• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಸ್ತಿಕರನ್ನೂ ಆಸ್ತಿಕರನ್ನಾಗಿಸುವ ಶನಿದೇವ

By ಎಸ್.ಎಸ್. ನಾಗನೂರಮಠ
|

ಅಂದ ಹಾಗೆ ಶನಿದೇವನ ಪ್ರಭಾವವನ್ನು ಅಪ್ಪಿತಪ್ಪಿಯೂ ಅಂಧವಿಶ್ವಾಸ, ಮೂಢನಂಬಿಕೆ ಎನ್ನದಿರಿ. ಯಾಕಂದ್ರೆ ಶನಿದೇವ ತನ್ನ ಪ್ರಭಾವ ತೋರುತ್ತ ನಾಸ್ತಿಕರನ್ನೂ ಆಸ್ತಿಕರನ್ನಾಗಿಸುತ್ತಾನೆ. ತನ್ನ ಪ್ರಭಾವದ ಹಿಡಿತವನ್ನು ಬಿಗಿ ಮಾಡುತ್ತ ಸಾಡೇಸಾತಿಯಲ್ಲಿ ಆಯಾ ರಾಶಿಗಳವರು ದೈವಭಕ್ತಿಗೆ ಶರಣಾಗುವಂತೆಯೇ ಮಾಡುತ್ತಾನೆ. ಜೀವನದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯುವವರನ್ನೂ ಸಹ ಬಿಡದೇ ಒಮ್ಮೆ ಮರಣದ ರುಚಿ ತೋರಿಸುತ್ತಾನೆ.

ಸತತ ದೈವಾರಾಧನೆ ಮತ್ತು ಉತ್ತಮ ನಡವಳಿಕೆ ಅಳವಡಿಸಿಕೊಂಡರೆ ಶನಿದೇವನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಜೀವನದಲ್ಲಿ ಬಂದಿರುವ ಎಲ್ಲ ಸಂಕಷ್ಟಗಳನ್ನು ಸಹಿಸಿಕೊಂಡು ಪಾರಾಗಬಹುದು. ಇಲ್ಲವಾದರೆ ಹಠ ಮಾಡಿ ಶನಿದೇವನಿಗೆ ತಿರುಗಿ ಬಿದ್ದರೆ, ಹೆಗಲೇರಿದ ಶನಿದೇವ ಇಳಿಯುತ್ತ ಇಳಿಯುತ್ತ ಬರೋಬ್ಬರಿ "ಸಾಕಪ್ಪಾ ಜೀವನ" ಎನ್ನುವಂತೆ ಮಾಡುತ್ತಾನೆ.

ಪ್ರತಿನಿತ್ಯ ಮುಂಜಾನೆ, ಸಂಜೆ ಈ ಕೆಳಗಿನ ಮೃತ್ಯುಂಜಯ ಮಂತ್ರವನ್ನು ಜಪಿಸುವುದು ಸಾಡೇಸಾತಿಯಲ್ಲಿನ ರಾಶಿಗಳವರು ರೂಢಿಸಿಕೊಳ್ಳಲೇಬೇಕು.

"ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿ ವರ್ಧನಮ್

ಉವಾರುಕಮಿವ ಬಂಧನಾತ್

ಮೃತ್ಯೋಮೃಕ್ಷೀಯಮಾಮೃತಾತ್"

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬರುವ ಯೋಗ, ಫಲ, ಗುಣ ವಿಶೇಷ, ಅಲ್ಪದೋಷಗಳು ಹಾಗೂ ಜೀವನದ ಮಹತ್ತರ ಸಾಧನೆಯ ವರ್ಷ, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ ಮತ್ತು ಬರುವ ಸಾಡೇಸಾತಿಯ ಸಮಯಗಳನ್ನು ಮೊದಲೇ ಜಾತಕದ ಮೂಲಕ ತಿಳಿದುಕೊಳ್ಳಬಹುದು. ಅಲ್ಲದೇ ತಮ್ಮ ರಾಶಿಗೆ ನಡೆಯುತ್ತಿರುವ ದಶಾ ಮತ್ತು ಭುಕ್ತಿಗಳನ್ನು ತಿಳಿದುಕೊಂಡು ಜೀವನವನ್ನು ಇನ್ನೂ ಸುಂದರವಾಗಿಸಿಕೊಳ್ಳಬಹುದು.

ಇನ್ನು ಜಾತಕದ ಮೂಲಕ ಚಿಕ್ಕಮಕ್ಕಳಿದ್ದಾಗಲೇ ಆ ಮಗು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡುತ್ತದೆ ಎಂಬುದನ್ನೂ ಸಹ ಮೊದಲೇ ಗುರ್ತಿಸಿಕೊಳ್ಳಬಹುದಾಗಿದೆ. ಜಾತಕದಿಂದ ಆ ಮಗುವಿನ ಉತ್ತಮ ಕ್ಷೇತ್ರ ಮೊದಲೇ ನಮಗೆ ಗೊತ್ತಾಗುವುದರಿಂದ ಆ ಕ್ಷೇತ್ರದಲ್ಲೇ ಆ ಮಗುವನ್ನು ಪರಿಪೂರ್ಣವಾಗಿ ತರಬೇತಿ ನೀಡಿ ಬೆಳೆಸಬಹುದಾಗಿದೆ. ಎಷ್ಟೋ ಜನ ತಮ್ಮ ಜಾತಕವನ್ನು ನಿರ್ಲಕ್ಷ್ಯ ಮಾಡಿ, ಹಣೆಬರಹವಿದ್ದಂಗೆ ಆಗುತ್ತದೆ ಬಿಡಿ ಎನ್ನುತ್ತಾರೆ. ಆದರೆ ಆ ಜಾತಕವೇ ಅವರ ಹಣೆಬರಹ ಎಂಬುದನ್ನು ಅರಿಯದೇ ದಡ್ಡತನ ಮಾಡಿ ಜೀವನದಲ್ಲಿ ಅಪಯಶಸ್ಸು ಕಾಣುತ್ತಾರೆ.

ಸಾಡೇಸಾತಿಯು ಯಾವಾಗ ಬರುತ್ತದೆ ಎಂಬುದನ್ನೂ ಸಹ ಜಾತಕದಿಂದಲೇ ಮೊದಲೇ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಸಾಡೇಸಾತಿಯ ಸಮಯ ಬರುವುದಕ್ಕೂ ಮೊದಲು ಮುಂಜಾಗೃತೆ ವಹಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಒಮ್ಮೆಲೆ ಶನಿದೇವ ಸಾಡೇಸಾತಿಯಾಗಿ ಬಂದು ಕಷ್ಟಗಳ ಸರಮಾಲೆ ನೀಡಲಾರಂಭಿಸಿದ ಮೇಲೆ "ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರಂತೆ" ಎಂಬ ಮಾತಿನಂತೆ ಆವಾಗ ದೈವದೆಡೆ ಎಷ್ಟೋ ಜನ ಮನಸ್ಸು ಮಾಡುತ್ತಾರೆ.

ವ್ಯಕ್ತಿಯ ಕರಾರುವಾಕ್ಕಾದ ಜನ್ಮಸಮಯ, ಸ್ಥಳ ಮತ್ತು ದಿನಾಂಕಗಳಿಂದ ಜಾತಕ ರೂಪಿಸಲಾಗುತ್ತದೆ. ಜೀವನದ ಬಯೋಡಾಟಾವೇ ಅದರಲ್ಲಿರುವುದರಿಂದ ಎಲ್ಲರೂ ತಮ್ಮ ಜಾತಕವನ್ನು ಕಾಯ್ದಿರಿಸಿಕೊಂಡಿರುವುದು ಒಳ್ಳೆಯದು.

ಶ್ರದ್ಧೆ, ಶ್ರಮ, ಧರ್ಮ, ನ್ಯಾಯಯುತವಾಗಿ ಜೀವನ ನಡೆಸುವವರು ಸಾಡೇಸಾತಿಯ ಶನಿದೇವನಿಗೆ ಹೆದರಬೇಕಾಗಿಲ್ಲ. ಇದ್ಯಾವುದನ್ನೂ ಪಾಲಿಸದವರು ಸಾಡೇಸಾತಿಯಲ್ಲಿ ಶನಿದೇವ ನೀಡುವ ಕರ್ಮಫಲ ಅನುಭವಿಸಬೇಕು. ಆ ಕರ್ಮಫಲ ಅನುಭವಿಸುತ್ತ ಮಾಡಿದ್ದ ತಪ್ಪು ನೆನಪಿಸಿಕೊಳ್ಳುತ್ತ ಪಶ್ಚಾತ್ತಾಪ ಪಡುತ್ತ ಜೀವನದಲ್ಲಿ ಮತ್ತೊಬ್ಬರಿಗೆ ತೊಂದರೆ ನೀಡಿದರೆ ಅದಕ್ಕಿಂತ ದೊಡ್ಡ ದೊಡ್ಡ ತೊಂದರೆಗಳು ದುಪ್ಪಟ್ಟಾಗಿ ನಮಗೇ ಮರಳಿ ಬರುತ್ತವೆ ಎಂಬುದನ್ನು ಶನಿದೇವ ಮನಗಾಣಿಸುತ್ತಾನೆ ನೆನಪಿರಲಿ.

ಶನಿಕೃಪೆಗೆ : ಕುಟುಂಬದ ಇತರ ಸದಸ್ಯರೊಂದಿಗೆ ಸಾಮರಸ್ಯದಿಂದಲೇ ಇರಬೇಕು. ನಿರಾಶರಾಗದೇ ಹಿಡಿದ ಕೆಲಸ ಮುಗಿಸದೇ ಬಿಡಬೇಡಿ. ಪರಸ್ತ್ರೀ/ಪುರುಷರ ಸಹವಾಸ ಬೇಡ. ಪರರ ಧನವನ್ನಂತೂ ಮುಟ್ಟಲೇಬೇಡಿ.

ವಾಸ್ತು ಟಿಪ್ಸ್ : ಕಸಬರಿಗೆಯು ಶನಿದೇವನ ಆಯುಧ. ಮನೆಯಲ್ಲಿ ಅದರ ಹಿಡಿಕೆಯನ್ನು ಮೇಲ್ಮುಖವಾಗಿರುವಂತೆ ಈಶಾನ್ಯ ದಿಕ್ಕಿನಲ್ಲಿಡದೇ ಬೇರೆ ದಿಕ್ಕಿನಲ್ಲಿಡಿ. [ಲೇಖಕರ ಮೊಬೈಲ್ : 9481522011]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Impact of Sade Sati on Zodiac signs : Shani makes even atheist believe in God. So, do not neglect Shani and his power to trouble people as superstition. Another thing is know when Shani is going to trouble you by horoscope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more