Nostradamus Predictions : 2022 ರಲ್ಲಿ ಯುದ್ಧ, ಅಣುಬಾಂಬ್ ಸ್ಪೋಟ: ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿ
ವಿಶ್ವದ ಖ್ಯಾತ ಫ್ರೆಂಚ್ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ವಿಶ್ವದಲ್ಲೇ ಅತೀ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. "ಲೆಸ್ ಪ್ರೊಫೆಟಿಸ್" ಎಂಬ ನಾಸ್ಟ್ರಾಡಾಮಸ್ ಬರೆದ ಪುಸ್ತಕದಲ್ಲಿ ವಿಶ್ವದಲ್ಲಿ ಮುಂದೆ ಏನಾಗಲಿದೆ ಎಂಬ ಭವಿಷ್ಯವಾಣಿ ಇದೆ. ಆದರೆ ಮುಂಬರುವ ವರ್ಷ 2022 ರ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ಜಗತ್ತನ್ನೇ ತಲ್ಲಣಗೊಳಿಸುವಂತಿದೆ. 2022 ರಲ್ಲಿ ವಿಶ್ವದಲ್ಲಿ ಏನೆಲ್ಲಾ ನಡೆಯಲಿದೆ ಎಂಬ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ನುಡಿದಿದ್ದಾರೆ.
ಖ್ಯಾತ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ನೀಡಿರುವ 2022 ರ ಮುನ್ಸೂಚನೆಯು ವಿಶ್ವಕ್ಕೆ ಅತೀ ಕಾಳಜಿಯುತ ವಿಚಾರವಾಗಿದೆ. ಈ ಪುಸ್ತಕದಲ್ಲಿ ಒಟ್ಟು 6338 ಭವಿಷ್ಯವಾಣಿಯು ಇದೆ. 2022 ರಲ್ಲಿ ವಿಶ್ವದಲ್ಲಿ ನಡೆಯಲಿರುವ ಹಲವಾರು ಪ್ರಮುಖ ಬಿಕ್ಕಟ್ಟುಗಳ ಬಗ್ಗೆ ಜ್ಯೋತಿಷಿ ನಾಸ್ಟ್ರಾಡಾಮಸ್ ಮುನ್ಸೂಚನೆ ನೀಡಿದ್ದಾರೆ.
2022 ರಲ್ಲಿ ಭೂಮಿಯಲ್ಲಿ ಹಲವಾರು ಬಿಕ್ಕಟ್ಟುಗಳು ಉಂಟಾಗಲಿದೆ. ಪ್ರಮುಖವಾಗಿ ಉಲ್ಕೆಗಳಿಂದಾಗಿ ಭೂಮಿಗೆ ಹಾನಿಯು ಉಂಟಾಗಲಿದೆ. ಸಮುದ್ರದ ಮೇಲೆ ದೊಡ್ಡದಾದ ಬಂಡೆ ಕುಸಿತವಾಗಲಿದೆ. ಇದರಿಂದಾಗಿ ಸಮುದ್ರದಲ್ಲಿ ಒತ್ತಡ ಉಂಟಾಗಿ, ಸುನಾಮಿ ಅಥವಾ ದೊಡ್ಡದಾದ ಅಲೆಯು ಬಂದು ಸಾಕಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಬಹು ದೊಡ್ಡ ಸುನಾಮಿಯು ಭೂಮಿಯನ್ನು ಪೂರ್ತಿಯಾಗಿ ಆವರಿಸಲಿದೆ. ಸಮುದ್ರದ ನೀರು ಭೂಮಿ ಪೂರ್ತಿ ತುಂಬಲಿದೆ ಎಂಬ ಬಹು ಕಠೋರವಾದ ಭವಿಷ್ಯವಾಣಿಯನ್ನು ನಾಸ್ಟ್ರಾಡಾಮಸ್ ನುಡಿದಿದ್ದಾರೆ.

