November Horoscope 2023: ನವೆಂಬರ್ ಮಾಸದಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ ಹೀಗಿರಲಿದೆ ನೋಡಿ...
ನವೆಂಬರ್ ಮಾಸದಲ್ಲಿ ಗ್ರಹಗಳ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳಿಗೆ ಮಂಗಳವಾಗಲಿದೆ ಮತ್ತು ಯಾವ ರಾಶಿಯ ಜನರು ಸಂಕಷ್ಟವನ್ನು ಎದುರಿಸಲಿದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳಿ. ನವೆಂಬರ್ ತಿಂಗಳಿನಲ್ಲಿ ಯಾವ ರಾಶಿಗಳಿಗೆ ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಅದೃಷ್ಟದ ಯೋಗವಿದೆ, ಯಾರಿಗೆ ಅಲ್ಪ ಅದೃಷ್ಟ, ಯಾರಿಗೆ ನಷ್ಟವಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಬನ್ನಿ.
ಈ ತಿಂಗಳ ವಿಶೇಷಗಳು:
01.11.2023 ರಂದು ಕನ್ನಡ ರಾಜ್ಯೋತ್ಸವ
03.11.2023 ರಂದು ಕನ್ಯಾರಾಶಿಗೆ ಶುಕ್ರನ ಪ್ರವೇಶ
07.11.2023 ರಂದು ವೃಶ್ಚಿಕ ರಾಶಿಗೆ ಬುಧನ ಪ್ರವೇಶ.
12.11.2023 ರಂದು ನರಕ ಚತುರ್ದಶಿ
14.11.2023 ರಂದು ಬಲಿಪಾಡ್ಯಮಿ
15.11.2023 ರಂದು ವೃಶ್ಚಿಕ ರಾಶಿಗೆ ಮಂಗಳನ ಪ್ರವೇಶ
17.11.2023 ರಂದು ಸೂರ್ಯನು ವೃಶ್ಚಿಕ ರಾಶಿಗೆ ಪ್ರವೇಶ.
27.11.2023 ರಂದು ಹುತ್ತರಿ ಹಬ್ಬ

ಮೇಷ ರಾಶಿ:
ಈ ತಿಂಗಳಿನಿಂದ ನಿಮಗೆ ಒಂದು ದೊಡ್ಡ ಬಿಡುಗಡೆ. ರಾಹು ನಿಮ್ಮ ರಾಶಿಯನ್ನು ಬಿಟ್ಟು 12ನೇ ಮನೆಗೆ ಬಂದಿದ್ದಾನೆ. 12ನೇ ಮನೆಯ ರಾಹುವಿನಿಂದ ಖರ್ಚುಗಳು ಇದ್ದರೂ ನಿಮ್ಮ ರಾಶಿಯಲ್ಲಿ ಇದ್ದಾಗಿನ ಕಿರುಕುಳಗಳು ತಪ್ಪುತ್ತದೆ. ನೀವು ಈಗ ಕೊಂಚ ಚುರುಕಾಗುತ್ತೀರಿ. ಕೇತು ಆರನೇ ಮನೆಗೆ ಬಂದು ಆರ್ಥಿಕ ಬೆಂಬಲ ನೀಡುತ್ತಾನೆ. ಶತ್ರುಗಳ ತೊಂದರೆ ನಿವಾರಣೆ ಆಗುತ್ತದೆ. ಗುರು ನಿಮ್ಮ ರಾಶಿಯಲ್ಲಿ ಇರುವುದು ಕೆಲಸಗಳಿಗೆ ಅಡ್ಡಿಯಾಗಲಿದೆ. ಕೆಲಸಗಳು ಮಂದಗತಿಯಲ್ಲಿ ಸಾಗುತ್ತದೆ. ಕೊಂಚ ಆರೋಗ್ಯದ ಬಗ್ಗೆ ಗಮನ ಇರಲಿ. ಶನಿ ಹನ್ನೊಂದನೇ ಮನೆಯಲ್ಲಿ ಇರುವುದು ಸಹ ನಿಮಗೆ ನಾನಾ ರೀತಿಯ ಬೆಂಬಲ ಸಿಗುತ್ತದೆ. ಹೊಸ ಯೋಜನೆಗಳು ಅನುಷ್ಠಾನಗೊಳ್ಳಲು ಈಗ ಸರಿಯಾದ ಸಮಯ. ವೃತ್ತಿಯಲ್ಲಿ ಪ್ರಗತಿ ಇದೆ. ವೃತ್ತಿ ನಿಮಿತ್ತ ಪ್ರವಾಸ/ವರ್ಗಾವಣೆ ಆಗಬಹುದು. ಸುಬ್ರಹ್ಮಣ್ಯನ ಪೂಜೆ ಆರಾಧನೆ ಮಾಡಿ. ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿಸಿ.

