• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 Love, Marriage Horoscope: ತುಲಾದಿಂದ ಮೀನದ ತನಕ ರಾಶಿ ಭವಿಷ್ಯ

By ಶ್ರೀ ಶ್ರೀನಿವಾಸ್ ಗುರೂಜಿ
|
Google Oneindia Kannada News

2021ನೇ ಇಸವಿಯ ವರ್ಷ ಭವಿಷ್ಯದ ಬಗ್ಗೆ ಎಲ್ಲ ಅಂಶಗಳನ್ನು ಒಳಗೊಂಡಂತೆ ಲೇಖನ ಈಗಾಗಲೇ ಪ್ರಕಟಿಸಲಾಗಿದೆ. ಆದರೆ ಹಲವರು ಕರೆ ಮಾಡಿ, ನಿರ್ದಿಷ್ಟ ವಿಚಾರಗಳ ಬಗ್ಗೆ ಬರೆಯುವಂತೆ ಕೇಳುತ್ತಿದ್ದಾರೆ. ಉದಾಹರಣೆಗೆ: ಪ್ರೀತಿ- ಪ್ರೇಮ, ಮದುವೆ, ಉದ್ಯೋಗ- ವೃತ್ತಿ, ಹಣಕಾಸು ಸ್ಥಿತಿ ಹೀಗೆ. ಆ ಹಿನ್ನೆಲೆಯಲ್ಲಿ ಈ ವರ್ಷ ತುಲಾದಿಂದ ಮೀನ ರಾಶಿ ತನಕ ಪ್ರೀತಿ- ಪ್ರೇಮ ಹಾಗೂ ಮದುವೆಗೆ ಸಂಬಂಧಿಸಿದಂತೆ ಭವಿಷ್ಯ ಹೇಗಿರುತ್ತದೆ ಎಂಬ ಬಗೆಗಿನ ಲೇಖನ ಇದು.

ಜನವರಿಯಿಂದ ಏಪ್ರಿಲ್ ಆರಂಭದ ತನಕ ಗುರು ಮಕರ ರಾಶಿಯಲ್ಲಿದ್ದು, ಆ ನಂತರ ಕುಂಭ ರಾಶಿಗೆ ಪ್ರವೇಶ ಆಗುತ್ತದೆ. ಸೆಪ್ಟೆಂಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಮಕರ ರಾಶಿಯಲ್ಲಿದ್ದು, ಮತ್ತೆ ಕುಂಭಕ್ಕೆ ಪ್ರವೇಶ ಆಗುತ್ತದೆ. ವರ್ಷದ ಕೊನೆಯ ತನಕ ಗುರು ಕುಂಭ ರಾಶಿಯಲ್ಲಿ ಇದ್ದರೆ, ಶನಿ ಮಕರ ರಾಶಿಯಲ್ಲಿ, ರಾಹು ವೃಷಭ ಹಾಗೂ ಕೇತು ವೃಶ್ಚಿಕದಲ್ಲಿ ವರ್ಷ ಪೂರ್ತಿ ಇರುತ್ತವೆ.

'ಆದ್ದರಿಂದ ಪ್ರಮುಖ ಗ್ರಹಗಳು ಎನಿಸಿದ ಗುರು, ಶನಿ, ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ರಾಶಿ ಭವಿಷ್ಯದ ಬಗ್ಗೆ ತಿಳಿಸಲಾಗುತ್ತಿದೆ. ಇನ್ನು ಆಯಾ ವ್ಯಕ್ತಿಯ ಜನ್ಮ ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿ ಹಾಗೂ ದಶಾ ಕಾಲ ಮುಖ್ಯವಾಗುತ್ತದೆ. ಆದ್ದರಿಂದ ವೈಯಕ್ತಿಕ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

2021 Love, Marriage Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ2021 Love, Marriage Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಬಾಧೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ್, ಬೆಂಗಳೂರು. ಮೊ. 9986623344.

