Get Updates
Get notified of breaking news, exclusive insights, and must-see stories!

2022ರಲ್ಲಿ ಕೋಡಿಶ್ರೀಗಳು ನುಡಿದ ಭವಿಷ್ಯವೇನು, ಆಗಿದ್ದೇನು?

ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಮತ್ತೆ ಕೊರೊನಾ ತಳಿ ವೇಗವಾಗಿ ಹರಡುತ್ತಿದೆ. ಭಾರತಕ್ಕೂ ಕಾಲಿಟ್ಟಿರುವ ಕೊರೊನಾ ಮುಂದೆ ಯಾವ ಹಂತಕ್ಕೆ ಹರಡಬಲ್ಲದು ಎನ್ನುವ ಬಗ್ಗೆ ಎಲ್ಲರಲ್ಲೂ ಆತಂಕ ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಲು ಮನವಿ ಮಾಡಲಾಗುತ್ತಿದೆ. ಇದರ ನಡುವೆ ಈ ವರ್ಷದಲ್ಲಿ ಹಲವು ಸ್ವಾಮೀಜಿಗಳು, ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದರು. ಇವರಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರ ಭವಿಷ್ಯ ಕೂಡ ಒಂದು.

ಬಹುತೇಕ ಕರಾರುವಕ್ಕಾಗಿ ಭವಿಷ್ಯ ನುಡಿಯುವುದರಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರಿಗೆ ಉತ್ತಮ ಹೆಸರಿದೆ. ಕೋಡಿಶ್ರೀಗಳ ಭವಿಷ್ಯದ ಮೇಲೆ ಆಸ್ತಿಕರಿಗೆ ಇನ್ನಿಲ್ಲದ ಆಸಕ್ತಿ ಇದೆ. 2022ರ ಆರಂಭದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಭವಿಷ್ಯವೊಂದನ್ನು ನುಡಿದಿದ್ದರು. ಅದನ್ನು ಕೇಳಿ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವಾಗಿದ್ದರೂ ಅದು ಅಷ್ಟೊಂದು ಗಂಭೀರವೆನಿಸಿರಲಿಲ್ಲ. ಆದರೆ 2022ರಲ್ಲಿ ಬಂದೊದಗಿದ ಕೆಲ ಆತಂಕಗಳು ನಿಜಕ್ಕೂ ಕೋಡಿಮಠ ಸ್ವಾಮಿಗಳ ಆ ಒಂದು ಹೇಳಿಕೆಯನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

2022 ವರ್ಷದ ಮೊದಲ ಭವಿಷ್ಯದಲ್ಲಿ ದೇಶ ಕೊರೊನಾದಿಂದ ಮುಕ್ತವಾಗಲಿದೆ ಎಂದು ಶ್ರೀಗಳು ಹೇಳಿದ್ದರು. ಆದರೆ ಕೊರೊನಾದಿಂದ ಜಗತ್ತು ಮುಕ್ತವಾದರೂ, ಗಂಢಾಂತರ ತಪ್ಪದು ಎಂದು ಹೇಳಿದ್ದರು. ಆ ಗಂಢಾಂತರ ಗಾಳಿಯ ಮೂಲಕ ಬರುವ ಆಪತ್ತು ಎಂದು ಶ್ರೀಗಳು ಹೇಳಿದ್ದರು. ಈಗ ಕೋಡಿಶ್ರೀಗಳ ಆ ಒಂದು ಹೇಳಿಕೆಯನ್ನು ಮತ್ತೆ ವಿಶ್ವದೆಲ್ಲೆಡೆ ಹರಡಿಕೊಳ್ಳುತ್ತಿರುವ ಕೊರೊನಾ ತಳಿಯದ್ದೇ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೊಂದು ದಿನ ಶ್ರೀಗಳ ಭವಿಷ್ಯದಂತೆ, ಕೊರೊನಾ ಹರಡಿ ದೇಶ ಇನ್ನಿಲ್ಲದಂತೆ ಬಾದಿಸಲಿದೆಯೇ ಎನ್ನುವ ಆತಂಕ ಎಲ್ಲರಲ್ಲೂ ಹೆಚ್ಚಾಗಿದೆ. ಅಷ್ಟಕ್ಕೂ ಈವರೆಗೆ ಕೋಡಿಶ್ರೀಗಳು ಭವಿಷ್ಯ ಎಷ್ಟು ನಿಜವಾಗಿವೆ ಎನ್ನುವುದನ್ನು ನೋಡುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ.

2020 ಕೋಡಿಶ್ರೀಗಳು ನುಡಿದ ಭವಿಷ್ಯ

2020 ಕೋಡಿಶ್ರೀಗಳು ನುಡಿದ ಭವಿಷ್ಯ

''2020ರಲ್ಲಿ ಮದ್ದಿಲ್ಲದ ಕಾಯಿಲೆಗೆ ಸಾವಿರಾರು ಜನರು ಸಾವನ್ನಪ್ಪುತಾರೆ ಎಂದು ಹೇಳಿದ್ದೆ. ಜನರಲ್ಲಿ ಭಕ್ತಿಭಾವಗಳು, ದೈವ ನಂಬಿಕೆ ಮತ್ತು ವಿಶ್ವಾಸಗಳು ಕಡಿಮೆಯಾಗುತ್ತಿವೆ. ಹೀಗಾಗಿ ಪ್ರಕೃತಿಯೇ ಈ ರೀತಿ ಜನರನ್ನು ಎಚ್ಚರಿಸುತ್ತಿದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವವು ಒಂದೊಂದೇ ಸೂಚನೆ ನೀಡುತ್ತಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಮೂಲಕ, ಪ್ರಕೃತಿಯ ಮುಂದೆ ಎಲ್ಲರೂ ಹುಲು ಮಾನವರು ಎನ್ನುವುದು ಸಾಬೀತಾಗುತ್ತದೆ"ಎಂದು ಕೋಡಿಶ್ರೀಗಳು ಏಪ್ರಿಲ್ ತಿಂಗಳಲ್ಲಿ ಅರಸೀಕೆರೆಯಲ್ಲಿ ಭವಿಷ್ಯ ನುಡಿದಿದ್ದರು. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಕೊರೊನಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು.

''ಕೊರೊನಾ ವೈರಸ್ ಗೆ ಮದ್ದು ಸಿಗಲಿದೆ'' ಅಂತ ಹೇಳಿರುವ ಕೋಡಿಶ್ರೀಗಳು, ''ಕೊರೊನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ. ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದು ಕೋಡಿ ಶ್ರೀಗಳು ಯುಗಾದಿ ಭವಿಷ್ಯವನ್ನು ನುಡಿದಿದ್ದರು. ಆದರೆ, ಆ ರೀತಿ ಯಾವ ದೇಶವೂ ನಿರ್ನಾಮವಾಗಲಿಲ್ಲ.

ಕೋಡಿಶ್ರೀಗಳು ನುಡಿದ ಭವಿಷ್ಯ

ಕೋಡಿಶ್ರೀಗಳು ನುಡಿದ ಭವಿಷ್ಯ

ಆಗಸ್ಟ್‌ ನಲ್ಲಿ ದೇಶದಲ್ಲಿ ಮತೀಯ ಗಲಭೆ ಸಂಭವಿಸಲಿದೆ ಎಂದು ಕೋಡಿಶ್ರೀಗಳು ನುಡಿದಿದ್ದರು. ಅದರಂತೆಯೇ, ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆಯಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪೈಗಂಬರ್ ಬಗೆಗಿನ ಹೇಳಿಕೆಯ ನಂತದ ಕೆಲವು ದಿನಗಳಲ್ಲಿ ಒಂದು ಸಮುದಾಯದ ಆಕ್ರೋಶ ಹಂತಕ್ಕೆ ಕಮ್ಮಿಯಾಗಿತ್ತು. ಈಗ, ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ಮತೀಯ ಗಲಭೆ ಶುಭಕೃತ ನಾಮ ಸಂವತ್ಸರದಲ್ಲಿ ಮತ್ತೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

"ಗಾಳಿ ಮಳೆ ಹೆಚ್ಚಾಗಲಿದೆ, ವಿಪರೀತ ಮಿಂಚು ಬರಲಿದೆ, ಸಾವುನೋವು ಹೆಚ್ಚಾಗಲಿದೆ, ಜಲಾಶಯಗಳು ತುಂಬಿ ಹರಿಯುತ್ತವೆ. ಮಲೆನಾಡು ಬಯಲು ಸೀಮೆಯಾದೀತು. ಮಲೆನಾಡಿನವರಿಗೆ ಮಳೆ ಕಮ್ಮಿಯಾದರೆ ಸಾಕು ಎನ್ನುವ ಮನೋಭಾವನೆಯಿದೆ. ಪ್ರಕೃತಿ ಅಲ್ಲೋಲಕಲ್ಲೋಲವಾಗಲಿದೆ"ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದರು.

'ಮಳೆಯಿಂದ ಸಾವುನೋವುಗಳು ಹೆಚ್ಚಳ'

'ಮಳೆಯಿಂದ ಸಾವುನೋವುಗಳು ಹೆಚ್ಚಳ'

"ಮಲೆನಾಡು ಬಯಲುಸೀಮೆಯನ್ನು ಬಯಸುತ್ತದೆ, ಈ ಸಂವತ್ಸರದಲ್ಲಿ ಇದು ಮುಂದುವರಿಯಲಿದೆ. ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡೀತು. ಕೆರೆಕಟ್ಟೆಗಳು ಒಡೆದು ಹೋಗಲಿವೆ. ಈ ಸನ್ನಿವೇಶ ಈ ಸಂವತ್ಸರದ ಕೊನೆಯವರೆಗೂ ಇರಲಿದೆ. ಮುಂಗಾರು ಮಳೆ ಕಮ್ಮಿಯಾದ ಮೇಲೆ, ಹಿಂಗಾರು ಮಳೆಯೂ ಕಮ್ಮಿಯಾಗಲಿದೆ. ಆದರೆ, ಅಕಾಲ ಮಳೆಯಿಂದ ಸಾವುನೋವುಗಳು ಹೆಚ್ಚಾಗಲಿದೆ"ಎಂದು ಕೋಡಿಶ್ರೀಗಳು ಭವಿಷ್ಯ ನುಡಿದರು.

"ಅಶ್ವೀಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗರುಜಿನ, ಕಳ್ಳಕಾಕರರ ಕಾಟ ಹೆಚ್ಚಾಗಲಿದೆ. ಅಪಮೃತ್ಯು, ಕೊಲೆಗಳು, ಮತೀಯ ಗಲಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಕೋಪಕ್ಕೆ ತುತ್ತಾಗಲಿದೆ. ರಾಜಕೀಯದಲ್ಲಿ ತಲ್ಲಣ, ಗುಂಪುಗಳು ಆಗಲಿವೆ. ಮಳೆ ಬಂದರೆ ಬೆಳೆ ಸಿಗುವುದಿಲ್ಲ, ಈ ಸಂವತ್ಸರದ ಫಲ ಅಶುಭ"ಎಂದು ಕೋಡಿಶ್ರೀಗಳು ತಮ್ಮ ಭವಿಷ್ಯದ ಮೂಲಕ ಅಭಿಪ್ರಾಯ ಪಟ್ಟರು.

'ರಾಷ್ಟ್ರ ಮಟ್ಟದಲ್ಲಿ ದೊಡ್ದಮಟ್ಟದ ಸಾವುನೋವು ಹೆಚ್ಚಳ'

'ರಾಷ್ಟ್ರ ಮಟ್ಟದಲ್ಲಿ ದೊಡ್ದಮಟ್ಟದ ಸಾವುನೋವು ಹೆಚ್ಚಳ'

"ಈ ಸಂವತ್ಸರದಲ್ಲಿ ಭೂಕಂಪ ಹೆಚ್ಚಾಗಲಿದೆ, ದೊಡ್ಡದೊಡ್ಡ ಪಟ್ಟಣಗಳಿಗೆ ಭಂಗವಾಗಲಿದೆ. ಮತೀಯ ಗಲಭೆಯಿಂದ ಸಾವುನೋವು ಇನ್ನೂ ಹೆಚ್ಚಾಗಲಿದೆ. ರಾಷ್ಟ್ರ ಮಟ್ಟದಲ್ಲಿ ದೊಡ್ದಮಟ್ಟದ ಸಾವುನೋವುಗಳಾಗಲಿವೆ"ಎಂದು ಕೋಡಿಮಠದ ಶ್ರೀಗಳು ಹಾಸನದಲ್ಲಿ ಭವಿಷ್ಯ ನುಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+