Channapatna By election: ಚನ್ನಪಟ್ಟಣದಲ್ಲಿ ನಿಜವಾಯ್ತು ಜಯಶ್ರೀನಿವಾಸನ್ ಗುರೂಜಿ ನುಡಿದ ಭವಿಷ್ಯ!
ರಾಮನಗರ ನವೆಂಬರ್ 23: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ದಳಪತಿಗಳ ರಾಜಕೀಯ ಆಟಕ್ಕೆ ದೊಡ್ಡ ಹೊಡೆತ ನೀಡಿದೆ. ಇಂದು ಚನ್ನಪಟ್ಟಣ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಎನ್‌ಡಿಎ ಪಕ್ಷ ನಿರೀಕ್ಷೆ ಮಾಡಿರದ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಕ್ಕೆ ಫಲಿತಾಂಶ ಶಾಕ್ ಕೊಟ್ಟಿದೆ. ಚನ್ನಪಟ್ಟಣ ಉಪ ಚುನಾವಣೆಗೆ ಮತದಾನ ನಡೆದ ಬಳಿಕ ಹಲವಾರು ಜ್ಯೋತಿಷಿಗಳು ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಜಯಶ್ರೀನಿವಾಸನ್ ಗುರೂಜಿ ನುಡಿದ ಭವಿಷ್ಯ ನಿಜವಾಗಿದೆ. ಹಾಗಾದರೆ ಜಯಶ್ರೀನಿವಾಸನ್ ಗುರೂಜಿ ನುಡಿದ ಭವಿಷ್ಯವೇನು?
ಚನ್ನಪಟ್ಟಣ ಉಪಚುನಾವಣೆ ಬಳಿಕ ಹಲವಾರು ಜ್ಯೋತಿಷಿಗಳು ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆಂದು ಭವಿಷ್ಯ ನುಡಿದಿದ್ದರು. ಕೆಲ ಜ್ಯೋತಿಷಿಗಳು ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಗೆಲುವು ಖಚಿತ ಅಂತ ಹೇಳಿದ್ದರೆ ಇನ್ನೂ ಕೆಲವರು ಕಾಂಗ್ರೆಸ್ ಅಭ್ಯರ್ಥಿ ಪರ ಜಾತಕ ಹೇಳಿದ್ದರು.

ಕಳೆದ ಕೆಲ ದಿನಗಳ ಹಿಂದೆ ಚನ್ನಪಟ್ಟಣದ ಉಪಚುನಾವಣೆಯ ಬಗ್ಗೆ ಜಯಶ್ರೀನಿವಾಸನ್ ಗುರೂಜಿ ಭವಿಷ್ಯ ನುಡಿದಿದ್ದರು. ಇವರು ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುವುದಕ್ಕೆ ಗ್ರಹಗತಿಗಳು ಸಹಕಾರಿಯಾಗಿವೆ ಎಂದು ಹೇಳಿದ್ದರು. ಹಾಗಾದರೆ ಜಯಶ್ರೀನಿವಾಸನ್ ಗುರೂಜಿ ನುಡಿದ ಭವಿಷ್ಯ ಏನು?
ಚನ್ನಪಟ್ಟಣದ ಬಗ್ಗೆ ಗುರೂಜಿ ಹೇಳಿದ್ದೇನು ಅನ್ನೋದನ್ನು ನೋಡುವುದಾದರೆ- ಚನ್ನಪಟ್ಟಣ (channapattana) 'c' ಅಕ್ಷರದಿಂದ ಆರಂಭವಾಗುತ್ತದೆ. ಕಾಂಗ್ರೆಸ್ (congress) ಕೂಡ 'c' ಅಕ್ಷರದಿಂದ ಆರಂಭವಾಗುತ್ತದೆ. 'c' ಅನ್ನೋದು (a,b,c) ಮೂರನೇ ಅಕ್ಷರ. 'c' ಅನ್ನು ಆಳುವುದು ಗುರು ಗ್ರಹವಾಗಿದೆ.
ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ (CP Yogeshwar) 'Y' ಅಕ್ಷರದಿಂದ ಆರಂಭವಾಗುತ್ತದೆ. 'Y' ಅಂದರೆ ಸೂರ್ಯ. ಸೂರ್ಯನಿಗೆ ಗುರು ತುಂಬಾ ಮಿತ್ರ ಗ್ರಹವಾಗಿದೆ. ಆದ್ದರಿಂದ ಇವರು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ಗೆ ಹೋದ ತಕ್ಷಣ ಕಾಂಗ್ರೆಸ್ ಅವರು ಬೇಗ ಟಿಕೆಟ್ ಕೊಟ್ಟರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲ್ಲುವ ಸಾಧ್ಯತೆ ಕೊಂಚ ಹೆಚ್ಚಾಗಿದೆ ಎಂದು ಜಯಶ್ರೀನಿವಾಸನ್ ಗುರೂಜಿ ಭವಿಷ್ಯ ನುಡಿದಿದ್ದರು.

ಇನ್ನೂ ಸಿಪಿ ಯೋಗೇಶ್ವರ್ ಅವರ ಸ್ವಂತ ಮನೆಯಲ್ಲಿ ಸೂರ್ಯನಿದ್ದಾನೆ. ಆದರೆ ಆ ಮನೆಯನ್ನು ಗುರು ನೋಡ್ತಾಯಿಲ್ಲ. ಮೀನ ರಾಶಿಯಲ್ಲಿರುವ ಗುರು ಸೂರ್ಯನನ್ನು ನೋಡ್ತಾಯಿಲ್ಲ. ಸೂರ್ಯ ಗ್ರಹ ಗಟ್ಟಿಯಾಗಿರುವುದಕ್ಕೆ ಸಿಪಿವೈ ಸರ್ಕಾರದಲ್ಲಿ, ರಾಜಕೀಯದಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದಾರೆ.
ಆದರೆ ಎಲ್ಲೂ ಕೂಡ ಅವರು ನಿಲ್ಲುತ್ತಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜಂಪ್ ಆಗುತ್ತಲೇ ಇದ್ದಾರೆ. ಇದಕ್ಕೆ ಕಾರಣ ಗುರು ಸೂರ್ಯನನ್ನು ನೋಡದೇ ಇರುವುದಾಗಿದೆ. ಸೂರ್ಯನಿಗೆ ಎಂಟನೆ ಮನೆ ಶನಿ, ಶನಿಗೆ ಎಂಟನೆ ಮನೆ ಸೂರ್ಯ ಇದೆ. ಇದು ಗೆಲುವಿಗೆ ಕೊಂಚ ಅಡೆತಡೆಗಳನ್ನು ಉಂಟು ಮಾಡಲಿದೆ ಎಂದು ಹೇಳಿದ್ದರು. ಹೀಗಾಗಿನೇ ಸಿಪಿ ಯೋಗೇಶ್ವರ್ ಅವರು ಫಲಿತಾಂಶಕ್ಕೂ ಮುನ್ನ ಗೆಲುವಿನ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ. ಆದರೆ ಇಂದಿನ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವು ಖಚಿತವಾಗಿದೆ. ಹೀಗಾಗಿ ಜಯಶ್ರೀನಿವಾಸನ್ ಗುರೂಜಿ ನುಡಿಯುವ ಭವಿಷ್ಯದ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ.












Click it and Unblock the Notifications