ಕನ್ಯಾರಾಶಿಯಲ್ಲಿ ಮಂಗಳ ದಹನ: ಸೆಪ್ಟೆಂಬರ್ 24 ರಿಂದ ಈ 3 ರಾಶಿಯವರಿಗೆ ಅನೇಕ ಸಮಸ್ಯೆಗಳು ಕಟ್ಟಿಟ್ಟಬುತ್ತಿ

ಮಂಗಳ ಗ್ರಹವನ್ನು ಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ. ಈ ಮಂಗಳವನ್ನು ಶೌರ್ಯ, ಧೈರ್ಯ ಮತ್ತು ಪರಾಕ್ರಮದ ಅಂಶವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಮಂಗಳ ಉತ್ತಮವಾಗಿ ನೆಲೆಗೊಂಡಿದ್ದರೆ ಅಂಥಹ ವ್ಯಕ್ತಿಯು ತುಂಬಾ ಧೈರ್ಯಶಾಲಿ ಮತ್ತು ಯಾವುದಕ್ಕೂ ಧೈರ್ಯ ಕಳೆದುಕೊಳ್ಳುವುದಿಲ್ಲ. ಆದರೆ ಜಾತಕದಲ್ಲಿ ಮಂಗಳ ದುರ್ಬಲವಾಗಿದ್ದರೆ ಕೆಟ್ಟ ಸ್ಥಿತಿಯಲ್ಲಿ ಮಾತ್ರವಲ್ಲದೆ ಯಾವುದೇ ಸಂದರ್ಭದಲ್ಲಿ ಹೆಚ್ಚು ಭಯಪಡುತ್ತಾರೆ.

ಈ ಮಂಗಳ ಪ್ರಸ್ತುತ ಶತ್ರು ಬುಧದ ಚಿಹ್ನೆಯಲ್ಲಿ ಸಾಗುತ್ತಿದೆ. ಅಂದರೆ ಮಂಗಳ ಕನ್ಯಾರಾಶಿಯಲ್ಲಿ ಸಂಚರಿಸುತ್ತಿದೆ. ಸೆಪ್ಟೆಂಬರ್ 24 ರಂದು ಕನ್ಯಾರಾಶಿಯಲ್ಲಿ ಮಂಗಳ ದಹನವಾಗಲಿದೆ. ಗ್ರಹಗಳು ಸೂರ್ಯನ ಸಮೀಪದಲ್ಲಿ ಚಲಿಸುವ ಅವಧಿಯನ್ನು ಗ್ರಹಗಳ ದಹನ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಗ್ರಹಗಳು ದುರ್ಬಲವಾಗಿರುತ್ತವೆ.

ಮಂಗಳ ಗ್ರಹವು ದಹನವಾಘುವ ಕಾರಣ, ಈ ಅವಧಿಯಲ್ಲಿ ಮಂಗಳವು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ ಕೆಲವು ರಾಶಿಚಕ್ರದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈಗ ಯಾವ ರಾಶಿಯವರಿಗೆ ಮಂಗಳ ಗ್ರಹ ಅಸ್ತಮವಾಗುವುದು ತೊಂದರೆಯನ್ನು ಉಂಟುಮಾಡುತ್ತದೆ ಎಂದು ನೊಡೋಣ.

mars combust in virgo on 24 september 2023 these zodiac signs face more problems in kannada

ಮೇಷ ರಾಶಿ

ಮಂಗಳ ಗ್ರಹ ಮೇಷ ರಾಶಿಯ 6ನೇ ಮನೆಯಲ್ಲಿ ದಹನವಾಗುತ್ತದೆ. ಈ ಕಾರಣದಿಂದಾಗಿ ಮೇಷ ರಾಶಿಯವರು ಈ ಅವಧಿಯಲ್ಲಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನೌಕರರು ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಕೆಲವರು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಕೆಲಸದಲ್ಲಿ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾಗಬಹುದು. ಜೊತೆಗೆ ನಿಮ್ಮ ಕಾರ್ಯವೈಖರಿಯನ್ನು ಪ್ರಶಂಸಿಸದೆ ಇರಬಹುದು. ವ್ಯಾಪಾರಸ್ಥರು ವ್ಯಾಪಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

mars combust in virgo on 24 september 2023 these zodiac signs face more problems in kannada

ಕರ್ಕಾಟಕ ರಾಶಿ

ಮಂಗಳ ಗ್ರಹ ಕರ್ಕ ರಾಶಿಯ 3ನೇ ಮನೆಯಲ್ಲಿ ದಹನವಾಗುತ್ತದೆ. ಹೀಗಾಗಿ ಕರ್ಕಾಟಕ ರಾಶಿಯವರು ಸೆಪ್ಟೆಂಬರ್ 24ರಿಂದ ಎಚ್ಚರಿಕೆಯಿಂದ ಇರಬೇಕು. ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಸಮಸ್ಯೆಗಳನ್ನು ಮತ್ತು ವೈಫಲ್ಯಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಯಾವುದೇ ಬೆಂಬಲವಿರುವುದಿಲ್ಲ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವ್ಯಾಪಾರಸ್ಥರು ಎಚ್ಚರಿಕೆ ವಹಿಸಬೇಕು. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.

mars combust in virgo on 24 september 2023 these zodiac signs face more problems in kannada

ಸಿಂಹ ರಾಶಿ

ಸಿಂಹ ರಾಶಿಯ 2ನೇ ಮನೆಯಲ್ಲಿ ಮಂಗಳ ದಹನವಾಗುತ್ತದೆ. ಈ ಕಾರಣದಿಂದಾಗಿ ಸಿಂಹ ರಾಶಿಯವರು ಸೆಪ್ಟೆಂಬರ್ 24 ರಿಂದ ಅನೇಕ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ. ಇದು ತುಂಬಾ ಅಸಮಾಧಾನವನ್ನು ಉಂಟುಮಾಡಬಹುದು. ಕೆಲಸದಲ್ಲಿ ಯಾರೊಂದಿಗೂ ವಾಗ್ವಾದದಲ್ಲಿ ತೊಡಗದಂತೆ ಸಲಹೆ ನೀಡಲಾಗುತ್ತದೆ. ಸೀಮಹ ರಾಶಿಯ ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು. ಈ ಅವಧಿಯಲ್ಲಿ ನಿಮ್ಮ ಶತ್ರುಗಳು/ಪ್ರತಿಸ್ಪರ್ಧಿಗಳು ಸ್ವಲ್ಪ ಬಲಶಾಲಿಯಾಗಿರುತ್ತಾರೆ. ನಿಮ್ಮ ಕೆಲಸದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+