• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 2022 ತಿಂಗಳ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ...!

|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸಲಿವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಹೇಳಲಾದ ಎಲ್ಲಾ 12 ರಾಶಿಚಕ್ರಗಳ ಮೇಲೆ ಇದರ ಪರಿಣಾಮ ಕಂಡುಬರುತ್ತದೆ. ಸೆಪ್ಟೆಂಬರ್ ತಿಂಗಳು ಶುಭ ಫಲಿತಾಂಶಗಳನ್ನು ತರುತ್ತದೆ ಮತ್ತು ಯಾರಿಗೆ ನಷ್ಟವಾಗಬಹುದು ಎನ್ನುವುದನ್ನು ತಿಳಿಯಬಹುದು.

ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಕಾರ್ತೀಕ ಮಾಸ ಶರತ್ ಋತು

ತಾ: 1.11.2022 ರಿಂದ 30.11.2022

ಮಾಸವಿಶೇಷ: 01.11.22: ಕನ್ನಡ ರಾಜ್ಯೋತ್ಸವ. 08.11.22: ಗುರುನಾನಕ್ ಜಯಂತಿ,

11.11.22: ಕನಕದಾಸ ಜಯಂತಿ.

11.11.22 ರಂದು ವೃಶ್ಚಿಕಕ್ಕೆ ಶುಕ್ರ, 13.11.22 ವೃಷಭಕ್ಕೆ ವಕ್ರಕುಜ, ವೃಶ್ಚಿಕಕ್ಕೆ ಬುಧ,

17.11.22 ರಂದು ವೃಶ್ಚಿಕಕ್ಕೆ ಸೂರ್ಯ

08.11.22 ರಂದು ರಾಹುಗ್ರಸ್ತ ಚಂದ್ರಗ್ರಹಣ.

ಮಾಸಭವಿಷ್ಯ

ಮೇಷರಾಶಿ:

ಮೇಷರಾಶಿ:

ಸೂರ್ಯನ ಎಂಟನೇ ರಾಶಿ ಪ್ರವೇಶ ನಿಮಗೆ ಕೊಂಚ ಅನಾರೋಗ್ಯ ತರಲಿದೆ. ತಲೆನೋವು ಒತ್ತಡ ಕಾಡಿಸಬಹುದು. ಎಂಟನೇ ಮನೆ ಶುಕ್ರ ಹಾಗೂ ಬುಧನ ಪ್ರವೇಶ ನಿಮಗೆ ಒಳಿತನ್ನು ಮಾಡುತ್ತದೆ. ಪರಿಸ್ಥಿತಿಗಳು ನಿಮಗೆ ಅನುಕೂಲವಾಗಿ ಬದಲಾಗುತ್ತದೆ. ಎಷ್ಟೋ ಬಾಕಿಯಿರುವ ಕೆಲಸಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ನೀವು ಬಯಸುತ್ತಿದ್ದ ಅಥವಾ ಅನಿರೀಕ್ಷಿತ ಪ್ರಿಯವಾರ್ತೆ ನಿಮ್ಮ ಕಿವಿಗೆ ಬೀಳಲಿದ್ದು ನಿಮಗೆ ಸಂತಸ ತರಲಿದೆ. ವೃತ್ತಿಯಲ್ಲಿ ಯಶಸ್ಸು, ಕೌಟುಂಬಿಕ ನೆಮ್ಮದಿ ಇರುತ್ತದೆ. ಕುಜನು ಮೂರನೇ ಮನೆಯಿಂದ ವಕ್ರಿಯಾಗಿ ಎರಡನೇ ಮನೆಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಮಿಶ್ರಫಲ ನೀಡುತ್ತದೆ. ಭೂಮಿ ವ್ಯವಹಾರಗಳಲ್ಲಿ ನೀವು ಅಂದುಕೊಂಡಷ್ಟು ಲಾಭ ಸಿಗುವುದಿಲ್ಲ. ಶುಭಕಾರ್ಯಗಳಿಗೆ ಧನವ್ಯಯ ಆಗುತ್ತದೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಇನ್ನು ಕೆಲವೇ ದಿನಗಳಲ್ಲಿ ಶನಿ ನಿಮ್ಮ ಲಾಭಸ್ಥಾನವನ್ನು ಪ್ರವೇಶ ಮಾಡುತ್ತಾನೆ. ಆಗ ನಿಮಗೆ ಎಲ್ಲಾ ವಿಧದಲ್ಲೂ ಲಾಭ ಇದೆ. ನಿಮಗೆ ಕೊಂಚ ದುಡುಕು ಹೆಚ್ಚು. ಇದನ್ನು ನಿಯಂತ್ರಣ ಮಾಡಿಕೊಂಡರೆ ಒಳ್ಳೆಯದು. ದುಡುಕಿನಿಂದ ಅನಾಹುತಗಳಾಗದಂತೆ ತಡೆಯಿರಿ.

ವೃಷಭರಾಶಿ:

ವೃಷಭರಾಶಿ:

ನಿಮಗೆ ಗುರುಬಲ ಇರುವುದರಿಂದ ಯಾವ ಕೆಲಸಕ್ಕೆ ಕೈಹಾಕಿದರೂ ಲಾಭ ಇದೆ. ಏಳನೇ ಮನೆಗೆ ಶುಕ್ರ ಹಾಗೂ ಬುಧನ ಪ್ರವೇಶ ನಿಮ್ಮ ಸಂಗಾತಿಗೆ ಒಳ್ಳೆಯ ಫಲಗಳನ್ನು ನೀಡುತ್ತದೆ. ಸಂಗಾತಿಗೆ ಒಳ್ಳೆಯ ನೌಕರಿ ಸಿಗಬಹುದು, ಅಥವಾ ನೌಕರಿಯಲ್ಲಿ ಬಡ್ತಿ ಸಿಗಬಹುದು. ಸಂಗಾತಿಯೊಡನೆ ಪ್ರವಾಸ ಮಾಡುವ ಭಾಗ್ಯ ಸಿಗಬಹುದು. ನಿಮ್ಮ ರಾಶಿಯಿಂದ ಏಳನೇ ಮನೆಗೆ ಗುರುದೃಷ್ಟಿ ಇರುವುದರಿಂದ ನಿಮ್ಮ ಸಂಗಾತಿಯೊಡನೆ ಸಂತೋಷವಾಗಿ ಕಾಲ ಕಳೆಯುವ ಯೋಗ ಇದೆ. 14ರ ವರೆಗೂ ಸೂರ್ಯ ತುಲಾ ರಾಶಿಯಲ್ಲಿ ಅಂದರೆ ನಿಮಗೆ ಆರನೇ ಮನೆಯಲ್ಲಿ ಇರುತ್ತಾನೆ. ಇದು ಕೂಡ ನಿಮಗೆ ಶುಭಫಲಗಳನ್ನು ನೀಡುತ್ತದೆ. ಶತ್ರುಗಳು ದೂರವಾಗುತ್ತಾರೆ. ಸರ್ಕಾರ ಮೂಲದಿಂದ ಧನ ಸಹಾಯ ಒದಗಿ ಬರುತ್ತದೆ. ನೀವು ಯಾವುದೇ ಕೆಲಸವನ್ನು ಮಾಡಬೇಕೆಂದುಕೊಂಡರೂ ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ನಿಮಗೆ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಇದೆ. ಯಾರೊಂದಿಗೂ ವೈರ ಕಟ್ಟಿಕೊಳ್ಳುವುದಿಲ್ಲ. ಅವರಾಗೇ ವೈರತ್ವ ಸಾಧಿಸಿದರೂ ನೀವು ಶಾಂತವಾಗಿ ಪರಿಸ್ಥಿತಿಯನ್ನು ಎದುರಿಸುತ್ತೀರಿ. ಗುರುವಿನ ಅನುಗ್ರಹ ನಿಮಗೆ ಇದೆ.

ಮಿಥುನರಾಶಿ:

ಮಿಥುನರಾಶಿ:

ಈಗ ನಿಮಗೆ ಕೊಂಚ ಪರೀಕ್ಷಾ ಸಮಯವಾದರೂ ಬೇರೆ ಗ್ರಹಗಳು ಕೊಂಚ ಅನುಕೂಲವಾಗಿರುವುದರಿಂದ ಹೆಚ್ಚಿನ ತೊಂದರೆ ಇಲ್ಲ. ಆದರೂ ನೀವು ಇನ್ನೂ ಕೆಲವು ದಿನಗಳ ಕಾಲ ಸಹಿಸಿಕೊಳ್ಳಬೇಕು. ಶನಿಯು ಅಷ್ಟಮ ಸ್ಥಾನ ಬಿಟ್ಟು ಮುಂದೆ ಹೋಗಲು ಕೆಲವೇ ದಿನಗಳು ಇವೆ. ನಂತರ ನಿಮಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ಬುಧ ಐದನೇ ಮನೆಯಲ್ಲಿ ಇರುವಾಗಲೂ ಹಾಗೂ ಆರನೇ ಮನೆಯಲ್ಲಿ ಇರುವಾಗಲೂ ನಿಮಗೆ ಧನಲಾಭ ಮನಸ್ಸಿಗೆ ಸಂತೋಷ ಕೆಲಸಗಳಲ್ಲಿ ಯಶಸ್ಸು ಇದೆ. ಹತ್ತನೇ ಮನೆಯ ಗುರು ಕೊಂಚ ಒತ್ತಡವನ್ನು ಕೊಡುತ್ತಾನೆ. ತಿರುಗಾಟ ಹೆಚ್ಚಾಗಿ ಇರುತ್ತದೆ. ಕುಜನ ಸಂಚಾರ ನಿಮಗೆ ಅಷ್ಟು ಶುಭಫಲ ನೀಡುವುದಿಲ್ಲ. ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ. ನಿಮಗೆ ದ್ವಂದ್ವ ಮನೋಭಾವ. ಇದರಿಂದ ನೀವು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತೀರಿ. ಮನಸ್ಸಿಗೆ ಧೈರ್ಯ ತಂದುಕೊಳ್ಳಿ. ಗಟ್ಟಿಯಾಗಿ ನಿಲ್ಲಿರಿ.

ಕಟಕರಾಶಿ

ಕಟಕರಾಶಿ

ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲಿರುವುದರಿಂದ ನಿಮಗೆ ಸತ್ಯವಂತರ ಸಚ್ಚಾರಿತ್ರರ ಸ್ನೇಹ ಸಹಾಯ ದೊರೆಯುತ್ತದೆ. ನೀವು ಕೂಡ ಧರ್ಮಕ್ಕೆ ಪರವಾಗಿ ನಡೆಯುತ್ತೀರಿ. ಕೊಂಚ ಕಠಿಣ ಸ್ವಭಾವವಾದರೂ ನ್ಯಾಯವಾಗಿ ನಡೆದುಕೊಳ್ಳುತ್ತೀರಿ. ಗುರು ಒಂಬತ್ತನೇ ಮನೆಯಲ್ಲಿ ಇದ್ದು ನಿಮ್ಮ ಕೈಯಲ್ಲಿ ಒಳ್ಳೆಯ ಕಾರ್ಯಗಳನ್ನು ಧರ್ಮ ಕಾರ್ಯಗಳನ್ನು ಮಾಡಿಸುತ್ತಾನೆ. ಗರುಗಳ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಅವಿವಾಹಿತರಿಗೆ ವಿವಾಹಯೋಗ ಇದೆ. ವೃತ್ತಿಯಲ್ಲಿ ಬಡ್ತಿ ಇದೆ. ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ತೀರ್ಥಕ್ಷೇತ್ರ ಯಾತ್ರೆ ಪ್ರವಾಸ ಮಾಡುತ್ತೀರಿ. ನಿಮ್ಮ ಕಠಿಣ ಮನಸ್ಥಿತಿಯಿಂದ ಕೊಂಚ ಅಪವಾದಗಳು ಬರಬಹುದು. ಆದ್ದರಿಂದ ಕಠಿಣ ಮನಸ್ಸಿತಿಯನ್ನು ಪರಿಸ್ಥಿತಿಯನ್ನು ವಿವೇಚನೆಯಿಂದ ನಿಭಾಯಿಸಿ. ತಾಯಿಯೊಂದಿಗೆ ನಿಮ್ಮ ಸಂಬಂಧ ಗಾಢವಾಗಿ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕೊಂಚ ಜಾಗ್ರತೆ ಇರಲಿ. ಆಸ್ತಿ ಮಾರುವ ಕೊಳ್ಳುವ ವಿಷಯದಲ್ಲಿ ನಿಮಗೆ ಲಾಭ ಇದೆ. ಶುಕ್ರ ಐದನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಪರಿಸ್ಥಿತಿ ಸುಗಮವಾಗುತ್ತದೆ. ದೈವ ಧರ್ಮದ ವಿಷಯದಲ್ಲಿ ನಿಮಗೆ ಬಹಳ ಶ್ರದ್ಧೆ ಇದೆ. ಅದೇ ನಿಮ್ಮನ್ನು ಸದಾಕಾಲ ಕಾಪಾಡುತ್ತದೆ.

ಸಿಂಹರಾಶಿ:

ಸಿಂಹರಾಶಿ:

ಮೂರನೇ ಮನೆಯ ಸೂರ್ಯ ನಿಮಗೆ ಅಧಿಕ ಮನೋಬಲವನ್ನು ಕೊಡುತ್ತಾನೆ. ನೀವು ಕೈಹಾಕಿದ ಕಾರ್ಯಗಳಲ್ಲಿ ಯಶಸ್ಸು ಖಂಡಿತ. ಯಾವುದು ಸುಲಭವಲ್ಲ ಎಂದುಕೊಂಡಿರುತ್ತೀರೋ ಆ ಕೆಲಸ ನಿಮಗೆ ಈಗ ಸುಲಭವಾಗಿ ನೆರವೇರುತ್ತದೆ. ಸಹೋದರರಿಂದ ಸಹಾಯ ಇದೆ. ನಾಲ್ಕನೇ ಮನೆಗೆ ಶುಕ್ರ ಬುಧರ ಪ್ರವೇಶದಿಂದ ವಾಹನ ವ್ಯಾಪಾರಿಗಳಿಗೆ ಲೆಕ್ಕ ಪರಿಶೋಧಕರು ಆಭರಣ ವ್ಯಾಪಾರಿಗಳು, ಬ್ಯಾಂಕ್ ನೌಕರರು, ಫೈನಾನ್ಸ್ ವ್ಯವಹಾರ ಮಾಡುವವರು ಇವರಿಗೆಲ್ಲ ಶುಭಫಲಗಳು ದೊರೆಯುತ್ತದೆ. ಆರನೇ ಮನೆಯ ಶನಿ ನಿಮಗೆ ಧನಲಾಭವನ್ನು ಕೊಡುತ್ತಾನೆ. ನಾಲ್ಕರ ಶುಕ್ರ ಹೊಸ ವಾಹನ ಖರೀದಿಗೆ ಅನುಕೂಲ ಮಾಡಿಕೊಡುತ್ತಾನೆ. ವಾಹನದಿಂದ ಲಾಭ ಇದೆ. ನಿಮಗೆ ನಿಮ್ಮದೇ ನಡೆಯಬೇಕೆಂಬ ಹಠ ಇರುತ್ತದೆ. ಹಾಗಾಗಿ ಜನಗಳ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಅಭಿವೃದ್ಧಿ ಮತ್ತು ಯಶಸ್ಸಿಗೆ ತೊಂದರೆ. ನಿಮ್ಮ ಹಠವನ್ನು ಬಿಟ್ಟು ಎಲ್ಲರಲ್ಲಿ ಒಂದಾಗಿ. ಆದೇ ನಿಮ್ಮ ಯಶಸ್ಸಿನ ಮೆಟ್ಟಿಲು ತಂತಾನೆ ಮೇಲೇರಿಸುತ್ತದೆ. ದೈವಕಾರ್ಯ ಧರ್ಮಕಾರ್ಯಕ್ಕೆ ಹಣ ಖರ್ಚು ಮಾಡುತ್ತೀರಿ. ದೇವಾಲಯಗಳಿಗೆ ಕಾಣಿಕೆ ಕೊಡುತ್ತೀರಿ. ಅಭಿವೃದ್ಧಿ ಕೆಲಸಕ್ಕೆ ಸಹಾಯವಾಗಿ ನಿಲ್ಲುತ್ತೀರಿ.

ಕನ್ಯಾರಾಶಿ

ಕನ್ಯಾರಾಶಿ

ನಿಮಗೆ ಗುರುಬಲ ಸಮೃದ್ಧವಾಗಿದೆ. ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ಗಳಿಸುತ್ತೀರಿ. ಇನ್ನು ಸ್ವಲ್ಪ ದಿನಗಳಲ್ಲಿ ಶನಿ ಮಹಾರಾಜರು ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳು ದೊರೆಯಲಿದೆ. ಸರ್ಕಾರದಲ್ಲಿ ನಿಮ್ಮ ಮಾತಿಗೆ ಬೆಲೆಯಿದೆ. ನಿಮ್ಮ ಮಾತು ನಡೆಯುತ್ತದೆ. ಸಮಾಜದಲ್ಲಿ ಗೌರವ ಸಿಗುತ್ತದೆ. ಸನ್ಮಾನ ಮನ್ನಣೆಗೆ ಪಾತ್ರರಾಗುತ್ತೀರಿ. ವಿದೇಶ ಪ್ರವಾಸ ಯೋಗ ಇದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗಬಹುದು. ಉನ್ನತ ವ್ಯಾಸಂಗ ಮಾಡಲು ಪರಿಸ್ಥಿತಿಗಳು ಅನುಕೂಲವಾಗಬಹುದು. ನಿಮ್ಮ ಕುಟುಂಬ ಅಥವಾ ನಿಮ್ಮ ಸಮಾಜದಲ್ಲಿ ನಿಮ್ಮ ಮಾತಿಗೆ ಗೌರವ ಸಿಗುತ್ತದೆ. ನೀವು ಕೊಂಚ ಮಾತು ಹೆಚ್ಚು ಕೆಲಸ ಕಡಿಮೆ ಎನ್ನುವ ಸ್ವಭಾವದವರು. ಹಾಗಾಗಿ ಜನ ನಿಮ್ಮ ಬಗ್ಗೆ ಅಪಾರ್ಥ ಮಾಡಿಕೊಳ್ಳುತ್ತಾರೆ. ನೀವು ಏನು ಮಾತನಾಡುತ್ತೀರೋ ಅದೇ ರೀತಿ ಪರಿಪಾಲನೆ ಮಾಡಿ. ನೀವಾಡಿದ ಮಾತುಗಳನ್ನು ನೆನಪಲ್ಲಿ ಇಟ್ಟುಕೊಂಡು ಪಾಲಿಸಿ. ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇದೆ. ಮನಸ್ಸಿಗೆ ಖುಷಿಯಾಗುವಂತ ಸಂದರ್ಭಗಳು ಬರುತ್ತವೆ.

ತುಲಾರಾಶಿ:

ತುಲಾರಾಶಿ:

ನಿಮಗೆ ಈಗ ಗುರುಬಲವೂ ಇಲ್ಲ. ನಾಲ್ಕರಲ್ಲಿ ಶನಿ ಇದ್ದಾನೆ. ಇದರಿಂದ ಕೆಲಸ ಕಾರ್ಯಗಳಲ್ಲಿ ವಿಘ್ನ ಅಥವಾ ನಿಧಾನ. ಅಂದುಕೊಂಡ ಕೆಲಸಗಳು ಸಲೀಸಾಗಿ ಆಗುವುದಿಲ್ಲ. ನೀವು ಕೊಂಚ ಸುಖಾಭಿಲಾಷಿಗಳು. ಕಷ್ಟಪಡಲು ಇಷ್ಟವಿಲ್ಲ. ಇದರಿಂದಲೂ ನಿಮಗೆ ಬಹಳಷ್ಟು ಹಿನ್ನಡೆಯಾಗುತ್ತದೆ. ಮೊದಲು ತೋರುವ ಉತ್ಸಾಹ ಕೊನೆಯಲ್ಲಿ ಇರುವುದಿಲ್ಲ. ಈ ಸ್ವಭಾವವನ್ನು ಸರಿಪಡಿಸಿಕೊಳ್ಳಿ. ಕಷ್ಟಪಟ್ಟರೆ ಫಲವುಂಟು ಎಂಬುದನ್ನು ಮರೆಯದಿರಿ. ಎಂಟನೇ ಮನೆಗೆ ಕುಜ ವಕ್ರಿಯಾಗಿ ಪ್ರವೇಶಿಸಿದಾಗ ಕೊಂಚ ಎಚ್ಚರಿಕೆಯಿಂದ ಇರಿ. ಎತ್ತರದ ಪ್ರದೇಶಗಳಿಗೆ ಅಂದ್ರೆ ಬೆಟ್ಟ ಹತ್ತುವುದು, ಟ್ರೆಕ್ಕಿಂಗ್ ಮುಂತಾದ ಸಾಹಸ ಕ್ರೀಡೆಗಳನ್ನು ಮುಂದಕ್ಕೆ ಹಾಕಿ. ಬೆಂಕಿಯೊಡನೆ ಜಾಗ್ರತೆಯಿಂದ ಇರಿ. ಎರಡನೇ ಮನೆಯ ಬುಧ-ಶುಕ್ರ ನಿಮಗೆ ಬಿರುಬಿಸಿಲಿನಲ್ಲಿ ತಂಗಾಳಿಯಂತೆ ತಂಪು ನೀಡುತ್ತಾರೆ. ಅಲ್ಪಸ್ವಲ್ಪ ಧನಾಗಮನ, ವೃತ್ತಿಜೀವನದಲ್ಲಿ ಯಶಸ್ಸು ಆರೋಗ್ಯ ಚೇತರಿಕೆ ಮುಂತಾದವು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಸೂರ್ಯ ಒತ್ತಡವನ್ನು ಕೊಡುತ್ತಾನೆ. 17ರ ನಂತರ ಸೂರ್ಯ ನ ವೃಶ್ಚಿಕ ಪ್ರವೇಶದಿಂದ ನಿಮಗೆ ಬಹಳ ಅನುಕೂಲಗಳು ಇವೆ.

ವೃಶ್ಚಿಕರಾಶಿ:

ವೃಶ್ಚಿಕರಾಶಿ:

ನಿಮಗೆ ಗುರುಬಲ ರಾಹುಬಲ ಇದೆ. ಋಣವಿಮೋಚನೆ ಆಗುತ್ತದೆ. ಯಾರಿಂದಲಾದರೂ ಸಾಲ ಪಡೆದಿದ್ದರೆ ಸಾಲ ತೀರಿಸಲು ಶಕ್ತರಾಗುತ್ತೀರಿ. ಶತ್ರುಗಳು ಈಗ ನಿಮ್ಮ ಬಳಿ ಸುಳಿಯುವುದಿಲ್ಲ. ನಿಮ್ಮ ಹಿಂದೆ ಪಿತೂರಿ ಮಾಡುವ ನಿಮಗೆ ಎರಡು ಬಗೆಯುವ ಶತ್ರುಗಳು ತಂತಾನೆ ದೂರವಾಗುತ್ತಾರೆ. ನೀವು ಮಾತಿನಲ್ಲಿ ನಿಗಾ ವಹಿಸಬೇಕು. ನಿಮ್ಮ ಮಾತು ತುಂಬಾ ಮೊನಚಾಗಿರುತ್ತದೆ. ಅದರಿಂದ ಬೇರೆಯವರಿಗೆ ನೋವಾಗುತ್ತದೆ. ಆ ನೋವು ನಿಮಗೆ ಒಳ್ಳೆಯ ಫಲ ನೀಡುವುದಿಲ್ಲ. ಹೀಗಾಗಿ ಒಬ್ಬರ ಮನಸ್ಸು ನೋಯಿಸದಂತೆ ಮಾತನಾಡಿ. ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಿ. ಈ ರಾಶಿಯವಿಗೆ ಚಂದ್ರ ದುರ್ಬಲ. ಹಾಗಾಗಿ ಈ ರಾಶಿಯ ಜನರು ಧ್ಯಾನ-ಯೋಗದ ಕಡೆ ಹೆಚ್ಚು ಗಮನವಹಿಸವೇಕು. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಬೇಕು. ಬಾಕಿಯಂತೆ ನಿಮಗೆ ಗುರುಬಲ ಚೆನ್ನಾಗಿರುವುದರಿಂದ ವಿವಾಹಯೋಗ, ಉನ್ನತವ್ಯಾಸಂಗ, ಆಸ್ತಿ ಖರೀದಿ, ವಿದೇಶ ಪ್ರಯಾಣ ಮೊದಲಾದ ಯೋಗಗಳು ಇವೆ. ನೀವು ಎಣಿಸಿದ ಕಾರ್ಯ ಸುಲಭವಾಗಿ ನೆರವೇರುತ್ತದೆ. ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ನಿಮಗೆ ಜಯವಾಗುತ್ತದೆ. ಹಣದ ಹರಿವು ಉತ್ತಮವಾಗಿದೆ.

ಧನಸ್ಸುರಾಶಿ:

ಧನಸ್ಸುರಾಶಿ:

ನಿಮಗೆ ಈಗ ಗುರು ನಾಲ್ಕನೇ ಮನೆಯಲ್ಲಿ ಇದ್ದು ಬಂಧುಗಳಿಂದ ದೂರ ಮಾಡಿಸುತ್ತಾನೆ. ನೀವು ಒಂಟಿತನ ಅನುಭವಿಸುವಂತೆ ಆಗುತ್ತದೆ. ಎಲ್ಲರೂ ಇದ್ದು ಯಾರೂ ಇಲ್ಲದಂತ ಪರಿಸ್ಥಿತಿ. ನೀವು ಹಳೆಯ ಘಟನೆಗಳನ್ನು ಮರೆಯುವುದಿಲ್ಲ. ಅದನ್ನೇ ನೆನಪು ಮಾಡಿಕೊಳ್ಳುತ್ತ ಮನಸ್ಸನ್ನು ಕದಡಿಕೊಳ್ಳುತ್ತೀರಿ. ಹೀಗಾಗಿ ನಿಮಗೆ ಮಾನಸಿಕ ನೆಮ್ಮದಿ ಕಡಿಮೆ. ನೀವು ಮುಂದಾಗುವುದನ್ನು ಯೋಚಿಸಿ. ಮುಂದಿನ ಜೀವನದ ಯೋಜನೆ ಹಾಕಿಕೊಳ್ಳಿ. ಹಿಂದೆ ನಡೆದಂಥ ಕಹಿ ಘಟನೆಗಳನ್ನು ಮರೆಯಿರಿ. ಇದು ನಿಮ್ಮ ಬೆಳವಣಿಗೆಗೆ ಸಹಕಾರಿ. ಎರಡನೇ ಮನೆಯ ಶನಿ ಕುಟುಂಬದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಾನೆ. ಶ್ರೀನಿವಾಸನ ಧ್ಯಾನ ಪೂಜೆ ಮಾಡಬೇಕು. ಹನ್ನೆರಡಲ್ಲಿ ಬುಧ ಶುಕ್ರರು ಇರುವುದರಿಂದ ಶರ‍್ಸ್ ವ್ಯವಹಾರದಲ್ಲಿ ನಷ್ಟವಾಗುತ್ತದೆ. ಹಣ ಹೂಡುವಾಗ ಯೋಚಿಸಿ. ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಕೊಂಚ ಲಾಭ ಕಡಿಮೆ ಆಗುತ್ತದೆ. ಗೃಹಾಲಂಕಾರಕ್ಕಾಗಿ, ವಾಹನಗಳಿಗಾಗಿ ಖರ್ಚು ಮಾಡುತ್ತೀರಿ. ವಾಹನದಿಂದ ನಷ್ಟ ಇದೆ. ಮಕ್ಕಳಿಂದ ವಿರೋಧ ಬರುತ್ತದೆ. ಶನಿ ಮೂರನೇ ಮನೆ ಪ್ರವೇಶವಾದ ನಂತರ ನಿಮಗೆ ಬಹಳಷ್ಟು ಶುಭಫಲಗಳು ಸಿಗಲಿವೆ. ಹಣದ ಹರಿವು ಉತ್ತಮವಾಗುತ್ತದೆ.

ಮಕರ ರಾಶಿ:

ಮಕರ ರಾಶಿ:

ನಿಮಗೆ ಗುರುಬಲ ಇಲ್ಲದಿದ್ದರೂ ಸಹ ಗುರು ಈಗ ಸ್ವಂತ ಮನೆಯಲ್ಲಿ ಇರುವುದರಿಂದ ಸ್ವಲ್ಪ ಮಟ್ಟಿಗೆ ಬೆಂಬಲವನ್ನು ಕೊಡುತ್ತಾನೆ. ಸೋದರರಿಂದ ಸಹಾಯ ಬೆಂಬಲ ಇದೆ. ವಿದೇಶ ಪ್ರಯಾಣ ಯೋಗ ಇದೆ. ಉನ್ನತ ವ್ಯಾಸಂಗಕ್ಕೆ ಅವಕಾಶ ಇದೆ. ನಿರುದ್ಯೋಗಿಗಳಿಗೆ ಈಗ ಉದ್ಯೋಗಾವಕಾಶ ಇದೆ. ನೀವು ಬಹಳ ಸ್ವಾಭಿಮಾನಿ. ಒಬ್ಬರ ಹತ್ತಿರ ಕೈಚಾಚುವವರಲ್ಲ. ಆದರೆ ಈ ಸ್ವಭಾವವೇ ನಿಮಗೆ ತೊಂದರೆ ಯಾಗುತ್ತದೆ. ಅವಶ್ಯಕತೆ ಇದ್ದಾಗಲೂ ಯಾರನ್ನೂ ಏನೂ ಕೇ:ಳದ ನೀವು ಮನಸ್ಸಿನಲ್ಲೇ ನೋವು ಅನುಭವಿಸುತ್ತೀರಿ. ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ನಿಮ್ಮ ನೋವು ನಿಟ್ಟುಸಿರಿಗೆ ಅಂತ್ಯ ಬರಲಿದೆ. ಒಳ್ಳೆಯ ದಿನಗಳು ಖಂಡಿತಾ ಮುಂದೆ ಇದೆ. ಕೆಲವೇ ದಿನಗಳ ನಂತರ ಶನಿ ನಿಮ್ಮ ರಾಶಿ ಬಿಟ್ಟು ಮುಂದೆ ಚಲಿಸಿದಾಗ ನಿಮಗೆ ಸಾಡೆಸಾತಿಯ ಐದುವರ್ಷಗಳು ಪೂರ್ಣವಾಗುತ್ತದೆ. ಇದು ತುಂಬಾ ದೊಡ್ಡ ನಿರಾಳತೆಯನ್ನು ಕೊಡುತ್ತದೆ. ದುರ್ಗಾ ಸ್ತೋತ್ರ, ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ. ಹತ್ತನೇ ಮನೆಯಲ್ಲಿ ಶುಕ್ರ-ಬುಧ-ಸೂರ್ಯ-ಕೇತು ಇರುವುದು ಒಂದು ರಾಜಯೋಗವಾವಗಿದೆ. ವೃತ್ತಿಸ್ಥಾನದಲ್ಲಿ ಒಂದು ಮಹತ್ತರ ಬಲಾವಣೆ ಕಾಣಲಿದ್ದೀರಿ.

ಕುಂಭರಾಶಿ:

ಕುಂಭರಾಶಿ:

ನಿಮಗೆ ಗುರುಬಲ ರಾಹುಬಲ ಎರಡೂ ಇದೆ. 17 ರ ನಂತರ ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಒಂದು ರಾಜಯೋಗ ಆಗುತ್ತದೆ. ಶುಕ್ರ-ಸೂರ್ಯ-ಬುಧ ಹತ್ತನೇ ಮನೆಯಲ್ಲಿ ತಾತ್ಕಾಲಿಕ ಮಿತ್ರರಾಗಿ ಸೇರುತ್ತಾರೆ. ಇದು ನಿಗೆ ವೃತ್ತಿಯಲ್ಲಿ ಬಹುದೊಡ್ಡ ಸ್ಥಾನಮಾನವನ್ನು ತಂದುಕೊಡುತ್ತದೆ. ಬಡ್ಡಿ ಸಿಗಬಹುದು. ಸಂಬಳ ಹೆಚ್ಚಾಗಬಹುದು. ವೃತ್ತಿಯಿಂದ ವಿದೇಶ ಪ್ರಯಾಣಕ್ಕೆ ಹೋಗಬೇಕಾಗಬಹುದು. ಎರಡನೇ ಮನೆ ಗುರು ಧನಲಾಭವನ್ನು ಕೊಡಿಸುತ್ತಾನೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ ಇದೆ. ಮೂರರ ರಾಹು ನಿಮಗೆ ಜೀವನದಲ್ಲಿ ಇರುವ ಅಡ್ಡಿ ಆತಂಕಗಳನ್ನು ಬದಿಗೆ ಸರಿಸಿ ನೀವು ಮುನ್ನುಗ್ಗುವಂತೆ ಮಾಡುತ್ತಾನೆ. ಕುಜ ಐದನೇ ಮನೆಯಿಂದ ನಾಲ್ಕನೇ ಮನೆಗೆ ಬರುವುದು ಕೊಂಚ ಆಸ್ತಿ ವ್ಯವಹಾರಗಳಿಗೆ ಹಿನ್ನಡೆಯಾಗಲಿದೆ. ನೀವು ಕೊಂಚ ಬೇರೆಯವರನ್ನು ಹತ್ತಿಕ್ಕುವ ಸ್ವಭಾವದವರು. ಇದರಿಂದ ನಿಮಗೆ ಕೆಲವು ಕಡೆ ಕೆಟ್ಟ ಹೆಸರು ಬರುತ್ತದೆ. ಈ ಸ್ವಭಾವವನ್ನು ಬದಲಾಯಿಕೊಳ್ಳಿ. ಎಲ್ಲರೊಳಗೆ ಒಂದಾಗಿ. ಇದು ನಿಮಗೆ ಪ್ರಸಿದ್ಧಿಯನ್ನು ಕೊಡುತ್ತದೆ. ಎರಡನೇ ಮನೆಯ ಗುರು ನಿಮಗೆ ನಾನಾ ವಿಧದ ಅನುಕೂಲವನ್ನು ಮಾಡುತ್ತಾನೆ. ಬಂಧುಗಳ ಸಹಕಾರ ಬೆಂಬಲ ಸಿಗುತ್ತದೆ. ಸರ್ಕಾರದಿಂದ ಲಾಭ ಇದೆ. ಸರ್ಕಾರಿ ಕೆಲಸಕಾರ್ಯಗಳು ಸುಲಭವಾಗಿ ನೆರವೇರುತ್ತದೆ.

ಮೀನರಾಶಿ:

ಮೀನರಾಶಿ:

ಹನ್ನೊಂದರ ಶನಿ ಅಪಾರ ಧನಲಾಭ ಕೊಡಿಸುತ್ತಾನೆ. ಆದರೆ ಗುರಬಲ ಕಡಿಮೆ ಇರುವುದರಿಂದ ಬಂದ ಹಣ ಹಾಗೆಯೇ ಖರ್ಚಾಗುತ್ತದೆ. ಆದರೆ ಶುಭ ಕಾರ್ಯಕ್ಕೆ ದಾನ ಧರ್ಮಕ್ಕೆ ಖರ್ಚು ಮಾಡುತ್ತೀರಿ. ಈಗ ನಾಲ್ಕರಲ್ಲಿ ಇರುವ ಕುಜ 13 ರಂದು ಮತ್ತೆ ಮೂರನೇ ಮನೆಗೆ ವಾಪಸ್ಸು ಬರುತ್ತಾನೆ. ಇದು ನಿಮಗೆ ಒಳ್ಳೆಯ ಬೆಂಬಲ ನೀಡುತ್ತದೆ. ಧೈರ್ಯ ಪರಾಕ್ರಮ ಹೆಚ್ಚಾಗುತ್ತದೆ. ಭೂಮಿ ವ್ಯವಹಾರಗಲ್ಲಿ ಲಾಭ ಇದೆ. ಹೊಸ ಮನೆ ಅಥವಾ ಆಸ್ತಿ ಕೊಂಡುಕೊಳ್ಳುವ ಯೋಗ ಇದೆ. ವಿದ್ಯುತ್ತಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಲಾಭ ಇದೆ. ಬೆಂಕಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಲಾಭ ಇದೆ. 17 ನಂತರ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಒಂದು ತಾತ್ಕಾಲಿಕ ರಾಜಯೋಗ ನಡೆಯಲಿದೆ. ಇದು ನಿಮಗೆ ಅಧಿಕ ಲಾಭ, ಧನ ಸಂಪತ್ತು ಹಾಗೂ ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚು ಮಾಡುತ್ತದೆ. ತೀರ್ಥಕ್ಷೇತ್ರ ದರ್ಶನ, ದೈವಾನುಗ್ರಹ ಸಿಗಲಿದೆ. ನೀವು ಅತ್ಯಂತ ಕುತೂಹಲಿಗಳು. ಬೇರೆಯವರ ವಿಷಯಕ್ಕೆ ಹೋಗಿ ತಲೆಬಿಸಿ ಮಾಡಿಕೊಳ್ಳುತ್ತೀರಿ. ಇದು ನಿಮಗೆ ಕೆಟ್ಟಹೆಸರನ್ನು ತರುತ್ತದೆ. ಆದ್ದರಿಂದ ಬೇರೆಯವ ಉಸಾಬರಿ ಬೇಡ. ಹಣದ ಹರಿವು ಮಧ್ಯಮವಾಗಿದೆ.

English summary
November 2022 Monthly Horoscope In Kannada: November Masika Rashi Bhavishya: Check November Monthly Horoscope for all 12 Zodiac Signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X