಗಳನ್ನು ತರುತ್ತದೆ ಮತ್ತು ನಿಮ್ಮ ಆರೋಗ್ಯದಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು. ಆದ್ದರಿಂದ, ಈ ಸಮಯದಲ್ಲಿ ಆರೋಗ್ಯಕರ ಆಹಾರ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ.

ಪರಿಹಾರ: ಲಕ್ಷ್ಮಿ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಪ್ರತಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿ.

 ಮಕರ ರಾಶಿ: ಮಂಗಳಕರ ಮತ್ತು ಅನುಕೂಲಕರ ಸಂದರ್ಭ

ಮಕರ ರಾಶಿ: ಮಂಗಳಕರ ಮತ್ತು ಅನುಕೂಲಕರ ಸಂದರ್ಭ

ಮಕರ ರಾಶಿಯಲ್ಲಿ , ಶುಕ್ರವು ಐದನೇ ಮತ್ತು 10 ನೇ ಮನೆಯ ಅಧಿಪತಿಯಾಗಿದ್ದು, ಸ್ವ ವ್ಯಕ್ತಿತ್ವ ಮತ್ತು ಪಾತ್ರದ ಆರೋಹಣ ಮನೆಯಲ್ಲಿ ಸಾಗುತ್ತಾನೆ. ಈ ಸಂಕ್ರಮಣ ಅವಧಿಯು ಮಕರ ರಾಶಿಯವರಿಗೆ ಬಹಳ ಮಂಗಳಕರ ಮತ್ತು ಅನುಕೂಲಕರವಾಗಿರುತ್ತದೆ. ಈ ಅವಧಿಯು ಮಕರ ರಾಶಿಯವರಿಗೆ ಫಲಪ್ರದ ಫಲಿತಾಂಶಗಳನ್ನು ನೀಡುತ್ತದೆ. ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಯ ಮೇಲೆ ಶುಕ್ರನು ನೇರವಾಗಿ ಪರಿಣಾಮ ಬೀರುತ್ತಾನೆ. ಅದೃಷ್ಟವು ನಿಮ್ಮ ಜೀವನವನ್ನು ಸಮೃದ್ಧಗೊಳಿಸುವ ಹಾದಿಯಲ್ಲಿದೆ. ಈ ಹಂತದಲ್ಲಿ ನೀವು ಉತ್ತಮ ಮತ್ತು ಸಂತೋಷದ ವೈವಾಹಿಕ ಜೀವನವನ್ನು ಆನಂದಿಸುವಿರಿ. ಆರೋಗ್ಯದ ದೃಷ್ಟಿಯಿಂದ ನೀವು ದೀರ್ಘಕಾಲದಿಂದ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಶುಕ್ರವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತಾನೆ.

