Ugadi Horoscope 2025: ಯುಗಾದಿ ಭವಿಷ್ಯ- ಈ ರಾಶಿಗೆ ಅನೇಕ ಸವಾಲು, ಮೈಮರೆತರೆ ಗಂಡಾಂತರ
ಯುಗಾದಿ ಹಬ್ಬ ಇನ್ನೇನು ದೂರವಿಲ್ಲ. ಹಬ್ಬದ ತಯಾರಿಯಲ್ಲಿ ಇರುವ ಪ್ರತಿಯೊಬ್ಬರಿಗೂ ಮುಂಬರುವ ವರ್ಷ ಹೇಗಿರಲಿದೆ ಎಂದು ತಿಳಿಯುವ ಆಸೆ ಇದ್ದೇ ಇರುತ್ತದೆ. ಈ ಹೊಸ ವರ್ಷ ಯುಗಾದಿ ಶುಭ ಹಾಗೂ ಅಶುಭ ಫಲಗಳನ್ನು ನೀಡಲಿದೆ. ಶನಿ, ಗುರು, ರಾಹು, ಕೇತುಗಳ ಸ್ಥಾನದಿಂದಾಗಿ ಕೆಲ ರಾಶಿಯವರು ಯುಗಾದಿಯ ನಂತರ ಜಾಗರೂಕರಾಗಿರಬೇಕು. ಕೊಂಚ ಮೈಮರೆಯತರೂ ಕೂಡ ಗಂಡಾಂತರ ತಪ್ಪಿದ್ದಲ್ಲ. ಹಾಗಾದರೆ ಯುಗಾದಿಯ ನಂತರ ಜಾಗರೂಕತೆಯಿಂದ ಇರಬೇಕಾದ ರಾಶಿಯವರು ಯಾರು ಎಂದು ಈಗ ತಿಳಿಯೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಗುರುಬಲ ಇದೆ. ಶನಿ ಸಂಚಾರದಿಂದ ಪಂಚಮ ಶನಿ ಶುರುವಾಗುತ್ತದೆ. ಇದರಿಂದ ನಿರ್ಧಿಷ್ಟ ಫಲ ಸಿಗಲಿದೆ. ಮಕ್ಕಳ ವಿಚಾರದಲ್ಲಿ ಬೇಸರ ಇರುತ್ತದೆ. ಮಕ್ಕಳ ಮದುವೆ ವಿಚಾರದಲ್ಲಿ ಚಿಂತೆ ಹೆಚ್ಚಾಗಬಹುದು. ಮಕ್ಕಳಿಂದ ಕಿರಿಕಿರಿ, ಜಗಳ, ಮನಸ್ತಾಪ ಅಧಿಕವಾಗಲಿವೆ.

ಈ ರೀತಿ ಸಂದರ್ಭಗಳು ಎದುರಾಗುತ್ತವೆ. ಆದರೆ ಮಾನಸಿಕ ಕಿನ್ನತೆಗೆ ಹೋಗದಿರಿ. ಯಾವುದೇ ಕಾರಣಕ್ಕೂ ಮನಸ್ಸಿಗೆ ಯಾವುದೇ ವಿಚಾರ ತೆಗೆದುಕೊಳ್ಳಬೇಡಿ. ಅಮವಾಸ್ಯೆ ತಿಥಿ ದಿನ ಎಳ್ಳು ದಾನ ಮಾಡಿ. ಶಿವನಿಗೆ ಅಭಿಷೇಕ ಮಾಡಿ. ಇದರಿಂದ ಯುಗಾದಿಯಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಶನಿ ಬದಲಾವಣೆಯಿಂದ ಒಳ್ಳೆಯ ಸಮಯ ಇಲ್ಲ. ಯಾಕೆಂದರೆ ಕುಂಭ ರಾಶಿಯವರಿಗೆ ಸಾಡೇಸಾತ್ ಮುಕ್ತಾಯವಾಗಿಲ್ಲ. ಕುಂಭ ರಾಶಿಯಿಂದ ಶನಿ ಮೀನ ರಾಶಿಗೆ ಹೋಗಬಹುದು. ಆದರೆ ಸಾಡೇಸಾತ್ ಏಳು ವರ್ಷ ಇರುತ್ತದೆ. ಈಗ ಐದು ವರ್ಷ ಪೂರ್ಣಗೊಂಡಿದ್ದು ಇನ್ನೂ ಎರಡು ವರ್ಷ ಇದೆ. ಮೀನ ರಾಶಿಯಿಂದ ಶನಿ ಅಶುಭ ಫಲಗಳನ್ನು ನೀಡುತ್ತಾನೆ. ಆದರೆ ಕಷ್ಟಗಳು ಕಡಿಮೆಯಾಗುತ್ತವೆ.

ಜಾತಕದಲ್ಲಿ ಗುರು ಬಲ ಇರುತ್ತದೆ. ಇದರಿಂದ ಮದುವೆ ಕಾರ್ಯಗಳು ಆಗುತ್ತವೆ. ಮೇ ನಂತರ ಉತ್ತಮ ದಿನಗಳು ಶುರುವಾಗುತ್ತವೆ. ಗೃಹ ಪ್ರವೇಶ, ಮನೆ ಕಟ್ಟುವುದು, ಶುಭ ಕಾರ್ಯಗಳು ಹೆಚ್ಚು ನಡೆಯುತ್ತವೆ. ಹನುಮಂತನ ಆರಾಧನೆ ಮಾಡಿ. ಶಿವನ ಆರಾಧನೆ ಮಾಡಿದರೆ ಇನ್ನಷ್ಟು ಒಳ್ಳೆಯದಾಗಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಯುಗಾದಿಯ ಭವಿಷ್ಯ ತುಂಬಾ ಉತ್ತಮವಾಗಿಲ್ಲ. ಹಾಗಂತ ಭಯ ಬೀಳುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಉತ್ತಮ ಫಲ ನಿರೀಕ್ಷೆ ಮಾಡಬಹುದು. ನಿಮ್ಮ ಜಾತಕದಲ್ಲಿ ಗುರು ಬುಧ ದೆಸೆ ನಡೆಯುತ್ತಿದ್ದರೆ ಉತ್ತಮವಾದ ಶಿಕ್ಷಣ ಪಡೆಯುವಿರಿ. ವ್ಯವಹಾರ ಮಾಡುತ್ತಿದ್ದರೆ ಸಹಜ ಸ್ಥಿತಿ ಇರುತ್ತದೆ. ಹೊಸ ಕೆಲಸಗಳನ್ನು ಈ ಸಮಯದಲ್ಲಿ ಆರಂಭ ಮಾಡಲೇಬೇಡಿ. ಹಣ ಹೂಡಿಕೆ ಮಾಡುವುದನ್ನು ತಪ್ಪಿಸಿ.

ಯಾಕೆಂದರೆ ಯುಗಾದಿ ನಂತರ ನಿಮಗೆ ಸಮಸ್ಯೆಗಳೇ ಅಧಿಕವಾಗುತ್ತವೆ. ಶತ್ರುಗಳು ಹೆಚ್ಚಾಗುತ್ತಾರೆ. ಬೇಡವಾದ ದಾರಿಯಲ್ಲಿ ಹೋಗುವಾಗ ಅಪಘಾತವಾಗಬಹುದು. ಆರ್ಥಿಕ ಸಂಕಷ್ಟ ಕೋರ್ಟ್ ಕಚೇರಿ ಸಮಸ್ಯೆ ಆಗುತ್ತವೆ. ಪರಿಹಾರ ಪಡೆಯಲು ಹನುಮಂತನ ಆರಾಧನೆ ಮಾಡಿ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.












Click it and Unblock the Notifications