ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಅರ್ಧಾಷ್ಟಮ ಶನಿಕಾಟದೊಂದಿಗೆ ಹೊಸ ವರ್ಷ ಆರಂಭಿಸಿರುವ ಸಿಂಹ ರಾಶಿಯವರು ಈ ವರ್ಷ ಹೆಚ್ಚಿನ ಲಾಭ ಹೊಂದಲಿದ್ದಾರೆ. ಈ ಬಗ್ಗೆ ಮೊದಲೇ ಗೊತ್ತಾಗಿರುವುದರಿಂದ ಕೂಡಲೇ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಆದಷ್ಟು ಬೇಗ.
ಈ ರಾಶಿಯ ಮಘಾ ನಕ್ಷತ್ರದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಮಂದಗತಿಯಲ್ಲಿ ಸಾಗುವ ಜೀವನ ನಂತರ ತೊಂದರೆಗಳು ಕಾಣಲಾರಂಭಿಸಿ ಕೊನೆಯ ನಾಲ್ಕು ತಿಂಗಳು ಸಮಾಧಾನದ ನಿಟ್ಟುಸಿರುವ ಬಿಡುವಂತಾಗುತ್ತದೆ. ಆದರೆ ಕೆಲಸ ಕಾರ್ಯಕ್ಕೆಂದು ಊರೂರು ತಿರುಗುವುದು ಕೆಲವರಿಗೆ ಅನಿವಾರ್ಯವೆನಿಸಬಹುದು.
ಪೂರ್ವಾಫಾಲ್ಗುಣಿ ನಕ್ಷತ್ರದವರು ಮೊದಲ ನಾಲ್ಕು ತಿಂಗಳು ಅತ್ಯುತ್ತಮ ಸಮಯದನುಭವ ಪಡೆದುಕೊಂಡರೆ, ನಂತರದ ನಾಲ್ಕು ತಿಂಗಳು ಇದ್ದುದರಲ್ಲಿಯೇ ಸಮಾಧಾನಪಟ್ಟುಕೊಳ್ಳುವಂತಿರುತ್ತದೆ. ಆದರೆ ಕೊನೆಯ ನಾಲ್ಕು ತಿಂಗಳು ಮಾತ್ರ ಸ್ವಲ್ಪ ಕಷ್ಟಕರವೆನಿಸುವಂತಾದರೂ ಅಚ್ಚರಿಯಿಲ್ಲ. [ಸೋಂಬೇರಿಗಳು ಪೂರ್ವ ಫಾಲ್ಗುಣಿ ನಕ್ಷತ್ರದವರು]

ಉತ್ತರಾಫಾಲ್ಗುಣಿ ನಕ್ಷತ್ರದ 1ನೇ ಚರಣದವರ ಪರಿಸ್ಥಿತಿ ಸ್ವಲ್ಪ ವಿಷಾದನೀಯವಾಗಿರುತ್ತದೆ ಯುಗಾದಿಯಿಂದ 8 ತಿಂಗಳು. ನಂತರದ ನಾಲ್ಕು ತಿಂಗಳು ಒಮ್ಮೆಲೆ ಜೀವನದಲ್ಲಿ ಏರಿಕೆ ಕಂಡುಬರುವ ಸಾಧ್ಯತೆಯಿದೆ. ಈ ನಕ್ಷತ್ರದವರಿಗೆ ಸಂತೋಷ ಮತ್ತು ಸಂತಸ ಈ ವರ್ಷ ತುಸು ಹೆಚ್ಚೇ ಎನ್ನಬಹುದು.
ಇನ್ನು ಗುರುಬಲವಿಲ್ಲದೇ ಹಣಕಾಸಿನ ತೊಂದರೆಗಳಿಂದ ಗೊಂದಲಮಯವಾಗಿಸಿಕೊಂಡಿರುವ ಜೀವನವನ್ನು ಆಗಸ್ಟ್ ವರೆಗೆ ಸಾಗಿಸಿಕೊಂಡು ಹೋಗಿ. ಆ ನಂತರ ಬಂದ ಸಂಕಷ್ಟಗಳೆಲ್ಲ ಮಂಗಮಾಯವಾಗಿ ಗುರುಬಲದಿಂದ ಅಪಾರ ಯಶಸ್ಸನ್ನು ಪಡೆದುಕೊಳ್ಳಬಹುದು. [ಗುರುಬಲವಿಲ್ಲದ ಸಿಂಹ ಮತ್ತು ಕನ್ಯಾರಾಶಿಗೆ ಪರಿಹಾರವೇನು?]
2017ರ ಜನವರಿ ಪಂಚಮ ಶನಿಕಾಟ ಆರಂಭವಾಗುವುದು. ಅದಿರುವುದು ಎರಡೂವರೆ ವರ್ಷ. ಆ ಸಮಯದಲ್ಲಿ ಸಂಸಾರದ ತಾಪತ್ರಯಗಳು ಹೆಚ್ಚು ಬರುವುದರಿಂದ ಈಗಿನಿಂದಲೇ ಮುಂದಿನ ಎರಡೂವರೆ ವರ್ಷ ಏನೇನು ಮಾಡಬಹುದು ಎಂದು ಯೋಚಿಸಿಟ್ಟುಕೊಳ್ಳಿ. ಬೇಕಿದ್ದಲ್ಲಿ ವರ್ಷಫಲ ಮೊದಲೇ ತಿಳಿದುಕೊಂಡರೆ ಒಳ್ಳೆಯದು.
ಇದು ಅವಶ್ಯಕವೂ ಹೌದು, ಮೊದಲೇ ನಮಗೆ ತೊಂದರೆಯ ಸಮಯ ಬರುತ್ತದೆ ಎಂದು ಗೊತ್ತಾದರೆ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಸಂಕಟ ಬಂದಾಗ ವೆಂಟಕರಮಣ ಎನ್ನುವ ಪರಿಸ್ಥಿತಿ ತಂದುಕೊಳ್ಳಬಾರದು ಸಿಂಹ ರಾಶಿಯ ಮಂದಿ. ಒಟ್ಟಿನಲ್ಲಿ ಈ ವರ್ಷ ಶೇ.70ರಷ್ಟು ಅಶುಭ ಫಲಗಳೇ ಕಂಡು ಬರುವುದರಿಂದ ಬರುವ ಸಂಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಬೇಕು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications