ಕನ್ಯಾ ರಾಶಿಗೆ ವಿಳಂಬಿ ಸಂವತ್ಸರದಲ್ಲಿ ಸುಖ- ದುಃಖಗಳ ಮಿಶ್ರ ಫಲ

ವಿಳಂಬಿನಾಮ ಸಂವತ್ಸರದ ಯುಗಾದಿ ಫಲ ಕನ್ಯಾ ರಾಶಿಗೆ ಹೇಗಿದೆ ಎಂಬುದನ್ನು ನೋಡೋಣ. ಉತ್ತರಾ ಫಲ್ಗುಣಿ ನಕ್ಷತ್ರದ ಎರಡು, ಮೂರು, ನಾಲ್ಕನೇ ಪದ, ಹಸ್ತಾ ನಕ್ಷತ್ರದ ನಾಲ್ಕೂ ಪಾದ ಹಾಗೂ ಚಿತ್ತಾ ನಕ್ಷತ್ರದ ಒಂದು ಮತ್ತು ಎರಡನೇ ಪಾದ ಸೇರಿ ಕನ್ಯಾ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಬುಧ.

ಇನ್ನು ಗೋಚಾರದ ವಿಚಾರಕ್ಕೆ ಬಂದರೆ ಹನ್ನೊಂದರಲ್ಲಿ ರಾಹು, ಎರಡನೇ ಸ್ಥಾನದಲ್ಲಿ ಆ ನಂತರದಲ್ಲಿ ಮೂರನೇ ಸ್ಥಾನದಲ್ಲಿ ಗುರು ಸಂಚಾರ, ನಾಲ್ಕರಲ್ಲಿ ಶನಿ ಹಾಗೂ ಐದನೇ ಸ್ಥಾನದಲ್ಲಿ ಕೇತು ಇದೆ. ಆದಾಯ 14 ಆದರೆ ವ್ಯಯ 2 ಇದೆ. ಇನ್ನು ಗೌರವದ ವಿಚಾರಕ್ಕೆ ಬಂದರೆ, ಗೌರವ 6 ಇದ್ದರೆ, ಅವಮಾನ 6 ಇದೆ.

ಈ ಸಂವತ್ಸರ ಮಿಶ್ರ ಫಲ ಕಂಡು ಬರುತ್ತಿದೆ. ಆರ್ಥಿಕವಾಗಿ ನೋಡಿದಾಗ ಎಷ್ಟು ಬೇಕೋ ಅಷ್ಟೇ ಎಂಬಂತಿದೆ. ವರ್ಷಾಂತ್ಯಕ್ಕೆ ಸರಿದಂತೆ ಜಿಪುಣತನ ಜಾಸ್ತಿ ಆಗುತ್ತದೆ. ಇಷ್ಟು ಸಮಯ ಬಹಳ ಹಣ ಕಳೆದುಬಿಟ್ಟೆ. ಇನ್ನು ಮುಂದೆ ಹಣ ಕೂಡಿಡಬೇಕು ಎಂಬ ಮನಸ್ಥಿತಿ ಬರುತ್ತದೆ. ಸ್ವಂತ ಅಣ್ಣ-ತಮ್ಮ, ಅಕ್ಕ-ತಂಗಿಯರಿಗೂ ಕೈ ಎತ್ತಿ ಸಹಾಯ ಮಾಡಬೇಕು ಎಂಬ ಬುದ್ಧಿ ಬರುವುದಿಲ್ಲ.

ವ್ಯಾಪಾರ ಹಾಗೂ ವೈದ್ಯಕೀಯ ಸಂಸ್ಥೆ ನಡೆಸುವವರಿಗೆ ಉತ್ತಮ ಸಮಯ

ವ್ಯಾಪಾರ ಹಾಗೂ ವೈದ್ಯಕೀಯ ಸಂಸ್ಥೆ ನಡೆಸುವವರಿಗೆ ಉತ್ತಮ ಸಮಯ

ಇನ್ನು ಈ ವರೆಗೆ ಸಿಕ್ಕಿದಂಥ ಗುರು-ಹಿರಿಯರ ಮಾರ್ಗದರ್ಶನ ಸಿಗುವುದಿಲ್ಲ. ಅಥವಾ ಅಂಥವರು ದೂರ ಪ್ರಯಾಣ ಮಾಡಿ, ನಿಮಗೆ ಅಗತ್ಯಕ್ಕೆ ಅವರು ಸಿಗುವುದಿಲ್ಲ. ನೀರಿನ ವ್ಯಾಪಾರ ಮಾಡುವವರಿಗೆ, ಮದ್ಯ ವ್ಯಾಪಾರ ಮಾಡುವವರಿಗೆ, ವಿದ್ಯಾ ಸಂಸ್ಥೆ ನಡೆಸುವವರಿಗೆ, ಶಿಕ್ಷಣ ಸಂಸ್ಥೆ ನಡೆಸುವವರಿಗೆ, ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಹಾಗೂ ಸಂತಾನಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಂಸ್ಥೆ ನಡೆಸುತ್ತಿರುವವರಿಗೆ ಒಳ್ಳೆ ಸಮಯ.

