Rama's Favorite Signs: ಈ ರಾಶಿಯವರೆಂದರೆ ಶ್ರೀರಾಮನಿಗೆ ತುಂಬಾ ಇಷ್ಟ- ಈ ರಾಶಿ ನಿಮ್ಮದಾ?
ರಾಮ ನವಮಿಯನ್ನು ಶ್ರೀರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ರಾಮ ನವಮಿ ಹಬ್ಬವನ್ನು ಇದೇ ಏಪ್ರಿಲ್ 17 ರಂದಿದೆ. ರಾಮನ ಜಾತಕದಲ್ಲಿ ಶುಕ್ರನು ಅದೃಷ್ಟದ ಮನೆಯಲ್ಲಿ ಉತ್ಕೃಷ್ಟನಾಗಿರುತ್ತಾನೆ. ಜೊತೆಗೆ ರಾಮನವಮಿಯಂದು ಮಧ್ಯಾಹ್ನದಿಂದ ಜನಿಸುವ ಮಕ್ಕಳು ಕೆಲವು ವಿಶೇಷ ಗುಣಗಳನ್ನು ಹೊಂದುತ್ತಾರೆ.
ಚೈತ್ರ ಮಾಸದ ನವಮಿ ತಿಥಿಯು ಮಂಗಳವಾರ 16 ಏಪ್ರಿಲ್ ಮಧ್ಯಹ್ನ 1:23 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 17 ರಂದು ಮಧ್ಯಾಹ್ನ 3:15 ರವರೆಗೆ ಇದು ಮುಂದುವರಿಯುತ್ತದೆ. ಉದಯ ತಿಥಿಯಲ್ಲಿ ನವಮಿ ತಿಥಿ ಇರುವುದರಿಂದ ರಾಮ ನವಮಿ ಹಬ್ಬವನ್ನು ಏಪ್ರಿಲ್ 17 ರಂದು ಆಚರಿಸಲಾಗುತ್ತದೆ.
ಏಪ್ರಿಲ್ 17 ರಂದು ಹಲವಾರು ಶುಭ ಯೋಗಗಳು ರೂಪಗೊಳ್ಳುತ್ತವೆ. ಜೊತೆಗ ಶ್ರೀ ರಾಮನ ಆಶೀರ್ವಾದವೂ ಸಿಗಲಿದೆ. ಹಾಗಾದರೆ ಯಾವ ರಾಶಿಯವರಿಗೆ ಶ್ರೀರಾಮನ ಆಶೀರ್ವಾದ ಸಿಗಲಿದೆ. ಶ್ರೀರಾಮನ ನೆಚ್ಚಿನ ರಾಶಿಗಳ ಬಗ್ಗೆ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಶ್ರೀರಾಮನ ನೆಚ್ಚಿನ ರಾಶಿಯವರಾಗಿರುತ್ತಾರೆ. ಅವರು ಶ್ರೀರಾಮನ ಕೃಪೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಶ್ರೀರಾಮನ ಕೃಪೆಯಿಂದ ಮೇಷ ರಾಶಿಯ ಜನರು ಕೆಲ ದಿನಗಳಿಂದ ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ.
ಇದಲ್ಲದೆ ಈ ಅವಧಿಯಲ್ಲಿ ನೀವು ಪೂರ್ವಜರ ಆಸ್ತಿ ಪಡೆಯಬಹುದು. ಅದೇ ಸಮಯದಲ್ಲಿ ಉದ್ಯೋಗಿಗಳಿಗೆ ಸ್ಥಾನ, ಪ್ರತಿಷ್ಠೆ ಇತ್ಯಾದಿಗಳ ಲಾಭವೂ ಸಿಗುತ್ತದೆ. ಕುಟುಂಬ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ರಾಮನ ಕೃಪೆಯಿಂದ ಪರಿಹರಿಸಲ್ಪಡುತ್ತವೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಮೊದಲಿಗಿಂತ ಮಧುರವಾಗಿರುತ್ತದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ರಾಮನ ಕೃಪೆಯಿಂದ ಸಮಾಜಿದಲ್ಲಿ ಗೌರವ ಹೆಚ್ಚಾಗಲಿದೆ. ಕರ್ಕಾಟಕ ರಾಶಿಯ ಜನರು ರಾಮನ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ನೀವು ಕೆಲವು ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಬಹುದು.
ಅಲ್ಲದೆ ಭವಿಷ್ಯದಲ್ಲಿ ನಿಮಗೆ ಆರ್ಥಿಕ ಪ್ರಯೋಜನಗಳನ್ನು ತರುವ ಯಾರನ್ನಾದರೂ ನೀವು ಭೇಟಿಯಾಗಬಹುದು. ನಿಮ್ಮ ಕುಟುಂಬ ಜೀವನವು ಮೊದಲಿಗಿಂತ ಉತ್ತಮವಾಗಿರುತ್ತದೆ. ಇದರೊಂದಿಗೆ ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.

