March 2025 Horoscope: ಮಾರ್ಚ್ 2025ರ ಮಾಸ ಭವಿಷ್ಯ- ಈ ರಾಶಿಗೆ ರಾಜಯೋಗ, ಸಂಪತ್ತಿನ ಮಳೆ

ಪ್ರತೀ ತಿಂಗಳು ನಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹೊಸ ತಿಂಗಳು ಬಂದಾಗಲೆಲ್ಲಾ ತಮ್ಮ ಆದಾಯ, ವೈವಾಹಿಕ ಕುಟುಂಬ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಜೀವನ, ಆಸ್ತಿ-ಪಾಸ್ತಿ ಎಂತೆಲ್ಲಾ ವಿಚಾರದಲ್ಲಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಲು ಜನ ಬಯಸುತ್ತಾರೆ. ಹಾಗಾದರೆ ಮುಂದಿನ ತಿಂಗಳು ಮಾರ್ಚ್‌ನಲ್ಲಿ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ? ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ಮಾರ್ಚಿ 2025 ಮಾಸ ಭವಿಷ್ಯ.

ತಾ.01.03.2025 ರಿಂದ 31.03.2025

ಮಾಸವಿಶೇಷ: 13.03.25: ಹೋಳಿಹಬ್ಬ. 30.03.25: ಚಾಂದ್ರಮಾನ ಯುಗಾದಿ, ವಿಶ್ವಾವಸು ನಾಮ ಸಂವತ್ಸರ ಪ್ರಾರಂಭ. 31.03.25: ರಂಜಾನ್ ಹಬ್ಬ. 14.03.25: ಸೂರ್ಯ ಮೀನರಾಶಿಗೆ ಪ್ರವೇಶ.

ದ್ವಾದಶ ರಾಶಿಗಳ ಗೋಚಾರಫಲ

March 2025 Monthly Horoscope in Kannada

ಮೇಷರಾಶಿ:

ಈಗ ನಿಮಗೆ ಗುರುಬಲ ಇನ್ನೂ ಮೂರು ತಿಂಗಳು ಇದ್ದು ಎಲ್ಲ ಕೆಲಸಗಳೂ ಸುಲಭವಾಗಿ ನಡೆಯುತ್ತದೆ. ಶನಿ ಮುಂದಿನ ಯುಗಾದಿಯವರೆಗೆ ಲಾಭಸ್ಥಾನದಲ್ಲಿ ಇರುವುದರಿಂದ ಈ ತಿಂಗಳು ನೀವು ಎಣಿಸಿದ್ದ ಯೋಜನೆಗಳಲ್ಲಿ ಸಫಲತೆ ಕಾಣಬಹುದು. ಹಣದ ಹರಿವೂ ಉತ್ತಮವಾಗಿದೆ. ಈಗ ಕೇತು ಕೂಡ ಆರನೇ ಮನೆಯಲ್ಲಿ ಮೇ ತನಕ ಇದ್ದು ಇದ್ದು ನಿಮಗೆ ಹಣದ ಹರಿವನ್ನು ಉತ್ತಮಪಡಿಸುತ್ತಾನೆ.

ಮಾನಸಿಕ ದೈಹಿಕ ಶಕ್ತಿಯನ್ನು ವೃದ್ಧಿ ಪಡಿಸುತ್ತಾನೆ. ಧೈರ್ಯ ಸಾಹಸ ಕೆಚ್ಚು ಕೊಡುತ್ತಾನೆ. ಶನಿ ಹಾಗೂ ಸೂರ್ಯ 14ರ ವರೆಗೂ ಲಾಭಸ್ಥಾನದಲ್ಲಿ ಇರುವುದು ಕೂಡ ನಿಮಗೆ ಹೆಚ್ಚು ಬಲವನ್ನು ಲಾಭವನ್ನು ಕೊಡುತ್ತದೆ. ಮಂಗಳ ಸಹ ಈಗ ಮೂರನೇ ಮನೆಯಲ್ಲಿ ನಿಮಗೆ ಅಭಿವೃದ್ಧಿಯನ್ನು ತೋರಿಸುತ್ತಿದ್ದಾನೆ. ಸಾಡೆಸಾತಿ ಪ್ರಾರಂಭದ ಹಂತದಲ್ಲಿ ಇದ್ದೀರಿ. ಎಲ್ಲ ವಿಧದಲ್ಲೂ ಎಚ್ಚರಿಕೆ ಅಗತ್ಯ.

March 2025 Monthly Horoscope in Kannada

ವೃಷಭರಾಶಿ:

ಈಗ ನಿಮಗೆ ರಾಹುವಿನ ಬಲ ಇದೆ. ರಾಹು ಲಾಭಸ್ಥಾನದಲ್ಲಿ ಧನಲಾಭ ನಿರಂತರವಾಗಿ ಕೊಡುತ್ತಿದ್ದಾನೆ. ಈ ತಿಂಗಳ ಕೊನೆಗೆ ಶನಿ ಲಾಭಸ್ಥಾನಕ್ಕೆ ಪ್ರವೇಶ ಮಾಡಿ ನಿಮಗೆ ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾನೆ. ಈ ತಿಂಗಳು ನಿಮಗೆ ಬುಧ ಶುಕ್ರ ಸಹ ರಾಹುವಿನ ಜೊತೆ ಲಾಭಸ್ಥಾನದಲ್ಲಿದ್ದು ಒಳ್ಳೆಯ ಕೀರ್ತಿ ಅಭಿವೃದ್ಧಿ ಧನಲಾಭ ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.

ಈಗಿನಿಂದಲೇ ಸಂಬಂಧಗಳನ್ನು ಹುಡುಕುವುದು ಒಳ್ಳೆಯದು. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಮುಂದಿನ ದಿನಗಳಲ್ಲಿ ಉತ್ತಮ ಸಂಗತಿಗಳು ಜರುಗುತ್ತದೆ. ನಿಮಗೆ ಧನಲಾಭ, ಕಾರ್ಯ ಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ ಕೌಟುಂಬಿಕ ಸೌಖ್ಯ ಮೊದಲಾದ ಶುಭಸಂಗತಿಗಳು ನಿಮ್ಮದಾಗಲಿದೆ.

March 2025 Monthly Horoscope in Kannada

ಮಿಥುನರಾಶಿ:

ಈ ಮಾಸ ಪೂರ್ತಿ ನಿಮಗೆ ಗುರುಬಲ ಶನಿಬಲ ಎರಡೂ ಇಲ್ಲ. ಆದರೂ ಯಾವಗ್ರಹವೂ ಕೆಟ್ಟ ಸ್ಥಾನದಲ್ಲಿ ಇಲ್ಲ. ಹತ್ತನೇ ಮನೆಯಲ್ಲಿ ಬುಧ, ಶುಕ್ರ ರಾಹು ನಿಮಗೆ ಒಳಿತನ್ನು ಮಾಡುತ್ತಾರೆ. ಈ ಮೂರೂಗ್ರಹಗಳು ನಿಮಗೆ ಮಿತ್ರರು. ಈ ತಿಂಗಳ ಕೊನೆಯಲ್ಲಿ ಶನಿ ಕೂಡ ಹತ್ತನೇ ಮನೆಗೆ ಬಂದು ಒಂದು ತಾತ್ಕಾಲಿಕ ರಾಜಯೋಗವಾಗುತ್ತದೆ. ಇದರಿಂದ ಒಳ್ಳೆಯಫಲ ನಿರೀಕ್ಷೆ ಮಾಡಬಹುದು.

ಗುರು 12ನೇ ಮನೆಯಲ್ಲಿ ಇರುವುದು ಕೊಂಚ ಒತ್ತಡಗಳನ್ನು ಕೊಡುತ್ತದೆ. ಆದರೆ ಮುಂದಿನ ದಿನಗಳಲ್ಲಿ ಕೇತು ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಹೆಚ್ಚಿನ ಧನಲಾಭ ಅನುಕೂಲ ಇದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ತಾಯಿಗೆ ಅನುಕೂಲ ಇದೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಒಳ್ಳೆಯ ದಿನಗಳಿಗಾಗಿ ಕೊಂಚ ನಿರೀಕ್ಷೆ ಮಾಡಿ. ಶುಕ್ರ ಹಾಗೂ ಬುಧ ಲಾಭಸ್ಥಾನಕ್ಕೆ ಪ್ರವೇಶವಾದಾಗ ಶುಭಫಲಗಳು ಇವೆ.

March 2025 Monthly Horoscope in Kannada

ಕಟಕರಾಶಿ:

ಈಗ ನಿಮಗೆ ಗುರುಬಲ ಇದೆ. ಲಾಭಸ್ಥಾನದಲ್ಲಿ ಇರುವ ಗುರು ನೇರವಾಗಿದ್ದು ನೀವು ಮಾಡುವ ಕೆಲಸಕ್ಕೆ ಅಡೆತಡೆಗಳನ್ನು ನಿವಾರಣೆ ಮಾಡಿ ನಿಮ್ಮ ಯೋಜನೆಗಳು ಫಲಪ್ರದವಾಗುವ ಹಾಗೆ ಮಾಡುತ್ತಾನೆ. ಈ ತಿಂಗಳ ಕೊನೆಗೆ ಅಷ್ಟಮ ಶನಿಯಿಂದ ಸಂಪೂರ್ಣ ಬಿಡುಗಡೆ ದೊರೆತು ನೀವು ಸಂಕಟಗಳಿಂದ ಹೊರಬರುತ್ತೀರಿ. ಈಗಾಗಲೇ ನಿಮಗೆ ಶುಭಸೂಚನೆ ದೊರೆಯುತ್ತಿದೆ. ಮನಸ್ಸಿಗೆ ಆಹ್ಲಾದ ಎನಿಸುತ್ತದೆ.

ನಿಂತು ಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರ ಬುಧ ಇರುವುದು ವಿಹಾರ, ಯಾತ್ರೆ ಸತ್ಸಂಗ, ಧನಲಾಭ ಮುಂತಾದ ಸತ್ಫಲಗಳು ದೊರೆಯುತ್ತದೆ. ಮುಖ್ಯವಾಗಿ ಈ ತಿಂಗಳಲ್ಲಿ ನೀವು ಮಹಾನ್ ಕಂಟಕದಿಂದ ಹೊರಬರುತ್ತೀರಿ. ಈ ಎರಡೂವರೆ ವರ್ಷಗಳಿಂದ ಬಹಳ ನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಸುಖಪಡುವ ಭಾಗ್ಯ ನಿಮ್ಮದು.

March 2025 Monthly Horoscope in Kannada

ಸಿಂಹರಾಶಿ:

ನಿಮಗೆ ಈ ಮಾಸ ಪೂರ್ತಿ ಕೊಂಚ ಆತಂಕದ ವಾತಾವರಣ ಇರುತ್ತದೆ. ಆದರೆ ಕೆಲವು ಸಾಲಗಳ ವಸೂಲಿ ಆಗುತ್ತದೆ. ಮೇ ತನಕ ಗುರುಬಲ ಇಲ್ಲದಿರುವುದರಿಂದ ಯಾವುದೇ ಯೋಜನೆಗಳನ್ನು ಜಾರಿಮಾಡುವಾಗ ಬಹಳ ಜವಾಬ್ದಾರಿಯಿಂದ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಮನೆ ದೇವರ ಪ್ರಾರ್ಥನೆ ಪೂಜೆ ಅವಶ್ಯ. ವಿಷ್ಣುಸಹಸ್ರನಾಮ ಪ್ರತಿದಿನ ಹೇಳಿಕೊಳ್ಳಿ.

ಬುಧ, ಶುಕ್ರ ರಾಹುವಿನ ಜೊತೆ ಇದ್ದಾರೆ. ಅಷ್ಟಮ ರಾಹು ಶುಭಕರನಲ್ಲದಿದ್ದರೂ ಬುಧ ಹಾಗೂ ಶುಕ್ರರ ಯುತಿಯೋಗದಲ್ಲಿ ಇರುವುದರಿಂದ ಕೆಡುಕು ಸಂಭವಿಸದಂತೆ ಕಾಪಾಡುತ್ತದೆ. ಆದರೆ ಕೊಂಚ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಉಸಿರಾಟ, ಅಲರ್ಜಿ, ಕಿವಿಮೂಗು ಗಂಟಲು ತೊಂದರೆ ಬರಬಹುದು. ಲಾಭಸ್ಥಾನದಲ್ಲಿ ಕುಜ ಇದ್ದು ಅಗ್ನಿಗೆ ಅಥವಾ ವಿದ್ಯುತ್ ಗೆ ಸಂಬಂಧ ಪಟ್ಟ ಕೆಲಸಗಳಲ್ಲಿ ಲಾಭ ಇದೆ.

March 2025 Monthly Horoscope in Kannada

ಕನ್ಯಾರಾಶಿ:

ಈಗ ನಿಮಗೆ ಗುರುಬಲ ಶನಿಬಲ ಎಲ್ಲವೂ ಇದೆ. ಈಗ ಸಮಯ ಆಹ್ಲಾದಕರವಾಗಿದೆ, ಆದರೆ ಶನಿ ಇನ್ನು ಕೆಲವೇ ದಿಗಳಲ್ಲಿ ಆರನೇ ಮನೆಯಿಂದ ಏಳನೇ ಮನೆಗೆ ಪ್ರವೇಶವಾಗುತ್ತಾನೆ. ಶನಿಯ ಬಲ ನಿಮಗೆ ಕಡಿಮೆ ಆಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ರಾಹು ಆರನೇ ಮನೆಗೆ ಬಂದು ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಒಳ್ಳೆಯ ಫಲಗಳನ್ನು ನೀಡುತ್ತದೆ.

ಆರೋಗ್ಯ ಸುಧಾರಿಸುತ್ತದೆ. ಮುಂದಿನ ದಿನಗಳಲ್ಲಿ ಗುರುವಿನ ಬದಲಾವಣೆ ನಿಮಗೆ ಅಷ್ಟೊಂದು ಶುಭದಾಯಕವಾಗಿಲ್ಲ. ಹಾಗಾಗಿ ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕ ತಲ್ಲಣಗಳು ಎದುರಾಗಬಹುದು. 14ರ ನಂತರ ಸೂರ್ಯ ಮೀನರಾಶಿಗೆ ಪ್ರವೇಶ ಮಾಡಿ ನಿಮ್ಮ ರಾಶಿಯನ್ನು ವೀಕ್ಷಿಸುವುದರಿಂದ ಉಷ್ಣಪ್ರಕೋಪ ಹೆಚ್ಚಾಗುತ್ತದೆ. ಜಾಗ್ರತೆ ಇರಲಿ.

March 2025 Monthly Horoscope in Kannada

ತುಲಾರಾಶಿ:

ಈಗ ನಿಮಗೆ ಗುರು ಅಷ್ಟಮದಲ್ಲಿ ಹಾಗೂ ಶನಿ ಪಂಚಮದಲ್ಲಿ ಇರುವುದು ಬಹಳ ತ್ರಾಸದಾಯಕವಾಗಿದೆ. ಮಾನಸಿಕ ಅಶಾಂತಿ, ಗೃಹಶಾಂತಿಗೆ ಧಕ್ಕೆ ಬಂದಿದೆ. ಬಹಳ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದೀರಿ. ಆದರೆ ಈ ತಿಂಗಳ ಕೊನೆಯಲ್ಲಿ ಶನಿಯ ಆರನೇಯ ಪ್ರವೇಶದಿಂದ ಪಂಚಮ ಶನಿಯಿಂದ ಮುಕ್ತಿ ದೊರೆತು ಹಗುರವಾಗುತ್ತೀರಿ. ಹಾಗೂ ಮುಂದಿನ ದಿನಗಳಲ್ಲಿ ಗುರುವಿನ ಭಾಗ್ಯಸ್ಥಾನ ಪ್ರವೇಶದಿಂದ ಸಕಲ ವಿಷಯದಲ್ಲೂ ಶುಭಫಲಗಳು ಸಿಗಲಿದೆ.

ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ಸಹಾ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಎಲ್ಲ ವಿಷಯಗಳಲ್ಲೂ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಯಿಸುತ್ತದೆ. ಕೌಟುಂಬಿಕವಾಗಿ ಹಿತಕರ ವಾತಾವರಣ ಉಂಟಾಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿ ದೊರೆಯುವ ಅವಕಾಶ ಇದೆ. ಈ ಮಾಸದ ಆರಂಭದಿಂದಲೇ ಶುಭಶಕುನಗಳು ಗೋಚರವಾಗುತ್ತದೆ.

March 2025 Monthly Horoscope in Kannada

ವೃಶ್ಚಿಕರಾಶಿ:

ಈಗ ನಿಮಗೆ ಏಳರಲ್ಲಿ ಗುರು ಹಾಗೂ ಲಾಭಸ್ಥಾನದಲ್ಲಿ ಕೇತು ಇದ್ದು ಬಹಳಷ್ಟು ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ಹಣದ ಹರಿವು ಕೂಡಾ ಉತ್ತಮವಾಗಿದೆ. ನಿಮ್ಮ ಯೋಜನೆಗಳು ಸಫಲವಾಗಿ ಉತ್ತಮ ಫಲ ನೀಡುತ್ತಿದೆ. ಐದನೇ ಮನೆಯಲ್ಲಿ ಬುಧ, ಶುಕ್ರ ಇರುವುದು ಕೂಡ ನಿಮಗೆ ಸಾಕಷ್ಟು ಬಲ ನೀಡುತ್ತದೆ. ಯಶಸ್ಸಿನಹಾದಿಯಲ್ಲಿ ಸಾಗುತ್ತಿದ್ದೀರಿ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇದೆ.

ಒಳ್ಳೆಯ ಅವಕಾಶಗಳು ಈಗ ನಿಮಗೆ ಸಿಗುವ ಕಾಲ. ಈ ತಿಂಗಳ ಕೊನೆಯಲ್ಲಿ ಶನಿಯ ಪಂಚಮ ಸ್ಥಾನ ಪ್ರವೇಶದಿಂದ ಸರಾಗ ಜೀವನದಲ್ಲಿ ಕೊಂಚ ಅಡೆತಡೆಗಳು ಎದುರಾಗುತ್ತದೆ. ನೀವು ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯವಾಗದೆ ಶ್ರಮ ಪಡುತ್ತೀರಿ. ಸಾಕಷ್ಟು ಖರ್ಚುಗಳು ಇವೆ. ಶನಿ ಸವಾಲುಗಳನ್ನು ಕೊಡುತ್ತಾನೆ, ಹನುಮಾನ್ ಚಾಲೀಸ ಪಠಿಸಿ. ಕುಟುಂಬದವರ ಆರೋಗ್ಯದ ಬಗ್ಗೆಯೂ ಗಮನ ಇರಲಿ.

March 2025 Monthly Horoscope in Kannada

ಧನಸ್ಸುರಾಶಿ:

ಈಗ ನಿಮಗೆ ಶನಿ ಮೂರನೇ ಮನೆಯಲ್ಲಿ, ಗುರು ಆರನೇ ಮನೆಯಲ್ಲಿ ರಾಹುಕೇತುಗಳು ನಾಲ್ಕನೇ-ಹತ್ತನೇ ಮನೆಯಲ್ಲಿ ಇದ್ದಾರೆ. ಗುರುಬಲ ಇಲ್ಲದಿರುವುದರಿಂದ ಪ್ರಗತಿ ನಿಂತು ನಿಂತು ಮುಂದೆ ಸಾಗುತ್ತಿದೆ. ಆರನೇ ಮನೆಯ ಗುರುವಿನಿಂದ ಮಾನಸಿಕ ಕ್ಲೇಶ ಇರುತ್ತದೆ. ಆರೋಗ್ಯದಲ್ಲೂ ತೊಂದರೆಗಳು ಕಾಣಿಸಬಹುದು. ಯಾವುದನ್ನು ನೀವು ಮರೆತು ಬಿಟ್ಟಿರುತ್ತೀರೋ ಆ ತೊಂದರೆ ಮತ್ತೆ ಮೇಲೇಳಬಹುದು. ಸರಿಯಾದ ವೈದ್ಯರಿಗೆ ತೋರಿಸಿ.

ಧನ್ವಂತರಿ ಜಪ ಮಾಡಿ. ಮುಂದಿನ ದಿನಗಳಲ್ಲಿ ಏಳನೇ ಮನೆಗೆ ಗುರು ಹಾಗೂ ಮೂರನೇ ಮನೆಗೆ ರಾಹು ಪ್ರವೇಶವಾಗುವುದರಿಂದ ಪರಿಸ್ಥಿತಿ ಹತೋಟಿಗೆ ಬಂದು ನೀವು ಎಣಿಸಿದ ಕೆಲಸಕಾರ್ಯಗಳಲ್ಲಿ ಜಯ ಯಶಸ್ಸು ಸಿಗುತ್ತದೆ. ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನಾಲ್ಕರಲ್ಲಿ ಶುಕ್ರ, ಬುಧ ಇರುವುದು ವಾಹನದಿಂದ ಲಾಭ, ಬಂಧುವರ್ಗದವರಿಂದ ಸಹಕಾರ ಸಹಾಯ ಬೆಂಬಲ ಸಿಗುತ್ತದೆ. ತಾಯಿ ಸಮಾನರಾದವರಿಂದ ಸಹಾಯ ಇದೆ. ವಿದೇಶ ಯಾತ್ರೆ ಮಾಡಬಯಸುವವರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ.

March 2025 Monthly Horoscope in Kannada

ಮಕರರಾಶಿ:

ಈ ತಿಂಗಳ ಕೊನೆಯಲ್ಲಿ ಶನಿಯ ಮೂರನೇ ಮನೆಯ ಪ್ರವೇಶ ನಿಮಗೆ ಒಂದು ಮಹೋನ್ನತ ಅಭಿವೃದ್ಧಿಯನ್ನು ತೋರಿಸುತ್ತಿದೆ. ಇದುವರೆಗೂ ಇದ್ದ ಸಾಡೆಸಾತಿ ಪ್ರಭಾವದಿಂದ ಮುಂಕ್ತಿಹೊಂದಿ ಪ್ರಕಾಶಿಸುತ್ತೀರಿ. ಏಳುವರ್ಷದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಸುಖಪಡುವ ಕಾಲ ಬಂದಿದೆ. ಕೀರ್ತಿ ಯಶಸ್ಸು ನಿಮ್ಮ ಹೆಗಲೇರಲಿದೆ. ನಿಮ್ಮನ್ನು ವಿರೋಧಿಸಿದವರು ಈಗ ನಿಮ್ಮ ಬಳಿಯೇ ಬರುತ್ತಾರೆ. ಸ್ನೇಹಹಸ್ತ ಚಾಚುತ್ತಾರೆ.

ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುವಿನ ಅನುಗ್ರಹ ದೊರೆತು ಎಲ್ಲವೂ ಸರಾಗವಾಗಿ ನೆರವೇರುತ್ತದೆ. ಶತ್ರುಗಳು ದೂರವಾಗುತ್ತಾರೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಯ್ನು ಕಾಣುತ್ತೀರಿ. ಮನಸ್ಸಿಗೆ ಸಂತಸ ಸಿಗಲಿದೆ. ಎಲ್ಲ ಅವಕಾಶಗಳು ನಿಮ್ಮಬಳಿ ಅರಸಿ ಬರುತ್ತದೆ. ಶುಭಶಕುನಗಳು ಈಗಿನಿಂದಲೇ ನಿಮ್ಮ ಅನುಭವಕ್ಕೆ ಬರುತ್ತದೆ.

March 2025 Monthly Horoscope in Kannada

ಕುಂಭರಾಶಿ:

ಈ ತಿಂಗಳ ಕೊನೆಯಲ್ಲಿ ಶನಿ ನಿಮ್ಮ ರಾಶಿಯನ್ನು ಬಿಟ್ಟು ಮೀನರಾಶಿಗೆ ಪ್ರವೇಶವಾಗುತ್ತಾನೆ. ಇದರಿಂದ ಸಾಡೆಸಾತಿ ಶನಿಯ ಮೂರನೇ ಹಂತಕ್ಕೆ ಪ್ರವೇಶ ಮಾಡುತ್ತೀರಿ. ಇದು ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಸಹಾಯವಾಗಲಿದೆ. ಈಗ ನಿಮಗೆ ಚತುರ್ಥದಲ್ಲಿ ಇರುವ ಗುರುವಿನಿಂದ ಜೀವನದಲ್ಲಿ ಅಡೆತಡೆಗಳು ನಕಾರಾತ್ಮಕ ಸಂಗತಿಗಳೇ ಕಾಣುತ್ತಿವೆ. ಯಾವ ಕೆಲಸಕ್ಕೆ ಕೈಹಾಕಿದರೂ ಮುಂದುವರೆಯುವುದಿಲ್ಲ.

ಕೋರ್ಟು ಕಚೇರಿ ಅಲೆದಾಟ ಧನಹಾನಿ ಮಾನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಗುರು ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶ ಮಾಡಿದಾಗ ಕೊಂಚ ಉಸಿರಾಡುವಂತಾಗಿ ಕೆಲವು ಶುಭ ಸೂಚನೆಗಳು ಸಿಗುತ್ತದೆ. ಒತ್ತಡಗಳಿಂದ ದೂರವಾಗುತತೀರಿ. ಕತ್ತಿನ ತೂಗುತ್ತಿರುವ ಕತ್ತಿಯಿಂದ ತಪ್ಪಿಸಿಕೊಳ್ಳುತ್ತೀರಿ. ಈ ತಿಂಗಳ ಕೊನೆಯಿಂದ ಸಾಡೆಸಾತಿಯ ಕೊನೆಯಭಾಗಕ್ಕೆ ಬರುವುದರಿಂದ ಹೆಚ್ಚು ತೊಂದರೆಗಳು ಇರುವುದಿಲ್ಲ. ಮುಂದೆ ಗುರುಬಲವೂ ಸಿಗುವವುದರಿದ ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಈ ತಿಂಗಳ ಪೂರ್ತಿ ಎರಡನೇ ಮನೆಯಲ್ಲಿ ಶುಕ್ರ ಬುಧ ಇರುವುದು ನಿಮಗೆ ಶುಭಫಲಗಳನ್ನು ಕೊಡುತ್ತದೆ.

March 2025 Monthly Horoscope in Kannada

ಮೀನರಾಶಿ:

ಈಗ ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದು ಬಹಳ ಕಷ್ಟನಷ್ಟ ಅನುಭವಿಸುತ್ತಿದ್ದೀರಿ. ಗುರುಬಲವೂ ಈಗ ಸಧ್ಯಕ್ಕೆ ಇರುವುದಿಲ್ಲ. ಈಗ ಮೂರನೇ ಮನೆಯಲ್ಲಿ ಇರುವ ಗುರು ಅಲ್ಪ ಭಾಗ್ಯಗಳನ್ನು ಕೊಡುತ್ತಾನೆ. ಕೌಟುಂಬಿಕ ಜೀವನ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ಈ ತಿಂಗಳ ಕೊನೆಯಲ್ಲಿ ಶನಿಯು ನಿಮ್ಮ ರಾಶಿಯನ್ನೇ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ಸಾಡೆಸಾತಿಯ ಮೊದಲ ಭಾಗ ಮುಗಿಯುತ್ತದೆ.

ಈಗ ಬಹಳಷ್ಟು ಹಣಕಾಸಿನ ಖರ್ಚುಗಳು ಆಗಿವೆ. ಅದು ಕೊಂಚ ಹಿಡಿತಕ್ಕೆ ಬರುತ್ತದೆ. ಮುಂದೆ ಕೇತು ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಸ್ಥಿತಿ ಕೊಂಚಮಟ್ಟಿಗೆ ಸುಧಾರಿಸುತ್ತದೆ. ಈ ತಿಂಗಳು ಶುಕ್ರ ಹಾಗೂ ಬುಧ ನಿಮ್ಮ ರಾಶಿಯಲ್ಲೇ ಇರುತ್ತಾರೆ. ಹಾಗಾಗಿ ಕೆಲವು ಶುಭಸಂಗತಿಗಳು ನಿಮಗೆ ಸಂತೋಷ ಕೊಡುತ್ತದೆ. ಏನೇ ಆದರೂ ಯಾವುದೇ ಕೆಲಸ ಸರಿಯಾಗಿ ಯೋಚಿಸಿ ನಿರ್ಧಾಋ ಮಾಡಿ. ತಣ್ಣೀರನ್ನೂ ತಣಿಸಿ ಕುಡಿಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+