Get Updates
Get notified of breaking news, exclusive insights, and must-see stories!

Diwali 2023: 700 ವರ್ಷಗಳ ನಂತರ ದೀಪಾವಳಿಯಲ್ಲಿ ಸಂಭವಿಸುವ 5 ರಾಜಯೋಗಗಳು: ಈ 4 ರಾಶಿಯವರ ಜೀವನ ದೀಪದಂತೆ ಬೆಳಗುತ್ತೆ!

ಗ್ರಹಗಳ ಚಲನೆಗಳು ಮತ್ತು ಸ್ಥಾನಗಳು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ದೀಪಾವಳಿ ದಿನದಂದು ಕೆಲವು ಮಂಗಳಕರ ರಾಜಯೋಗಗಳು ರೂಪುಗೊಳ್ಳುತ್ತವೆ.

ಅದೂ ಕೂಡ 5 ರಾಜಯೋಗಗಳು ದೀಪಾವಳಿಯ ದಿನ ರೂಪುಗೊಳ್ಳಲಿವೆ. ಈ ರಾಜಯೋಗಗಳು ಸುಮಾರು 700 ವರ್ಷಗಳ ನಂತರ ದೀಪಾವಳಿಯ ದಿನದಂದು ಹುಟ್ಟಿಕೊಂಡಿವೆ ಎಂದು ಹೇಳಲಾಗುತ್ತದೆ. ಆ ರಾಜಯೋಗಗಳನ್ನು ಕ್ರಮವಾಗಿ ಗಜಕೇಸರಿ, ಹರ್ಷ, ಉಪಚಾರ, ಕಹಲ ಮತ್ತು ದುರ್ಧರ ಎಂದು ಕರೆಯಲಾಗುತ್ತದೆ. ಈ ಎಲ್ಲಾ ರಾಜಯೋಗಗಳನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಈ ರಾಜಯೋಗಗಳ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, 4 ರಾಶಿಯವರು ದೀಪಾವಳಿಯಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಿಶೇಷವಾಗಿ ಈ ನಾಲ್ಕು ರಾಶಿಯವರು ಉತ್ತಮ ಆದಾಯ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಇವರ ಬಹುಕಾಲದ ಆಸೆಗಳು ಈಡೇರುತ್ತವೆ. ಹಾಗಾದರೆ ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

five-rajyoga-made-on-diwali

ಮೇಷ ರಾಶಿ

ಈ ದೀಪಾವಳಿಯು ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದು. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಕೆಲವರು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ವೃತ್ತಿ ಮತ್ತು ಕೆಲಸದ ಬಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ.

ಪ್ರೇಮಿಗಳಿಗೂ ಅತ್ಯುತ್ತಮ ಸಮಯ ಇದಾಗಿರುತ್ತದೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ ಅದರಿಂದ ನಿಮಗೆ ಅಧಿಕ ಲಾಭ ಸಿಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಈ ಸಮಯ ಉತ್ತಮವಾಗಿರುತ್ತದೆ. ನೀವು ಷೇರು ಮಾರುಕಟ್ಟೆ ಮತ್ತು ಲಾಟರಿಯಲ್ಲಿ ಅಧಿಕ ಲಾಭವನ್ನು ಪಡೆಯುತ್ತೀರಿ. ಸಾಲ ತೆಗೆದುಕೊಂಡಿದ್ದರೆ ಈ ಅವಧಿಯಲ್ಲಿ ನೀವು ಅದನ್ನು ಮರುಪಾವತಿಸುತ್ತೀರಿ.

five-rajyoga-made-on-diwali

ಮಿಥುನ ರಾಶಿ

ದೀಪಾವಳಿಯ ದಿನದಂದು ರೂಪುಗೊಂಡ ರಾಜಯೋಗಗಳು ಮಿಥುನ ರಾಶಿಯವರಿಗೆ ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ. ಕೆಲವು ಜನರು ಆಸ್ತಿ ವ್ಯವಹಾರದಿಂದ ಉತ್ತಮ ಲಾಭವನ್ನು ಪಡೆಯಬಹುದು. ಹೊಸ ವಾಹನ ಮತ್ತು ಆಸ್ತಿ ಖರೀದಿಸಲು ಅವಕಾಶವಿರುತ್ತದೆ.

ಉದ್ಯೋಗಿಗಳಿಗೆ ಉನ್ನತಿಗೆ ಅವಕಾಶ ಸಿಗಲಿದೆ. ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯುತ್ತಾರೆ. ಸಮಾಜದಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ. ಮತ್ತು ನಿಮ್ಮ ಯೋಜನೆಗಳಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

five-rajyoga-made-on-diwali

ಕನ್ಯಾ ರಾಶಿ

ದೀಪಾವಳಿಯಂದು ರೂಪುಗೊಂಡ 5 ರಾಜಯೋಗಗಳಿಂದಾಗಿ ಕನ್ಯಾ ರಾಶಿಯ ಸ್ಥಳೀಯರು ಆರ್ಥಿಕವಾಗಿ ಉತ್ತಮವಾಗಲಿದ್ದಾರೆ. ವ್ಯಾಪಾರಿಗಳು ಅಧಿಕ ಲಾಭ ಗಳಿಸಬಹುದು. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ ನೀವು ಅದರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ.

ನ್ಯಾಯಾಲಯದ ಪ್ರಕರಣಗಳನ್ನು ಗೆಲ್ಲುವಿರಿ. ನಿಮ್ಮ ಹಣವು ಎಲ್ಲೋ ದೀರ್ಘಕಾಲದಿಂದ ಸಿಕ್ಕಿಹಾಕಿಕೊಂಡಿದ್ದರೆ ಈ ದೀಪಾವಳಿಯಲ್ಲಿ ನೀವು ಅದನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

five-rajyoga-made-on-diwali

ಮಕರ ರಾಶಿ

ಮಕರ ರಾಶಿಯವರು ದೀಪಾವಳಿಯ ಸಮಯದಲ್ಲಿ ಉಂಟಾಗುವ ರಾಜಯೋಗಗಳಿಂದ ಲಾಭವನ್ನು ಪಡೆಯುತ್ತಾರೆ. ಬಹುಕಾಲದ ಆಸೆಗಳು ಈಡೇರುತ್ತವೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗಿಗಳು ಕಚೇರಿ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತಾರೆ. ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸುವವರಿಗೆ ಈ ಸಮಯದಲ್ಲಿ ಅವಕಾಶಗಳು ಸಿಗುತ್ತವೆ. ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಕೆಲವರು ಅನಿರೀಕ್ಷಿತ ಹಣವನ್ನು ಪಡೆಯಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+