44, 88, 999 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಇದಿಯಾ? ಇದನ್ನು ಓದಲೇಬೇಕು
ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ. ಆದರೆ ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಸಂಪಾದಿಸುವ ಹಣವನ್ನು ಉಳಿಸಲು ಸಾಧ್ಯವಾಗದೇ ಅದೆಷ್ಟೋ ಜನ ಚಿಂತೆಗೀಡಾಗಿರುತ್ತಾರೆ. ಉದ್ಯೋಗ, ಸಾಲದ ಸಮಸ್ಯೆ ಹೀಗೆ ಹಣಕಾಸಿನ ವಿಚಾರದಲ್ಲಿ ನಾನಾ ಸಮಸ್ಯೆಗಳನ್ನು ಜನ ಎದುರಿಸುತ್ತಾರೆ. ಆದರೆ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇರುವಂತೆ ಹಣಕಾಸಿನ ಸಮಸ್ಯೆಗೂ ಸರಳ ಪರಿಹಾರವಿದೆ. ನಾವು ಬಳಸುವ ಮೊಬೈಲ್ ಸಂಖ್ಯೆಗಳ ಬದಲಾವಣೆಯಿಂದ ನಮ್ಮ ಅದೃಷ್ಟ ಖುಲಾಯಿಸಬಹುದು ಎನ್ನುತ್ತಾರೆ ಮೊಬೈಲ್ ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್.
ಹೌದು ರಾಜೇಶ್ ರಿವೀಲ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಮೊಬೈಲ್ ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್ ಅವರು ಮೊಬೈಲ್ ಸಂಖ್ಯೆಗಳು ಹೇಗಿದ್ದರೆ ಒಳ್ಳೆಯದು? ಯಾವ ನಂಬರ್ ಇದ್ದರೆ ಉತ್ತಮ ಎನ್ನುವುದನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಮೊಬೈಲ್ ಸಂಖ್ಯೆಯಲ್ಲಿ ಯಾವುದು ಶುಭ? ಯಾವ ಸಂಖ್ಯೆ ಅಶುಭ? ಯಾವ ನಂಬರ್ ಇದ್ದರೆ ಜನ ಹೇಗಿರುತ್ತಾರೆ ಎನ್ನುವುದನ್ನು ತಿಳಿಯೋಣ.

ನಮ್ಮ ಜೀವನ ಸಂಖ್ಯೆಗಳ ಮೇಲೆ ನಿರ್ಮಿತವಾಗಿದೆ. ಮನೆ ನಂಬರ್, ಫ್ಲೋರ್ ನಂಬರ್, ಮೊಬೈಲ್ ನಂಬರ್, ವಾಹನ ನಂಬರ್ ಎಲ್ಲದಕ್ಕೂ ನಂಬರ್‌ಗಳು ಇವೆ. ಹೀಗಾಗಿ ನಂಬರ್‌ಗಳು ನಮ್ಮ ಜೀವನದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಮೊಬೈಲ್ ನಂಬರ್, ಯಾಕೆಂದರೆ ದಿನದ 24 ಗಂಟೆ ನಮ್ಮ ಜೊತೆಗೆ ಇರುವುದು ಮೊಬೈಲ್ ಆಗಿರುವುದರಿಂದ ಅದರ ಸಂಖ್ಯೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಒಂದು ಮೊಬೈಲ್ ನಂಬರ್‌ನಲ್ಲಿ 10 ನಂಬರ್‌ಗಳು ಇರುತ್ತವೆ. ಹಾಗಾದರೆ ನಿಮ್ಮ ಮೊಬೈಲ್ ನಂಬರ್‌ನಲ್ಲಿ ಯಾವ ಸಂಖ್ಯೆಗಳು ಇದ್ದರೆ ಶುಭ ಯಾವ ಸಂಖ್ಯೆ ಇಲ್ಲದೆ ಇದ್ದರೆ ಉತ್ತಮ ಎಂದು ಈಗ ತಿಳಿಯೋಣ.
* ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 11 ಪಕ್ಕದಲ್ಲಿ ಇದ್ದರೆ (ಉದಾ:98241184..) ಸಕರಾತ್ಮಕ ಶಕ್ತಿ ಹೆಚ್ಚು. ಆದರೆ ಸ್ವಲ್ಪ ದುರಹಂಕಾರ ನಿಮ್ಮಲ್ಲಿ ಕಂಡುಬರುತ್ತದೆ. ಅಲ್ಲದೆ 111 ಸಂಖ್ಯೆ ಇದ್ದರೆ ಅಂಥವರು ತಮಗೆ ಇಷ್ಟ ಬಂದ ಹಾಗೇ ಮಾಡುತ್ತಾರೆ. ಯಾವುದೇ ಸಲಹೆ ತೆಗೆದುಕೊಳ್ಳುವುದಿಲ್ಲ. ಅವರಿಗೆ ಇಷ್ಟಬಂದಂತೆ ಮಾಡುತ್ತಾರೆ. ಹೀಗಾಗಿ 11 ಮತ್ತು 111 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಇದ್ದರೆ ಮೊಬೈಲ್ ಸಂಖ್ಯಾಶಾಸ್ತ್ರದ ಪ್ರಕಾರ ಅಷ್ಟೊಂದು ಉತ್ತಮವಲ್ಲ.

* ಇನ್ನೂ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 22 ಇದ್ದರೆ ನೀವು ಬೇರೆಯವರಿಗೆ ಸಹಾಯ ಮಾಡುವಿರಿ. ಆದರೆ ನೀವು ಮುಂದೆ ಹೋಗಲು ಆಗುವುದಿಲ್ಲ. ನೀವು ಬೆಳೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 222 ಇದ್ದರೆ ಏಕಾಂಗಿತನ ಕಾಡುತ್ತದೆ. ಹೀಗಾಗಿ 22 ಮತ್ತು 222 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಇದ್ದರೆ ಮೊಬೈಲ್ ಸಂಖ್ಯಾಶಾಸ್ತ್ರದ ಪ್ರಕಾರ ಶುಭವಲ್ಲ.
* ಹಾಗಾದರೆ ಶುಭ ಸಂಖ್ಯೆ ಯಾವುದು ಅಂದರೆ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 33 ಇದ್ದರೆ ನಿಮ್ಮ ಮೇಲೆ ದೇವರ ಆಶೀರ್ವಾದ ಇದೆ ಎಂದರ್ಥ. ಈ ಸಂಖ್ಯೆ ನಿಮ್ಮ ಮೊಬೈಲ್ ನಂಬರ್ ಆಗಿದ್ದರೆ ತುಂಬಾ ಒಳ್ಳೆಯದು. ಆದರೆ 333 ಇರುವ ಸಂಖ್ಯೆ ಒಳ್ಳೆಯದಲ್ಲಿ. ಇದು ಸೋಮಾರಿತನ ಹೆಚ್ಚಿಸುತ್ತದೆ.
* ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 44 ಇದ್ದರೆ ಒಳ್ಳೆಯದಲ್ಲ. ಈ ಸಂಖ್ಯೆ ಇದ್ದರೆ ಒಬ್ಬ ಮನುಷ್ಯನನ್ನು ಮೇಲಕ್ಕೆ ಕರೆದುಕೊಂಡು ಹೋಗಿ ಕೆಳಗೆ ಎಸೆಯುತ್ತದೆ. ಹೀಗಾಗಿ ಸಾಧ್ಯವಾದಷ್ಟು ಮೊಬೈಲ್ ನಂಬರ್‌ಗಳಲ್ಲಿ 44 ಹಾಗೂ 444 ಕಡೆಗಣಿಸುವುದು ಒಳ್ಳೆಯದು. ಈ ಸಂಖ್ಯೆಗಳು ತುಂಬಾ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ.
* ಇನ್ನೂ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 55 ಇದ್ದರೆ ಒಳ್ಳೆಯದು. ಶಿಕ್ಷಣ ವ್ಯಾವಹಾರದಲ್ಲಿ ಇರುವವರ ಬಳಕೆಗೆ ತುಂಬಾ ಸಹಕಾರಿಯಾದ ಸಂಖ್ಯೆ ಇದಾಗಿದೆ. ಆದರೆ 555 ನಂಬರ್ ಇರಬಾರದು. ಈ ಸಂಖ್ಯೆ ಇದ್ದರೆ ನೀವು ಜನರಿಗೆ ಏನೇ ಹೇಳಿದರು ಅದನ್ನು ತುಂಬಾ ಅಪಾರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿ ಮೊಬೈಲ್ ಸಂಖ್ಯಾಶಾಸ್ತ್ರದ ಪ್ರಕಾರ 55 ಶುಭ ಸಂಖ್ಯೆಯಾದರೆ 555 ಅಶುಭ ಸಂಖ್ಯೆಯಾಗಿದೆ.
* ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 66 ಇದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅಲ್ಲದೆ ಈ ಸಂಖ್ಯೆ ಹಣವನ್ನು ಆಕರ್ಷಿಸುತ್ತದೆ. ಈ ಸಂಖ್ಯೆಯನ್ನು ಹೊಂದಿರುವುದು ತುಂಬಾ ಒಳ್ಳೆಯದು. ಆದರೆ 666 ತೊಂದರೆಯನ್ನುಂಟು ಮಾಡುತ್ತದೆ. ಸಂಬಂಧಗಳಲ್ಲಿ ಸಮಸ್ಯೆಗಳು ಬರುತ್ತವೆ. ಹೀಗಾಗಿ ನಿಮ್ಮ ಮೊಬೈಲ್ ನಂಬರ್ 666 ಇದ್ದರೆ ತೆಗೆದುಹಾಕಿ.
* ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 77 ನಂಬರ್ ಇದ್ದರೆ ವ್ಯವಹಾರ ಮಾಡುವವರಿಗೆ ತುಂಬಾ ಒಳ್ಳೆಯದು. ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವವರಿಗೆ ತುಂಬಾ ಶುಭ ಸಂಖ್ಯೆ ಇದಾಗಿದೆ. ಅತಿ ಆಸೆ ಪಟ್ಟು 777 ಸಂಖ್ಯೆ ಇರುವ ನಂಬರ್ ತೆಗೆದುಕೊಂಡಿದ್ದರೆ ತುಂಬಾ ಕೆಟ್ಟ ಫಲಗಳನ್ನು ನೀಡುತ್ತದೆ. ಜಾಸ್ತಿ ಒಳ್ಳೆಯದಾಗಬೇಕು ಎಂದು 77 ಜೊತೆಗೆ 77 ಸಂಖ್ಯೆ ಇರುವ ಮೊಬೈಲ್ ನಂಬರ್ ಇದ್ದರೂ ಕೂಡ ಒಳ್ಳೆಯದಲ್ಲ. ಹಾಗೊಂದು ವೇಳೆ ಅಂದುಕೊಂಡರೆ 77877 ಇರುವ ಸಂಖ್ಯೆ ಒಳ್ಳೆಯದು. 7777 ಒಟ್ಟಿಗೆ ಇರುವುದು ಶುಭವಲ್ಲ.
* ಇನ್ನೂ 88 ನಂಬರ್ ಇದ್ದರೆ ಅಂತವರು ತುಂಬಾ ಹಾನೆಸ್ಟ್ ಇರುತ್ತಾರೆ. ಆದರೆ ಇದು ತುಂಬಾ ಅನುಕೂಲಕರವಾದ ಸಂಖ್ಯೆ ಅಲ್ಲ. ಹೀಗಾಗಿ ಮೊಬೈಲ್ ಸಂಖ್ಯೆಯಲ್ಲಿ ಯಾವುದೇ ಕಾರಣಕ್ಕೂ 88 ಹಾಗೂ 44 ಇಷ್ಟುಕೊಳ್ಳುವುದು ಒಳ್ಳೆಯದಲ್ಲ. 888 ಸಂಖ್ಯೆಯಂತೂ ಇರಲೇಬಾರದು. ಹೀಗಾಗಿ ಇದರಿಂದ ದೂರವಿರಿ.
* 99 ಅಧಿಕ ಶಕ್ತಿ ಕೊಡುವ ನಂಬರ್ ಆಗಿದೆ. 99 ಮೊಬೈಲ್ ಸಂಖ್ಯೆಯಲ್ಲಿ ಇರಬಹುದು. ಆದರೆ 999 ನಂಬರ್ ಇದ್ದರೆ ವಾದ ಹೆಚ್ಚಾಗುತ್ತದೆ. ಹೆಚ್ಚು ಜಗಳಗಳು ಆಗಬಹುದು. ಹೀಗಾಗು 999 ನಂಬರ್ ಇರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.
ತುಂಬಾ ವರ್ಷಗಳಿಂದ ನಿಮ್ಮ ಬಳಿ ಈ ನಂಬರ್‌ಗಳು ಇದ್ದರೆ ಪರಿಶೀಲಿಸಿ. ಅದರ ಪರಿಣಾಮ ನಿಮ್ಮ ಮೇಲೆ ಉಂಟಾಗುತ್ತದೆ. ಶುಭ ಸಂಖ್ಯೆಯನ್ನು ಬಳಸಿದ ಕೂಡಲೆ ನಿಮಗೆ ಶುಭವಾಗುವುದಿಲ್ಲ. ಅದರ ಪ್ರಭಾವ ಬೀರಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಿಮ್ಮ ಬಳಿ ತುಂಬಾ ವರ್ಷಗಳಿಂದ ಅಶುಭ ಸಂಖ್ಯೆಗಳಿದ್ದರೆ ಅದನ್ನು ಬದಲಾಯಿಸುವುದು ಒಳ್ಳೆಯದು.












Click it and Unblock the Notifications