ಶುಭ ಸುದ್ದಿ- ಶುಭ ಕಾರ್ಯಗಳನ್ನು ನಿರೀಕ್ಷಿಸಬಹುದು

ಶುಭ ಸುದ್ದಿ- ಶುಭ ಕಾರ್ಯಗಳನ್ನು ನಿರೀಕ್ಷಿಸಬಹುದು

ವಿವಾಹಾದಿ ಶುಭ ಕಾರ್ಯ ನಡೆಸುವ ಸಾಧ್ಯತೆ ಗೋಚರಿಸುತ್ತಿದೆ. ಸಂತಾನ ಅಪೇಕ್ಷಿಸುತ್ತಿರುವವರು ಶುಭ ಸುದ್ದಿ ನಿರೀಕ್ಷಿಸಬಹುದು. ನಿಮ್ಮ ಮುಂದಾಳತ್ವದಲ್ಲಿ ಒಳ್ಳೆ ಕೆಲಸ ಆಗಿ ಹೆಸರು ಪಡೆಯುತ್ತೀರಿ. ಸಮಾಜದಲ್ಲಿ ಹೆಸರು, ಮನ್ನಣೆ ಇದೆ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಇದೆ. ವಿದೇಶ ಪ್ರಯಾಣ ಮಾಡಲು ಇದು ಸಕಾಲ.

ವ್ಯಾಪಾರದಲ್ಲಿ ಬಂದ ಲಾಭ ನೀರಿನಂತೆ ಖರ್ಚು

ವ್ಯಾಪಾರದಲ್ಲಿ ಬಂದ ಲಾಭ ನೀರಿನಂತೆ ಖರ್ಚು

ಆದರೆ, ಕೊಟ್ಟ ಮಾತಿನಂತೆ ಕೆಲಸ ಮಾಡಿಕೊಡಲು ಆಗುವುದಿಲ್ಲ. ಹಿಡಿದ ಕೆಲಸ ಪೂರ್ತಿ ಮಾಡಲು ಆಗುವುದಿಲ್ಲ. ವ್ಯಾಪಾರದಲ್ಲಿ ಬಂದ ಲಾಭ ನೀರಿನಂತೆ ಖರ್ಚಾಗುತ್ತದೆ. ಕೋರ್ಟ್-ಕಚೇರಿ ವ್ಯಾಜ್ಯಗಳು ಆರಂಭವಾಗಬಹುದು. ಈಗಾಗಲೇ ವ್ಯಾಜ್ಯ ಹೂಡಿದ್ದರೆ ಅದು ಎಳೆದಾಡುತ್ತದೆ. ಇದರಿಂದ ಒಂದಿಷ್ಟು ಖರ್ಚು ಹಾಗೂ ಬೇಸರ ಇದೆ.

ಹೆಸರು ಗಳಿಸಲು ಶ್ರಮ ಪಡುತ್ತೀರಿ

ಹೆಸರು ಗಳಿಸಲು ಶ್ರಮ ಪಡುತ್ತೀರಿ

ಇಷ್ಟು ಸಮಯ ನೀವು ಹಣ ಮಾಡಲು ಎಷ್ಟು ಶ್ರಮಿಸಿದ್ದಿರೋ ಈ ಸಂವತ್ಸರದಲ್ಲಿ ಹೆಸರು ಮಾಡುವ ಕಡೆಗೆ ನಿಮ್ಮ ಗಮನ ಹೋಗುತ್ತದೆ. ಇನ್ನು ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೀರಿ. ಉದ್ಯೋಗ ಬದಲಾವಣೆ ಮಾಡುವುದು ಅನಿವಾರ್ಯ ಆದರೆ ಸೆಪ್ಟೆಂಬರ್ -ಅಕ್ಟೋಬರ್ ಒಳಗೆ ನೋಡಿಕೊಂಡು ಬಿಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+