Get Updates
Get notified of breaking news, exclusive insights, and must-see stories!

ಸಾಮುದ್ರಿಕಾ ಶಾಸ್ತ್ರ: ಭವಿಷ್ಯ ನುಡಿಯುವ ಹೆಣ್ಣಿನ ಕಣ್ಣುಗಳು

ಸಾಮುದ್ರಿಕಾ ಶಾಸ್ತ್ರದ ಮುಂದುವರಿದ ಭಾಗವಿದು. ಕಳೆದ ಲೇಖನದಲ್ಲಿ ಹೆಣ್ಣುಮಕ್ಕಳ ಹಣೆಯನ್ನು ನೋಡಿ, ಗುಣ-ನಡವಳಿಕೆ ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಾಗಿತ್ತು. ಇಂದಿನ ಲೇಖನದಲ್ಲಿ ಕಣ್ಣನ್ನು ನೋಡಿ ನುಡಿಯಬಹುದಾದ ಭವಿಷ್ಯದ ಬಗ್ಗೆ ತಿಳಿಸಲಾಗುವುದು.

* ಮಹಿಳೆಯ ಕಣ್ಣು ಕೆಂಪಗಿದ್ದರೆ ತೀಕ್ಷ್ಣ ಸ್ವಭಾವವಿರುತ್ತದೆ. ತುಂಬಾ ಕೋಪ ತೋರುತ್ತಾರೆ. ಪತಿಗೆ ಮಾರಕವಾಗಿ ಪರಿಣಮಿಸುತ್ತಾರೆ.

Samudrika Shastra- How eyes defines Woman's personality

* ಚಲನೆ ಜಾಸ್ತಿ ಇರುವ ಕಣ್ಣುಗುಳುಳ್ಳ ಹೆಣ್ಣುಮಕ್ಕಳಲ್ಲಿ ಸ್ವೇಚ್ಛಾಚಾರ ಜಾಸ್ತಿಯಿರುತ್ತದೆ. ಆದರೆ ವೈವಾಹಿಕ ಜೀವನ ಸಮತೋಲನದಿಂದ ಕೂಡಿರುತ್ತದೆ. ಇವರು ಯಾರಿಂದಲೂ ಅತಿಯಾದ ನಿರೀಕ್ಷೆ ಮಾಡುವುದಿಲ್ಲ. ಹಾಗೆ ಮಾಡಿದರೆ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚು.

* ಯಾವ ಮಹಿಳೆಯ ಕಣ್ಣು ಹಳದಿ ಬಣ್ಣದಲ್ಲಿರುತ್ತದೋ ಅಂಥವರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಾಧ್ಯತೆಗಳು ಹೆಚ್ಚು

* ಕಣ್ಣು ಗುಡ್ಡೆ ಗುಂಡಗಿದ್ದರೆ ಅಂಥವರು ಕೆಲಸ-ಕಾರ್ಯಗಳಲ್ಲಿ ಬಹಳ ಚುರುಕಾಗಿರುತ್ತಾರೆ. ಸಮಾಜದಲ್ಲಿ ಬಹಳ ಗೌರವಾದರಗಳನ್ನು ಪಡೆಯುತ್ತಾರೆ. ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿ ಚಟುವಟಿಕೆಯಿಂದ ಇರುತ್ತಾರೆ.

* ಕಂದು ಬಣ್ಣದ ಕಣ್ಣುಗಳಿರುವ ಮಹಿಳೆಯರು ಸುಳ್ಳು ಹೇಳುವುದಕ್ಕೆ ಹಿಂಜರಿಯಲ್ಲ. ಇತರರಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದರಲ್ಲಿ ಇವರು ಬುದ್ಧಿವಂತರು.

* ಸಣ್ಣ ಕಣ್ಣುಗಳಿದ್ದರೆ ಪತಿಯ ಮಾತನ್ನು ಕೇಳುವುದಿಲ್ಲ ಮತ್ತು ಕುಟುಂಬದಲ್ಲಿ ತೊಂದರೆಗಳನ್ನು ತರುತ್ತಾರೆ. ಇಂಥ ಮಹಿಳೆಯರು ಯಾವುದೇ ಸಂಬಂಧವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ.

* ಕಣ್ಣು ಗುಡ್ಡೆ ಕೆಳಗೆ ನೋಡುವಂತಿದ್ದರೆ ಅಂಥವರು ತಮ್ಮ ಕುಟುಂಬ ಏಳ್ಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

* ದೊಡ್ಡ ಕಣ್ಣುಗಳಿದ್ದು, ಕಿವಿಯವರೆಗೆ ಹಬ್ಬಿದ್ದರೆ ಅಂಥವರನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅಂಥವರು ಕುಟುಂಬಕ್ಕೆ ಸಂತೋಷ ಹಾಗೂ ಸಂಪತ್ತು ತರುತ್ತಾರೆ.

* ಕಣ್ಣುಗಳು ಬೆಳ್ಳಗಿದ್ದರೆ ಅಂಥವರು ಸರಕಾರಿ ಉದ್ಯೋಗಿಗಳಾಗಲು ಸೂಕ್ತರಾದವರು. ಅವರ ಕೌಟುಂಬಿಕ ಜೀವನ ದೀರ್ಘಕಾಲದವರೆಗೆ ಚೆನ್ನಾಗಿರುತ್ತದೆ.

* ಕಣ್ಣು ಹುಬ್ಬುಗಳು ದೊಡ್ಡದಾಗಿದ್ದು ಮತ್ತು ಕಣ್ಣು ಕಪ್ಪ್ಗಿದ್ದರೆ ಅಂಥವರು ವಿವಿಧ ಕ್ಷೇತ್ರದಲ್ಲಿ ಕೀರ್ತಿ, ಗೌರವ ಸಂಪಾದಿಸುತ್ತಾರೆ. ಈ ಮಹಿಳೆಯರ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಚೆನ್ನಾಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+