Venus Transit in Ardra Nakshatra: ಆರ್ದ್ರಾ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಇಂದಿನಿಂದ ಈ 3 ರಾಶಿಗಳ ಆರ್ಥಿಕ ಸ್ಥಿತಿ ಸುಧಾರಣ
ಜ್ಯೋತಿಷ್ಯದಲ್ಲಿ ಶುಕ್ರನನ್ನು ಅಸುರರ ಗುರು ಎಂದು ಪರಿಗಣಿಸಲಾಗುತ್ತದೆ. ಈ ಶುಕ್ರ ಸಂಪತ್ತು, ಸೌಂದರ್ಯ, ಐಷಾರಾಮಿ ಮತ್ತು ಪ್ರೀತಿಯ ಅಂಶವಾಗಿದೆ. ಈ ಶುಕ್ರ ಗ್ರಹ ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿದೆ. ಪ್ರತಿಬಾರಿಯೂ ಶುಕ್ರನ ಸ್ಥಾನದಲ್ಲಿ ಬದಲಾವಣೆಯಾದಾಗ ಅದರ ಪರಿಣಾಮ ಎಲ್ಲಾ ರಾಶಿಯವರಲ್ಲೂ ಕಂಡುಬರುತ್ತದೆ.
ಅದರಂತೆ ಸದ್ಯ ಶುಕ್ರನು ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಜೂನ್ 18 ರಂದು ಶುಕ್ರನ ನಕ್ಷತ್ರ ಸಂಕ್ರಮಣ ನಡೆದಿದೆ. ಈ ಸಂಕ್ರಮಣದಲ್ಲಿ ಶುಕ್ರನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದನು. ಶುಕ್ರನ ಈ ನಕ್ಷತ್ರ ಸಂಕ್ರಮಣದ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಇದು ಕೆಲವರಿಗೆ ಪ್ರಯೋಜನಕಾರಿಯಾಗಿದ್ದರೆ ಇನ್ನೂ ಕೆಲವರಿಗೆ ಕೆಟ್ಟದಾದ ಸಂಕ್ರಮಣವಾಗಿರಬಹುದು.
ಜ್ಯೋತಿಷ್ಯದ 27 ನಕ್ಷತ್ರಗಳಲ್ಲಿ ಆರ್ದ್ರಾ 6 ನೇ ನಕ್ಷತ್ರವಾಗಿದೆ. ರಾಹು ಈ ನಕ್ಷತ್ರದ ಅಧಿಪತಿಯಾಗಿದೆ. ಶುಕ್ರ ಮತ್ತು ರಾಹುವಿನ ನಡುವೆ ಸೌಹಾರ್ದ ಸಂಬಂಧವಿರುವುದರಿಂದ ಕೆಲವು ಸ್ಥಳೀಯರಿಗೆ ಈ ನಕ್ಷತ್ರ ಸಂಕ್ರಮಣದಿಂದ ವ್ಯಾಪಾರದಲ್ಲಿ ಅದೃಷ್ಟ ಮತ್ತು ಉತ್ತಮ ಲಾಭ ದೊರೆಯುತ್ತದೆ. ಹಾಗಾದರೆ ಈಗ ಆರ್ದ್ರಾ ನಕ್ಷತ್ರದಲ್ಲಿ ಶುಕ್ರನ ಸಂಕ್ರಮಣದಿಂದ ಅದೃಷ್ಟವಂತರಾಗುವ ರಾಶಿಯ ಜನರು ಯಾರೆಂದು ನೋಡೋಣ.

ಮಿಥುನ ರಾಶಿ
ಶುಕ್ರ ಸಂಚಾರ ಮಿಥುನ ರಾಶಿಯವರಿಗೆ ಲಾಭವನ್ನು ನೀಡಲಿದೆ. ವಿಶೇಷವಾಗಿ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ ಈ ಸಂಚಾರದಿಂದ ಮಿಥುನ ರಾಶಿಯವರ ಜ್ಞಾನ ಮತ್ತು ತಿಳುವಳಿಕೆಯು ಸುಧಾರಿಸುತ್ತದೆ. ಅನೇಕ ಸಮಸ್ಯೆಗಳನ್ನು ದೂರವಾಗುತ್ತವೆ. ವ್ಯಾಪಾರಿಗಳು ದೊಡ್ಡ ವ್ಯವಹಾರಗಳನ್ನು ಪಡೆಯುತ್ತಾರೆ.
ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುವರು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಇದು ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿಗೆ ಏರಲಿದೆ. ಮುಖ್ಯವಾಗಿ ಜಾತಕದಲ್ಲಿ ರಾಹುವಿನ ಸ್ಥಾನ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರ ಸಂಚಾರ ಶುಭಕರವಾಗಿರುತ್ತದೆ. ಮುಖ್ಯವಾಗಿ ಈ ರಾಶಿಚಕ್ರದವರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಉತ್ತಮ ಆರ್ಥಿಕ ಲಾಭ ಸಿಗಲಿದೆ. ಕೆಲಸದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಒಬ್ಬರು ವ್ಯಾಪಾರ ಸಂಬಂಧಿತ ಪ್ರವಾಸಗಳನ್ನು ಕೈಗೊಳ್ಳಬೇಕಾಗಬಹುದು ಮತ್ತು ಈ ಪ್ರವಾಸ ಉತ್ತಮ ಆರ್ಥಿಕ ಲಾಭಗಳನ್ನು ತರುತ್ತದೆ. ನೀವು ಇಲ್ಲಿಯವರೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇಂದಿನಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಕುಂಭ ರಾಶಿ
ಶುಕ್ರನ ಸಂಕ್ರಮಣ ಕುಂಭ ರಾಶಿಯವರಿಗೆ ಉತ್ತಮ ಲಾಭವನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಚೆನ್ನಾಗಿ ಪ್ರಶಂಸಿಸಲಾಗುತ್ತದೆ. ಇದರಿಂದ ಬಡ್ತಿ ಸಿಗುವ ಸಾಧ್ಯತೆಗಳಿವೆ.
ವ್ಯಾಪಾರಸ್ಥರು ಸ್ಮಾರ್ಟ್ ಯೋಜನೆಗಳನ್ನು ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು. ಶುಕ್ರನ ಅನುಗ್ರಹದಿಂದ ಉತ್ತಮ ಆರ್ಥಿಕ ಪ್ರಗತಿ ಸಿಗಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಿ ಉತ್ತಮ ಲಾಭ ದೊರೆಯಲಿದೆ. ಆರೋಗ್ಯ ಸುಧಾರಿಸಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications