• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Saturn Transit 2020: ಮಕರದಲ್ಲಿ ಶನಿ ಸಂಚಾರ- ದ್ವಾದಶ ರಾಶಿ ಫಲಾಫಲ

By ಶಂಕರ್ ಭಟ್
|

ನ್ಯಾಯಾಧಿಪತಿ ಎನಿಸಿಕೊಂಡ ಶನಿ ಗ್ರಹವು 24-1-2020ರಂದು ಮಕರ ರಾಶಿಗೆ ಪ್ರವೇಶಿಸುತ್ತಿದೆ. ಇಷ್ಟು ಸಮಯ ಧನುಸ್ಸು ರಾಶಿಯಲ್ಲಿ ಸಂಚರಿಸಿ, ಇದೀಗ ಸ್ವಗೃಹವಾದ ಮಕರ ರಾಶಿಗೆ ಪ್ರವೇಶಿಸುತ್ತಿದೆ. ಈಗಾಗಲೇ ಸಾಡೇಸಾತ್ ಶನಿಯ ಪ್ರಭಾವ ಎದುರಿಸುತ್ತಿರುವ ಧನುಸ್ಸು, ಮಕರ ರಾಶಿಯವರ ಜತೆಗೆ ಕುಂಭ ರಾಶಿಗೂ ಇನ್ನು ಮುಂದೆ ಏಳರಾಟ ಶನಿಯ ಪ್ರಭಾವ ಶುರುವಾಗುತ್ತದೆ.

ವೃಶ್ಚಿಕ, ಸಿಂಹ ಹಾಗೂ ವೃಷಭ ರಾಶಿಯವರ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಂಡು ಸಕಾರಾತ್ಮಕ ಪ್ರಭಾವವನ್ನು ಕಾಣಬಹುದಾದರೆ ಮಿಥುನ, ಕನ್ಯಾ ರಾಶಿಯವರಿಗೆ ಹೊಸ ಸಮಸ್ಯೆಗಳು ಎದುರುಗೊಳ್ಳುತ್ತವೆ. ಮುಖ್ಯವಾಗಿ ಮಿಥುನ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾದ ಸಮಯ ಇದು.

ಜಾತಕದಲ್ಲಿ ಕುಜ ದೋಷವಿದ್ದಾಗ ಏನು ಪರಿಹಾರ?

ಯಾವುದೇ ರಾಶಿಯಿಂದ ಮೂರು, ಆರು ಹಾಗೂ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರವು ಶುಭ ಫಲವನ್ನು ನೀಡಿದರೆ, ಸಾಡೇ ಸಾತ್ (ಸ್ವಂತ ರಾಶಿಯಿಂದ ಹನ್ನೆರಡು, ಒಂದು ಹಾಗೂ ಎರಡನೇ ಮನೆ), ಎಂಟು ಹಾಗೂ ಐದನೇ ಮನೆಯಲ್ಲಿ ಶನಿ ಸಂಚಾರ ಮಾಡುವಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಸಾಮಾನ್ಯವಾಗಿ ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಕಾಲ ಸಂಚರಿಸುತ್ತದೆ. ಆಯಾ ವ್ಯಕ್ತಿಯ ಜಾತಕದಲ್ಲಿ ಶನಿಯ ಶುಭ ಫಲ, ಶುಭ ದೃಷ್ಟಿಗಳಿದ್ದಲ್ಲಿ ಮತ್ತು ಆ ವ್ಯಕ್ತಿ ಸ್ವಭಾವತಃ ಪ್ರಾಮಾಣಿಕ ಮತ್ತು ಧರ್ಮತತ್ಪರನಾಗಿದ್ದಲ್ಲಿ ಹೆಚ್ಚಿನ ತೊಂದರೆಗಳು ಆಗುವುದಿಲ್ಲ. ಆದರೆ ದುಸ್ಥಾನಗಳಲ್ಲಿ, ಕ್ರೂರ ದೃಷ್ಟಿ ಬೀರುತ್ತಿದ್ದಲ್ಲಿ ಹಾಗೂ ವ್ಯಕ್ತಿಯೂ ಅಪ್ರಾಮಾಣಿಕ ಮತ್ತು ಅಧರ್ಮದ ಹಾದಿಯಲ್ಲಿ ನಡೆಯುತ್ತಿದ್ದರೆ ಸಮಸ್ಯೆಗಳು ವಿಪರೀತ.