 ಕುಂಭ ರಾಶಿ: ಪ್ರಣಯ ಜೀವನ ಉತ್ತಮ

ಕುಂಭ ರಾಶಿ: ಪ್ರಣಯ ಜೀವನ ಉತ್ತಮ

ಕುಂಭ ರಾಶಿಯಲ್ಲಿ ಶುಕ್ರನು ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದು, ವೆಚ್ಚಗಳು, ಮೋಕ್ಷ, ಆಸ್ಪತ್ರೆ ಮತ್ತು ರಹಸ್ಯ ನಡವಳಿಕೆಯ 12 ನೇ ಮನೆಯಲ್ಲಿ ಸಾಗುತ್ತಾನೆ. ಶುಕ್ರ, ಈ ಸಮಯದಲ್ಲಿ, ನಿಮ್ಮ ದೇಶೀಯ ಮತ್ತು ವೈವಾಹಿಕ ಜೀವನವನ್ನು ಪರಿಪೂರ್ಣ ಸಂತೋಷದಿಂದ ಆಶೀರ್ವದಿಸಲಿದ್ದಾನೆ. ಈ ಅವಧಿಯಲ್ಲಿ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಆಕರ್ಷಣೆ ಅಧಿಕವಾಗುವ ಕಾರಣ ಪ್ರಣಯ ಜೀವನ ಉತ್ತಮವಾಗಿರಲಿದೆ. ಆರ್ಥಿಕವಾಗಿ ನೀವು ಬಹಳ ಜಾಗರೂಕರಾಗಿರುತ್ತೀರಿ. ಈ ಸಮಯದಲ್ಲಿ ನೀವು ಸಾಕಷ್ಟು ವೆಚ್ಚವನ್ನು ಭರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಜಾಗರೂಕರಾಗಿರುತ್ತೀರಿ. ನೀವು ನಿಮ್ಮ ಖರ್ಚನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಮತ್ತು ಯಾವುದೇ ರೀತಿಯ ನಗದು ಕೊರತೆಯನ್ನು ತಪ್ಪಿಸಬೇಕು. ಸಂಚಾರದ ಸಮಯದಲ್ಲಿ ಆರನೇ ಮನೆಯ ಮೇಲೆ ಶುಕ್ರನ ಅಂಶವು ನೀವು ಅಲ್ಪ ಅನಾರೋಗ್ಯದ ಕಾರಣ ವೈದ್ಯಕೀಯ ಖರ್ಚು ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಲಿದೆ. ಆರೋಗ್ಯಕರ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪರಿಹಾರ: ಸಣ್ಣ ಹೆಣ್ಣು ಮಕ್ಕಳಿಗೆ ಶುಕ್ರವಾರ ಸಿಹಿ ತಿಂಡಿ ದಾನ ಮಾಡಿ

 ಮೀನ ರಾಶಿ: ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ

ಮೀನ ರಾಶಿ: ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ

ಮೀನ ರಾಶಿಯಲ್ಲಿ ಶುಕ್ರನು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದು, ಲಾಭ ಮತ್ತು ಬಯಕೆಯ 11 ನೇ ಮನೆಯಲ್ಲಿ ಸಾಗುತ್ತಾನೆ. ಈ ಸಂದರ್ಭದಲ್ಲಿ ವೃತ್ತಿ ಜೀವನದಲ್ಲಿ ಪ್ರಶಂಸೆ ಲಭಿಸಲಿದೆ. 11 ನೇ ಮನೆಯಿಂದ, ಇದು ಐದನೇ ಮನೆಯತ್ತ ದೃಷ್ಟಿ ಹಾಯಿಸುವ ಕಾರಣ ವೃತ್ತಿಪರ ಜೀವನದಲ್ಲಿ ಹಿರಿಯರಿಂದ ಹಣದ ಬೋನಸ್‌ ಪಡೆಯಲು ಮತ್ತು ಗಮನವನ್ನು ಸೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಪಡೆಯಲು ನೀವು ಬಯಸುತ್ತೀರಿ ಮತ್ತು ನೀವು ಪಡೆಯಲು ಕೂಡಾ ಸಾಧ್ಯವಾಗುತ್ತದೆ. ಪ್ರೇಮ ಸಂಬಂಧಗಳು ಅರಳಲಿವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಹೊಸ ಮೋಡಿ ಮತ್ತು ಉತ್ಸಾಹವನ್ನು ತರುವ ಸಾಧ್ಯತೆಯಿದೆ. ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡಲು ನೀವು ನಿಮ್ಮ ಹಣವನ್ನು ಖರ್ಚು ಮಾಡಬಹುದು. ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ ಮತ್ತು ಈ ಅವಧಿಯಲ್ಲಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುತ್ತೀರಿ. ನಿಮ್ಮ ಆಹಾರದ ಬಗ್ಗೆ ಸಂಪೂರ್ಣ ಗಮನ ಹರಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ.

ಪರಿಹಾರ: ಶುಕ್ರನನ್ನು ಬಲಪಡಿಸಲು ವಿಷ್ಣು ಮತ್ತು ಮಾ ಲಕ್ಷ್ಮಿಯನ್ನು ಆರಾಧಿಸಿ.

English summary
Shukra Rashi Parivartan February 2022 in Makara Rashi; Venus Transit in Capricorn Effects on Zodiac Signs in Kannada : The Venus Transit in Capricorn will take place on 27 February 2022. Learn about remedies to perform in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X