ತುಲಾ ರಾಶಿ
ಶ್ರೀರಾಮನ ಆಶೀರ್ವಾದದಿಂದ ತುಲಾ ರಾಶಿಯವರು ಸಂತೋಷವಾಗಿರುತ್ತಾರೆ. ರಾಮನ ಆಶೀರ್ವಾದದೊಂದಿಗೆ ತುಲಾ ರಾಶಿಯ ಜನರ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಕನಸು ಹೊಂದಿದ್ದರೆ, ಈ ಅವಧಿಯಲ್ಲಿ ಅದು ಈಡೇರುತ್ತದೆ. ಈ ಅವಧಿಯಲ್ಲಿ ಹಣವನ್ನು ದಾನ ಮಾಡುವುದು ನಿಮಗೆ ತುಂಬಾ ಫಲಕಾರಿಯಾಗಿರುತ್ತದೆ. ನಿರ್ಗತಿಕರಿಗೆ ಸಹಾಯ ಮಾಡುವಿರಿ. ವೃತ್ತಿಜೀವನದ ಪ್ರಗತಿಗೆ ನೀವು ಹೊಸ ಅವಕಾಶಗಳನ್ನು ಸಹ ಪಡೆಯುತ್ತೀರಿ.

ಮಕರ ರಾಶಿ
ಶ್ರೀರಾಮನ ಆಶೀರ್ವಾದದಿಂದ ಸಮಾಜದಲ್ಲಿ ಮಕರ ರಾಶಿಯವರಿಗೆ ಗೌರವ ಹೆಚ್ಚಾಗುತ್ತದೆ. ರಾಮನ ಆಶೀರ್ವಾದದಿಂದ ಮಕರ ರಾಶಿಯ ಜನರು ಎಲ್ಲಾ ಕಷ್ಟಗಳಿಂದ ಪರಿಹಾರವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಬಹುದು.
ನೀವು ಬಹಳ ಸಮಯದಿಂದ ಭೇಟಿಯಾಗದ ವ್ಯಕ್ತಿ ಇಂದು ಬೇಟಿಯಾಗುತ್ತಾರೆ. ನೀವು ಪ್ರಗತಿಗೆ ಹೊಸ ಅವಕಾಶಗಳನ್ನು ಸಹ ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಪ್ರೀತಿಪಾತ್ರರಿಂದ ನೀವು ಉಡುಗೊರೆಗಳು ಮತ್ತು ಗೌರವ ಎರಡನ್ನೂ ಪಡೆಯುತ್ತೀರಿ. ಅಲ್ಲದೆ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ನೀವು ಧಾರ್ಮಿಕ ಪ್ರವಾಸಕ್ಕೂ ಹೋಗಬಹುದು.

ಮೀನ ರಾಶಿ
ರಾಮನ ಕೃಪೆಯಿಂದ ನೀವು ಹೂಡಿಕೆಯಿಂದ ಲಾಭ ಪಡೆಯುತ್ತೀರಿ. ಮೀನ ರಾಶಿಯ ಜನರು ಶ್ರೀರಾಮನ ಆಶೀರ್ವಾದದಿಂದ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಮತ್ತು ಧನಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣುವಿರಿ.
ಕುಟುಂಬದಲ್ಲಿ ಸಮೃದ್ಧಿಯೂ ಇರುತ್ತದೆ. ಹಳೆಯ ಸಾಲಗಳಿಂದ ಮುಕ್ತಿಯೂ ಸಿಗಲಿದೆ. ಹೂಡಿಕೆಗೆ ಸಮಯ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಫಲಿತಾಂಶ ಮಾತ್ರ ಸಿಗುತ್ತದೆ. ನಿಮ್ಮ ಎಲ್ಲಾ ಕೌಟುಂಬಿಕ ವಿವಾದಗಳು ಸಹ ಪರಿಹರಿಸಲ್ಪಡುತ್ತವೆ.












Click it and Unblock the Notifications