ವೃಷಭ ರಾಶಿ:
ರಾಹು ಹನ್ನೊಂದನೆ ಮನೆಗೆ ಪ್ರವೇಶವಾಗಿರುವುದು ನಿಮಗೆ ಲಾಭದಾಯಕವಾಗಿದೆ. ಲಾಭ ಸ್ಥಾನದ ರಾಹು ಹಣದ ಅನುಕೂಲವನ್ನು ಕೊಡುತ್ತಾನೆ. ಮುನ್ನುಗ್ಗಿ ಕೆಲಸ ಸಾಧಿಸುವ ಛಾತಿ ಕೊಡುತ್ತಾನೆ. ಶತ್ರುಗಳ ನಿವಾರಣೆ ಆಗುತ್ತದೆ. ಗುರು 12ನೇ ಮನೆಯಲ್ಲಿ ಇರುವುದರಿಂದ ಪುಣ್ಯದ ಕೆಲಸಗಳಿಗೆ ಧರ್ಮದ ಕೆಲಸಗಳಿಗೆ ಖರ್ಚು ಮಾಡುತ್ತೀರಿ. ಶುಕ್ರ ಐದನೇ ಮನೆಗೆ ಪ್ರವೇಶವಾಗುವುದು ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತದೆ. ಆರರ ಸೂರ್ಯ ಸಹ 17ರ ವರೆಗೂ ತುಲಾ ರಾಶಿಯಲ್ಲಿ ಇರುವಾಗ ಶುಭ ಫಲಗಳನ್ನು ಕೊಡುತ್ತಾನೆ. ಈಗ ನಿಮಗೆ ಗುರು ಬಲ ಇಲ್ಲದಿದ್ದರೂ ರಾಹು ಬಲ ಕೊಂಚಮಟ್ಟಿಗೆ ಕಾಪಾಡುತ್ತದೆ. 17ನೇ ತಾರೀಖಿನ ನಂತರ ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಮಂಗಳ-ಬುಧ-ಸೂರ್ಯ ಸೇರಿ ಒಂದು ತಾತ್ಕಾಲಿಕ ರಾಜಯೋಗ ಆಗುತ್ತದೆ. ಇದರಿಂದ ಸಂಗಾತಿಗೆ ಶುಭ ಫಲಗಳು ಸಿಗುತ್ತದೆ ಹಾಗೂ ಸಂಗಾತಿಯಿಂದ ನಿಮಗೆ ಲಾಭ ಇದೆ.

ಮಿಥುನ ರಾಶಿ:
ಇದುವರೆಗೂ ಗುರುವಿನ ಜೊತೆ ಇದ್ದುಕೊಂಡು ಗುರುವಿನ ಕೈಕಟ್ಟಿ ಹಾಕಿದ್ದ ರಾಹು ಈಗ ಗುರುವನ್ನು ಬಿಟ್ಟು ಮೀನ ರಾಶಿಗೆ ಪ್ರವೇಶವಾಗಿದ್ದಾನೆ. ಈಗ ನಿಮಗೆ ಗುರುವಿನ ಸಂಪೂರ್ಣ ಅನುಗ್ರಹ ಸಿಗಲಿದೆ. ನಾಲ್ಕನೆಯ ಮನೆಯ ಕೇತುವಿನಿಂದ ಸುಖ ಸ್ಥಾನಕ್ಕೆ ಅಡ್ಡಿ ಉಂಟಾಗುತ್ತದೆ. ವೃಥಾ ಅಲೆದಾಟ, ಹೊತ್ತಿಗೆ ಸರಿಯಾಗಿ ಊಟ ನಿದ್ರೆ ಇಲ್ಲದೆ ಬಳಲುತ್ತೀರಿ. ಕೌಟುಂಬಿಕ ಜೀವನದಲ್ಲಿ ಘರ್ಷಣೆಗಳು ತಲೆದೋರಬಹುದು. ಗುರುವಿನ ಅನುಗ್ರಹದಿಂದ ಇವುಗಳೆಲ್ಲವನ್ನೂ ನಿಭಾಯಿಸಿಕೊಳ್ಳುತ್ತೀರಿ. ತಾಯಿಗೆ ಒತ್ತಡ ಶ್ರಮ ಇರುತ್ತದೆ. 18ರ ನಂತರ ಆರನೇ ಮನೆಯಾದ ವೃಶ್ಚಿಕ ರಾಶಿಗೆ ಬುಧ, ಮಂಗಳ, ಸೂರ್ಯನ ಪ್ರವೇಶವಾದ ನಂತರ ನಿಮಗೆ ಸ್ವಲ್ಪ ಮಟ್ಟಿನ ಶಕ್ತಿ ಸಿಗುತ್ತದೆ. ಹಣದ ಹರಿವೂ ಉತ್ತಮವಾಗುತ್ತದೆ. ಹತ್ತನೇ ಮನೆಗೆ ರಾಹು ಪ್ರವೇಶವಾಗಿರುವುದರಿಂದ ಔಷಧೀಯ ಹಾಗೂ ರಾಸಾಯನಿಕ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಫಲಗಳಿವೆ. ಸ್ಟಾಕ್ಸ್‌ಗಳಲ್ಲಿ ಜಾಗ್ರತೆಯಿಂದ ಹೂಡಿಕೆ ಮಾಡಬೇಕಿದೆ. ದೊಡ್ಡ ಮೊತ್ತದ ಹಣ ಬರಲೂ ಬಹುದು ಹಾಗೆಯೇ ಕೈಜಾರಿ ಹೋಗಬಹುದು. ಬಹಳ ದಿನಗಳಿಂದ ಬಾಧಿಸುತ್ತಿದ್ದ ಚಿಂತೆಗೆ ಈಗ ಪರಿಹಾರ ಸಿಗುತ್ತದೆ.

