Mercury Transit 2024: ಇಂದು ತುಲಾ ರಾಶಿಯಲ್ಲಿ ಬುಧ ಸಂಕ್ರಮಣ: ಈ ರಾಶಿಗೆ ಶುಕ್ರದೆಸೆ ಆರಂಭ
ಗ್ರಹಗಳಲ್ಲಿ ಬುಧಕ್ಕೆ ಮಹತ್ವದ ಸ್ಥಾನವಿದೆ. ಯಾರ ಜಾತಕದಲ್ಲಿ ಬುಧ ಬಲವಾಗಿರುತ್ತೋ ಅಂಥವರ ಜೀವನದಲ್ಲಿ ಸಂತೋಷ ನೆಲೆಸಿರುತ್ತದೆ. ಯಾರ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿರುತ್ತೋ ಅಂಥವರ ಜೀವನ ಸಮಸ್ಯೆಗಳಿಂದ ಕೂಡಿರುತ್ತದೆ. ಅಂದಹಾಗೆ ಬುಧ ವ್ಯಾಪಾರ, ಬುದ್ಧಿವಂತಿಕೆ ಮತ್ತು ಶಿಕ್ಷಣದ ಗ್ರಹವಾಗಿದೆ. ಶುಕ್ರ ಐಷಾರಾಮಿ ಜೀವನದ ಗ್ರಹವಾಗಿದೆ.
ಬುಧನು ಶುಕ್ರನ ರಾಶಿಚಕ್ರದ ತುಲಾ ಅಥವಾ ವೃಷಭ ರಾಶಿಗೆ ಹೋದಾಗ, ಅದು ಬುಧನಿಗೆ ಬಲವನ್ನು ನೀಡುತ್ತದೆ. ಇದರ ಪರಿಣಾಮವಾಗಿ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ. ಆ ರೀತಿಯಾಗಿ ಬುಧ ಅಕ್ಟೋಬರ್ 10, 2024 ರಿಂದ ಶುಕ್ರನ ತುಲಾ ರಾಶಿಗೆ ಹೋಗುತ್ತಿದೆ. ಇದರ ಪರಿಣಾಮದಿಂದಾಗಿ ಕೆಲ ರಾಶಿಯವರ ವ್ಯವಹಾರ ವೇಗವನ್ನು ಪಡೆಯುತ್ತದೆ. ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವವರಿಗೆ ಈ ಸಾಗಣೆಯು ಮಂಗಳಕರವಾಗಿರುತ್ತದೆ.
ಅಂದಹಾಗೆ ಬುಧ ಗ್ರಹ ಅಕ್ಟೋಬರ್ 10 ರಂದು ಬೆಳಿಗ್ಗೆ 11:19ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತದೆ. ಅಕ್ಟೋಬರ್ 29 ರವರೆಗೆ ಈ ರಾಶಿಯಲ್ಲಿ ಸಾಗುತ್ತದೆ. ಹೀಗೆ ತುಲಾ ರಾಶಿಯಲ್ಲಿ ಬುಧ 19 ದಿನ ಇರುತ್ತದೆ. ತಮ್ಮ ವ್ಯವಹಾರದಲ್ಲಿ ಹೊಸ ಆಯಾಮಗಳನ್ನು ಸ್ಥಾಪಿಸಲು ಬಯಸುವವರು ಈ 19 ದಿನಗಳ ಲಾಭವನ್ನು ಪಡೆದುಕೊಳ್ಳಿ. ಹಾಗಾದರೆ ದ್ವಾದಶಿ ರಾಶಿಗಳ ಮೇಲೆ ಇದರ ಪರಿಣಾಮವನ್ನು ತಿಳಿಯೋಣ.
ರಾಶಿಗಳ ಮೇಲೆ ಬುಧ ಸಂಕ್ರಮಣ ಪರಿಣಾಮ:

ಮೇಷ ರಾಶಿ
ಮೇಷ ರಾಶಿಯ ಏಳನೇ ಮನೆಗೆ ಬುಧದ ಆಗಮನ ತುಂಬಾ ಮಂಗಳಕರವಾಗಿದೆ. ವ್ಯಾಪಾರದಲ್ಲಿ ಧನಲಾಭ ಸಿಗಲಿದೆ. ಅಂದುಕೊಂಡ ಉದ್ಯೋಗ ಕೈಹಿಡಿಯಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವುದು ಲಾಭದಾಯಕವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸುವುದು ಲಾಭದಾಯಕವಾಗಿರುತ್ತದೆ.

ವೃಷಭ ರಾಶಿ
ವೃಷಭ ರಾಶಿಯ ಆರನೇ ಮನೆಯಲ್ಲಿ ತುಲಾ ರಾಶಿಯಲ್ಲಿರುವ ಬುಧನು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತಾನೆ. ಅತ್ಯಂತ ಉತ್ಸಾಹದಿಂದ ಕೆಲಸ ಕಾರ್ಯಗಳಿಲ್ಲಿ ನೀವು ತೊಡಗುತ್ತೀರಿ. ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ. ಸಾಲದಿಂದ ಮುಕ್ತಿ ದೊರೆಯಲಿದೆ. ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ಆಸ್ತಿ ಖರೀದಿಗೆ ಇದು ಉತ್ತಮ ಸಮಯವಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಬುಧ ಅದೃಷ್ಟ ಹೆಚ್ಚಿಸಲಿದೆ. ಆರ್ಥಿಕ ಲಾಭದ ಜೊತೆಗೆ ಸಂಬಂಧಗಳಲ್ಲಿ ಮಾಧುರ್ಯವೂ ಇರುತ್ತದೆ. ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ಹೊಸ ಪ್ರೇಮ ಸಂಬಂಧಗಳು ಏರ್ಪಡುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸುವಿರಿ. ಹೊಸ ಉದ್ಯೋಗ ವ್ಯವಹಾರಕ್ಕೆ ಇದು ಅದ್ಬುತ ಸಮಯವಾಗಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಬುಧ ಅದ್ಬುತ ಫಲವನ್ನು ನೀಡಲಿದೆ. ಮನೆಯಲ್ಲಿ ಸಂತಸ ಹೆಚ್ಚಾಗಲಿದೆ. ಹಣ ಮನೆಗೆ ಹರಿದು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಆಸ್ತಿ ಖರೀದಿಸಲು ಸುವರ್ಣ ಅವಕಾಶ ಇದಾಗಿದೆ. ಹಳೆಯ ವ್ಯವಹಾರಗಳು ವೇಗವನ್ನು ಪಡೆಯುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸುವುದು ಲಾಭದಾಯಕವಾಗಿರುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಸಮಯ ಅದ್ಬುತ ಫಲವನ್ನು ನೀಡಲಿದೆ. ಪೂರ್ವಜರ ಆಸ್ತಿ ದೊರೆಯಲಿದೆ. ವ್ಯಾಪಾರಸ್ಥರು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವರು. ದೂರದ ದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಯಲಿದೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಇದರಿಂದ ನಿಮ್ಮ ಆರ್ಥಿಕ ಜೀವನ ಸಂಪತ್ತು ವೃದ್ಧಿಯಾಗಲಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯ ಎರಡನೇ ಮನೆಯಲ್ಲಿ ಸಾಗುವ ಬುಧ ನಿಮ್ಮ ಮಾತನ್ನು ಬಲಪಡಿಸುತ್ತದೆ. ಇದರ ಸಾಗಾಣೆಯಿಂದ ಸಂಪತ್ತು ಮತ್ತು ಆಸ್ತಿಯನ್ನು ಪಡೆಯುವಿರಿ. ಹೊಸ ವಾಹನ, ಮನೆ ಖರೀದಿಗೆ ಇದು ಸುವರ್ಣ ಅವಕಾಶ. ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿರುತ್ತದೆ. ಮನೆಗೆ ಸಂಬಂಧಿಕರು ಆಗಮಿಸುವರು.

ತುಲಾ ರಾಶಿ
ತುಲಾ ರಾಶಿಯವರಿಗೆ ಬುಧ ಅಪಾರ ಸಂಪತ್ತು ನೀಡುವನು. ಎಲ್ಲೆಲ್ಲೂ ಲಾಭವಾಗಲಿದೆ. ನಾನಾ ಮೂಲಗಳಿಂದ ಹಣ ಹರಿದು ಬರಲಿದೆ. ಹೊಸ ಕೆಲಸವನ್ನು ಪ್ರಾರಂಭಿಸುವಿರಿ. ವ್ಯಾಪಾರ ವರ್ಗವು ಅನೇಕ ದಿಕ್ಕುಗಳಿಂದ ಪ್ರಯೋಜನ ಪಡೆಯುತ್ತದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಸಂಗಾತಿಯೊಂದಿಗೆ ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಬುಧ ಆಶೀರ್ವದಿಸಲಿದ್ದಾನೆ. ಬುಧ ಸಂಚಾರದಿಂದಾಗಿ ಬಹಳಷ್ಟು ಹಣ ಬರಲಿದೆ. ಖರ್ಚು ಕೂಡ ಹೆಚ್ಚಾಗಲಿದೆ. ದೈಹಿಕ ಕಾಯಿಲೆಗಳು ದೂರವಾಗುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸಿ, ಆದರೆ ಹೆಚ್ಚು ಹೂಡಿಕೆ ಮಾಡಬೇಡಿ. ಈ ಸಮಯದಲ್ಲಿ ಸಾಲ ನೀಡುವುದನ್ನು ತಪ್ಪಿಸಿ.

ಧನು ರಾಶಿ
ಧನು ರಾಶಿಯವರಿಗೆ ಈ ಸಮಯದಲ್ಲಿ ಹೆಚ್ಚು ಆರ್ಥಿಕ ಲಾಭ ಸಿಗಲಿದೆ. ಲಾಭದ ಮನೆಯಲ್ಲಿ ಬುಧ ವಿಶೇಷ ಲಾಭವನ್ನು ನೀಡುತ್ತಾನೆ. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ಆಲಸ್ಯ ದೂರವಾಗುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಸಂಸಾರದಲ್ಲಿ ಸಂತೋಷ ನೆಲೆಸಲಿದೆ. ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ.

ಮಕರ ರಾಶಿ
ಮಕರ ರಾಶಿಯವರಿಗೆ ಬುಧ ಸಂಚಾರ ಸಾಕಷ್ಟು ಶುಭ ಫಲವನ್ನು ನೀಡಲಿದೆ. ಈ ಸಮಯದಲ್ಲಿ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ತಂದೆಯಿಂದ ಲಾಭವಾಗಲಿದೆ. ಧನಲಕ್ಷ್ಮೀ ಮನೆಗೆ ಬರಲಿದ್ದಾಳೆ. ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಲಿದೆ. ನಿಮ್ಮ ಮಾತು ನಿಮ್ಮ ಖ್ಯಾತಿಯನ್ನು ಹೆಚ್ಚಿಸಲಿದೆ. ಶುಭ ಪರಿಣಾಮವನ್ನು ಪಡೆಯಲ್ಲಿ ನವಗ್ರಹ ಪೂಜೆ ಮಾಡಿ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಭಾಗ್ಯೋದಯವಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿ ನಿರ್ಮಾಣವಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ವಿದೇಶದಿಂದ ಹಣ ಗಳಿಸುವಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷವಿರುತ್ತದೆ. ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಶತ್ರುಗಳನ್ನು ಜಯಿಸುವಿರಿ. ಮನೆಯಲ್ಲಿ ಶಾಂತಿ ನೆಲೆಸಲಿದೆ.

ಮೀನ ರಾಶಿ
ಮೀನ ರಾಶಿಯವರ ಎಂಟನೇ ಮನೆಗೆ ಬುಧ ಆಗಮನ ಲಾಭದಾಯಕವಾಗಿರುತ್ತದೆ. ಹಣದ ವೆಚ್ಚವೂ ಹೆಚ್ಚು ಇರುತ್ತದೆ. ಆಸ್ತಿ ಖರೀದಿ ಮತ್ತು ಮಾರಾಟದಿಂದ ಲಾಭವಿದೆ. ಹೊಸ ಯೋಜನೆಗಳು ಕೈಹಿಡಿಯಲಿವೆ. ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಪ್ರಭಾವವನ್ನು ಹೆಚ್ಚಿಸಲು ಏನು ಮಾಡಬೇಕು?
ತುಲಾ ರಾಶಿಯಲ್ಲಿ ಬುಧ ಸಂಕ್ರಮಣದ ಹೆಚ್ಚಿನ ಲಾಭವನ್ನು ಪಡೆಯಲು ಬಯಸುವವರು ಐದು ಕ್ಯಾರೆಟ್‌ನ ಚಿನ್ನದ ಉಂಗುರವನ್ನು ಧರಿಸಬೇಕು. ಇಲ್ಲವಾದಲ್ಲಿ ಕತ್ತಿಗೆ ಹಸಿರು ಮುತ್ತುಗಳ ಸರವನ್ನು ಧರಿಸಬಹುದು. ಇದಿಲ್ಲದೇ ಇದ್ದರೆ ಈ ಸಮಯದಲ್ಲಿ ಗಣೇಶನ ಪೂಜೆ ಮಾಡುವುದರಿಂದ ಲಾಭ ಹೆಚ್ಚಾಗುತ್ತದೆ.












Click it and Unblock the Notifications