July Horoscope: ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ: ಈ ತಿಂಗಳು ಯಾರಿಗೆ ಶುಭ, ಯಾರಿಗೆ ಅಶುಭ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ-ಗ್ರೀಷ್ಮ ಋತು ಜ್ಯೇಷ್ಠಮಾಸದ ಬಹುಳ ಏಕಾದಶಿಯಿಂದ ಆಷಾಢ ಬಹುಳ ಏಕಾದಶಿಯವರೆಗೆ: ಈ ಅವಧಿಯಲ್ಲಿ ಚಂದ್ರನ ಸಂಚಾರ ಭರಣಿಯಿಂದ ನಕ್ಷತ್ರದಿಂದ ಮೃಗಶಿರಾವರೆಗೆ.
ತಿಂಗಳ ವಿಶೇಷ
- 01.07.2024: ಬುಧ ಕಟಕರಾಶಿಗೆ ಪ್ರವೇಶ.
- 07.07.2024: ಶುಕ್ರ ಕಟಕರಾಶಿಗೆ ಪ್ರವೇಶ.
- 13.07.2024: ಮಂಗಳ ವೃಷಭ ರಾಶಿಗೆ ಪ್ರವೇಶ.
- 15.07.2024: ಸೂರ್ಯ ಕಟಕ ರಾಶಿಗೆ ಪ್ರವೇಶ. ದಕ್ಷಿಣಾಯನ ಪ್ರಾರಂಭ.
- 01.07.2024:ಕನ್ನಡ ಪತ್ರಿಕಾ ದಿನಾಚರಣೆ.
- 17.07.2024: ಮೊಹರಂ
12 ರಾಶಿಗಳ ಗೋಚಾರ ಫಲ

ಮೇಷ ರಾಶಿಯ ಮಾಸ ಭವಿಷ್ಯ
ಈ ಮಾಸದ ಮೊದಲಲ್ಲಿ ಬುಧ ಶುಕ್ರ ಕಟಕ ರಾಶಿಗೆ ಪ್ರವೇಶವಾಗುತ್ತಾರೆ. ಮಾಸದ ಮಧ್ಯದಲ್ಲಿ ಕುಜ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಗುರು ಈಗಾಗಲೇ ಎರಡನೇ ಮನೆಯಲ್ಲಿ ಇದ್ದಾನೆ. ಈಗ ನಿಮಗೆ ಅದೃಷ್ಟದ ಕಾಲ. ಭೂಮಿಯಿಂದ ಲಾಭ ಇದೆ. ರಿಯಲ್ ಎಸ್ಟೇಟ್ ನವರಿಗೆ ಲಾಭ ಇದೆ. ವ್ಯಾಪಾರ ವ್ಯವಹಾರಗಳು ಜೋರಾಗಿ ನಡೆಯುತ್ತದೆ. ವಾಹನದಿಂದ ಲಾಭ ಇದೆ. ಆಭರಣ ಖರೀದಿ ಮಾಡುವಿರಿ.
ಹೊಸ ವಾಹನ ಕೊಳ್ಳುವ ಯೋಗ ಇದೆ. ವಿದ್ಯುತ್ ಸಂಬಂಧಿತ ಕೆಲಸ ಮಾಡುವವರಿಗೆ ಲಾಭ ಇದೆ. ಸರ್ಕಾರಿ ನೌಕರರಿಗೆ ಲಾಭ ಇದೆ. ನೌಕರಿಯಲ್ಲಿ ಬಡ್ತಿ, ಸ್ಥಾನಮಾನ ಸಿಗುವ ಯೋಗ ಇದೆ. ಶನಿ ಲಾಭಸ್ಥಾನದಲ್ಲಿ ಇರುವುದರಿಂದ ನಿಮಗೆ ಅಧಿಕ ಧನಲಾಭ ಉನ್ನತ ಅಧಿಕಾರ ಪ್ರಾಪ್ತಿ ಇದೆ. ಕೋರ್ಟ್ ವ್ಯಾಜ್ಯಗಳಲ್ಲಿ ನಿಮಗೆ ಜಯ ಲಭಿಸುತ್ತದೆ. ಶತ್ರುಪೀಡನೆ ದೂರವಾಗುತ್ತದೆ. ಕೌಟುಂಬಿಕವಾಗಿ ನೆಮ್ಮದಿ ಸಂತೋಷ ಇದೆ. ಉನ್ನತ ವ್ಯಾಸಂಗಕ್ಕೆ ಈಗ ಅವಕಾಶ ಒದಗಿ ಬರುತ್ತದೆ. ವಿದೇಶಕ್ಕೆ ಹೋಗುವವರಿಗೆ ಈಗ ದಾರಿ ಸುಲಭವಾಗಲಿದೆ.

ವೃಷಭ ರಾಶಿಯ ಮಾಸ ಭವಿಷ್ಯ
ನಿಮಗೆ ರಾಶಿಯಲ್ಲೇ ಗುರು ಇರುವುದು ಹಣದ ಖರ್ಚಿಗೆ ಕಾರಣವಾದರೂ ರಾಹು ಲಾಭಸ್ಥಾನದಲ್ಲಿ ಇರುವುದು ಹಣ ಬರುವುದಕ್ಕೂ ಸಹಾಯವಾಗುತ್ತದೆ. ಧನಾಗಮನ ಉತ್ತಮವಾಗಿದೆ. ಶುಭಕಾರ್ಯಕ್ಕೆ ಖರ್ಚು ಮಾಡುವ ಸಂದರ್ಭಗಳಿವೆ. ವಾರದ ಮೊದಲಲ್ಲಿ ಬುಧ ಶುಕ್ರರ ಕಟಕ ರಾಶಿ ಪ್ರವೇಶ ನಿಮಗೆ ಲಾಭ ತಂದುಕೊಡುತ್ತದೆ. ಅಕ್ಕತಂಗಿಯರು ಅಥವಾ ಸ್ತ್ರೀಯರಿಂದ ಲಾಭ ಮತ್ತು ಸಹಾಯ ಇದೆ.
14 ರ ನಂತರ ಸೂರ್ಯ ಕಟಕರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಅನುಕೂಲಗಳು ಸಿಗುತ್ತದೆ. ಪರಾಕ್ರಮ ಧೈರ್ಯದಿಂದ ಯಾವ ಕೆಲಸವನ್ನೂ ಯಶಸ್ವಿಯಾಗಿ ಮಾಡುವ ಒಂದು ಬಲ ಬರುತ್ತದೆ. ನಿಮ್ಮ ರಾಶಿಯಲ್ಲೇ ಈ ಮಾಸಪೂರ್ತಿ ಗುರುವಿನ ಜೊತೆಗೆ ಕುಜನೂ ಇರುತ್ತಾನೆ. ಇದರಿಂದ ವ್ಯತಿರಿಕ್ತ ಪರಿಣಾಮಗಳು ಏನೂ ಇಲ್ಲದಿದ್ದರೂ ಯಾರ ತಂಟೆಗೂ ಹೋಗಬೇಡಿ, ನೀವಾಯಿತು ನಿಮ್ಮ ಕೆಲಸವಾಯಿತು ಎಂಬಂತೆ ಇರಿ. ಯಾರ ವಿಷಯದಲ್ಲೂ ಮೂಗು ತೂರಿಸುವುದು ಬೇಡ. ನಿಮಗೇ ವೃಥಾ ಅಪವಾದ ಮನಸ್ಸಿಗೆ ಹಿಂಸೆ ಆಗುತ್ತದೆ.
ಶನಿ ಹತ್ತನೇ ಮನೆಯಲ್ಲಿ ವೃತ್ತಿಗೆ ಭದ್ರತೆ ಕೊಡುತ್ತಾನೆ. ಈ ಮಾಸದ ಮಧ್ಯದಿಂದ ನಿಮಗೆ ಸಮಯ ಚೆನ್ನಾಗಿದೆ. ನೀವು ಅಂದುಕೊಂಡ ಕೆಲಸಗಳು ನೆರವೇರುವ ಒಂದು ದಾರಿ ಕಾಣುತ್ತದೆ. ಧನಾಗಮನ ಉತ್ತಮವಾಗುತ್ತದೆ. ಈ ಮಾಸದ ಕೊನೆಯಲ್ಲಿ ಬುಧ ನಾಲ್ಕನೇ ಮನೆಯಾದ ಸಿಂಹ ರಾಶೀಗೆ ಪ್ರವೇಶವಾಗುತ್ತಾನೆ. ಆಗಲೂ ಸಹ ನಿಮಗೆ ಒಳಿತೇ ಆಗುತ್ತದೆ. ವಿದ್ಯಾರ್ಥಿಗಳಿಗೆ ಈ ಮಾಸದ ಕೊನೆಯಲ್ಲಿ ಶುಭಫಲಗಳು ದೊರೆಯುತ್ತದೆ.

ಮಿಥುನ ರಾಶಿಯ ಮಾಸ ಭವಿಷ್ಯ
ನಿಮ್ಮ ರಾಶಿಯಿಂದ 12 ನೇ ಮನೆಯಲ್ಲಿ ಗುರು ಇದ್ದಾನೆ. ಇದು ಸ್ವಲ್ಪ ಮಾನಸಿಕ ಕ್ಷೋಬೆಗೆ ಕಾರಣವಾಗುತ್ತದೆ. ಗಂಡ ಹೆಂಡಿರ ನಡುವೆ ಜಗಳ ವೈಮನಸ್ಸು ವಿಕೋಪಕ್ಕೆ ಹೋಗಬಹುದು. ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಜಾಗ ಬದಲಾವಣೆಯ ಒಂದು ಸೂಚನೆ ಇದೆ. ಈ ಮಾಸದ ಮೊದಲಲ್ಲಿ ಬುಧ-ಶುಕ್ರರು ಕಟಕರಾಶಿಗೆ ಪ್ರವೇಶವಾಗುತ್ತಾರೆ. ಇದರಿಂದ ನಿಮಗೆ ಆರ್ಥಿಕವಾಗಿ ಕೊಂಚ ಅನುಕೂಲ ಸಿಗುತ್ತದೆ. ಕೌಟುಂಬಿಕ ಅಶಾಂತಿ ಒಂದು ಮಿತಿಯಲ್ಲಿ ಇರುತ್ತದೆ. ವಿಕೋಪಕ್ಕೆ ಹೋಗದಂತೆ ಬುಧ ಶುಕ್ರರು ತಡೆಯುತ್ತಾರೆ.
ಶನಿ ಒಂಬತ್ತನೇ ಮನೆಯಲ್ಲಿ ಇರುವುದು ಧಾರ್ಮಿಕ ಭಾವನೆಯನ್ನು ಹೆಚ್ಚಿಸುತ್ತಾನೆ. ಹತ್ತನೇ ಮನೆಯಲ್ಲಿ ರಾಹು ನೌಕರಿಯಲ್ಲಿ ಒತ್ತಡಗಳನ್ನು ಕೊಡುತ್ತಾನೆ. ಆದರೆ ರಾಸಾಯಬಿಕ, ಔಷಧೀಯ, ಇಂತಹ ವ್ಯಾಪಾರಸ್ಥರು ಲಾಭ ಕಾಣುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ಅಂದುಕೊಂಡಿದ್ದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ಜಾಗ ಬದಲಾವಣೆಯ ಸೂಚನೆ ಇರುವುದರಿಂದ ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಒಳ್ಳೆಯ ದಶಾಭುಕ್ತಿ ನಡೆಯುತ್ತಿದ್ದರೆ ಹೊಸ ಮನೆ ಕಟ್ಟಬಹುದು ಅಥವಾ ಮನೆ ಕೊಳ್ಳಬಹುದು. ವಾಸಸ್ಥಾನ ಅಥವಾ ನೌಕರಿ ಬದಲಾಯಿಸಬಹುದು. ಈ ತಿಂಗಳು ನಿಮಗೆ ಕೆಡುಕೂ ಇಲ್ಲದೆ ತೀರಾ ಒಳ್ಳೆಯದೂ ಇಲ್ಲದೆ ಮಧ್ಯಮವಾಗಿ ನಡೆಯುತ್ತದೆ.

ಕಟಕ ರಾಶಿಯ ಮಾಸ ಭವಿಷ್ಯ
ನಿಮ್ಮ ರಾಶಿಗೆ ಈಗ ಗುರುಬಲ ಇದೆ. ಕಳೆದ ಒಂದು ವರ್ಷದಿಂದ ಅಷ್ಠಮ ಶನಿಯ ಪ್ರಭಾವಕ್ಕೆ ಸಿಕ್ಕು ನೀವು ಬಹಳ ನರಳಿದ್ದೀರಿ. ಕೆಲಸ ಕಾರ್ಯಗಳು ಯಾವುದೂ ನೀವು ಅಂದುಕೊಂಡಂತೆ ನಡೆದಿಲ್ಲ. ಕೆಲಸ ಕಾರ್ಯಗಳಲ್ಲಿ ವಿಘ್ನಗಳು, ನೌಕರಿಯಲ್ಲಿ ಕಿರಿಕಿರಿ, ಮನೆಯಲ್ಲಿ ಅಶಾಂತಿ, ಇವೆಲ್ಲವನ್ನೂ ಅನುಭವಿಸಿದ್ದೀರಿ. ಆದರೆ ಕಳೆದ ತಿಂಗಳಿಂದ ಗುರುಬಲ ಬಂದಿರುವುದರಿಂದ ನಿಮಗೆ ಕೊಂಚ ನಿರಾಳ. ಜೀವಕಾರಕ ಗುರು ಈಗ ನಿಮಗೆ ಲಾಭಸ್ಥಾನದಲ್ಲಿ ಇದ್ದು ನಿಮ್ಮ ಎಲ್ಲ ಅನುಕೂಲಗಳನ್ನು ಒದಗಿಸಿಕೊಡುತ್ತಾನೆ. ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸುತ್ತಾನೆ.
ಧನಾಗಮನ ಉತ್ತಮವಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಅಷ್ಠಮಶನಿಯ ಪ್ರಭಾವ ಇನ್ನೂ ಇರುವುದರಿಂದ ಅಲ್ಪಸ್ವಲ್ಪ ಅಡೆತಡೆಗಳು ಬರುತ್ತಿರುತ್ತದೆ. ಎದೆಗುಂದಬೇಡಿ ಆ ತಡೆಗಳಿಗೆ ಪರಿಹಾರಗಳು ದೊರೆತು ನಿಮ್ಮ ದಾರಿ ಸುಗಮವಾಗುತ್ತದೆ. ಈ ತಿಂಗಳ ಮೊದಲ ವಾರದಲ್ಲಿ ಬುಧ ಶುಕ್ರರು ನಿಮ್ಮ ರಾಶಗೆ ಬರುತ್ತಾರೆ. ಇದು ಕೂಡ ನಿಮಗೆ ಒಳಿತನ್ನು ಮಾಡುತ್ತದೆ. ನಿಮ್ಮ ಧನಾತ್ಮಕ ಶಕಿಯನ್ನು ಹೆಚ್ಚುಮಾಡುತ್ತದೆ. ನಿಮ್ಮ ಸಂಕಷ್ಟಗಳಿಗೆ ನೀವೇ ಒಂದು ದಾರಿ ಕಂಡುಕೊಳ್ಳುವಂತೆ ಮಾಡುತ್ತದೆ. ಸಂಪನ್ಮೂಲಗಳನ್ನು ನೀವು ಗುರ್ತಿಸುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಈ ತಿಂಗಳು ನಿಮಗೆ ಒಳ್ಳೆಯಫಲಗಳೆ ಹೆಚ್ಚು ಇದೆ.

ಸಿಂಹ ರಾಶಿಯ ಮಾಸ ಭವಿಷ್ಯ
ಈಗ ಗುರು ನಿಮಗೆ ಹತ್ತನೇ ಮನೆಯಲ್ಲಿ ಇದ್ದಾನೆ. ಇದು ನಿಮಗೆ ಕೊಂಚ ಒತ್ತಡಗಳನ್ನು ಕೊಡುತ್ತದೆ. ವೃತ್ತಿಯಲ್ಲೂ ಕೊಂಚ ಏರುಪೇರುಗಳಾಗಬಹುದು. ಮೇಲಾಧಿಕಾರಿಗಳ ಮಾತನ್ನು ಶಿರಸಾವಹಿಸಿ ಪಾಲಿಸಿ. ನೀವು ಬಹಳ ಆತ್ಮಗೌರವ ಹಾಗೂ ಸ್ವಾಭಿಮಾನದ ಸ್ವಭಾವದವರು.ಯಾರಿಗಾದರೂ ತಲೆತಗ್ಗಿಸುವುದು ನಿಮಗೆ ಆಗದು. ನಿಮ್ಮ ರಾಶಿಯ ಅಧಿಅಪತಿ ಸೂರ್ಯ ಗ್ರಹಗಳ ರಾಜ ಹೀಗಾಗಿ ನೀವೂ ಕೂಡ ರಾಜಸ್ವ ಸ್ವಭಾವದವರು. ಆದರೆ ಪರಿಸ್ಥಿತಿ ನಿಮಗೆ ವ್ಯತಿರಿಕ್ತವಾಗಿರುವಾಗ ನೀವು ಕೆಲವೊಮ್ಮೆ ತಲೆಬಾಗಬೇಕಾಗುತ್ತದೆ. ಧರ್ಮರಾಯ ಕೂಡ ತಲೆಬಾಗಿದ್ದಾನೆ ಹೀಗಾಗಿ ಬಾಗುವುದರಲ್ಲಿ ಅವಮಾನ ಇಲ್ಲ. ಬಾಗಿ ಮತ್ತೆ ಇನ್ನಷ್ಟು ಬೆಳೆಯಿರಿ.
ಈಗ ನಿಮಗೆ ಎಲ್ಲ ಗ್ರಹಗಳೂ ವ್ಯತಿರಿಕ್ತವಾಗಿಯೇ ಇದೆ. ಹಾಗಾಗಿ ಒತ್ತಡಗಳು ಯಾವ ಯಾವ ಮೂಲದಿಂದ ಬರುವುದೋ ಹೇಳಲಾಗುವುದಿಲ್ಲ. ಶನಿ ನಿಮ್ಮ ರಾಶಿಯನ್ನು ನೇರವಾಗಿ ನೋಡುತ್ತಿದ್ದಾನೆ. ಹೀಗಾಗಿ ಮಾನಸಿಕ ಕ್ಷೋಭೆ ಹೆಚ್ಚು. ಇದರಿಂದ ಕೋಪತಾಪಗಳೂ ಹೆಚ್ಚಾಗುತ್ತದೆ. ಬುಧ ಶುಕ್ರರು ವ್ಯಯಸ್ಥಾನದಲ್ಲಿ ಇರುವುದರಿಂದ ಖರ್ಚು ಹೆಚ್ಚಾಗಿಯೇ ಇರುತ್ತದೆ. ಎರಡನೇ ಮನೆಯಲ್ಲಿ ಕೇತು ಇರುವುದು ಸಂಸಾರದಲ್ಲಿ ಬಿಕ್ಕಟ್ಟು ತೋರಿಸುತ್ತದೆ. ಎಂಟನೇ ಮನೆಯಲ್ಲಿ ರಾಹು ಆರೋಗ್ಯ ವೈಪರೀತ್ಯ ಮಾಡುತ್ತಾನೆ. ಹಾಗಾಗಿ ನೀವು ಹೆಜ್ಜೆಹೆಜ್ಜೆಗೂ ಜಾಗರೂಕರಾಗಿರಬೇಕು. ವಿಷ್ಣುಸಹಸ್ರನಾಮ ಪ್ರತಿದಿನ ಹೇಳಿಕೊಳ್ಳಿ. ಮಾನಸಿಕ ಶಕ್ತಿ ಹೆಚ್ಚಾಗುತ್ತದೆ.

ಕನ್ಯಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಅದೃಷ್ಟದ ಕಾಲ. ಗುರು ಭಾಗ್ಯಸ್ಥಾನದಲ್ಲಿ ಭಾಗ್ಯಗಳನ್ನು ಕೊಡುತ್ತಾನೆ. ಸಕಲ ವಿಧದಲ್ಲಿಯೂ ಒಳ್ಳೆಯದನ್ನು ಮಾಡುತ್ತಾನೆ. ಪುಣ್ಯ ಕಾರ್ಯ ಮಾಡಿಸುತ್ತಾನೆ. ಯಾತ್ರಾಸ್ಥಳಗಳನ್ನು ಭೇಟಿ ಮಾಡುತ್ತೀರಿ. ಆರನೇ ಮನೆಯಲ್ಲಿ ಶನಿ ಅಪಾರ ಧನಲಾಭ ಮಾಡಿಸುತ್ತಾನೆ. ಮೂರು, ಆರು, ಹನ್ನೊಂದನೇ ಮನೆಯಲ್ಲಿ ಪಾಪ ಗ್ರಹಗಳು ಬಹಳ ಲಾಭ ಕೊಡುತ್ತಾರೆ. ಈ ತಿಂಗಳ ಮೊದಲ ವಾರದಿಂದಲೇ ಬುಧ ಶುಕ್ರರು ಲಾಭಸ್ಥಾನಕ್ಕೆ ಪ್ರವೇಶವಾಗುತ್ತಾರೆ. ಇದೂ ಸಹ ನಿಮಗೆ ಉತ್ತಮರೀತಿಯಲ್ಲಿ ಸಹಾಯ ಮಾಡುತ್ತದೆ.
ಧನಲಾಭ, ಮಿತ್ರರಿಂದ ಲಾಭ, ಮಿತ್ರರ ಸಹಾಯ ಹೀಗೆ ಬಹಳಷ್ಟು ಲಾಭಗಳು ಇವೆ. ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಯೋಗ ಈಗ ನಿಮಗೆ. ನಿಮ್ಮ ಮಾತು ತುಂಬಾ ಪ್ರಭಾವಶಾಲಿಯಾಗಿರುತ್ತದೆ. ನಿಮ್ಮ ರಾಶಿಯಲ್ಲಿ ಕೇತು ಹಾಗೂ ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರಾಹು ಇರುವುದು ಮಾತ್ರ ಕೊಂಚ ತೊಂದರೆ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಕಾಳಜಿ ವಹಿಸಿ. ವಿಷವಸ್ತುಗಳು ಹರಿತ ವಸ್ತುಗಳಿಂದ ದೂರವಿರಿ. ಎಂಟನೇ ಮನೆಯಲ್ಲಿ ಕುಜ ಇರುವುದು ಕೂಡ ಸ್ವಲ್ಪ ಹಿನ್ನಡೆ ಕೊಡುತ್ತದೆ. ಭೂಮಿ ವ್ಯವಹಾರಗಳನ್ನು ಜಾಗರೂಕವಾಗಿ ಮಾಡಿ. ನಷ್ಟ ಹೋಗುವ ಸಾಧ್ಯತೆ ಇದೆ. ಗುಣಾತ್ಮಕ ಸಂಗತಿಗಳೊಂದಿಗೆ ಕೊಂಚ ಅಪಾಯಗಳನ್ನೂ ಎದುರಿಸಬೇಕಾಗುತ್ತದೆ. ಮೈಮರೆಯಬೇಡಿ.

ತುಲಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ರಾಹು ಆರನೇ ಮನೆಯಲ್ಲಿ ಇರುವುದು ಒಳ್ಳೆಯ ಬಲ. ಇದು ಪರಾಕ್ರಮವನ್ನು ಕೊಡುತ್ತದೆ. ಯಾವುದೇ ಕೆಲಸದಲ್ಲಿ ಜಯ ಸಿಗುವಂತೆ ಮಾಡುತ್ತದೆ. ಆದರೆ ಪಂಚಮದಲ್ಲಿ ಶನಿ ಹಾಗೂ ಅಷ್ಟಮದಲ್ಲಿ ಗುರು ಕೊಂಚ ಹಿನ್ನಡೆ ಕೊಡುತ್ತಾರೆ. ಪಂಚಮಶನಿ ಮಾನಸಿಕ ಕಿರುಕುಳವನ್ನೂ ಹಣಕಾಸಿನ ಮುಗ್ಗಟ್ಟನ್ನೂ ಕೊಡುತ್ತಾನೆ. ಅಷ್ಠಮ ಗುರು ಆರೋಗ್ಯದಲ್ಲಿ ಏರುಪೇರು ಮಾಡುತ್ತಾನೆ ಹಾಗೂ ಬಂಧು ಸ್ನೇಹಿತರಲ್ಲಿ ವೈಮನಸ್ಸು ಮೂಡಿಸುತ್ತಾನೆ. ನಿಮ್ಮವರೇ ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ನೋಯಿಸುವಂತೆ ಅವಮಾನಿಸುವಂತೆ ಆಗುತ್ತದೆ.
ಹತ್ತನೇ ಮನೆಯಲ್ಲಿ ಶುಕ್ರ, ಬುಧ ಇರುವುದು ವೃತ್ತಿಸಂಬಂಧವಾಗಿ ನಿಮಗೆ ಶುಭವನ್ನು ತರುತ್ತದೆ. ಈ ತಿಂಗಳು ಪೂರ್ತಿ ಬುಧಶುಕ್ರರು ವೃತ್ತಿಸ್ಥಾನದಲ್ಲಿ ಇರುತ್ತಾರೆ. ಇದು ನಿಮಗೆ ವೃತ್ತಿಯಲ್ಲಿ ಅಪಾರ ಯಶಸ್ಸು ತಂದುಕೊಡುತ್ತದೆ. ವಾಹನದಿಂದ ಲಾಭ ಇದೆ. ವಾಹನ ವಹಿವಾಟು ನಡೆಸುವವರಿಗೆ ಲಾಭ ಇದೆ. ಈ ರಾಶಿಯ ರಾಜಕಾರಣಿಗಳು ಪದವಿ ಪಡೆಯದಿದ್ದರೂ ಒಳ್ಳೆಯ ಹೆಸರು ಗಳಿಸುತ್ತಾರೆ. ಇರು ಅವರಿಗೆ ಮುಂದಿನ ಬೆಳವಣಿಗೆಗೆ ಕಾರಣವಾಗುತ್ತದೆ. ಆರನೇ ಮನೆಯ ರಾಹುವಿನಿಂದ ಶತ್ರುಗಳಿಂದ ತೊಂದರೆ ತಪ್ಪುತ್ತದೆ. ಈಗ ನೀವು ಅರ್ಧಫಲ ಅನುಭವಿಸುತ್ತೀರಿ. ಕೆಲವೇ ತಿಂಗಳಲ್ಲಿ ಶನಿ ಸಹ ಆರನೇ ಮನೆಗೆ ಬಂದಾಗ ಇನ್ನಷ್ಟು ಅದೃಷ್ಟ ನಿಮ್ಮ ಕೈಹಿಡಿಯಲಿದೆ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈಗ ಸಂಪೂರ್ಣ ನಿಮ್ಮ ರಾಶಿಯ ಮೇಲೆ ಗುರುವಿನ ಅನುಗ್ರಹ ಇದ್ದು ನಿಂತು ಹೋಗಿದ್ದ ಬೆಳವಣಿಗೆಗಳು ಶುಭಸಂಗತಿಗಳು ಈಗ ಮರುಚಾಲನೆ ಪಡೆದು ನಿಮಗೆ ಅದೃಷ್ಟ ತಂದುಕೊಡುತ್ತದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಕಳೆದ ವರ್ಷದಲ್ಲಿ ಪ್ರಗತಿಯ ಒಂದೂ ಕಾರ್ಯ ನಡೆಯಲಿಲ್ಲ. ಆದರೆ ಈಗ ಪ್ರಗತಿಗೆ ಹಲವಾರು ಅವಕಾಶಗಳು ನಿಮ್ಮ ಬಾಗಿಲಿಗೆ ಬರುತ್ತದೆ. ಇದನ್ನು ಈಗ ನೀವು ಹೇಗೆ ಉಪಯೋಗಿಸಿಕೊಳ್ಳುವಿರೋ ನಿಮಗೆ ಸೇರಿದ್ದು. ಶನಿ ಹಾಗೂ ರಾಹು ಈಗ ನಿಮಗೆ ವ್ಯತಿರಿಕ್ತವಾಗಿ ಇರುವುದು ಸ್ವಲ್ಪ ಕಿರಿಕಿರಿಯನ್ನುಂಟು ಮಾಡಿದರೂ ಗುರುಬಲ ಸಂಪೂರ್ಣ ಇರುವುದರಿಂದ ಅಪಾಯಗಳನ್ನು ಬಹುಮಟ್ಟಿಗೆ ನಿವಾರಿಸಿಕೊಳ್ಳುತ್ತೀರಿ.
ಅಪಾಯಗಳು ನಿಮ್ಮ ಬಳಿಗೆ ಬರುವಷ್ಟರಲ್ಲಿ ದೇವರ ಅನುಗ್ರಹದಿಂದ ಉಪಾಯ ಗೋಚರಿಸುತ್ತದೆ. ಐದನೇ ಮನೆಯಲ್ಲಿ ರಾಹು ಇರುವುದು ಮಕ್ಕಳ ಫಲಕ್ಕೆ ವಿಘ್ನ ಇದೆ. ಮಕ್ಕಳಿಗಾಗಿ ಪ್ರಯತ್ನಿಸುವವರು ಸ್ವಲ್ಪಕಾಲ ಸುಮ್ಮನಿರಿ. ಮಕ್ಕಳಿಂದ ಕೂಡ ಸ್ವಲ್ಪ ಜಗಳ ವೈಮನಸ್ಸು ಅನುಭವಿಸುತ್ತೀರಿ. ಮಕ್ಕಳೇ ನಿಮಗೆ ದುಃಖ ಕೊಡುವಂಥ ಅಥವಾ ಮಕ್ಕಳಿಂದ ಅಹಿತಕರ ವಾತಾವರಣ ನಿರ್ಮಾಣವಾಗುತ್ತದೆ. ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ. ಹನ್ನೊಂದನೇ ಮೆಯಲ್ಲಿ ಇರುವ ಕೇತು ಹಣದ ಹರಿವನ್ನು ಉತ್ತಮಪಡಿಸುತ್ತಾನೆ.

ಧನಸ್ಸು ರಾಶಿಯ ಮಾಸ ಭವಿಷ್ಯ
ಐದನೇ ಮನೆಯಲ್ಲಿ ಇದ್ದ ಗುರು ಈಗ ಆರನೇ ಮನೆಗೆ ಬಂದು ಕೊಂಚ ಇಕ್ಕಟ್ಟಿನ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸುತ್ತಾನೆ. ನಾಲ್ಕನೇ ಮನೆಯಲ್ಲಿ ರಾಹು ಕೂಡ ಸುಖಸಂತೋಷಗಳಿಗೆ ಕುತ್ತು ತರುತ್ತಾನೆ. ಎಷ್ಟೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದರೂ ಒಂದು ಮುಳ್ಳು ಹಾಸಿಗೆಯಲ್ಲಿ ಸೇರಿದರೆ ಹೇಗೆ ಕಿರಿಕಿರಿ ಆಗುವುದೋ ಹಾಗೆ ಏನೋ ಒಂದು ಸಣ್ಣಪುಟ್ಟ ಕಿರಿಕಿರಿ ಇರುತ್ತದೆ. ನಿರಾಳತೆ ಇರುವುದಿಲ್ಲ. ತಾಯಿಯೊಂದಿಗೆ ಜಗಳ ಅಥವಾ ತಾಯಿಯಿಂದ ದೂರ ಇರುವ ಸಂದರ್ಭ ಬರಬಹುದು. ಅಂದರೆ ಬೇರೆ ಊರಿಗೆ ವರ್ಗಾವಣೆ ಆಗುವುದು, ವಿದ್ಯೆಗಾಗಿ ಪರವೂರಿಗೆ ಹೋಗಬೇಕಾಗುವುದು, ವೃತ್ತಿಯಲ್ಲಿ ವರ್ಗಾವಣೆ ಆಗಿ ಮನೆಯಿಂದ ದೂರ ಇರಬೇಕಾದಂಥ ಸಂದರ್ಭ ಬರುವುದು ಹೀಗೆ ಇರುತ್ತದೆ.
ಮನಸ್ಸಿಗೆ ಘಾಸಿ ಮಾಡಿಕೊಳ್ಳಬೇಡಿ. ಇವೆಲ್ಲವೂ ತಾತ್ಕಾಲಿಕ. ಮುಂದೆ ನಿಮಗೆ ಒಳ್ಳೆಯ ದಿನಗಳು ಇವೆ. ಈಗಲೂ ಶನಿ ಮೂರನೇ ಮನೆಯಲ್ಲಿ ಇರುವುದು ನಿಮಗೆ ಧೈರ್ಯವನ್ನೂ ಪರಾಕ್ರಮವನ್ನೂ ಕೊಡುತ್ತದೆ. ಹಣದ ಹರಿವನ್ನು ಉತ್ತಮ ಪಡಿಸುತ್ತದೆ. ಹಣಕಾಸಿಗೆ ತೊಂದರೆ ಇಲ್ಲ. ಆದರೆ ಯಾವುದಾದಾರೂ ಶುಭಕಾರ್ಯ ನಡೆಯಬೇಕಿರುವುದು ಕೊಂಚ ವಿಳಬವಾಗುತ್ತದೆ. ಗುರು ಆರನೇ ಮನೆಯಲ್ಲಿ ಕೊಂಚ ಅವಮಾನ ಮನಸ್ಸಿಗೆ ಹಿಂಸೆ ಕೊಡುತ್ತಾನೆ. ಆದ್ದರಿಂದ ನೀವು ನಿಮ್ಮ ಒಡನಾಡಿ ಸ್ನೇಹಿತರು ಬಂಧುಬಾಂಧವರ ಬಳಿ ಜಾಗರೂಕರಾಗಿರಿ. ಮಾತಾಡುವಾಗ ಎಚ್ಚರ ಇರಲಿ. ಗೊತ್ತಿದ್ದೂ ತಪ್ಪು ಮಾಡಬೇಡಿ. ದತ್ತಾತ್ರೇಯನ ಸ್ತೋತ್ರ ಸ್ತವನ ಪಠಿಸಿ.

ಮಕರ ರಾಶಿಯ ಮಾಸ ಭವಿಷ್ಯ
ಇನ್ನು ಕೆಲವೇ ತಿಂಗಳಲ್ಲಿ ಎರಡನೇ ಮನೆಯಲ್ಲಿ ಇರುವ ಶನಿ ಮೂರನೇ ಮನೆ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ನಿಮ್ಮ ಸಾಡೆಸಾತಿ ಸಮಯ ಮುಗಿಯುತ್ತದೆ. ಅಲ್ಲಿಂದ ನಿಮಗೆ ಅದೃಷ್ಠಗಳ ಸುರಿಮಳೆ. ಈಗ ಗುರು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಇರುವುದು ಕೂಡ ಅದೃಷ್ಠವನ್ನು ತರುತ್ತದೆ. ಐದನೇ ಮನೆಯಲ್ಲಿ ಗುರು ಮೂರನೇ ಮನೆಯಲ್ಲಿ ರಾಹು ಇಬ್ಬರೂ ಈಗ ನಿಮಗೆ ಬಹಳ ಅನುಕೂಲವಾಗಿದ್ದಾರೆ. ಹಣದ ಹರಿವು ಉತ್ತಮವಾಗಿರುತ್ತದೆ. ಈ ತಿಂಗಳ ಮೊದಲಲ್ಲಿ ಬುಧ ಹಾಗೂ ಶುಕ್ರ ನಿಮ್ಮರಾಶಿಯಿಂದ ಏಳನೇ ಮನೆಗೆ ಬರುತ್ತಾರೆ ಇದೂ ಕೂಡ ನಿಮಗೆ ಶುಭಫಲವನ್ನು ಕೊಡುತ್ತದೆ. ಈಗ 15 ನೇ ತಾರೀಖಿನವರೆಗೂ ಸೂರ್ಯ ಆರನೇ ಮನೆಯಲ್ಲಿ ಇದ್ದು ಪರಾಕ್ರಮವನ್ನೂ ಧೈರ್ಯವನ್ನೂ ಕೊಡುತ್ತಾನೆ.
ಗುರುಬಲ ರಾಹುಬಲ ಜೊತೆಗೆ ಸೂರ್ಯನ ಬಲದಿಂದ ಏನಾದರೂ ಅದೃಷ್ಟ ಒಲಿದು ಬರಬಹುದು. ಅವಿವಾಹಿತರಿಗೆ ವಿವಾಹಯೋಗ ಇದೆ. ಹೊಸ ಕೆಲಸ ನೌಕರಿ ಬಡ್ತಿ ಪ್ರವಾಸ ಎಲ್ಲವೂ ಇದೆ. ಕೇತು ಒಂಬತ್ತನೆಯ ಮನೆಯಲ್ಲಿ ಇರುವುದು ಶುಭವಲ್ಲದಿದ್ದರೂ ಗುರುವಿನ ದೃಷ್ಟಿ ಕೇತುವಿನ ಮೇಲೆ ಇದೆ. ಗುರು ಐದನೇ ಮನೆಯಲ್ಲಿ ಇದ್ದು ಭಾಗ್ಯಸ್ಥಾನವನ್ನೂ ನೋಡುತ್ತಾನೆ. ಇದು ಕೂಡ ನಿಮಗೆ ಅದೃಷ್ಟ ಕೊಡುತ್ತದೆ. ಗುರು ಐದನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನೂ ನೋಡುತ್ತಾನೆ. ಹೀಗಾಗಿ ನಿಮಗೆ ನಾನಾ ತರದಲ್ಲಿ ಅನುಕೂಲಗಳು ಒದಗಿಬರಲಿದೆ. ನಿಮ್ಮ ಮೇಲೆ ಇರುವ ಒಂದು ಪೂರ್ವಾಗ್ರಹ ಅಭಿಪ್ರಾಯ ಬದಲಾಗಿ ನಿಮಗೆ ನೆಮ್ಮದಿಯನ್ನು ತಂದುಕೊಡುತ್ತದೆ.

ಕುಂಭ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರುಬಲ ಇಲ್ಲ. ಇದು ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆ. ನೀವು ನಾಲ್ಕು ಹೆಜ್ಜೆ ಮುಂದಿಟ್ಟರೆ ವಿಧಿ ನಿಮ್ಮನ್ನು ಐದು ಹೆಜ್ಜೆ ಹಿಂದಕ್ಕೆ ಎಳೆಯುತ್ತದೆ. ಯಾವ ಕೆಲಸಕ್ಕೆ ಕೈಹಾಕಿದರೂ ನಿಧಾನ. ಕೋರ್ಟ್ ಪ್ರಕರಣಗಳು ವಿಚಾರಣೆಗಳು ತೀವ್ರಸ್ವರೂಪ ಪಡೆದು ನೀವೆ ಒತ್ತಡವನ್ನು ಸೃಷ್ಟಿ ಮಾಡುತ್ತದೆ. ಈ ತಿಂಗಳ ಮೊದಲವಾರದಲ್ಲಿ ಬುಧ ಶುಕ್ರರು ಆರನೇ ಮನೆಗೆ ಪ್ರವೇಶವಾಗುವುದು ಕೊಂಚ ನಿಮಗೆ ಬಿಗಿ ಸಡಿಲವಾದಂತೆ ಅನಿಸಬಹುದು. ಆದರೂ ಎರಡನೇ ಮನೆ ರಾಹು ನಾಲ್ಕನೇ ಮನೆ ಗುರು ನಿಮಗೆ ಹಿನ್ನಡೆ ಕೊಡುತ್ತಾರೆ.
ದತ್ತಾತ್ರೇಯ ಮತ್ತು ದುರ್ಗೆಯ ಪೂಜೆ ಮಾಡಿರಿ. ಸ್ತೋತ್ರ ಪಠಿಸಿರಿ. ಮನೆಯಲ್ಲಿ ಪ್ರತಿಕೂಲ ವಾತಾವರಣ ಇರುತ್ತದೆ. ನೀವು ಏನೇ ಹೇಳಿದರೂ ಅದಕ್ಕೆ ಒಂದು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗುತ್ತದೆ. ಈ ತಿಂಗಳ 15 ರ ನಂತರ ಸೂರ್ಯ ಆರನೇ ಮನೆ ಕಟಕರಾಶಿಗೆ ಪ್ರವೇಶವಾಗುತ್ತಾನೆ. ಆಗ ನಿಮಗೆ ಕೊಂಚ ಧನಲಾಭ ಆಗಬಹುದು. ಸರ್ಕಾರಿ ನೌಕರರಿಗೆ ಅನುಕೂಲ ಆಬಹುದು. ಏನೇ ಆದರೂ ಸಾಡೆಸಾತಿಯ ಪ್ರಭಾವದಲ್ಲಿ ಇರುವಾಗ ಅನುಕೂಲ ನೆಮ್ಮದಿ ಕಡಿಮೆ. ನೆಮ್ಮದಿಗೆ ಭಂಗವಾಗುವ ಘಟನೆಗಳೇ ಹೆಚ್ಚು. ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನಿಮ್ಮ ಕೆಲಸ ಪ್ರಾಮಾಣಿಕತೆಯಿಂದ ಮಾಡಿ.

ಮೀನ ರಾಶಿಯ ಮಾಸ ಭವಿಷ್ಯ
ನಿಮಗೂ ಸಹ ಈಗ ಗಂಭೀರ ಸಮಯ. ಯಾವುದು ಅನಿರೀಕ್ಷಿತ ಎಂದುಕೊಂಡಿರುತ್ತೀರೋ ಅದೇ ಧುತ್ತನೆ ಪ್ರತ್ಯಕ್ಷವಾಗಿ ನಿಮಗೆ ಭಯ ಪಡಿಸುವ ಸಮಯ. ಮನೆಯಲ್ಲಿ ಅಸೌಖ್ಯ ವಾತಾವರಣ. ನಿಮಗೂ ಸಹ ಅನಾರೋಗ್ಯ ಅಸ್ವಸ್ಥತೆ ಕಾಡುತ್ತದೆ. ನಿಮ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯ ಕೇತು ಇಬ್ಬರೂ ಈಗ ನಿಮಗೆ ಅನುಕೂಲರಲ್ಲ. ಏಳರಾಟದ ಶನಿ ನಡೆಯುತಿರುವಾಗ ನೀವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸ್ವಲ್ಪ ಹತಾಶೆ, ಹಣ ನಷ್ಟ, ಬಂಧು ಸ್ನೇಹಿತರ ನಡುವೆ ಕಿರಿಕಿರಿ ಜಗಳ ಇಂಥವೆಲ್ಲ ಇದ್ದೇ ಇರುತ್ತದೆ.
ಮೇಲಾಧಿಕಾರಿಗಳಿಗೆ ನೀವೆಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ತಪ್ಪು ಕಾಣುತ್ತದೆ. ನಿಮ್ಮನ್ನು ಕುಗ್ಗಿಸುವ ಕೆಲಸ ಅವಾಹತವಾಗಿ ನಡೆಯುತ್ತದೆ. ಇದಕ್ಕೆ ಭಯ ಪಡಬೇಡಿ. ನಿಮ್ಮ ಕೆಲಸವನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಿ. ಫಲವನ್ನು ದೇವರಿಗೆ ಬಿಡಿ. ಯಾರ ಮಾತಿಗೂ ಕಿವಿಕೊಡಬೇಡಿ. ನಿಮ್ಮ ಒಳಮನಸ್ಸಿನ ಮಾತನ್ನೂ ಮಾತ್ರ ಕೇಳಿ. ಸಾಧುಸಂತರ ಯತಿಗಳ ಸೇವೆ ಮಾಡಿ. ನಿಮ್ಮ ಗುರುಗಳನ್ನು ದರ್ಶನ ಮಾಡಿಬನ್ನಿ. ಕಪ್ಪು ಗೋವಿಗೆ ಆಹಾರ ಕೊಡಿ. ಇದು ನಿಮ್ಮನ್ನು ಎಷ್ಟೋ ಆಪತ್ತುಗಳಿಂದ ರಕ್ಷಿಸುತ್ತದೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications