Maha Shivaratri 2022 Horoscope: ಈ 5 ರಾಶಿಯ ಜನರ ಮೇಲೆ ಶಿವನ ವಿಶೇಷ ಕೃಪೆ
ಮಹಾ ಶಿವರಾತ್ರಿಯು ಎಲ್ಲಾ ಶಿವ ಭಕ್ತರು ದೇವರನ್ನು ಪೂಜಿಸಲು ಜೊತೆ ಸೇರುವ ಒಂದು ಸಮಯವಾಗಿದೆ. ಈ ವಾರ್ಷಿಕ ಹಬ್ಬವನ್ನು ಎಲ್ಲಾ ಧಾರ್ಮಿಕ ಸಂಪ್ರದಾಯಗಳೊಂದಿಗೆ ರಾಷ್ಟ್ರದಾದ್ಯಂತ ಭವ್ಯವಾದ ರೀತಿಯಲ್ಲಿ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯನ್ನು ಅಕ್ಷರಶಃ 'ಶಿವನ ಮಹಾ ರಾತ್ರಿ' ಎಂದು ಹೇಳಲಾಗುತ್ತದೆ.
ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಒಳಗೊಂಡಿರುವ ಶಿವ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರು. ಶಿವನನ್ನು ಪೂಜಿಸಲು ಪ್ರತಿ ವರ್ಷ ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ದಿನದಂದು (ಮಾರ್ಚ್ 1) ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ. ಶಿವ ಲಿಂಗ ಶಿವನ ಸಂಕೇತವಾಗಿದೆ. ಶಿವರಾತ್ರಿಯನ್ನು ಮಂತ್ರಗಳನ್ನು ಪಠಿಸುವ, ಉಪವಾಸ ಮತ್ತು ಧ್ಯಾನ ಮಾಡುವ ಮೂಲಕ ಶಿವನ ಭಕ್ತರು ಆಚರಣೆ ಮಾಡುತ್ತಾರೆ. ಈ ದಿನ ಶಿವನಿಗೆ ಹಾಲು, ಸಿಹಿತಿಂಡಿಗಳನ್ನು ಪ್ರಸಾದವಾಗಿ ಅರ್ಪಣೆ ಮಾಡುತ್ತಾರೆ.
ದಂತಕಥೆಯ ಪ್ರಕಾರ, ಈ ರಾತ್ರಿಯಲ್ಲಿ ಶಿವನು ತನ್ನ ಸ್ವರ್ಗೀಯ ನೃತ್ಯ ಅಥವಾ 'ತಾಂಡವ್' ಅನ್ನು ಪ್ರದರ್ಶಿಸುತ್ತಾನೆ. ಈ ವರ್ಷ, ಧಾರ್ಮಿಕ ಹಬ್ಬವು ಮಾರ್ಚ್ 11 ರಂದು ಬರುತ್ತದೆ. ಈ ನಡುವೆ ಈ ದಿನದ ಜ್ಯೋತಿಷ್ಯದ ಪ್ರಕಾರ ಶಿವನು ತನ್ನ ಭಕ್ತರನ್ನು ನಿರಾಶೆಗೊಳಿಸದಿದ್ದರೂ ಸಹ, ಎಲ್ಲಾ ರಾಶಿಗಳ ಪೈಕಿ ಐದು ರಾಶಿಗಳ ಮೇಲೆ ವಿಶೇಷವಾದ ಅನುಗ್ರಹವನ್ನು ಮಾಡಲಿದ್ದಾನೆ. ಆ ಐದು ರಾಶಿಗಳು ಯಾವುದು, ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಯಾವ ಪ್ರತಿಫಲ ಲಭಿಸಲಿದೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮೇಷ ರಾಶಿ: ಶಿವನ ಅನುಗ್ರಹ ಪ್ರಾಪ್ತಿ
ಮಂಗಳವು ಮೇಷ ರಾಶಿಯ ಆಡಳಿತ ಗ್ರಹವಾಗಿರುವುದರಿಂದ ಸುಲಭವಾಗಿ ಶಿವನ ಅನುಗ್ರಹ ಪ್ರಾಪ್ತಿಯಾಗಲಿದೆ. ಪುರಾಣಗಳ ಪ್ರಕಾರ ಶಿವನು ಅಂಧಕಾಸುರ ಎಂಬ ರಾಕ್ಷಸನೊಂದಿಗೆ ಕದನ ಮಾಡಿದ್ದಾನೆ. ಅವನ ಬೆವರಿನ ಹನಿಯು ನೆಲವನ್ನು ಮುಟ್ಟಿತು ಮತ್ತು ಮಂಗಳ ದೇವ (ಮಂಗಳ) ರೂಪುಗೊಂಡಿದ್ದಾನೆ. ಆದರೆ ಆ ಸಂದರ್ಭದಲ್ಲಿ ಶಿವನು ಕೋಪಗೊಂಡಿದ್ದರಿಂದ, ಗ್ರಹವು ಉರಿಯುತ್ತದೆ. ಈ ಗ್ರಹದವರು ಹೆಚ್ಚಾಗಿ ಕೋಪಗೊಳ್ಳುತ್ತಾರೆ. ಈ ಶಿವರಾತ್ರಿ, ಮೇಷ ರಾಶಿಯವರು ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಇದು ನೀವು ಹೆಚ್ಚು ಸಿಟ್ಟು ಮಾಡಿಕೊಳ್ಳುವ ಸಮಯವಲ್ಲ. ಶಿವನ ಆಶೀರ್ವಾದ ಪಡೆಯಲು, ನಿಮ್ಮ ಆಸೆಗಳನ್ನು ಪೂರೈಸಲು ನೀವು ಕೋಪವನ್ನು ಕಡಿಮೆ ಮಾಡಿಕೊಳ್ಳಿ.

