Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ

ಹಿಂದೂ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ ಪ್ರಮುಖ ಸ್ಥಾನವಿದೆ. ಮನೆ ಮತ್ತು ಸುತ್ತಮುತ್ತಲಿನ ವಾತಾವರಣ ಸರಿಯಾಗಿದ್ದರೆ, ಜೀವನದಲ್ಲಿ ಶಾಂತಿ, ಸಮೃದ್ದಿ ಮತ್ತು ಆರ್ಥಿಕ ಸ್ಥಿತಿ ಬರುತ್ತದೆ ಎಂದು ನಂಬಿಕೆ ಇದೆ. ಇಂದಿನ ದಿನಗಳಲ್ಲಿ ಹಲವರು ಎಷ್ಟು ಹಣ ಸಂಪಾದಿಸಿದರು ಅದು ಉಳಿಯುವುದಿಲ್ಲ, ಎನ್ನುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ವಾಸ್ತು ಶಾಸ್ತ್ರದ ಕೆಲವು ಸರಳ ಉಪಾಯಗಳನ್ನು ನಾವು ಅಳವಡಿಸಿಕೊಳ್ಳುವುದು ಉತ್ತಮ ಎಂದು ವಾಸ್ತು ತಜ್ಞರ ಹೇಳುತ್ತಾರೆ. ಇದಕ್ಕೆ ಪೂರಕವಾಗುವ ಹಾಗೆ ಮಂಗಳವಾರ ಮತ್ತು ಶುಕ್ರವಾರ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡುವುದು ಶುಭ ಎಂದು ಹೇಳಲಾಗುತ್ತದೆ. ಈ ದಿನಗಳು ದೇವತೆಗಳಿಗೆ ಸಂಬಂಧಿಸಿದ ಶುಭಕರವಾದ ದಿನ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಹಣ ಉಳಿಸಲು ಸಾಧ್ಯಾವಾಗುತ್ತದೆ ಎಂದು ನಂಬಲಾಗಿದೆ.

ಮನೆಯ ಉತ್ತರ ದಿಕ್ಕು

ಇನ್ನು ಮನೆಯ ವಾಸ್ತು ಶಾಸ್ತ್ರ ನೋಡುವುದಾದರೆ ಮನೆಯ ಉತ್ತರ ದಿಕ್ಕು ಸಂಪತ್ತಿನ ದಿಕ್ಕು ಎಂದು ಹೇಳಲಾಗುತ್ತದೆ. ಆದ್ದರಿಂದ ಕುಬೇರನ ಪೋಟೋ ಇಡುವುದು ಒಳ್ಳೆಯದು ಎಂದು ಎಂಬ ನಂಬಿಕೆ. ಕುಬೇರನು ಸಂಪತ್ತಿನ ಅಧಿಪತಿ ಎಂಬ ನಂಬಿಕೆ. ಈ ಕ್ರಮದಿಂದ ನಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲು ಸಹಾಯವಾಗುತ್ತದೆ ಎಂದು ತಜ್ಙರ ಅಭಿಪ್ರಾಯ ಆಗಿದೆ.

Money Saving Vastu Tips

ಹಣವನ್ನು ಇಡುವ ಲಾಕರ್ ಅಥವಾ ಕಬ್ಬಿಣದ ಕಪಾಟುನ್ನು ನೈಋತ್ಯ ಮೂಲೆಯಲ್ಲಿ ಇಡುವುದು ಉತ್ತಮ. ಅದರ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ಇಟ್ಟರೆ ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.

ಹಣವನ್ನು ಇಡುವ ಲಾಕರ್ ನೇರವಾಗ ನೇಲಕ್ಕೆ ತಾಕವುಂತೆ ಇಡಬಾರದು, ಅದಕ್ಕೆ ಮರದ ಸ್ಟೂಲ್ ಅಥವಾ ಪಟ್ಟಿಯನ್ನು ಇಡುವುದು ಉತ್ತಮ. ಇದು ನಕಾರತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂದು ವಾಸ್ತು ಹೇಳುತ್ತದೆ.

ಮನೆಯ ಈಶಾನ್ಯ ದಿಕ್ಕು

ಮನೆಯ ಈಶಾನ್ಯ ದಿಕ್ಕು ಯಾವಾಗಲೂ ಸ್ವಚ್ಚವಾಗಿ ಮತ್ತು ಖಾಲಿಯಾಗಿ ಇಡಬೇಕು. ಇಲ್ಲಿ ಭಾರವಾಗಿರುವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು. ಈ ದಿಕ್ಕಿನಲ್ಲಿ ನೀರಿನ ಪಾತ್ರೆ ಅಥವಾ ಸಣ್ಣ ಕಾರಂಜಿ ಇಡುವುದುದರಿಂದ ಸಕಾರತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದಲ್ಲದೆ ಉತ್ತರ ದಿಕ್ಕನ್ನು ನೀಲಿ ಬಣ್ಣದಲ್ಲಿ ಅಲಂಕರಿಸುವುದು ಅಥವಾ ಹಣದ ಗಿಡ (ಮನಿ ಪ್ಲಾಂಟ್) ಬೆಳೆಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಉತ್ತರ ಗೋಡೆಯ ಮೇಲೆ ಕುಬೇರನ ಯಂತ್ರ ಅಥವಾ ಗಜಲಕ್ಷ್ಮಿ ರೂಪದ ಲಕ್ಷ್ಮಿ ದೇವಿಯ ಪೋಟೋವನ್ನು ಇಡುವುದರಿಂದ ಆದಾಯದ ಮೂಲಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ.

ಈ ರೀತಿಯ ಸರಳ ವಾಸ್ತು ಶಾಸ್ತ್ರದ ಉಪಾಯಗಳನ್ನು ಅನುಸರಿಸುವುದರಿಂದ ಹಣಕಾಸಿನ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+