ಕಟಕ ರಾಶಿ:
ಈಗ ನಿಮಗೆ ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಸಾಕಷ್ಟು ನಷ್ಟ ಕಿರುಕುಳಗಳನ್ನು ಅನುಭವಿಸುತ್ತಿದ್ದೀರಿ. ಕೌಟುಂಬಿಕ ನಷ್ಟ ಸಂಭವಿಸಿರಬಹುದು. ಕೆಲವು ದಿನಗಳು ಇವನ್ನೆಲ್ಲ ಅನುಭವಿಸಬೇಕು. ಶುಕ್ರ ಎರಡನೇ ಮನೆಯಲ್ಲಿ ಇರುವುದು ಹಣಕಾಸಿನ ಪರಿಸ್ಥಿತಿ ಕೊಂಚ ಸುಧಾರಿಸಲು ಸಹಾಯವಾಗುತ್ತದೆ. ಇಷ್ಟು ದಿನವೂ ನಾಲ್ಕನೇ ಮನೆಯಲ್ಲಿ ಸುಖ ಸ್ಥಾನಕ್ಕೆ ಕಂಟಕವಾಗಿದ್ದ ಕೇತು ಈಗ ಮೂರನೇ ಮನೆ ಧೈರ್ಯ ಹಾಗೂ ಪರಾಕ್ರಮ ಸ್ಥಾನಕ್ಕೆ ಬಂದಿದ್ದಾನೆ. ಕೇತು ನಿಮಗೆ ಹಣ ಬಲ ಹಾಗೂ ಧೈರ್ಯವನ್ನು ಕೊಡುತ್ತಾನೆ. ಸಹೋದರ ವರ್ಗದೊಂದಿಗೆ ಕೊಂಚ ಕಿರಿಕಿರಿ ಇರುತ್ತದೆ. ಗುರು ಹತ್ತನೇ ಮನೆಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಒತ್ತಡಗಳು ಸವಾಲುಗಳು ಇರುತ್ತವೆ. 3ನೇ ತಾರೀಖು ಕನ್ಯಾ ರಾಶಿಗೆ ಶುಕ್ರನ ಪ್ರವೇಶ ಸಹ ನಿಮಗೆ ಶುಭ ಫಲಗಳನ್ನು ಕೊಡುತ್ತದೆ. ನೀವು ಈಗ ಜೀವನಕ್ಕೆ ಸಂಬಂಧಿಸಿದ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಪರ್ವ ಕಾಲದಲ್ಲಿದ್ದೀರಿ. ಈಗ ನೀವು ತೆಗೆದುಕೊಳ್ಳುವ ತೀರ್ಮಾನಗಳು ನಿಮ್ಮ ಮುಂದಿನ ಜೀವನವನ್ನು ನಿರ್ದೇಶಿಸುತ್ತದೆ. ದೈವ ಕಾರ್ಯ ಮತ್ತು ದಾನ-ಧರ್ಮ ಮಾಡುವ ಅವಕಾಶಗಳು ಇವೆ.

