ಬಾತ್ರೂಮ್‌ಗೂ ವಾಸ್ತು ಇದೆ; ಐದು ತಪ್ಪುಗಳನ್ನು ಮಾಡುವವರು ಈ ನಿಯಮಗಳು ತಿಳಿಯಿರಿ

ಮನೆ ಕಟ್ಟುವಾಗ ನಾವು ವಾಸ್ತು ಶಾಸ್ತ್ರಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನಿಡುತ್ತೇವೆ. ಮನೆಯಲ್ಲಿ ಯಾವ ಕೋಣೆ ಯಾವ ಜಾಗದಲ್ಲಿ ಇರಬೇಕು, ಯಾವ ದಿಕ್ಕಿನಲ್ಲಿ ಇರಬೇಕು ಎಂಬುದು ನಾವು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಇದೇ ರೀತಿ ಮನೆಯಲ್ಲಿ ಸ್ನಾನಗೃಹ ಅಥವಾ ಶೌಚಾಲಯದ ಸ್ಥಳವನ್ನು ಆಯ್ಕೆ ಮಾಡುವಾಗ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ತಪ್ಪು ದಿಕ್ಕಿನಲ್ಲಿ ನಿರ್ಮಿಸಿದರೆ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸಿ ಹಲವು ಸಮಸ್ಯೆಗಳು ಉಂಟಾಗಬಹುದು ಎಂಬ ನಂಬಿಕೆ ಇದೆ.

ವಾಸ್ತು ಶಾಸ್ತ್ರದ ಪ್ರಕಾರ ವಾಯುವ್ಯ (ಉತ್ತರ-ಪಶ್ಚಿಮ) ದಿಕ್ಕಿಗೆ ಸ್ನಾನಗೃಹವನ್ನು ನಿರ್ಮಾಣ ಮಾಡುವುದು ಒಳ್ಳೆಯದು. ಮನೆಯ ಹೊರಗಡೆಯ ಗೋಡೆಯ ಬಳಿ ಈ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ. ಈ ದಿಕ್ಕಿನಲ್ಲಿ ಮಾಡಲು ಸಾಧ್ಯವಾಗದಿದ್ದರೆ ಪಶ್ಚಿಮ ದಿಕ್ಕಿನಲ್ಲಿ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

Vastu Tips

ಇನ್ನೂ ನಾವು ಕೆಲವು ಸಂದರ್ಭಗಳಲ್ಲಿ ದಕ್ಷಿಣ ದಿಕ್ಕಿನಲ್ಲಿಯೂ ಶೌಚಾಲಯ ನಿರ್ಮಿಸಬಹುದು. ಆದರೆ ಅದು ನೈಋತ್ಯ ದಿಕ್ಕಿಗೆ ತಾಗದಂತೆ ಜಾಗರೂಕರಾಗಿ ಶೌಚಾಲಯವನ್ನು ನಿರ್ಮಿಸಬಹುದು. ನೈಋತ್ಯ ದಿಕ್ಕಿನಲ್ಲಿ ಸ್ನಾನಗೃಹ ನಿರ್ಮಿಸುವುದು ಮಾನಸಿಕ ಒತ್ತಡ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳು

ಈಶಾನ್ಯ ದಿಕ್ಕಿನಲ್ಲಿ ಬಾತ್ರೂಮ್ ಇದ್ದರೆ ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಅದೇ ರೀತಿ ಆಗ್ನೇಯ ದಿಕ್ಕು ಬೆಂಕಿಗೆ ಸಂಬಂಧಿಸಿದ ಮೂಲವಾಗಿರುವುದರಿಂದ, ಅಲ್ಲಿ ನೀರಿನ ಅಂಶ ಇರುವ ಸ್ನಾನಗೃಹ ನಿರ್ಮಿಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.

ಶೌಚಾಲಯದ ಆಸನವನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ಮುಖವಾಗಿರಿಸುವುದು ಸೂಕ್ತ. ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡುವುದು ತಪ್ಪಿಸಲು ಸೂಚಿಸಲಾಗಿದೆ. ನೀರಿನ ನಲ್ಲಿಗಳು ಮತ್ತು ಶವರ್‌ಗಳನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ಗೋಡೆಗಳಲ್ಲಿ ಅಳವಡಿಸಬೇಕು.

ಕನ್ನಡಿಯನ್ನು ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಇಡುವುದು ಉತ್ತಮ. ಗಾಳಿಯು ಕಿಟಕಿ ಮೂಲಕ ಒಳಗೆ ಬರಲು ಅನುಕೂಲಕರವಾಗಿರುತ್ತದೆ. ಅಥವಾ ಎಕ್ಸಾಸ್ಟ್ ಫ್ಯಾನ್ ಅನ್ನು ವಾಯುವ್ಯ ಅಥವಾ ಪಶ್ಚಿಮ ದಿಕ್ಕಿಗೆ ಇಡಲು ತಜ್ಞರು ಸಲಹೆಯನ್ನು ನೀಡುತ್ತಾರೆ.

ಅಡುಗೆಮನೆಯ ಎದುರು ಅಥವಾ ಪಕ್ಕದಲ್ಲಿ ಸ್ನಾನಗೃಹ ಇರಬಾರದು. ಅದೇ ರೀತಿ ಪೂಜಾ ಕೊಠಡಿಯ ಮೇಲೆ, ಕೆಳಗೆ ಅಥವಾ ಪಕ್ಕದಲ್ಲಿಯೂ ಬಾತ್ರೂಮ್ ಇರಬಾರದು. ಸ್ನಾನಗೃಹದ ಬಾಗಿಲುಗಳನ್ನು ಯಾವಾಗಲೂ ಮುಚ್ಚಿರಬೇಕು. ಜೊತೆಗೆ ಒಳಭಾಗವನ್ನು ಸ್ವಚ್ಛವಾಗಿ ಇಡುವುದು ಮುಖ್ಯ ಎಂದು ವಾಸ್ತು ತಜ್ಞರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+