ಮಿಥುನ ರಾಶಿ: ವೈವಾಹಿಕ ಜೀವನ ಸುಧಾರಣೆ
ಮಿಥುನ ರಾಶಿಯವರು ಈ ದಿನ ಕೆಲವು ಶುಭ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ. ವಿಶ್ವವು ನಿಮ್ಮ ಮೇಲೆ ಉದಾರ ಮನೋಭಾವ ತೋರಿದಂತಹ ಭಾವನೆ ಇರಲಿದೆ. ಭಗವಂತ ಶಿವನು ಸಹ ನಿಮ್ಮ ಮೇಲೆ ತನ್ನ ವಿಶೇಷ ಅನುಗ್ರಹವನ್ನು ಮಾಡಲಿದ್ದಾನೆ. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಬದಲಾವಣೆಗಳನ್ನು ನೀವು ಗಮನಿಸಬಹುದು, ಹೆಚ್ಚಾಗಿ ಸಂಬಂಧಗಳಲ್ಲಿ ಸುಧಾರಣೆಗಳನ್ನು ಕಾಣಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ನಿಮ್ಮ ಬಂಧವನ್ನು ಬಲಪಡಿಸಲು ಪ್ರಯತ್ನ ಮಾಡಿ. ಸಂತೋಷವು ನಿಮ್ಮ ಹಾದಿಯಲ್ಲಿದೆ, ಆನಂದಿಸಿ.

ವೃಶ್ಚಿಕ ರಾಶಿ: ಮಾನಸಿಕ ಶಾಂತಿ ಪ್ರಾಪ್ತಿ
ಮಂಗಳವು ವೃಶ್ಚಿಕ ರಾಶಿ ಭಾಗಶಃ ಆಳುತ್ತದೆ. ಆದ್ದರಿಂದ, ವೃಶ್ಚಿಕ ರಾಶಿಯವರು ಪರಿಸ್ಥಿತಿಯನ್ನು ಅವಲಂಬಿಸಿ ವರ್ತನೆ ಮಾಡಲಿದ್ದಾರೆ. ಈ ರಾಶಿಯವರಿಗೆ ಈ ಶಿವರಾತ್ರಿಯಲ್ಲಿ ಶಿವನು ವಿಶೇಷವಾದ ಅನುಗ್ರಹವನ್ನು ಮಾಡಲಿದ್ದಾನೆ. ಹೆಚ್ಚು ಮಾನಸಿಕ ಶಾಂತಿ ಮತ್ತು ಜೀವನದಲ್ಲಿ ಸಮತೋಲನವನ್ನು ಅನುಭವಿಸುವ ಸಾಧ್ಯತೆಯಿದೆ. ವಿಶೇಷವಾಗಿ ಅವರ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಮತೋಲನ ಕಾಣುವ ಸಾಧ್ಯತೆ ಇದೆ. ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಅವಕಾಶ ಲಭ್ಯವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಕಂಡುಬರಲಿದೆ.

ಮಕರ ರಾಶಿ: ಶನಿ, ಶಿವ ದೇವರಿಂದ ಅನುಗ್ರಹದ ಅದೃಷ್ಟ
ಮಕರ ರಾಶಿಯನ್ನು ಶನಿ ದೇವ (ಶನಿ) ಆಳುತ್ತಾನೆ. ಶನಿಯು ಶಿವನ ಹತ್ತಿರದ ಗ್ರಹಗಳಲ್ಲಿ ಒಂದಾಗಿದೆ. ಆದ್ದರಿಂದ, ಮಕರ ರಾಶಿಯವರಿಗೆ ಶನಿ ದೇವ ಮತ್ತು ಮಹಾದೇವರಿಂದ ವಿಶೇಷ ಆಶೀರ್ವಾದ ಪಡೆಯುವ ಅದೃಷ್ಟವಿದೆ. ಈ ಶಿವರಾತ್ರಿಯಂದು ಬಿಲ್ವಪತ್ರೆ, ಗಂಗಾಜಲ, ಹಸುವಿನ ಹಾಲು ಇತ್ಯಾದಿಗಳನ್ನು ಶಿವನಿಗೆ ಅರ್ಪಿಸಿ, ಅದನ್ನು ದಾನ ಮಾಡಿದರೆ ನಿಮಗೆ ಸಮೃದ್ಧಿ ಮತ್ತು ಸಂತೋಷ ಲಭ್ಯವಾಗಲಿದೆ.

ಕುಂಭ ರಾಶಿ: ವೃತ್ತಿ ರಂಗದಲ್ಲಿ ಯಶಸ್ವಿ
ಈ ಮಹಾ ಶಿವರಾತ್ರಿಯಂದು ಕುಂಭ ರಾಶಿಯವರ ಮನೆಯ ಮೇಲೆ ಶನಿಯ ಉಪಸ್ಥಿತಿಯು ರಾಶಿಯ ಮೇಲೆ ಪ್ರಭಾವವನ್ನು ಬಹಳ ಪ್ರಮುಖವಾಗಿ ಬೀರಲಿದೆ. ಕುಂಭ ರಾಶಿಯವರು ಶನಿ ದೇವ ಮತ್ತು ಮಹಾದೇವರಿಂದ ಅನುಗ್ರಹವನ್ನು ಪಡೆಯಲಿದ್ದಾರೆ. ವೃತ್ತಿ ರಂಗದಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಂಪತ್ತು ಮತ್ತು ಆದಾಯದಲ್ಲಿ ಹೆಚ್ಚಳ ನಿರೀಕ್ಷೆ ಇದೆ. ಈ ಹಬ್ಬದಂದು ಉಪವಾಸ ಮಾಡಿ ದೇವರಿಗೆ ಕೃತಜ್ಞರಾಗಿ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications