Get Updates
Get notified of breaking news, exclusive insights, and must-see stories!

ಅದೃಷ್ಟ ಸಂಖ್ಯೆ 2 ವ್ಯಕ್ತಿಗಳ ಗುಣ, ವೃತ್ತಿ, ಅದೃಷ್ಟದ ವರ್ಷಗಳು

ಈಗಾಗಲೇ ತಿಳಿಸಿರುವಂತೆ ಯಾವುದೇ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಸಂಖ್ಯೆ ಎಂಬುದು ಬಹಳ ಮುಖ್ಯ. ವೈಯಕ್ತಿಕ ಜೀವನದಿಂದ ವ್ಯವಹಾರ ಹಾಗೂ ಉದ್ಯೋಗಕ್ಕೂ ಇದು ಮುಖ್ಯ ಪಾತ್ರ ವಹಿಸುತ್ತದೆ ಇಂದಿನ ಲೇಖನದಲ್ಲಿ ಅದೃಷ್ಟ ಸಂಖ್ಯೆ 2ರ ಬಗ್ಗೆ ವಿವರಗಳನ್ನು ತಿಳಿಸಲಾಗುವುದು.

ನಿಮ್ಮ ಅದೃಷ್ಟ ಸಂಖ್ಯೆ 2 ಆದರೆ ನೀವು ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ. ಒಂದು ವೇಳೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಎಂಬುದೇ ಗೊತ್ತಿಲ್ಲ ಅನ್ನೋದಾದರೆ ಅದನ್ನು ಕೂಡ ತಿಳಿದುಕೊಳ್ಳಬಹುದು.

ಯಾವ ವ್ಯಕ್ತಿಗಳ ಅದೃಷ್ಟ ಸಂಖ್ಯೆ 2 ಆಗಿರುತ್ತದೋ ಅಂಥವರ ಮೇಲೆ ಚಂದ್ರನ ಪ್ರಭಾವ ಇರುತ್ತದೆ. ಇವರ ಮನಸ್ಸು ಹಾಗೂ ಬುದ್ಧಿ ಪ್ರಶಾಂತವಾಗಿರುತ್ತದೆ. ಕೆಲಸ-ಕಾರ್ಯದ ವಿಚಾರದಲ್ಲಿ ತುಂಬ ಸೂಕ್ಷ್ಮವಾಗಿರುತ್ತಾರೆ. ತುಂಬ ದೀರ್ಘ ಕಾಲದವರೆಗೆ ಎಡೆಬಿಡದೆ ಕೆಲಸ ಮಾಡಿದರೂ ಅದರ ಪರಿಶ್ರಮ ಇವರಿಗೆ ಗೊತ್ತಾಗಲ್ಲ.

ಇದು ಅವರ ಪಾಲಿಗೆ ನಕಾರಾತ್ಮಕ ಅಂಶ ಹೌದು. ಆದ್ದರಿಂದ ತಮ್ಮ ವ್ಯಾಪಾರ-ವ್ಯವಹಾರವನ್ನು ಇವರು ಆಗಾಗ ಬದಲಿಸುತ್ತಿರಬೇಕು. ಅಂದಹಾಗೆ ಈ ವ್ಯಕ್ತಿಗಳು ಶುಭ ಸಮಾರಂಭಗಳಿಗೆ ವಿಪರೀತ ಹಣ ಖರ್ಚು ಮಾಡುತ್ತಾರೆ.

ಸೂಕ್ತ ಉದ್ಯೋಗಗಳು

ಸೂಕ್ತ ಉದ್ಯೋಗಗಳು

ಶಿಕ್ಷಕರು, ಪತ್ರಕರ್ತರು, ಅಕೌಂಟೆಂಟ್, ಸಮುದ್ರ ಪ್ರಯಾಣ, ಸಕ್ಕರೆ ಮಿಲ್, ಕೃಷಿ ಇಲಾಖೆ, ಸಂಗೀತ, ನಟನೆ, ದಂತವೈದ್ಯಕೀಯ, ನೀರಿಗೆ ಸಂಬಂಧಿಸಿದ್ದು, ಮಾಡೆಲಿಂಗ್ ಮುಂತಾದವು.

ಸೂಕ್ತ ವ್ಯವಹಾರಗಳು

ಸೂಕ್ತ ವ್ಯವಹಾರಗಳು

ಸೌಂದರ್ಯ ವರ್ಧಕಗಳ ಮಾರಾಟ, ಪೆಟ್ರೋಲ್ ಬಂಕ್, ತಂಪು ಪಾನೀಯ, ನೀರು, ಸಂಗೀತ ಶಾಲೆ, ಹೋಟೆಲ್, ರೆಸ್ಟೋರೆಂಟ್, ಮಣ್ಣಿನ ಕೆಲಸ, ಗುತ್ತಿಗೆ, ದಲ್ಲಾಳಿ, ಮುದ್ರಣ ಸಂಸ್ಥೆ ಮತ್ತಿತರ ವ್ಯವಹಾರ.

ಅದೃಷ್ಟದ ವರ್ಷಗಳು

ಅದೃಷ್ಟದ ವರ್ಷಗಳು

ಅದೃಷ್ಟ ಸಂಖ್ಯೆ 2ರ ವ್ಯಕ್ತಿಗಳಿಗೆ 2 ಹಾಗೂ 7 ಪರಿಣಾಮಕಾರಿಯಾಗಿರುತ್ತದೆ. ಜೀವನದಲ್ಲಿ ಈ ಸಂಖ್ಯೆ ಬಂದಾಗ ಸಂತೋಷ, ಸಂಪತ್ತು ಬರುತ್ತದೆ. ಈ ಎರಡು ಸಂಖ್ಯೆಗಳು ಯಾವಾಗ ಒಟ್ಟಿಗೆ ಬರುತ್ತದೋ ಆಗ ಇನ್ನಷ್ಟು ಅನುಕೂಲಗಳಾಗುತ್ತವೆ.

ಮುಖ್ಯವಾದ ಬದಲಾವಣೆ

ಮುಖ್ಯವಾದ ಬದಲಾವಣೆ

20, 28, 38 ವಯಸ್ಸಿನಲ್ಲಿ ಸಾಕಷ್ಟು ಹಣ ಮಾಡುತ್ತೀರಿ. 25 ಹಾಗೂ 27ನೇ ವಯಸ್ಸಿನಲ್ಲಿ ಮಹತ್ವದ ಬದಲಾವಣೆ ಕಾಣಿಸಿಕೊಳ್ಳುತ್ತದೆ. 29 ಮತ್ತು 31ನೇ ವಯಸ್ಸಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣಬೇಕಾಗುತ್ತದೆ.

ಮನೆಯ ಬಾಗಿಲು

ಮನೆಯ ಬಾಗಿಲು

ಅದೃಷ್ಟ ಸಂಖ್ಯೆ 2 ಇರುವವರ ಮನೆಯ ಮುಖ್ಯ ಬಾಗಿಲು ಉತ್ತರ, ಪಶ್ಚಿಮ ಅಥವಾ ವಾಯವ್ಯ ದಿಕ್ಕಿನಲ್ಲಿ ಇದ್ದರೆ ಕುಟುಂಬದ ಏಳ್ಗೆ ಆಗುತ್ತದೆ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+