ಹಣದುಬ್ಬರದ ಸೂಚನೆ ನೀಡಿದ ನಾಸ್ಟ್ರಾಡಾಮಸ್
ಈ ಸುನಾಮಿ, ಉಲ್ಕೆ ದಾಳಿ ಮೊದಲಾದ ಅಪಾಯಗಳ ನಡುವೆ ನಾಸ್ಟ್ರಾಡಾಮಸ್ 2022 ರಲ್ಲಿ ಹಣದುಬ್ಬರವು ಜನರಿಗೆ ಬಹಳ ಸಂಕಷ್ಟವನ್ನು ತಂದೊಡ್ಡಲಿದೆ ಎಂದಿದ್ದಾರೆ. ಹಣದುಬ್ಬರವು ಮಿತಿ ಮೀರಲಿದೆ. ಯುಎಸ್‌ನ ಡಾಲರ್ ಸಂಪೂರ್ಣವಾಗಿ ಕುಸಿಯಲಿದೆ ಎಂದು ಕೂಡಾ ನಾಸ್ಟ್ರಾಡಾಮಸ್ ಭವಿಷ್ಯ ಹೇಳಿದ್ದಾರೆ.

ಅಣುಬಾಂಬ್ ಸ್ಪೋಟದಿಂದ ಭಾರೀ ಹಾನಿ
2022 ರಲ್ಲಿ ಅಣುಬಾಂಬ್ ಸ್ಪೋಟವು ನಡೆಯಲಿರುವ ಬಗ್ಗೆ ನಾಸ್ಟ್ರಾಡಾಮಸ್ ಮುನ್ಸೂಚನೆ ನೀಡಿದ್ದಾರೆ. ಈ ಅಣುಬಾಂಬ್ ಸ್ಪೋಟದಿಂದಾಗಿ ಹವಾಮಾನವೇ ಬದಲಾವಣೆ ಆಗಲಿದೆ. ಭಾರೀ ಹಾನಿ ಉಂಟಾಗಲಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಭೂಮಿಯ ಸ್ಥಿತಿಯಲ್ಲಿಯೂ ಬದಲಾವಣೆ ಉಂಟಾಗಲಿದೆ ಎಂದು ಫ್ರೆಂಚ್ ಜ್ಯೋತಿಷಿ ಸೂಚನೆ ನೀಡಿದ್ದಾರೆ.

ವಿಶ್ವವೇ ಮೂರು ದಿನ ಕಗ್ಗತ್ತಲಿನಲ್ಲಿ!
2022 ರಲ್ಲಿ ಈ ಎಲ್ಲಾ ದುರಂತ ನಡೆದ ಬಳಿಕ ಶಾಂತಿಯು ನೆಲೆಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ಹೇಳಿದ್ದಾರೆ. ಈ ಶಾಂತಿಗೂ ಮುನ್ನ ವಿಶ್ವವೇ ಸುಮಾರು 72 ಗಂಟೆಗಳ ಕಾಲ ಅಂದರೆ ಮೂರು ದಿನಗಳ ಕಾಲ ಕಗ್ಗತ್ತಲಲ್ಲಿ ಇರಲಿದೆ. ಕಣಿವೆ ಪ್ರದೇಶದಲ್ಲಿ ಹಿಮವು ಬೀಳುವ ಸಾಧ್ಯತೆ ಇದೆ. ಈ ಪ್ರಕೃತಿ ವಿಕೋಪವು ಹಲವಾರು ಪ್ರದೇಶಗಳಲ್ಲಿ ಯುದ್ಧಕ್ಕೆ ಅಂತ್ಯ ಹಾಡಲಿದೆ. ಮೂರು ದಿನಗಳ ಕಾಲ ವಿಶ್ವದಲ್ಲಿ ಕತ್ತಲು ಆವರಿಸಲಿದೆ ಎಂದು ನಾಸ್ಟ್ರಾಡಾಮಸ್ ಮುನ್ಸೂಚನೆ ನೀಡಿದ್ದಾರೆ.

ಫ್ರಾನ್ಸ್‌ನಲ್ಲಿ ಪ್ರಮುಖ ಬಿಕ್ಕಟ್ಟು
ಇನ್ನು 2022 ರಲ್ಲಿ ಪ್ರಮುಖವಾಗಿ ಫ್ರಾನ್ಸ್‌ನಲ್ಲಿ ಭಾರೀ ಬಿಕ್ಕಟ್ಟು ಉಂಟಾಗಲಿದೆ. ಪ್ರಾನ್ಸ್‌ನಲ್ಲಿ ಭೀಕರ ಬಿರುಗಾಳಿ ಕಾಣಿಸಲಿದೆ. ಇದರಿಂದಾಗಿ ಹಲವೆಡೆ ಬೆಂಕಿ ಅವಘಡಗಳು, ಬರಗಾಳ, ನೆರೆಯು ಉಂಟಾಗಲಿದೆ. ಇದು ಫ್ರಾನ್ಸ್ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿ ಸಂಭವಿಸಲಿದೆ. 2022 ರಲ್ಲಿ ಬರಗಾಲವು ಅಧಿಕವಾಗಿ ಜನರನ್ನು ಸಂಕಷ್ಟಕ್ಕೆ ದೂಡಲಿದೆ.

ಮಾನವರನ್ನು ನಿಯಂತ್ರಣ ಮಾಡುವ ಕಂಪ್ಯೂಟರ್ ಮೆದುಳು
2022 ರಲ್ಲಿ ಮಾನವರನ್ನು ಕಂಪ್ಯೂಟರ್ ಮೆದುಳು ನಿಯಂತ್ರಣ ಮಾಡಲಿದೆ ಎಂಬ ಭಯಾನಕ ವಿಚಾರವನ್ನು ಫ್ರೆಂಚ್ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್ ಹೇಳಿದ್ದಾರೆ. ಮುಂದಿನ ವರ್ಷದಲ್ಲಿ ಕೃತಕ ಬುದ್ಧಿವಂತಿಕೆಯು (artificial intelligence) ಮಾನವರ ತೊಡಗುವಿಕೆಯೊಂದಿಗೆ ಕಂಪ್ಯೂಟರ್ ಅನ್ನು ನಿಯಂತ್ರಣ ಮಾಡಲಿದೆ. ಇದರಿಂದಾಗಿ ಈ ಮಾನವರನ್ನೇ ಈ ಕಂಪ್ಯೂಟರ್ ನಿಯಂತ್ರಣ ಮಾಡಲಿದೆ. ಈ ರೋಬೋಟ್‌ಗಳು ಮಾನವ ಕುಲಕ್ಕೆಯೇ ಅಂತ್ಯ ಹಾಡಲಿದೆ ಎಂದಿದ್ದಾರೆ
Recommended Video

ಕ್ಷಿಪಣಿ ಪರೀಕ್ಷೆಯ ವೇಳೆ ಸ್ಪೋಟ!
ಮೆನೋಕ್ರಾ ದ್ವೀಪದ ಸಮೀಪದ ಮೆಡಿಟರೇನಿಯನ್ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆಯ ವೇಳೆ ಸ್ಪೋಟ ಉಂಟಾಗುವ ಬಗ್ಗೆಯೂ ಮುನ್ಸೂಚನೆಯನ್ನು ನಾಸ್ಟ್ರಾಡಾಮಸ್ ನೀಡಿದ್ದಾರೆ. ಸಮುದ್ರದಲ್ಲಿ ಭಾರೀ ಸ್ಪೋಟ ಉಂಟಾಗುವ ಸಾಧ್ಯತೆಯಿಂದಾಗಿ ಸಮುದ್ರದಲ್ಲಿ ಒತ್ತಡ ಉಂಟಾಗಬಹುದು.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications