ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ, ಎಲ್ಲೆಲ್ಲಿ ಗೋಚರ?
2021ರ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ, ಹಿಂದೂ ಕ್ಯಾಲೆಂಡರ್ ಪ್ರಕಾರ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ನಡೆಯಲಿದೆ.
ಚಂದ್ರಗ್ರಹಣ ಸಂಭವಿಸಿ ಹದಿನೈದು ದಿನಗಳ ಒಳಗಾಗಿ ಈ ವರ್ಷದ ಸೂರ್ಯಗ್ರಹಣವೂ ಕೂಡ ಸಂಭವಿಸಲಿದೆ.ಸೂರ್ಯಗ್ರಹಣವು ಜೂನ್ 10, 2021ರಂದು ಗುರುವಾರ ಮಧ್ಯಾಹ್ನ 1:42ಕ್ಕೆ ಆರಂಭವಾಗಲಿದ್ದು, ಸಂಜೆ 6: 41ಕ್ಕೆ ಕೊನೆಗೊಳ್ಳುವುದು. ಈ ಗ್ರಹಣ ಆಂಶಿಕ ಸೂರ್ಯಗ್ರಹಣವಾದರೂ ಈ ಅವಧಿಯಲ್ಲಿ ಮಂಗಳ ಕಾರ್ಯ ಮಾಡುವುದು ಅಶುಭವೆಂದು ಹೇಳಲಾಗುತ್ತದೆ.
ಗ್ರಹಣ ಅವಧಿ ಮುಗಿದ ಬಳಿಕ ಗಂಗಾಜಲದಿಂದ ಮನೆಶುದ್ಧಿಗೊಳಿಸಿ, ಪೂಜಾ ನಂತರ ಆಹಾರ ಸೇವನೆ ಮಾಡಬೇಕು. ಜೂನ್ 10ರಂದು ನಡೆಯುವ ಸೂರ್ಯಗ್ರಹಣವು ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾದ ಉತ್ತರ ಭಾಗದಲ್ಲಿ ಭಾಗಶಃ ಕಂಡುಬರುತ್ತದೆ.

ಅಲ್ಲದೇ ಉತ್ತರ ಕೆನಡಾ,ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ಕಾಣಬಹುದು. ಭಾರತದಲ್ಲಿ ಕೂಡಾ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಆದರೆ ಭಾರತದ ಕೆಲವೆಡೆ ಮಾತ್ರ ಈ ಗ್ರಹಣ ಗೋಚರವಾಗಲಿದೆ.
ಜೂನ್ 10ರಂದು ನಡೆಯುವ ಸೂರ್ಯಗ್ರಹಣ ವೃಷಭ ರಾಶಿ, ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ. ಈ ಗ್ರಹಣವು ವೃಷಭ ರಾಶಿಯಲ್ಲಿ ನಡೆಯುವುದರಿಂದ ಈ ರಾಶಿಯ ಮೇಲೆ ಗ್ರಹಣದ ಗರಿಷ್ಠ ಪರಿಣಾಮ ಕಂಡುಬರುತ್ತದೆ.
ಈ ಸೂರ್ಯಗ್ರಹಣ ಜೂನ್ 10 ಅಂದರೆ ಈ ದಿನದ ವಿಶೇಷವೆಂದರೆ ಶನಿ ಜಯಂತಿ, ವಟ ಸಾವಿತ್ರಿ ವ್ರತವೂ ನಡೆಸಲಾಗುತ್ತದೆ.












Click it and Unblock the Notifications