ಮನೆ ಕಟ್ಟುವ ಮೊದಲು ಜಮೀನಿನ ಎತ್ತರ-ತಗ್ಗು ತಿಳಿಯಿರಿ: ವಾಸ್ತು ಪ್ರಕಾರ ಯಾವ ದಿಕ್ಕು ಶುಭ?
ನಾವು ಮನೆ ಕಟ್ಟುವ ಮೊದಲು ಸಾಮಾನ್ಯವಾಗಿ ಜಮೀನು ಖರಿದಿಸುತ್ತೇವೆ. ಇದಾದ ನಂತರ ಮನೆ ಕಟ್ಟಲು ಪ್ರಾರಂಭಿಸುತ್ತೇವೆ. ಜಮೀನಿನ ಆಕಾರ ಮತ್ತು ವಾಸ್ತು ಬಗ್ಗೆ ಗಮನ ಕೊಡುತ್ತವೆ. ಆದರೆ, ಜಮೀನು ಗುಡ್ಡಗಾಡು ಪ್ರದೇಶದಲ್ಲಿದೆಯೇ ಅಥವಾ ಸಮತಟ್ಟಾಗಿದೆಯೇ ಎಂಬುದೂ ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಪ್ರಮುಖವಾಗಿದೆ. ಜಮೀನು ಯಾವ ದಿಕ್ಕಿನಲ್ಲಿ ಎಷ್ಟು ಎತ್ತರಕ್ಕಿದೆ, ಯಾವ ದಿಕ್ಕಿನಲ್ಲಿ ಎಷ್ಟು ಇಳಿಜಾರಿನಲ್ಲಿದೆ ಎಂಬುದನ್ನು ತಿಳಿದುಕೊಂಡು, ಮನೆ ನಿರ್ಮಾಣ ಮಾಡುವುದು ಉತ್ತಮ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಜಮೀನು ಖರೀದಿಸುವ ಮೊದಲು ಗಮನಿಸಬೇಕಾದ ವಿಷಯಗಳು
ಜಮೀನು ಖರೀದಿಸುವ ಮೊದಲು ಸಮತಟ್ಟಾಗಿದೆಯೇ ಅಥವಾ ಗುಡ್ಡಗಾಡು ಪ್ರದೇಶದಲ್ಲಿದೆಯೇ ಎಂದು ಪರಿಶಿಲಿಸಬೇಕು. ಜಮೀನಿನ ಎತ್ತರ, ತಗ್ಗು, ದಿಕ್ಕುಗಳನ್ನು ತಿಳಿದುಕೊಳ್ಳಬೇಕು.
ರಸ್ತೆ ಯಾವ ದಿಕ್ಕಿನಲ್ಲಿದೆ ಎಂದು ಎಂಬುದನ್ನು ಗಮನಿಸಬೇಕು.
ವಾಸ್ತು ತಜ್ಞರ ಸಲಹೆ ಪಡೆದು ಮನೆ ನಿರ್ಮಾಣದ ಯೋಜನೆ ಮಾಡುವುದು ಉತ್ತಮ.

ಎತ್ತರ-ತಗ್ಗಿನ ಬಗ್ಗೆ ವಾಸ್ತು ನಿಯಮಗಳು
ದಕ್ಷಿಣ ಮತ್ತು ಪಶ್ಚಿಮ ಭಾಗಗಳು ಸ್ವಲ್ಪ ಎತ್ತರವಾಗಿರುವುದು ಶುಭಕರ.
ಉತ್ತರ ಮತ್ತು ಪೂರ್ವ ಭಾಗಗಳು ತಗ್ಗಾಗಿರುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇಳಿಜಾರು ಇದ್ದರೆ ಸಮೃದ್ಧಿ ಮತ್ತು ಯಶಸ್ಸು ಬರುತ್ತದೆ.
ವಿಶೇಷವಾಗಿ ಈಶಾನ್ಯ ದಿಕ್ಕು ತಗ್ಗಾಗಿದ್ದರೆ ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.
ಮೂಲೆಯ ದಿಕ್ಕುಗಳ ಮಹತ್ವ
ಈಶಾನ್ಯ ಮೂಲೆಯು ತಗ್ಗಾಗಿರುವುದು ಉತ್ತಮ.
ಈಶಾನ್ಯ ಭಾಗ ತುಂಬಾ ಎತ್ತರವಾಗಿದ್ದರೆ ಸ್ವಲ್ಪ ಕಡಿಮೆ ಮಾಡಿ ಸಮತೋಲನ ಮಾಡಬೇಕಾಗುತ್ತದೆ.
ನೈಋತ್ಯ ಮೂಲೆಯು ಯಾವಾಗಲೂ ಎತ್ತರದಲ್ಲಿರಬೇಕು.
ನೈಋತ್ಯ ದಿಕ್ಕು ತಗ್ಗಾಗಿದ್ದರೆ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ.
ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣ
ಗುಡ್ಡಗಾಡು ಪ್ರದೇಶದಲ್ಲಿರುವ ಜಮೀನಿನಲ್ಲಿ ಮನೆ ಕಟ್ಟಬೇಕಾದರೆ ಜಮೀನನ್ನು ಮೆಟ್ಟಿಲುಗಳ ರೀತಿಯಲ್ಲಿ ರೂಪಿಸಬಬೇಕು.
ಮೇಲಿನ ಮೆಟ್ಟಿಲುಗಳು ದಕ್ಷಿಣ ಅಥವಾ ಪಶ್ಚಿಮ ಕಡೆ ಇರಬಹುದು.
ಕೆಳಗಿನ ಮೆಟ್ಟಿಲುಗಳು ಉತ್ತರ ಅಥವಾ ಪೂರ್ವ ಕಡೆ ಇರಬೇಕು.
ಜಮೀನಿನ ಎತ್ತರ ಮತ್ತು ತಗ್ಗನ್ನು ಸರಿಪಡಿಸಿ ಸಮತೋಲನ ಮಾಡುಬೇಕಾಗುತ್ತದೆ.
ಇಳಿಜಾರು ಮತ್ತು ನೀರಿನ ಹರಿವು
ಮಳೆನೀರು ಈಶಾನ್ಯ ದಿಕ್ಕಿನ ಮೂಲಕ ಹೊರಹೋಗುವಂತೆ ವ್ಯವಸ್ಥೆ ಮಾಡುವುದು ಉತ್ತಮ.
ಜಮೀನಿನ ಇಳಿಜಾರು ಸಹಜವಾಗಿರಬೇಕು ನೀರು ನಿಲ್ಲುವಂತಿರಬಾರದು.
ಈಶಾನ್ಯ ಭಾಗವೇ ಜಮೀನಿನ ಅತ್ಯಂತ ತಗ್ಗಾದ ಭಾಗವಾಗಿರುವುದು ವಾಸ್ತು ಪ್ರಕಾರ ಉತ್ತಮ ಎಂದು ಹೇಳಲಾಗುತ್ತದೆ.












Click it and Unblock the Notifications