ಪ್ರಕಾಶ್ ಅಮ್ಮಣ್ಣಾಯ ಜ್ಯೋತಿಷ್ಯ ವಿಶ್ಲೇಷಣೆ: 2020ಕ್ಕೆ ಆರ್ಥಿಕ ಹಿಂಜರಿತಕ್ಕೆ ಬೈ ಬೈ

ಈ ಲೇಖನದಲ್ಲಿ ದ್ವಾದಶ ರಾಶಿಗಳ ಮೇಲೆ ಶನಿ ಸಂಚಾರದ ಫಲವೇನು ಎಂಬುದನ್ನು ಓದಿಕೊಳ್ಳಿ.

ಮೇಷ

ಮೇಷ

ಕರ್ಮ ಸ್ಥಾನದಲ್ಲಿ ಶನಿಯು ಸಂಚರಿಸಲಿದ್ದು, ಪರಿಶ್ರಮಕ್ಕೆ ಮಾತ್ರ ಫಲ ದೊರೆಯುತ್ತದೆ. ಯಾವುದಾದರೂ ಹೊಸ ಕೆಲಸ ಶುರು ಮಾಡಬೇಕು ಅಂದುಕೊಂಡಿದ್ದಲ್ಲಿ ಮೇ ಹನ್ನೊಂದನೇ ತಾರೀಕಿಗೂ ಮುಂಚೆ ಆರಂಭಿಸಿ. ಆ ನಂತರ ಸೆಪ್ಟೆಂಬರ್ ತನಕ ಯಾವುದೇ ಮುಖ್ಯ ಕೆಲಸ ಆರಂಭಿಸಬೇಡಿ. ನಿಮ್ಮ ಆರೋಗ್ಯ ಸಾಧಾರಣವಾಗಿ ಇರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಗಳು ಕಾಣಿಸಿಕೊಳ್ಳಬಹುದು. ಆದರೆ ದೊಡ್ಡ ಮಟ್ಟದಲ್ಲಿ ಹಿಂಸೆ ನೀಡುತ್ತದೆ. ಸಣ್ಣ- ಪುಟ್ಟ ಚರ್ಮ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ಚರ್ಮ ವೈದ್ಯರನ್ನು ಕಡ್ಡಾಯವಾಗಿ ಕಂಡು, ಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸಬೇಡಿ. ನಿಮ್ಮ ಪೋಷಕರನ್ನು ತೀರ್ಥಯಾತ್ರೆಗೆ ಕರೆದೊಯ್ಯುವ ಯೋಗ ಇದೆ. ಕುಟುಂಬದವರ ಬೆಂಬಲ ನಿಮಗೆ ದೊರೆಯಲಿದೆ.

ವೃಷಭ

ವೃಷಭ

ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಈ ಸಂದರ್ಭದಲ್ಲಿ ತಂದೆ ಅಥವಾ ತಂದೆಗೆ ಸಮಾನರಾದವರ ಜತೆ ಭಿನ್ನಾಭಿಪ್ರಾಯ ಮೂಡುತ್ತದೆ. ಇನ್ನು ಅವರ ಆರೋಗ್ಯ ಆತಂಕಕ್ಕೆ ಕಾರಣವಾಗುವ ಮಟ್ಟಿಗೆ ಗಂಭೀರ ಆಗಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ. ಉದ್ಯೋಗ ಸ್ಥಳದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡುತ್ತದೆ. ನೀವು ಬಹಳ ಶ್ರಮಪಟ್ಟು ಕೆಲಸ ಮಾಡಿದ ನಂತರವೂ ತಕ್ಕ ಬಡ್ತಿ ಅಥವಾ ವೇತನ ಹೆಚ್ಚಳ ಆಗದೆ ಬೇಸರವಾಗಲಿದೆ. ತಾಳ್ಮೆಯಿಂದ ಇರುವುದು ಮುಖ್ಯ. ವೈಫಲ್ಯಗಳಿಂದ ಧೃತಿಗೆಡದಿರಿ. ಯಶಸ್ಸು- ವೈಫಲ್ಯ ಎಲ್ಲವೂ ಜೀವನದ ಭಾಗ, ನೆನಪಿಡಿ. ಉದ್ಯೋಗ ಬದಲಾವಣೆ ಮಾಡುವುದಿದ್ದರೆ ಶನಿ ಸಂಚಾರದ ಆರಂಭದಲ್ಲೇ ಮಾಡಿ. ಮಾತಿನ ಮೇಲೆ ಹಿಡಿತ ಇರಲಿ. ಹಿರಿಯರನ್ನು ಗೌರವಿಸಿ.

ಮಿಥುನ

ಮಿಥುನ

ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಯಾವುದೇ ಕೆಲಸವಾದರೂ ಮುಂದಕ್ಕೆ ಹೋಗುತ್ತದೆ. ನಿಮ್ಮ ಶ್ರಮವಂತೂ ಹಾಕಿ, ಫಲಾಫಲ ನಿರೀಕ್ಷಿಸುವಂತಿಲ್ಲ. ಏಕೆಂದರೆ ಶನಿಯು ಎಂಟನೇ ಸ್ಥಾನದಲ್ಲಿ ಸಂಚರಿಸುತ್ತದೆ. ಅನಿರೀಕ್ಷಿತವಾದ ಸಮಸ್ಯೆಗಳು ಎದುರಾಗುತ್ತವೆ. ಹಣಕಾಸಿನ ಸ್ಥಿತಿ ಹದಗೆಡುತ್ತದೆ. ಯಾವುದೇ ಲಾಭ ಅಥವಾ ಹಣಕಾಸಿನ ಅನುಕೂಲವನ್ನು ಈ ಅವಧಿಯಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ವಿದೇಶ ಪ್ರಯಾಣಕ್ಕೆ ಸೂಕ್ತ ಸನ್ನಿವೇಶ ಸೃಷ್ಟಿ ಆಗುತ್ತದೆ. ಯಾವಾಗೆಲ್ಲ ಪರಿಸ್ಥಿತಿ ಪೂರಕವಾಗಿಲ್ಲ ಎಂದು ನಿಮ್ಮ ಸುಪ್ತ ಮನಸ್ಸಿಗೆ ಅನಿಸುತ್ತದೋ ಆಗ ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೃತ್ತಿಬದುಕಿನಲ್ಲಿ, ಉದ್ಯೋಗ ವಿಚಾರದಲ್ಲಿ ದೊಡ್ಡ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಿರಿಯರ ಸಲಹೆ ಪಡೆದು ಮುಂದುವರಿಯಿರಿ.

ಕರ್ಕಾಟಕ

ಕರ್ಕಾಟಕ

ನಿಮಗೆ ಏಳನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಆಲಸ್ಯ ಮಾಡಿದರೆ ಅದರ ನಕಾರಾತ್ಮಕ ಪರಿಣಾಮ ಆಗಲಿದೆ. ವ್ಯಾಪಾರ, ಉದ್ಯಮ ಅಥವಾ ವೃತ್ತಿಗೆ ಸಂಬಂಧಿಸಿದಂತೆ ನಿರ್ಣಾಯಕವಾದ ತೀರ್ಮಾನ ಮಾಡಬೇಕಾಗುತ್ತದೆ. ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸುವ ಕಡೆ ಗಮನ ಇರಲಿ. ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಹಲವು ಅವಕಾಶಗಳು ದೊರೆಯಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಇರಲಿ. ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಯಶಸ್ಸಿಗೆ ಸಂಬಂಧಿಕರು ಬೆಂಬಲವಾಗಿ ನಿಲ್ಲುತ್ತಾರೆ. ಶನಿಯ ವಕ್ರೀ ಸಂಚಾರದ ಮೇ ಹಾಗೂ ಸೆಪ್ಟೆಂಬರ್ ಮಧ್ಯದ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿವಾದಾತ್ಮಕ ವಿಚಾರಗಳಿಂದ ದೂರ ಇರಿ. ಇಲ್ಲದಿದ್ದರೆ ನೀವಾಗಿಯೇ ಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ.

ಸಿಂಹ

ಸಿಂಹ

ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ನಿಮ್ಮ ಜೀವನದಲ್ಲಿ ಶನಿ ಗ್ರಹ ಮುಖ್ಯ ಪಾತ್ರ ವಹಿಸಲಿದೆ. ಯಶಸ್ಸಿಗೆ ಸರಿಯಾದ ಮಾರ್ಗ ಯಾವುದು ಎಂಬ ಅಂಶ ನಿಮಗೆ ಅನುಭವಕ್ಕೆ ಬರುತ್ತದೆ. ಗುರಿ ಕಡೆಗೆ ಸರಿಯಾದ ಗಮನ ಇಟ್ಟು ಪ್ರಯತ್ನಿಸಿ. ಕೆಲ ಮಟ್ಟಿಗೆ ದೈಹಿಕ- ಮಾನಸಿಕ ಆರೋಗ್ಯ ಸಮಸ್ಯೆ ಕಾಡಬಹುದು. ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆಯೂ ಸರಿಯಾದ ಗಮನ ನೀಡಬೇಕು. ಎಲ್ಲ ಸಾಧಕ- ಬಾಧಕಗಳನ್ನು ವಿವೇಚನೆ ಮಾಡಿದ ನಂತರವೇ ಹೂಡಿಕೆ ಮಾಡಿ. ಇಲ್ಲದಿದ್ದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಈ ವರ್ಷದ ಮೇ ಹಾಗೂ ಸೆಪ್ಟೆಂಬರ್ ಮಧ್ಯೆ ಯಾವುದೇ ಕಾರಣಕ್ಕೂ ಉದ್ಯೋಗ ಬದಲಾವಣೆ ಮಾಡಬೇಡಿ. ಬಡ್ತಿಗಾಗಿ ಕಾಯುತ್ತಿದ್ದರೆ ತಾಳ್ಮೆ ಇರಲಿ, ಯಾವುದೂ ರಾತ್ರೋರಾತ್ರಿ ಆಗುವುದಿಲ್ಲ. ನೀವು ಕಳೆದುಕೊಂಡಿದ್ದ ಪ್ರೀತಿ ಮತ್ತೆ ದೊರೆಯಲಿದೆ.

ಕನ್ಯಾ

ಕನ್ಯಾ

ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯ, ಶಿಕ್ಷಣದಲ್ಲಿ ಹಿನ್ನಡೆ ಅನುಭವಕ್ಕೆ ಬರಲಿದೆ. ಎಷ್ಟು ಪ್ರಯತ್ನಿಸಿದರೂ ಸಾಲದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಉದ್ಯೋಗ ಸ್ಥಳದಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುತ್ತೀರಿ. ಆಂತರಿಕ ರಾಜಕೀಯಕ್ಕೆ ನೀವು ಬಲಿಯಾಗುವ ಸಾಧ್ಯತೆಗಳಿವೆ. ನಿಮ್ಮ ಪೋಷಕರು ಬೆಂಬಲ ನೀಡಲಿದ್ದು, ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಿ. ಮನೆ, ವಾಹನ, ಗ್ಯಾಜೆಟ್, ದುಬಾರಿ ವಸ್ತುಗಳ ಖರೀದಿ ವೇಳೆಯಲ್ಲಿ ನೀವು ಮೋಸ ಹೋಗುವ ಸಾಧ್ಯತೆಗಳಿವೆ.

ತುಲಾ

ತುಲಾ

ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಇಷ್ಟು ಸಮಯ ಮೂರನೇ ಮನೆಯಲ್ಲಿದ್ದು, ಶುಭ ಫಲಗಳನ್ನು ನೀಡಿದ್ದ ಶನಿ ಗ್ರಹವು ಸಣ್ಣ ಸಣ್ಣ ಸಮಸ್ಯೆಗಳನ್ನು ತಂದೊಡ್ಡಲಿದೆ. ನನ್ನ ಮಾತೇ ಸರಿ ಎಂಬ ಧೋರಣೆ ಒಳ್ಳೆಯದಲ್ಲ. ಅಹಂಕಾರಿ ಎಂಬ ಹಣೆಪಟ್ಟಿ ಅಂಟಿಕೊಳ್ಳುವ ಸಾಧ್ಯತೆಗಳಿವೆ. ಇನ್ನೇನು ಕೈಗೆ ಬಂತು ಅಂದುಕೊಳ್ಳುವ ಹೊತ್ತಿಗೆ ಅನೇಕ ಯೋಜನೆಗಳು ನಿಮ್ಮ ಕೈ ಜಾರಿ ಹೋಗಲಿದೆ. ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರಗಳಲ್ಲಿ ಹಣ ತೊಡಗಿಸದಿರಿ. ಹಾಗೆ ಮಾಡಿದರೆ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರಿಗೆ ತಾಯಿ ಅಥವಾ ಮಾತೃ ಸಮಾನರಾದವರ ಜತೆಗೆ ಭಿನ್ನಾಭಿಪ್ರಾಯ- ಮನಸ್ತಾಪ ಮೂಡಬಹುದು. ಹಲವೆಡೆ ಪ್ರಯಾಣ ಮಾಡಬೇಕಾಗುತ್ತದೆ. ಸೆಪ್ಟೆಂಬರ್ ನಂತರ ವಿದೇಶ ಪ್ರಯಾಣ ಕೂಡ ಮಾಡಬಹುದು. ಯಾರ ಬಗ್ಗೆಯೂ ಲಘುವಾಗಿ ಮಾತಾಡಬೇಡಿ.

ವೃಶ್ಚಿಕ

ವೃಶ್ಚಿಕ

ಮೂರನೇ ಮನೆಯಲ್ಲಿ ಶನಿ ಸಂಚಾರ ಮಾಡುವುದರೊಂದಿಗೆ ನಿಮ್ಮ ರಾಶಿಯವರಿಗೆ ಇದ್ದ ಸಾಡೇ ಸಾತ್ ಪ್ರಭಾವ ಇಲ್ಲವಾಗುತ್ತದೆ. ಆದರೆ ನಿಮ್ಮ ಗಮನಕ್ಕೆ ಬಾರದಂತೆ ಸೋಮಾರಿತನ ಆವರಿಸಿಕೊಳ್ಳುತ್ತದೆ. ಆರ್ಥಿಕ ಸ್ಥಿತಿ ಅತ್ಯುತ್ತಮವಾಗುತ್ತದೆ. ಆದಾಯ ಮೂಲಗಳು ಕೂಡ ಹೆಚ್ಚಾಗುವ ಯೋಗ ಇದೆ. ಉದ್ಯಮಿಗಳಿಗೆ ವ್ಯಾಪಾರ ವಿಸ್ತರಣೆಗೆ ಹಲವು ಅವಕಾಶಗಳು ದೊರೆಯಲಿವೆ. ಹಣಕಾಸು ಹರಿವು ಚೆನ್ನಾಗಿ ಆಗುತ್ತಿದೆ ಎಂಬ ಕಾರಣಕ್ಕೆ ದುಂದು ವೆಚ್ಚ ಮಾಡಬೇಡಿ. ಕೂಡಿಡುವ ಬುದ್ಧಿ ರೂಢಿಸಿಕೊಳ್ಳಿ. ತಾಯಿಯ ಜತೆಗೆ ಮನಸ್ತಾಪ ಆಗದಂತೆ ಎಚ್ಚರಿಕೆ ವಹಿಸಿ ಸ್ನೇಹಿತರ ಸಹಾಯದಿಂದ ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುತ್ತದೆ. ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶಗಳಿವೆ.

ಧನು

ಧನು

ಜನ್ಮ ರಾಶಿಯಲ್ಲಿದ್ದ ಶನಿಯು ಎರಡನೇ ಮನೆಯಲ್ಲಿ ಸಂಚರಿಸಲಿದೆ. ಹಣಕಾಸು ದುಡಿಮೆಗೆ ವಿಪರೀತ ಶ್ರಮ ಹಾಕಬೇಕಾಗುತ್ತದೆ. ಸಾಡೇ ಸಾತ್ ನ ಕೊನೆಯ ಘಟ್ಟ ಇದು. ಈ ಅವಧಿಯಲ್ಲಿ ಶನಿಯು ನಿಮಗೆ ಅನೇಕ ಪರೀಕ್ಷೆಗಳನ್ನು ಒಡ್ಡಿದರೂ ಮತ್ತಷ್ಟು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಾನೆ. ವ್ಯಾಪಾರಿಗಳಿಗೆ- ಉದ್ಯಮಿಗಳಿಗೆ ಕಠಿಣವಾದ ಸಮಯ ಇದಾಗಲಿದೆ. ಬರಬೇಕಾದ ಹಣವು ಸರಿಯಾದ ಸಮಯಕ್ಕೆ ಬರುವುದಿಲ್ಲ. ಆದರೆ ಬಾರದಿರುವುದಕ್ಕಿಂತ ತಡವಾಗಿಯಾದರೂ ಬರುತ್ತದಲ್ಲಾ ಎಂಬ ತಾಳ್ಮೆಯನ್ನು ರೂಢಿಸಿಕೊಳ್ಳಿ. ಆಗ ನೆಮ್ಮದಿಯಾಗಿ ಇರಬಹುದು. ವಿದೇಶ ಅಥವಾ ದೂರ ಪ್ರಯಾಣ ಮಾಡಬೇಡಿ. ಹೊಸದಾಗಿ ಪರಿಚಯವಾದವರನ್ನು ನಂಬಿಕೊಂಡು ಯಾವುದೇ ಕೆಲಸಕ್ಕೆ ಮುಂದಾಗಬೇಡಿ. ಪೋಷಕರ ಆಶೀರ್ವಾದ, ಬೆಂಬಲದಿಂದ ನಿಮ್ಮ ಹಲವು ಸಮಸ್ಯೆಗಳು ನಿವಾರಣೆ ಆಗುತ್ತವೆ. ಧೈರ್ಯಗೆಡದಿರುವುದು ಮುಖ್ಯ.

ಮಕರ

ಮಕರ

ಶನಿಯು ನಿಮ್ಮ ಜನ್ಮ ರಾಶಿಯಲ್ಲೇ ಸಂಚರಿಸಲಿದೆ. ಇದು ಸಾಡೇಸಾತ್ ನ ಎರಡನೇ ಘಟ್ಟ. ವಿಶ್ರಾಂತಿ ಸಿಗದಷ್ಟು ಕೆಲಸ ನಿಮಗೆ ಆಗುತ್ತದೆ. ಆದರೆ ಅದರಿಂದ ಯಾವುದೇ ದೊಡ್ಡ ಪ್ರತಿಫಲ ಸಿಗುವುದಿಲ್ಲ. ಆದರೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಇರುತ್ತದೆ. ಈ ಅವಧಿಯಲ್ಲಿ ನಿಮ್ಮೊಳಗೆ ಇರುವ ಸಮಸ್ಯೆ ನಿವಾರಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ಆ ಮೂಲಕ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪುಗಳಾಗದಂತೆ ಎಚ್ಚರ ವಹಿಸುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ್ ದೊಡ್ಡ ಕನಸುಗಳ ಕಡೆಗೆ ಪ್ರಯತ್ನ ಆರಂಭಿಸಿ. ಯಾವಾಗೆಲ್ಲ ನಿಮ್ಮಲ್ಲಿ ಉತ್ಸಾಹ ಕಡಿಮೆ ಆಗುವುದೋ ಆಗ ಹೊಸ ಕೆಲಸ ಕೈಗೆತ್ತಿಕೊಳ್ಳುವ ಮೂಲಕ ಉತ್ಸಾಹವನ್ನು ಮರಳಿ ಪಡೆದುಕೊಳ್ಳಿ. ವಿದೇಶ ಪ್ರಯಾಣಕ್ಕೆ ಅವಕಾಶ ಬರಬಹುದು. ಅಳೆದು- ತೂಗಿ ತೀರ್ಮಾನ ತೆಗೆದುಕೊಳ್ಳಿ. ಚಾಲನೆಯಲ್ಲಿ ಎಚ್ಚರ ಇರಲಿ. ಹೊಸ ಮನೆ ಕಟ್ಟುವ, ಖರೀದಿಸುವ ಆಲೋಚನೆ ಬರಬಹುದು. ಎಚ್ಚರಿಕೆ ಹೆಜ್ಜೆಗಳನ್ನು ಇಡಿ.

ಕುಂಭ

ಕುಂಭ

ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಸಾಡೇ ಸಾತ್ ಆರಂಭವಾಗಲಿದೆ. ಈ ಅವಧಿಯಲ್ಲಿ ಕೆಲಸದ ಒತ್ತಡ, ಚಿಂತೆ ಹೆಚ್ಚಾಗಲಿದೆ. ಜೀವನದ ಕೆಲವು ಕಟು ವಾಸ್ತವಗಳನ್ನು ಎದುರುಗೊಳ್ಳಲಿದ್ದೀರಿ. ನಿಮಗೆ ಪ್ರತಿಕೂಲ ಆಗುವ ಸನ್ನಿವೇಶವನ್ನು ಹೇಗೆ ಎದುರುಗೊಳ್ಳಲಿದ್ದೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ನಿಮಗೆ ಬಹಳ ಆಪ್ತರಾದವರು ಮನಸ್ತಾಪದಿಂದ ದೂರವಾಗುವ ಯೋಗ ಇದೆ. ಈ ಅವಧಿಯಲ್ಲಿ ಕೆಲವು ಹೊಸಬರು ನಿಮ್ಮ ಹೃದಯಕ್ಕೆ ಹತ್ತಿರವಾಗಲಿದ್ದಾರೆ. ಮದುವೆಯಾದವರಿಗೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಲಿದೆ. ಗೃಹಾಲಂಕಾರಕ್ಕಾಗಿ ಬಹಳ ಹಣ ಖರ್ಚು ಮಾಡಲಿದ್ದೀರಿ. ಹೊಸ ಮನೆ ಅಥವಾ ವಾಹನಕ್ಕಾಗಿ ಹಣ ಖರ್ಚು ಮಾಡುವ ಯೋಗ ಇದೆ. ಆದರೆ ಹೂಡಿಕೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸಾಧಕ- ಬಾಧಕಗಳನ್ನು ಅಳೆದು- ತೂಗಿ ಆ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು.

ಮೀನ

ಮೀನ

ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ನಿಮ್ಮ ಜೀವನದಲ್ಲಿ ಹಲವು ಬಗೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಆದರೆ ನೀವು ಆಲಸ್ಯ ಬಿಟ್ಟು ಮುನ್ನುಗ್ಗಿದರೆ ಮಾತ್ರ ಉತ್ತಮ ಫಲಿತಾಂಶ ದೊರೆಯಲಿದೆ. ಹಲವು ಅವಕಾಶಗಳು ನಿಮ್ಮ ಮನೆ ಬಾಗಿಲನ್ನು ತಟ್ಟಲಿವೆ. ನಿಮಗೆ ಸೂಕ್ತ ಎನಿಸಿದ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿ ಗಮನದಲ್ಲಿ ಇರಿಸಿಕೊಂಡು, ನಿರ್ಧಾರವನ್ನು ಕೈಗೊಳ್ಳಿ. ಸಮಾಜದಲ್ಲಿ ಹೆಸರು, ಪ್ರತಿಷ್ಠೆ ದೊರೆಯಲಿದೆ. ವೈವಾಹಿಕ ಜೀವನ ಸುಮಧುರವಾಗಿ ಇರಲಿದೆ. ಇನ್ನು ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಪ್ರಯತ್ನ ಫಲಿಸಲಿದೆ. ಆರೋಗ್ಯ ಉತ್ತಮವಾಗಿ ಇರಲಿದೆ. ಪೋಷಕರ ಆಶೀರ್ವಾದ ಮತ್ತು ಬೆಂಬಲ ದೊರೆತು, ಹಲವು ಕ್ಷೇತ್ರದಲ್ಲಿ ಏಳ್ಗೆ ಕಾಣಲಿದ್ದೀರಿ.

English summary
Saturn Transit 2020 Predictions for all the 12 zodiac signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X