ಅದೃಷ್ಟ ಸಂಖ್ಯೆ 1: ವ್ಯಕ್ತಿತ್ವ, ಅದೃಷ್ಟ ವರ್ಷ, ವಾಸ್ತು ಸಲಹೆ
ಸಂಖ್ಯಾಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆ ಎನ್ನುವುದು ಜೀವನದಲ್ಲಿ ಬಹಳ ಮುಖ್ಯವಾದದ್ದು. ವೈಯಕ್ತಿಕ ಜೀವನದಿಂದ ವ್ಯಾಪಾರ- ವ್ಯವಹಾರದವರೆಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಅಂತ ಗೊತ್ತಿಲ್ಲವಾದರೆ ಈ ಹಿಂದಿನ ಲೇಖನ ಓದಿ.
ನಿಮ್ಮ ಅದೃಷ್ಟ ಸಂಖ್ಯೆ 1 ಆದರೆ ರವಿ ಗ್ರಹದಿಂದ ನಿಮ್ಮ ಜೀವನ ನಿಯಂತ್ರಿಸಲ್ಪಡುತ್ತದೆ. ನಿಮ್ಮ ಕುಟುಂಬದ ಆಧಾರವಾಗಿರುತ್ತೀರಿ ಮತ್ತು ಎಲ್ಲ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ.
ಕೆಲ ಬಾರಿ ಜೀವನದಲ್ಲಿ ಅದ್ಭುತ ಅನುಕೂಲಗಳು ಅರಸಿ ಬರುತ್ತವೆ. ಮತ್ತು ದಿಢೀರ್ ನಷ್ಟಗಳು ಸಂಭವಿಸುತ್ತವೆ.

ಹಣ ಉಳಿಸುವುದರಲ್ಲಿ ಯಶಸ್ವಿಯಾಗುತ್ತೀರಿ. ಹಣ ಸಂಪಾದನೆಗೆ ನಿಮಗೆ ಹಲವು ಮಾರ್ಗಗಳು ಗೋಚರಿಸುತ್ತವೆ. ಅಂದಹಾಗೆ ಅದೃಷ್ಟ ಸಂಖ್ಯೆ 1 ಇರುವವರು ನೆನಪಿಟ್ಟುಕೊಳ್ಳಿ, ಯಾವುದೇ ಕೆಲಸವನ್ನು ಮನಸಾರೆ ಮಾಡಬೇಕು. ಯವುದೇ ಕಾರಣಕ್ಕೂ ಪಾಲುದಾರಿಕೆ ವ್ಯವಹಾರ ಮಾಡಬೇಡಿ. ಒಂದು ವೇಳೆ ಮಾಡಿದರೆ ಆ ನಂತರ ಬಹಳ ಪಶ್ಚಾತ್ತಾಪ ಪಡುತ್ತೀರಿ.
ಇನ್ನು ಇವರು ರಾಜಕೀಯ, ವೈದ್ಯಕೀಯ, ಸೈನ್ಯ, ಆಡಳಿತ ಸೇವೆಗಳು, ವಿದ್ಯುತ್ ಇಲಾಖೆ, ಹೋಟೆಲ್ ಮ್ಯಾನೇಜ್ ಮೆಂಟ್, ರೈಲ್ವೆ ಇಲಾಖೆ, ಅಂಚೆ ಇಲಾಖೆಯಲ್ಲಿ ವೃತ್ತಿಯನ್ನು ಕಂಡುಕೊಳ್ಳಬಹುದು.
ವ್ಯಾಪಾರದ ವಿಚಾರಕ್ಕೆ ಬಂದರೆ ಆಭರಣಗಳ ಖರೀದಿ- ಮಾರಾಟ, ಅದೃಷ್ಟ ಹರಳುಗಳ ಮಾರಾಟ, ಉತ್ಪಾದನಾ ಸಲಕರಣೆ, ಮೆಡಿಕಲ್ ಸ್ಟೋರ್, ಜನರಲ್ ಸ್ಟೋರ್, ಬಟ್ಟೆ ಕೆಲಸ, ವಾಹನಗಳ ಖರೀದಿ- ಮಾರಾಟ, ಆಹಾರ ಧಾನ್ಯಗಳ ಖರೀದಿ-ಮಾರಾಟ ವ್ಯವಹಾರಗಳನ್ನು ಮಾಡಬಹುದು.
ಅದೃಷ್ಟದ ವರ್ಷಗಳು ಅಂದರೆ ಎರಡು ಅಂಕಿಗಳು ಒಟ್ಟು ಕೂಡಿದಾಗ 2, 1, 4 ಬರುವಂಥದ್ದು ಅದೃಷ್ಟ ತರುತ್ತದೆ. ಉದಾಹರಣೆಗೆ 19, 20, 22... ಹೀಗೆ.
ವಾಸ್ತು ಸಲಹೆ: ಯಾರ ಅದೃಷ್ಟ ಸಂಖ್ಯೆ 1 ಇರುತ್ತದೋ ಅಂತಹವರ ಮನೆ ಮುಖ್ಯ ಬಾಗಿಲು ಪೂರ್ವ, ಈಶಾನ್ಯ ಅಥವಾ ಉತ್ತರ ಇರಬೇಕು. ಹೀಗಿದ್ದಲ್ಲಿ ಶಾಂತಿ ಹಾಗೂ ಸಂಪತ್ತು ತರುತ್ತದೆ.












Click it and Unblock the Notifications