ಮೋದಿ, ಅನಂತ್, ಪ್ರತಾಪ್, ರಾಹುಲ್, ಪ್ರಿಯಾಂಕಾ ಜಾತಕ ವಿಮರ್ಶೆ

Recommended Video

      ರಾಜಕೀಯ ನಾಯಕರ ಜಾತಕ ವಿಮರ್ಶೆ | Horoscope Analysis of great Political Leaders | Oneindia Kannada

      "ಪ್ರಧಾನಿ ನರೇಂದ್ರ ಮೋದಿ ಅವರ ಜಾತಕದಲ್ಲಿ ಹಲವಾರು ಯೋಗಗಳಿವೆ. ಇನ್ನೂ ಏಳು ವರ್ಷ ಅಂದರೆ 2024ರ ವರೆಗೆ ಅವರ ಅಧಿಕಾರಕ್ಕೆ ಯಾವುದೇ ತೊಂದರೆ ಇಲ್ಲ. ಇನ್ನು ಅವರ ಆರೋಗ್ಯ, ಆಯುಷ್ಯದ ಬಗ್ಗೆ ಟಿವಿಗಳಲ್ಲಿ ಹೇಳುತ್ತಿರುವ ಜ್ಯೋತಿಷ್ಯವೆಲ್ಲ ಶುದ್ಧ ಸುಳ್ಳು. ಬೇಕಿದ್ದರೆ ಬರೆದಿಟ್ಟುಕೊಳ್ಳಿ: ಕನಿಷ್ಠ ಎಂಬತ್ತೊಂದು ವರ್ಷ ಅವರ ಆಯುಷ್ಯ- ಆರೋಗ್ಯ ಚೆನ್ನಾಗಿರುತ್ತದೆ".

      -ಹೀಗೆಂದವರು ಜ್ಯೋತಿಷಿಗಳಾದ ಕಬ್ಯಾಡಿ ಜಯರಾಮಾಚಾರ್ಯ. ಈಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜಾತಕ ರೀತ್ಯಾ ಗಂಡಾಂತರ ಇದೆ ಎಂದು ವಿವಿಧ ಜ್ಯೋತಿಷಿಗಳು ಹೇಳುತ್ತಿರುವ ಎಚ್ಚರಿಕೆಯ ಮಾತುಗಳ ಬಗ್ಗೆ ಲಘು ದಾಟಿಯಲ್ಲಿ ಉತ್ತರಿಸಿದ ಅವರು, ಮೋದಿ ಜಾತಕದಲ್ಲಿ ಚಕ್ರವರ್ತಿ ಆಗುವಂಥ ಯೋಗವಿದೆ. ಮತ್ತು ಶುಭ ಯೋಗಗಳು ಹಾಗೂ ಮಹಾ ಯೋಗಗಳು ಎಂದು ಪರಿಗಣಿಸುವುದು ಬಹಳ ಇವೆ ಎಂದರು.

      ಜ್ಯೋತಿಷಿಗಳಾದ ಕಬ್ಯಾಡಿ ಜಯರಾಮಾಚಾರ್ಯ ಅವರ ಸಂದರ್ಶನದ ಮುಂದುವರಿದ ಭಾಗ ಇದು. ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಭವಿಷ್ಯ ನುಡಿದ ಅವರು, ಮೋದಿ ಅವರಿಗೆ ಗಂಡಾಂತರ ಇದೆ ಎಂದು ಭವಿಷ್ಯ ನುಡಿಯುತ್ತಾ ಕೂತವರನ್ನು ನೋಡಿದಾಗ ನಖಶಿಖಾಂತ ಸಿಟ್ಟು ಬರುತ್ತದೆ ಎಂದರು.

      ಯಾವ ಪಕ್ಷ, ನಾಯಕರ ಬಗ್ಗೆ ಜಯರಾಮಾಚಾರ್ಯರು ಏನು ಹೇಳಿದರು ಎಂಬುದನ್ನು ಮುಂದೆ ಓದಿ.

      ಜಾತಕ ಪರಾಂಬರಿಸಿ ಟಿಕೆಟ್ ನೀಡಲಾಗುತ್ತಿದೆ

      ಜಾತಕ ಪರಾಂಬರಿಸಿ ಟಿಕೆಟ್ ನೀಡಲಾಗುತ್ತಿದೆ

      ರಾಜ್ಯದಲ್ಲಿ ಒಂದು ಪಕ್ಷವು ತನ್ನ ಅಭ್ಯರ್ಥಿಗಳ ಆಯ್ಕೆಯನ್ನು ಜಾತಕ ಪರಾಂಬರಿಸಿ ಮಾಡುತ್ತಿದೆ. ಕೆಲವು ಜ್ಯೋತಿಷಿಗಳನ್ನು ನೇಮಿಸಿ, ಅವರ ಅಭಿಪ್ರಾಯ ಪಡೆದು, ಗೆಲ್ಲುವ ಅವಕಾಶ ಹೆಚ್ಚಿರುವವರಿಗೆ ಟಿಕೆಟ್ ನೀಡುವ ಉದ್ದೇಶ ಅವರದು. ಜ್ಯೋತಿಷಿಗಳ ಭವಿಷ್ಯ ಸರಿಯಾದರೆ ಉತ್ತಮ ಫಲಿತಾಂಶ ಬರುವ ಸಾಧ್ಯತೆಯಿದೆ.

      ಪ್ರಮುಖ ಸ್ಥಾನದಲ್ಲಿ ಪ್ರತಾಪ್ ಸಿಂಹ

      ಪ್ರಮುಖ ಸ್ಥಾನದಲ್ಲಿ ಪ್ರತಾಪ್ ಸಿಂಹ

      ನಮ್ಮ ರಾಜ್ಯ ನಾಯಕರ ಪೈಕಿ ನನಗೆ ಚೆನ್ನಾಗಿ ಗೊತ್ತಿರುವ, ನಾನು ನೋಡಿರುವ ಜಾತಕದ ಪ್ರಕಾರ ಸಂಸದ ಪ್ರತಾಪ ಸಿಂಹ ಅವರಿಗೆ ಉತ್ತಮ ಭವಿಷ್ಯವಿದೆ. ಗುರು, ಚಂದ್ರ, ಕುಜ, ರವಿ ಅವರ ಜಾತಕದಲ್ಲಿ ಪ್ರಬಲವಾಗಿವೆ. ರಾಜ್ಯ ಅಥವಾ ಕೇಂದ್ರದಲ್ಲಿ ಪ್ರಮುಖ ಸ್ಥಾನವನ್ನು ಅವರು ಅಲಂಕರಿಸುತ್ತಾರೆ. ಈಗಿನ್ನೂ ಉತ್ತಮ ಯೋಗಗಳು ಆರಂಭವಾಗಿವೆ.

      ಅನಂತಕುಮಾರ್ ಗೆ ಕೊನೆ ಕ್ಷಣದಲ್ಲಿ ಕೈ ಕೊಡುವ ಅದೃಷ್ಟ

      ಅನಂತಕುಮಾರ್ ಗೆ ಕೊನೆ ಕ್ಷಣದಲ್ಲಿ ಕೈ ಕೊಡುವ ಅದೃಷ್ಟ

      ಕೇಂದ್ರ ಸಚಿವರಾಗಿರುವ ಅನಂತಕುಮಾರ್ ಅವರ ಜಾತಕದಲ್ಲಿ ಕೆಲ ಮಟ್ಟಿಗಾದರೂ ಗ್ರಹಾನುಕೂಲ ಇದ್ದಿದ್ದರೆ ಅವರಿನ್ನೂ ಎತ್ತರದ ಸ್ಥಾನಕ್ಕೆ ತಲುಪುತ್ತಿದ್ದರು. ಪ್ರತಿ ಸಲ ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಅನಂತಕುಮಾರ್ ಹೆಸರು ಕೇಳಿಬರುತ್ತದೆ. ಕೊನೆ ಕ್ಷಣದಲ್ಲಿ ತಪ್ಪಿ ಹೋಗುತ್ತದೆ. ಸ್ವಲ್ಪ ಅದೃಷ್ಟ ಕೈ ಹಿಡಿದರೂ ಅನಂತಕುಮಾರ್ ಸಾಧನೆ ಇನ್ನೂ ಹೆಚ್ಚುತ್ತಿತ್ತು. ರಾಜಕಾರಣದಲ್ಲಿ ಸದಾ ಗೌರವಾನ್ವಿತರಾಗಿ ಚಲಾವಣೆಯಲ್ಲಿರುತ್ತಾರೆ. ಯಾವಾಗೆಲ್ಲ ಅವರು ಪ್ರತಿನಿಧಿಸುವ ಪಕ್ಷ ಅಧಿಕಾರಕ್ಕೆ ಬರುತ್ತದೋ ಆಗೆಲ್ಲ ಪ್ರಮುಖ ಸ್ಥಾನ ಪಡೆಯುತ್ತಾರೆ. ಆದರೆ ನಂಬರ್ ಒನ್ ಸ್ಥಾನಕ್ಕೆ ಅಡೆತಡೆ ಎದುರಾಗುತ್ತದೆ.

      ಇಬ್ಬರ ಜಾತಕದಲ್ಲೂ ಮಹತ್ತರವಾದ ಯೋಗಗಳಿಲ್ಲ

      ಇಬ್ಬರ ಜಾತಕದಲ್ಲೂ ಮಹತ್ತರವಾದ ಯೋಗಗಳಿಲ್ಲ

      ರಾಹುಲ್ ಗಾಂಧಿ ಜಾತಕದ ಪ್ರಕಾರ ಅವರು ರಾಜಕೀಯದಲ್ಲಿ ಚಲಾವಣೆಯಲ್ಲಿರುತ್ತಾರೆ ವಿನಾ ಭಾರತದ ಪ್ರಧಾನಿ ಆಗುವ ಸಂಭವ ತೀರಾ ಕಡಿಮೆ. ಪ್ರಿಯಾಂಕಾ ವಾಧ್ರಾ ರಾಹುಲ್ ಗಾಂಧಿಗಿಂತ ಬುದ್ಧಿವಂತೆ. ಆದರೆ ಆಕೆಗೂ ರಾಷ್ಟ್ರದ ನಾಯಕಿ ಆಗುವ ಸಾಧ್ಯತೆಗಳು ಅವರ ಜಾತಕದಲ್ಲೂ ಕಡಿಮೆಯಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+