ತುಲಾ

ತುಲಾ

ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ವರ್ಷದ ಮೊದಲ ಮೂರು ತಿಂಗಳು ಸಣ್ಣ- ಪುಟ್ಟ ಸಂಗತಿಗಳಿಗೆ ಅಸಮಾಧಾನ ಆಗಲಿದೆ. ಮೂರನೇ ವ್ಯಕ್ತಿಗಳ ಮಧ್ಯಪ್ರವೇಶದಿಂದ ಮನಸಿಗೆ ಬೇಸರ ಆಗುತ್ತದೆ. ಈಗಾಗಲೇ ಮದುವೆ ನಿಶ್ಚಯ ಆಗಿದ್ದಲ್ಲಿ ಸಿದ್ಧತೆಯ ವಿಚಾರವಾಗಿ ಮನಸ್ತಾಪಗಳು ಆಗಬಹುದು. ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ. ಮೂರನೇ ವ್ಯಕ್ತಿಗಳ ಮಾತಿಗೆ ಯಾವುದೇ ಮನ್ನಣೆ ನೀಡಬೇಡಿ. ಇನ್ನು ನೀವು ಹೇಳಿದಂತೆಯೇ ನಡೆಯಬೇಕು ಎಂಬ ಹಠ ಬೇಡ. ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುವ ಅವಕಾಶಗಳಿದೆ. ಪರಿಚಯಸ್ಥರಲ್ಲೇ ಸಂಬಂಧ ಕೂಡಿ ಬರುವ ಯೋಗ ಇದೆ. ದೂರದ ಸಂಬಂಧಿಗಳ ಮೂಲಕವೂ ವಧು/ವರರ ಮಾಹಿತಿ ದೊರೆಯಲಿದೆ. ಇನ್ನು ನೂತನ ದಂಪತಿ ಇದ್ದಲ್ಲಿ ಮಕ್ಕಳ ವಿಚಾರವಾಗಿ ಬೇಕು- ಬೇಡ ಎಂದೇ ಮನಸ್ತಾಪಗಳು ಆಗುವ ಸಾಧ್ಯತೆ ಇವೆ. ಕೆಲ ಸಮಯ ಪತಿ- ಪತ್ನಿ ದೂರ ಇರುವ ಯೋಗ ಸಹ ಇದೆ. ನಿಮ್ಮ ತಂದೆ- ತಾಯಿ ಮಾಡುವ ಹಠದ ಕಾರಣಕ್ಕೆ ನಿಮ್ಮಲ್ಲಿ ಕೆಲವರಿಗೆ ಮದುವೆ ಮುಂದಕ್ಕೆ ಹೋಗುವ ಯೋಗ ಇದೆ. ಹೀಗೆ ಅವರು ಹಠ ಮಾಡುವುದಕ್ಕೆ ನೀವು ನೀಡುವ ಅಸಮರ್ಪಕ ಮಾಹಿತಿ ಅಥವಾ ಮೂರನೇ ವ್ಯಕ್ತಿಗಳ ಚಾಡಿ ಮಾತು ಸಹ ಕಾರಣ ಆಗಲಿದೆ.

ವೃಶ್ಚಿಕ

ವೃಶ್ಚಿಕ

ಈ ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ಕುಟುಂಬದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಮದುವೆ ವಿಚಾರಗಳಲ್ಲಿ ಗೊಂದಲ ಇರುತ್ತದೆ. ಇದೇ ಕಾರಣದಿಂದ ತಂದೆಯೊಂದಿಗೆ ಮಾತು ಬಿಡುವ ಯೋಗ ಕೂಡ ಇದೆ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಪ್ರೇಮಿಗಳಿದ್ದಲ್ಲಿ ಬಿರುಕು ಉಂಟಾಗಲಿದೆ. ಮುಖ್ಯವಾಗಿ ನಿಮ್ಮ ಯಶಸ್ಸು ಸಂಭಾಳಿಸುವುದು ಕಷ್ಟವಾಗಲಿದೆ. ಇದರ ಪರಿಣಾಮ ನಿಮ್ಮ ಪ್ರೀತಿ- ಪ್ರೇಮದ ಮೇಲೂ ಆಗಲಿದ್ದು, ಸಂಗಾತಿಯ ಬಗ್ಗೆಯೇ ಲಘುವಾಗಿ ಮಾತನಾಡಿ ದೂರ ಮಾಡಿಕೊಳ್ಳುವಂತಾಗುತ್ತದೆ. ಅನುಮಾನ ಪ್ರವೃತ್ತಿಯನ್ನು ಬಿಡಿ. ನಿಮ್ಮ ಮೇಲೆ ಸಂಗಾತಿ ಇಟ್ಟಿರುವ ಪ್ರೀತಿಯನ್ನು ಗುರುತಿಸುವ ಕಣ್ಣು ತೆರೆಯಿರಿ. ವಿವಾಹಿತರಿಗೆ ಸಂಗಾತಿ ಜತೆಗೆ ಸಮಯ ಕಳೆಯುವುದಕ್ಕೆ ಕೂಡ ಆಗದಷ್ಟು ಕೆಲಸಗಳು ಬರಲಿವೆ. ದುಡಿಮೆಯ ಹಿಂದೆ ಬೀಳುವ ನೀವು, ಅವರ ಬಗ್ಗೆ ಲಕ್ಷ್ಯ ನೀಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಲಿದ್ದಾರೆ. ಈ ಅಸಮಾಧಾನದ ಲಾಭವನ್ನು ನಿಮ್ಮ ಸೋದರ- ಸೋದರಿಯರು ಬಳಸಿಕೊಂಡು, ಕಂದಕವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಪ್ರಯತ್ನಿಸಬಹುದು. ಅಂಥದ್ದಕ್ಕೆ ಅವಕಾಶ ನೀಡಬೇಡಿ. ಗುರು, ಸುಬ್ರಹ್ಮಣ್ಯ, ಗಣಪತಿಯ ಆರಾಧನೆ ಮಾಡಿ.

ಧನುಸ್ಸು

ಧನುಸ್ಸು

ಈಗಾಗಲೇ ಒಮ್ಮೆ ನೋಡಿ, ಬೇಡ ಅಂದುಕೊಂಡಿದ್ದ ಸಂಬಂಧವೇ ಮತ್ತೆ ವಿವಾಹಕ್ಕಾಗಿ ಹುಡುಕಿಕೊಂಡು ಬರುವ ಯೋಗ ಇದೆ. ಅರೆಬರೆ ಮನಸ್ಸಿನಲ್ಲಿ ಮುಂದುವರಿಯದಿರಿ. ಯವುದೋ ಭಾವನಾತ್ಮಕ ಕ್ಷಣದಲ್ಲಿ ಒಪ್ಪಿಕೊಂಡು, ಆ ನಂತರ ಅದರಿಂದ ಹೊರಬರುವುದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಆದಾಯದಲ್ಲಿ ಸ್ವಲ್ಪ ಹೆಚ್ಚಳ ಆಗಲಿ, ಆ ಮೇಲೆ ಮದುವೆ ಆಗ್ತೀನಿ ಅಂದುಕೊಂಡಿದ್ದವರಿಗೆ ಅನುಕೂಲ ಒದಗಿ ಬಂದಂತೆ ಭಾಸವಾಗಿ, ಆ ನಂತರ ಏಕಾಏಕಿ ನಿಂತುಹೋಗುವ ಸಾಧ್ಯತೆ ಇದೆ. ಒಂದು ವೇಳೆ ವಿವಾಹದ ವಯಸ್ಸು ಮೀರುತ್ತಿದ್ದಲ್ಲಿ ಒಮ್ಮೆ ಜಾತಕವನ್ನು ಪರಿಶೀಲನೆ ಮಾಡಿಸಿಕೊಂಡು, ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ತೀರ್ಮಾನ ಕೈಗೊಳ್ಳಿ. ಹಾಗಂತ ಈ ಸಮಯದಲ್ಲಿ ಅನುಕೂಲ ಆಗಿಬರುತ್ತದೆ ಅಂತೇನೂ ಅಲ್ಲ. ಆದರೆ ಸ್ವಲ್ಪ ಮಟ್ಟಿಗೆ ಹಣ ಖರ್ಚು ಮಾಡಿಕೊಂಡು, ಜಗಳ- ಕಲಹ ಏರ್ಪಟ್ಟು ಮದುವೆ ಆಗಬಹುದು. ಏಕೆಂದರೆ, ಮದುವೆ ವಯಸ್ಸು ಮೀರುತ್ತಿರುವಾಗಲೂ ಪ್ರಯತ್ನ ಮಾಡದೆ ಸುಮ್ಮನಿರುವುದು ಸರಿಯಲ್ಲ. ಪ್ರೇಮಿಗಳು ಈಗಲೇ ಭವಿಷ್ಯದ ಬಗ್ಗೆ ವಿಪರೀತ ಚರ್ಚಿಸಬೇಡಿ. ಮನೆ ಕಟ್ಟಬೇಕಾ, ಅಪಾರ್ಟ್ ಮೆಂಟ್ ಖರೀದಿ ಮಾಡೋಣವಾ, ಕಾರು ಖರೀದಿಸೋಣ ಹೀಗೆ ದುಡ್ಡು ಒಳಗೊಂಡಂಥ ಯಾವ ಚರ್ಚೆಯೂ ಮಾಡಬೇಡಿ. ಇದರಿಂದ ವೃಥಾ ಮನಸ್ತಾಪ ಹಾಗೂ ಕೆಲ ಸಮಯ ದೂರವಾಗುವ ಯೋಗ ಇದೆ.

ಮಕರ

ಮಕರ

ಈ ವರ್ಷದ ಆರಂಭದಿಂದ ಅಥವಾ ಅದಕ್ಕೂ ಮುಂಚೆಯೇ ವ್ಯಕ್ತಿಯೊಬ್ಬರ ಮೋಹಕ್ಕೆ ಬಿದ್ದಿರುತ್ತೀರಿ. ಈಗ ವಿಚಿತ್ರ ಸನ್ನಿವೇಶಕ್ಕೆ ಸಿಲುಕಿಕೊಳ್ಳುತ್ತೀರಿ. ವರ್ಷದ ಮೊದಲು ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ಮಾನಸಿಕವಾಗಿ ಬಹಳ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ಗಂಭೀರ ಸ್ವಭಾವದ ಮಕರ ರಾಶಿಯವರು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ. ಆದರೆ ಒಮ್ಮೆ ಹಚ್ಚಿಕೊಂಡು ಬಿಟ್ಟರೆ ಅದರಿಂದ ಹೊರ ಬರುವುದು ಬಹಳ ಕಷ್ಟವಾಗುತ್ತದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಅಥವಾ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಮದುವೆ ಆಗುವ ಯೋಗ ಇದೆ. ಆದರೆ ನಿಮ್ಮ ಮಾನಸಿಕ ನೆಮ್ಮದಿಯಂತೂ ಸ್ವಲ್ಪ ಮಟ್ಟಿಗೆ ಹಾಳಾಗಿರುತ್ತದೆ. ಏಕೆಂದರೆ ಎಲ್ಲವೂ ಸಲೀಸಾಗಿ ನಡೆದಿದ್ದರೆ ಮದುವೆ ಎಂಬ ಸಂಭ್ರಮವನ್ನು ಎಂಜಾಯ್ ಮಾಡಬಹುದಿತ್ತು. ಇನ್ನು ಈಗಾಗಲೇ ಮದುವೆ ನಿಶ್ಚಯ ಆಗಿದ್ದಲ್ಲಿ ಮನಸ್ಥಿತಿ ಹೊಂದಾಣಿಕೆ ಆಗುವುದಿಲ್ಲವೇನೋ ಎಂದು ಬಲವಾಗಿ ಎನಿಸುವುದಕ್ಕೆ ಶುರುವಾಗುತ್ತದೆ. ಇನ್ನು ಸಂತಾನ ಅಪೇಕ್ಷಿತ ದಂಪತಿಗೆ ಬಹಳ ಸವಾಲುಗಳನ್ನು ಎದುರಿಸಿದ ನಂತರವೇ ಹಾಗೂ ಹೆಚ್ಚಿನ ಹಣ ಖರ್ಚು ಮಾಡಿದ ಮೇಲೆ ಸಂತಾನ ಭಾಗ್ಯ ಇದೆ. ನೀವು ಸಹಾಯ ಮಾಡಿದ್ದ, ವೃತ್ತಿಯ ಮೂಲಕ ಪರಿಚಯ ಆಗಿದ್ದ ವ್ಯಕ್ತಿಯ ಜತೆಗೆ ಪ್ರೀತಿ ಮೂಡುವ, ವಿವಾಹ ಆಗುವ ಯೋಗ ಇದೆ.

ಕುಂಭ

ಕುಂಭ

ಜಾತಕದ ಯೋಗಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ, ಏಕೆಂದರೆ ನಿಮ್ಮಲ್ಲಿ ಕೆಲವರಿಗೆ ಅಂತರ್ಜಾತಿ ವಿವಾಹ ಆಗುವ ಸಾಧ್ಯತೆ ಇದೆ. ಇನ್ನು ನೀವು ಬಹಳ ದ್ವೇಷ ಮಾಡುತ್ತಿದ್ದ ಸಂಬಂಧಿಯ ಜತೆಗೇ ವಿವಾಹ ಆಗಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇದರಿಂದ ಮಾನಸಿಕವಾಗಿ ಬಹಳ ಒತ್ತಡದಲ್ಲಿ ಸಿಲುಕಿಕೊಳ್ಳಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಆ ವಿಚಾರವನ್ನು ಹೇಗೆ ಪ್ರಸ್ತಾವ ಮಾಡುವುದು ಎಂಬ ಬಗ್ಗೆ ಸರಿಯಾದ ಯೋಚನೆ ಮಾಡಿ. ಏಕೆಂದರೆ ಮೂರನೇ ವ್ಯಕ್ತಿಗಳಿಂದ ಆ ಬಗ್ಗೆ ನಿಮ್ಮ ಕುಟುಂಬಕ್ಕೆ ತಿಳಿದು ಬಂದು, ಮದುವೆ ಶೀಘ್ರವಾಗಿ ನಿಶ್ಚಯ ಮಾಡಿಬಿಡುವ ಸಾಧ್ಯತೆ ಇದೆ. ಆದ್ದರಿಂದ ಪ್ರೀತಿಯಲ್ಲಿ ಇರುವವರು ವಿನಾಕಾರಣದ ತಿರುಗಾಟ, ಸದಾ ಫೋನ್ ನಲ್ಲಿ ಮಾತುಕತೆ, ವಾಟ್ಸಾಪ್ ಚಾಟ್ ಹೀಗೆ ಜಗಜ್ಜಾಹೀರಾಗುವಂತೆ ಮಾಡಬೇಡಿ. ಅದರಲ್ಲೂ ವಿದ್ಯಾಭ್ಯಾಸ ಮಾಡುತ್ತಿದ್ದಲ್ಲಿ ಕಡ್ಡಾಯವಾಗಿ ಆ ಕಡೆಗೆ ಗಮನ ನೀಡಿ. ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ಆ ಅಪಾಯ ಹೆಚ್ಚಿದೆ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಹಾಗೂ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಕುಟುಂಬದಲ್ಲಿ ನಿಮ್ಮ ಬಗ್ಗೆ ನಂಬಿಕೆಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರ ಇರಲಿ. ನಿಮಗೆ ಸಾಲ ನೀಡಿದ ವ್ಯಕ್ತಿಯ ಮೋಹದಲ್ಲಿ ಅಥವಾ ಪ್ರೀತಿಯಲ್ಲಿ ಬೀಳಬಹುದು. ಅದರಲ್ಲೂ ವಿವಾಹಿತ ವ್ಯಕ್ತಿಯ ಪ್ರೀತಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

Recommended Video

  Rohit ಹಾಗು Bumrah ಇಲ್ಲದಿದ್ದರೂ Team India ಸರಿಣಿ ಗೆದ್ದಿದ್ದು ಹೇಗೆ | Oneindia Kannada
  ಮೀನ

  ಮೀನ

  iiiiiiiiiiಈಗಾಗಲೇ ಮದುವೆ ನಿಶ್ಚಯ ಆಗಿದ್ದಲ್ಲಿ, ವರ್ಷದ ಮೊದಲ ಮೂರು ತಿಂಗಳು ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ವಿವಾಹ ಆಗುವುದಿದ್ದರೆ ನೀವಂದುಕೊಂಡಿದ್ದ ಬೆಂಬಲ- ಅನುಕೂಲ ಸಿಗುವುದು ಕಷ್ಟವಾಗಲಿದೆ. ಆದರೆ ವೃತ್ತಿನಿರತರು, ಉದ್ಯಮಿಗಳಿಗೆ ನಿಮಗಿಂತ ಅನುಕೂಲಸ್ಥರ ಕಡೆಯಿಂದ ಸಂಬಂಧ ದೊರೆಯಲಿದೆ. ನಿಮ್ಮ ನಿರ್ಧಾರಗಳಿಗೆ ಕುಟುಂಬದಲ್ಲಿ ಅಭಿಪ್ರಾಯ ಭೇದಗಳು ಸೃಷ್ಟಿಯಾಗಲಿದೆ. ಆದರೆ ನೀವು ಪಟ್ಟಾಗಿ ತೀರ್ಮಾನ ಮಾಡಲಿದ್ದೀರಿ. ಇದರಿಂದ ನಿಮ್ಮ ವೃತ್ತಿ ಬದುಕು, ಉದ್ಯಮ- ವ್ಯಾಪಾರಕ್ಕೆ ಅನುಕೂಲ ಒದಗಿ ಬರಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ವ್ಯವಹಾರದ ಸ್ನೇಹವೇ ಸಂಬಂಧವಾಗಿ ಮಾರ್ಪಡುವ ಸಾಧ್ಯತೆ ಇದೆ. ಸಂತಾನ ಅಪೇಕ್ಷಿತ ದಂಪತಿಗೆ ದೈವಾನುಗ್ರಹ ದೊರೆಯಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಪರಸ್ಪರ ಸಮಯ ನೀಡಲಾಗದಷ್ಟು ಕೆಲಸ- ಕಾರ್ಯಗಳು, ಜವಾಬ್ದಾರಿಗಳು ಮೈ ಮೇಲೆ ಬರಲಿವೆ. ಇನ್ನೂ ಕೆಲವರಿಗೆ ವಿದೇಶದಲ್ಲೇ ಮದುವೆ ಆಗುವ ಸಾಧ್ಯತೆ ಇದೆ. ಅಂದರೆ ಅಲ್ಲಿನ ಗಂಡು ಅಥವಾ ಹೆಣ್ಣನ್ನೇ ಮದುವೆಯಾಗಿ, ಶಾಶ್ವತವಾಗಿ ಅಲ್ಲೇ ನೆಲೆಸುವಂಥ ಯೋಗ ಇದೆ. ಉದ್ಯೋಗ, ವ್ಯಾಪಾರಕ್ಕೂ ಅನುಕೂಲ ಆಗಿಬರುವಂಥ ಸಂಬಂಧವೇ ನಿಮಗೆ ಒದಗಿ ಬರಲಿದೆ. i

  English summary
  2021 Love And Marriage Yearly Horoscope in Kannada: Read your Varshika Bhavishya for all 12 rashi in kannada.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X