ಸಿಂಹ ರಾಶಿ:
ಈಗ ನಿಮಗೆ ಗುರು ಬಲ ಸಂಪೂರ್ಣವಾಗಿ ಸಿಗುತ್ತದೆ. ಗುರುವಿನ ಜೊತೆ ಇದ್ದ ರಾಹು ಈಗ ಮೀನ ರಾಶಿಗೆ ಬಂದಿದ್ದಾನೆ. ಎಂಟನೇ ಮನೆಯ ರಾಹು ನಿಮಗೆ ಕೊಂಚ ದುಷ್ಫಲಗಳನ್ನು ಕೊಡುತ್ತಾನೆ. ರಾಸಾಯನಿಕಗಳು ಔಷಧಿಗಳು ಕಾಸ್ಮೆಟಿಕ್ಸ್ ಗಳಿಂದ ತೊಂದರೆ ಆಗುವ ಸಂಭವ ಇದೆ. ಆಹಾರದಲ್ಲಿ ತೊಂದರೆ ಆಗಬಹುದು. ಹೊರಗಿನ ಆಹಾರ ಸೇವನೆಯಲ್ಲಿ ಎಚ್ಚರಿಕೆ. ಎರಡನೇ ಮನೆಯ ಕೇತು ಕುಟುಂಬದಲ್ಲಿ ಕಿರಿಕಿರಿ ಆಗುವಂತೆ ಮಾಡುತ್ತಾನೆ. ಕುಟುಂಬದಲ್ಲಿ ನಿಮಗೆ ವಿರೋಧಗಳು ವ್ಯಕ್ತವಾಗುತ್ತದೆ. ನಿಮ್ಮ ಮಾತುಗಳಿಂದ ಒಡನಾಡಿಗಳ ಜೊತೆ ವಿರೋಧಗಳಿಸುವ ಸಾಧ್ಯತೆ ಇದೆ. ಹಣಕಾಸಿನ ಖರ್ಚೂ ಇದೆ. ಧರ್ಮ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ. 3ನೇ ತಾರೀಖು ಶುಕ್ರ ಎರಡನೇ ಮನೆಗೆ ಬರುತ್ತಾನೆ ಆದರೂ ಶುಕ್ರ ಕನ್ಯಾದಲ್ಲಿ ಬಲಹೀನನಾದ್ದರಿಂದ ನಿಮಗೆ ಹೇಳಿಕೊಳ್ಳುವಂತಹ ಉಪಯೋಗ ಇಲ್ಲ. 18ರ ವರೆಗೂ ಸೂರ್ಯ ಮೂರನೇ ಮನೆಯಲ್ಲಿ ಇದ್ದರೂ ಅವನೂ ಸಹ ಬಲಹೀನನಾಗಿರುವುದರಿಂದ ನಿಮಗೆ ಅನುಕೂಲ ಮಾಡಲಾರ. ನೀವು ಯಜಮಾನರಾಗಿ ಒಂದು ಸಂಸ್ಥೆಯ ಮಾಲೀಕರಾಗಿದ್ದರೆ ನಿಮಗೆ ಬಹಳ ಸವಾಲುಗಳು ಎದುರಾಗುತ್ತದೆ. ಜಾಣ್ಮೆಯಿಂದ ನಿಭಾಯಿಸಿ.

ಕನ್ಯಾ ರಾಶಿ:
ನಿಮಗೆ ಶನಿ ಬಲ ಮಾತ್ರವೇ ಇದೆ. ಗುರು ಬಲ ಇಲ್ಲ. ರಾಹು-ಕೇತುಗಳು ಈಗ ನಿಮಗೆ ವ್ಯತಿರಿಕ್ತ ಸ್ಥಾನದಲ್ಲಿ ಇದ್ದಾರೆ. ರಾಹು ಏಳನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ವೀಕ್ಷಿಸುತ್ತಾನೆ. ಕೇತು ನಿಮ್ಮ ರಾಶಿಯಲ್ಲೇ ಇದ್ದಾನೆ. ಆರೋಗ್ಯ ಜಾಗ್ರತೆಯಿಂದ ನೋಡಿಕೊಳ್ಳಿ. ಚೂಪಾದ ಪದಾರ್ಥಗಳಿಂದ ಮೈಮೇಲೆ ಗಾಯಗಳಾಗಬಹುದು. ವಿಷಕಾರಕ ವಸ್ಸುಗಳಿಂದ ದೇಹಕ್ಕೆ ಹಾನಿ ಆಗಬಹುದು. ಶನಿಬಲ ಇರುವುದರಿಂದ ಹೆಚ್ಚಿನ ತೊಂದರೆ ಇರುವುದಿಲ್ಲ ಆದರೂ ಜಾಗ್ರತೆ ವಹಿಸಬೇಕು. ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುತ್ತವೆ. ಆಹಾರದ ಗುಣಮಟ್ಟದ ಬಗ್ಗೆ ಜಾಗ್ರತೆ ಇರಲಿ. ಇನ್ನು ಈಗ ಯಾವುದೇ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ತೆಗೆದುಕೊಳ್ಳಿ. ಶನಿಬಲ ಇರುವುದರಿಂದ ಅದು ನಿಮಗೆ ಸಾಕಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. 15ರ ನಂತರ ಮಂಗಳ ಹಾಗೂ 17ರ ನಂತರ ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತಾರೆ. ಇದು ನಿಮಗೆ ಮನೋಬಲವನ್ನು ಹೆಚ್ಚಿಸುತ್ತದೆ. ಯಾವುದೇ ತೀರ್ಮಾನಗಳನ್ನು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ತಿಂಗಳು ನಿಮಗೆ ಮಿಶ್ರಫಲ.

ತುಲಾ ರಾಶಿ:
ಈಗ ನಿಮಗೆ ಗುರುಬಲವೂ ಇದೆ. ರಾಹುಬಲವೂ ಇದೆ. ರಾಹು ಮೀನರಾಶಿಗೆ ಬಂದಿರುವುದರಿಂದ ಸಂಪೂರ್ಣ ಗುರುಬಲಕ್ಕೆ ಅವಕಾಶ ಇದೆ. ಒಳ್ಳೆಯ ಸಂಗತಿಗಳು ನಡೆಯುತ್ತದೆ. ನಿಮಗೆ ಮರ್ಯಾದೆ ಗೌರವ ಸಿಗುವ ಸಮಯ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಹುಡುಕಿ ಬರುತ್ತದೆ. 12ನೇ ಮನೆಯ ಕೇತು ಆಧ್ಯಾತ್ಮದತ್ತ ಒಲವು ಕೊಡುತ್ತಾನೆ. ಆರರ ರಾಹು ನಿಮಗೆ ಶಕ್ತಿ, ಛಲವನ್ನು ಕೊಡುತ್ತಾನೆ. ಧನ ಸಹಾಯ ಕೂಡ ಒದಗಿಸಿಕೊಡುತ್ತಾನೆ. ಯಾವುದಾದರೂ ಬಾಕಿಯಾಗಿದ್ದ ಹಣ ವಸೂಲಾಗುವಂತೆ ಮಾಡುತ್ತಾನೆ. ವಿವಾಹ ಯೋಗವಿದೆ. ವಿದೇಶ ಪ್ರಯಾಣ ಯೋಗ ಇದೆ. ವಿದ್ಯಾರ್ಥಿಗಳಿಗೆ ಈಗ ಶುಭ ಸಮಯ. ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಈಗ ಅವಕಾಶಗಳ ಬಾಗಿಲು ತೆರೆದಿದೆ. ತುಲಾ ರಾಶಿಯ ಅಧಿಪತಿ ಶುಕ್ರ ಕಲೆಗೆ ಅಧಿಪತಿ. ಹಾಗಾಗಿ ಕಲಾವಿದರಿಗೆ ಈಗ ಶುಭ ಸಮಯ. ಈ ತಿಂಗಳ 29ರಂದು ಶುಕ್ರ ನಿಮ್ಮ ರಾಶಿಗೆ ಪ್ರವೇಶವಾದಾಗ ಇನ್ನಷ್ಟು ಶುಭ ಫಲಗಳು ದೊರೆಯುತ್ತವೆ. ಯಾವುದಾದರೂ ನೀವು ಯೋಜಿಸಿದ್ದ ಕೆಲಸ ನೆನೆಗುದಿಗೆ ಬಿದ್ದಿದ್ದರೆ ಅದು ಈಗ ಚಾಲನೆ ಪಡೆದುಕೊಳ್ಳುತ್ತದೆ.

ವೃಶ್ಚಿಕ ರಾಶಿ:
ನಿಮ್ಮ ಪರಿಸ್ಥಿತಿ ಈಗ ಕೊಂಚ ಗಂಭೀರವಾಗಿದೆ. ಕೆಲಸಗಳು ನಿಮ್ಮಿಷ್ಟದಂತೆ ಸಾಗದೇ ನಿಧಾನವಾಗಬಹುದು. ಹೆಜ್ಜೆ-ಹೆಜ್ಜೆಗೂ ಅಡೆತಡೆಗಳು ಎದುರಾಗಬಹುದು. ಆದರೆ ಧೃತಿಗೆಡಬೇಡಿ. ರಾಹು ಐದನೇ ಮನೆ ಹಾಗೂ ಗುರು ಆರನೇ ಮನೆಯಲ್ಲಿ ಇರುವುದು ಕೊಂಚ ಹಿನ್ನಡೆಗೆ ಕಾರಣವಾದರೂ ಕೇತು ಹನ್ನೊಂದನೇ ಮನೆಗೆ ಬಂದಿರುವುದು ನಿಮಗೆ ಹಣಕಾಸಿನ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಲಾಭ ಸ್ಥಾನದ ಕೇತುವಿನಿಂದ ಹಣಕಾಸಿನ ಸ್ಥಿತಿ ಸುಗಮವಾಗಿರುತ್ತದೆ. 15 ರ ನಂತರ ನಿಮ್ಮ ರಾಶಿಗೆ ಮಂಗಳ ಪ್ರವೇಶವಾಗುವುದರಿಂದ ಕೊಂಚ ಮನೋಬಲವನ್ನು ಬಲಪಡಿಸುತ್ತದೆ. ಹೊಸ ಉತ್ಸಾಹ ನೀಡುತ್ತದೆ. ಹೊಸ ಯೋಜನೆಗಳನ್ನು ಮುಂದಕ್ಕೆ ಹಾಕಿ. ಈಗ ನಡೆಯುತ್ತಿರುವಂತೆ ನಡೆಯಲಿ. ಯೋಜನೆಗಳು ತಲೆಯಲ್ಲಿ ಇರಲಿ ಕಾರ್ಯರೂಪಕ್ಕೆ ತರುವುದು ಬೇಡ. ಆರೋಗ್ಯ ಹಾಗೂ ವೃತ್ತಿ ಸಂಬಂಧ ಒತ್ತಡಗಳನ್ನು ನಿಭಾಯಿಸಿ. ಒಂದು ಮಾತಿನಲ್ಲಿ ಆಗುವ ಕೆಲಸ ಈಗ ಹತ್ತು ಮಾತು ಖರ್ಚಾಗುವಂತೆ ಮಾಡುತ್ತದೆ. ಶ್ರಮ ಹೆಚ್ಚು ಫಲ ಕಡಿಮೆ. ನಿಮ್ಮ ಗುರುಗಳ ದರ್ಶನ ಮಾಡಿಕೊಳ್ಳುವುದು ಸೂಕ್ತ.

ಧನಸ್ಸು ರಾಶಿ:
ಈಗ ನಿಮಗೆ ಗುರು ಬಲದ ಜೊತೆಗೆ ಶನಿ ಬಲವೂ ಇದ್ದು ಜೀವನ ಉತ್ಸಾಹಭರಿತವಾಗಿದೆ. ನಾಲ್ಕನೇ ಮನೆಗೆ ರಾಹು ಪ್ರವೇಶವಾಗಿರುವುದರಿಂದ ತಾಯಿಗೆ ಕೊಂಚ ಮಾರಕವಾಗಿದೆ. ಈಗ ಗುರು ಬಲ ಇರುವುದರಂದ ಅಂತಃ ಬಿಸಿ ತಾಕುವುದಿಲ್ಲ. ಬೆಟ್ಟದ ಹಾಗೆ ಬಂದ ಅಪಾಯಗಳು ಮಂಜಿನ ಹಾಗೆ ಕರಗಿಹೋಗುತ್ತದೆ. ಹನ್ನೊಂದನೇ ಮನೆಯಲ್ಲಿ ಮಂಗಳ,ಬುಧ ಮತ್ತು ಸೂರ್ಯ ಇದ್ದು ಇದೊಂದು ರಾಜಯೋಗವಾಗ ಪರಿವರ್ತನೆ ಆಗುತ್ತದೆ. ನಿಮ್ಮ ಕಷ್ಟಕರವಾದ ಕೆಲಸಗಳು ಸುಲಭವಾಗಿ ನಡೆಯುತ್ತದೆ. ಹೊಸ ಯೋಜನೆಗಳು, ಹೊಸ ಬಂಡವಾಳ ಹೂಡಿಕೆ ಇವೆಲ್ಲವೂ ಕಾರ್ಯರೂಪಕ್ಕೆ ಬರುತ್ತದೆ. ಆಸ್ತಿ ಕೊಳ್ಳುವ ಯೋಗ ಇದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಸಿಗುತ್ತದೆ. ವಿವಾಹ ಯೋಗ ಇದೆ. ಮಕ್ಕಳಿಲ್ಲದವರು ಈಗ ಶುಭ ಸುದ್ದಿ ನಿರೀಕ್ಷಿಸಬಹುದು. ವಿದೇಶ ಪ್ರಯಾಣ ಯೋಗ ಇದೆ. ವೃತ್ತಿಯಲ್ಲಿ ಪ್ರಗತಿಯ ಜೊತೆಗೆ ಒತ್ತಡಗಳು ಇರುತ್ತವೆ. ಮಾನಸಿಕವಾಗಿ ಕೊಂಚ ಬಳಲಿಕೆ ಇದೆ. ಹಣದ ಹರಿವು ಉತ್ತಮವಾಗಿದೆ.

ಮಕರ ರಾಶಿ:
ಈಗ ನಿಮಗೆ ಅವಕಾಶಗಳ ಸಮಯ. ಐದು ವರ್ಷದಿಂದ ಬಹಳ ಬಳಲಿದ್ದೀರಿ. ಅನೇಕ ಸವಾಲುಗಳನ್ನು ಎದುರಿಸಿದ್ದೀರಿ. ಈಗ ಅವೆಲ್ಲವೂ ಒಂದು ಕೊನೆಗೆ ಬರುವ ಸಮಯ. ಸಾಡೆಸಾತಿ ಶನಿ ಕೂಡ ಕೊನೆಯ ಮಜಲಿನಲ್ಲಿ ಇದೆ. ರಾಹು ಈಗ ನಿಮಗೆ ಮೂರನೇ ಮನೆಗೆ ಪ್ರವೇಶವಾಗಿದ್ದಾನೆ. ರಾಹು ಮೂರನೇ ಮನೆಯಲ್ಲಿ ಅಪಾರ ಶಕ್ತಿ ಸಾಮರ್ಥ್ಯದೊಂದಿಗೆ ಹಣ ಮತ್ತು ಮುನ್ನುಗ್ಗುವ ಹುರುಪು ಎಲ್ಲವನ್ನೂ ಕೊಡುತ್ತಾನೆ. ಈಗ ನಿಮಗೆ ಗುರುಬಲ ಇಲ್ಲದಿದ್ದರೂ ಇನ್ನು ಒಂದೂವರೆ ವರ್ಷ ಕಾಲ ರಾಹುಬಲ ನಿಮ್ಮನ್ನು ಕಾಪಾಡಲಿದೆ. ಯಾವುದಾದರೂ ಮೂಲದಿಂದ ಅವಕಾಶಗಳು ಹಾಗೂ ಹಣ ಹರಿದು ಬರುತ್ತದೆ. ಅವಕಾಶಗಳನ್ನು ನಿಮ್ಮ ಸಾಮರ್ಥ್ಯದಿಂದ ಆಯ್ಕೆ ಮಾಡಿಕೊಳ್ಳಬೇಕು. ಹತ್ತನೇ ಮನೆಯಲ್ಲಿ ಸೂರ್ಯ-ಮಂಗಳ-ಬುಧ ಸೇರಿ ಒಂದು ರಾಜಯೋಗ ಆಗಿದೆ. ಇದು ನಿಮಗೆ ವೃತ್ತಿ ಸ್ಥಾನದಲ್ಲಿ ಬಹಳ ಒಳ್ಳೆಯ ಬದಲಾವಣೆ ತರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುತ್ತದೆ. ಹೂಡಿಕೆಗಳಲ್ಲಿ ಹಣ ವಿನಿಯೋಗಿಸಬಹುದು. ಸ್ಟಾಕ್ಸ್‌ನಲ್ಲಿ ಹಣ ಹೂಡಿದರೆ ಲಾಭ ಇದೆ. ಈ ತಿಂಗಳಿನಿಂದ ಹಂತ-ಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆತು ಮನಸ್ಸಿಗೆ ಹೊಸ ಉತ್ಸಾಹ ದೊರೆಯುತ್ತದೆ.

ಕುಂಭ ರಾಶಿ:
ಈ ತಿಂಗಳು ನಿಮಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ ಮುಂದುವರೆಯುತ್ತದೆ. ಎರಡನೇ ಮನೆಗೆ ರಾಹು ಪ್ರವೇಶವಾಗಿದ್ದಾನೆ. ಇದು ಕುಟುಂಬದಲ್ಲಿ ಕೊಂಚ ಮನಸ್ತಾಪ ಇರಿಸಿಮುರಿಸು ಸ್ಥಿತಿಗತಿಗಳಿಗೆ ಕಾರಣವಾಗುತ್ತದೆ. ಮನೆಯಲ್ಲಿ ವಿನಾಕಾರಣ ಜಗಳ, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ನಿಮಗೆ ಇಷ್ಟು ದಿನ ಇದ್ದ ರಾಹು ಬಲ ಈಗ ಇಲ್ಲ. ಗುರುಬಲವೂ ಇಲ್ಲ. ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ. ಇದು ನಿಮಗೆ ವ್ಯತಿರಿಕ್ತ ಪರಿಣಾಮಗಳನ್ನು ನೀಡುತ್ತದೆ. ಅನಾರೋಗ್ಯ ಕಾಡಬಹುದು. ಸಾಲಗಾರರ ಕಾಟ ಹೆಚ್ಚಾಗಬಹುದು. ಯಾವುದೇ ಹೂಡಿಕೆಯಲ್ಲಿ ಹಣ ತೊಡಗಿಸುವಾಗ ಎಚ್ಚರ ವಹಿಸಿ. ನಿಮ್ಮ ಹಣಕ್ಕೆ ಮೋಸ ಆಗಬಹುದು. ಉದ್ಯೋಗದಲ್ಲಿ ಒತ್ತಡಗಳು ಹೆಚ್ಚಾಗುತ್ತದೆ. ವಿನಾಕಾರಣ ಅಲೆದಾಟ ಊಟ ನಿದ್ರೆ ಇಲ್ಲದೆ ಬಳಲುತ್ತೀರಿ. ನಿಮ್ಮ ತಪ್ಪಿಲ್ಲದೆಯೂ ಆಪಾದನೆಗಳನ್ನು ಎದುರಿಸಬೇಕಾಗುತ್ತದೆ. ದುರ್ಗಾ ದೇವಿಯನ್ನು ಆರಾಧಿಸಿ. ಪ್ರತಿನಿತ್ಯ ದುರ್ಗಾ ಸ್ತೋತ್ರವನ್ನು ಪಠಿಸಿ.17ರ ನಂತರ ಹತ್ತನೇ ಮನೆಗೆ ಸೂರ್ಯ ಹಾಗೂ ಮಂಗಳನ ಪ್ರವೇಶದ ನಂತರ ಪರಿಸ್ಥಿತಿ ಕೊಂಚಮಟ್ಟಿಗೆ ಸುಧಾರಿಸುತ್ತದೆ.

ಮೀನ ರಾಶಿ:
ಈಗ ನಿಮ್ಮ ರಾಶಿಯಲ್ಲಿ ರಾಹು ಇದ್ದಾನೆ. ದೈಹಿಕವಾಗಿ ನೀವು ಸ್ವಲ್ಪ ಮಂದವಾಗುತ್ತೀರಿ. ಚುರುಕುತನ ಕಡಿಮೆಯಾಗುತ್ತದೆ. ಏಳನೇ ಮನೆಯಲ್ಲಿರುವ ಕೇತುವಿನಿಂದ ಸಂಗಾತಿಯ ಆರೋಗ್ಯಕ್ಕೆ ಹಾನಿ ಇದೆ. ಸಂಗಾತಿಗೆ ಉದ್ಯೋಗದಲ್ಲಿ ವರ್ಗಾವಣೆಯಾಗಿ ದೂರದ ಊರಿಗೆ ಹೋಗಬಹುದು. ಏಳನೇ ಮನೆಯಲ್ಲಿ ಇರುವ ಶುಕ್ರನ ದೃಷ್ಟಿಯೂ ನಿಮ್ಮ ರಾಶಿಯ ಮೇಲೆ ಬೀಳುತ್ತದೆ. ನಿಮಗೆ ಈಗ ಸಂಪೂರ್ಣ ಗುರುಬಲ ಇರುವುದರಿಂದ ಏನೇ ವ್ಯತಿರಿಕ್ತ ಪರಿಣಾಮಗಳು ಎದುರಾದರೂ ಗುರುವಿನ ಅನುಗ್ರಹದಿಂದ ಎಲ್ಲವೂ ಮಂಜಿನಂತೆ ಕರಗಿಹೋಗುತ್ತದೆ. ನೀವು ಈಗ ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದೀರಿ. ಖರ್ಚುಗಳು ವಿಪರೀತವಾಗಿರುತ್ತವೆ. ನೀವು ಜಾಣ್ಮೆಯಿಂದ ನಿಭಾಯಿಸಬೇಕು. ಬೇರೆ ಗ್ರಹಬಲಗಳು ಇಲ್ಲದೇ ಇದ್ದರೂ ಈಗ ಗುರುಬಲ ಒಂದೇ ನಿಮ್ಮ ಕಾಪಾಡುತ್ತದೆ. ಮಕ್ಕಳ ಪ್ರಗತಿ ನಿಮಗೆ ಖುಷಿ ಕೊಡುತ್ತದೆ. ಆಸ್ತಿ ವ್ಯವಹಾರಗಳು ಏನಾದರೂ ಇದ್ದರೆ ಬಗೆಹರಿಯುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ವೃತ್ತಿಯಲ್ಲಿ ಪ್ರಗತಿ ಇದೆ.
ಶುಭಮಸ್ತು.
-
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications