Doomsday prediction: ಶೀಘ್ರವೇ ಅಂತ್ಯ ಕಾಣಲಿದೆ ಜಗತ್ತು; ಸಮೀಪಿಸುತ್ತಿದೆ ಡೂಮ್ಸ್‌ಡೇ ಭವಿಷ್ಯವಾಣಿ

2026ರ ಶುಕ್ರವಾರ ಈ ಜಗತ್ತು ಅಂತ್ಯಗೊಳ್ಳಲಿದೆ. ಈ ಭೂಮಿ ಅಳಿವಿನ ಹಂತವನ್ನು ತಲುಪುತ್ತದೆ. ಹೀಗೆ ಭವಿಷ್ಯ ನುಡಿದವರು ಯಾರೋ ಜ್ಯೋತಿಷಿ ಅಥವಾ ಬಾಬಾ ಅಲ್ಲ. ಖ್ಯಾತ ವಿಜ್ಞಾನಿ ಭೌತಶಾಸ್ತ್ರಜ್ಞ ಹೈಂಜ್ ವಾನ್ ಫೋಸ್ಟರ್, 1960ರಲ್ಲಿಯೇ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದೀಗ ವಿಜ್ಞಾನಿ ಹೇಳಿದ ಸಮಯ ಸಮೀಪಿಸುತ್ತಿದೆ. ಅವರ ಲೆಕ್ಕಾಚಾರದ ಪ್ರಕಾರ ಇನ್ನೇನು ಕೆಲವೇ ವಾರಗಳಲ್ಲಿ ಎಲ್ಲವೂ ಅಂತ್ಯ ಕಾಣುವುದು.

ಡೂಮ್ಸ್‌ಡೇ ಭವಿಷ್ಯ

ಹೈಂಜ್ ವಾನ್ ಫೋಸ್ಟರ್, ಅವರ ಈ ಭವಿಷ್ಯವಾಣಿಯನ್ನು ಡೂಮ್ಸ್‌ಡೇ ಎಂದು ಕರೆಯಲಾಯಿತು. ಎರಡು ಸಹಸ್ರಮಾನಗಳ ಹಿಂದಿನ ನಿಜವಾದ ಸಮೀಕರಣಗಳು ಮತ್ತು ಡೇಟಾವನ್ನು ಆಧರಿಸಿ ಅವರು ಈ ಭವಿಷ್ಯ ನುಡಿದಿದ್ದರಂತೆ. ಆ ಸಂದರ್ಭದಲ್ಲಿ ಬಹುತೇಕ ಜನ ಇವರ ಹೇಳಿಕೆಯನ್ನು ಅಲ್ಲಗಳೆದಿದ್ದರು. ಈಗ ಬಹುಶಃ ನಾವು ಕೂಡಾ ಅದನ್ನೇ ಮಾಡಬಹುದು. ಆದರೆ ಭವಿಷ್ಯ ನುಡಿದಿರುವ ವ್ಯಕ್ತಿ ಕೆಲವೊಂದು ವಿಷಯಗಳ ಬಗ್ಗೆ ಹೇಳಿರುವ ವಿಷಯಗಳು ಅಕ್ಷರಶಃ ಸತ್ಯ ಎನ್ನುವುದು ಈಗಾಗಲೇ ಸಾಬೀತಾಗಿದೆ.

Doomsday Prediction World May End On Friday November 13th Only Weeks Away Scientist Predicted Future

ನವೆಂಬರ್13ರ ಶುಕ್ರವಾರ ಡೂಮ್ಸ್‌ ಡೇ

ಶೈಕ್ಷಣಿಕ ಜರ್ನಲ್ ಸೈನ್ಸ್‌ನಲ್ಲಿ ಪ್ರಕಟವಾದ ಒಂದು ಪ್ರಬಂಧದಲ್ಲಿ , ಆಸ್ಟ್ರಿಯಾದ ಭೌತಶಾಸ್ತ್ರಜ್ಞ ಹೈಂಜ್ ವಾನ್ ಫೋಸ್ಟರ್, ಮತ್ತು ಅವರ ಸಹೋದ್ಯೋಗಿಗಳು 2026ರ ಶುಕ್ರವಾರದಂದು ಮಾನವಕುಲವೇ ಅಂತ್ಯಗೊಳ್ಳುತ್ತದೆ ಎಂದು ಹೇಳಿದ್ದಾರೆ. ಮೊದಲೇ ಹೇಳಿದ ಹಾಗೆ ಇವರ್ಯಾರೂ ಜ್ಯೋತಿಷಿಗಳಲ್ಲ, ದೈವಿಕ ಶಕ್ತಿಯಿಂದ ಭವಿಷ್ಯವನ್ನು ಕಂಡವರೂ ಅಲ್ಲ. ಅವರ ಭವಿಷ್ಯವಾಣಿಗಳು ಗಣಿತದ ದತ್ತಾಂಶವನ್ನು ಆಧರಿಸಿದೆ. ಇವರ ಲೆಕ್ಕಾಚಾರದಲ್ಲಿ 2,000 ವರ್ಷಗಳ ಜನಸಂಖ್ಯಾ ಬೆಳವಣಿಗೆಯನ್ನು ಪತ್ತೆಹಚ್ಚಿದ್ದರು. ಇವರ ಪ್ರಕಾರ ನವೆಂಬರ್ 13, 2026 ರಂದು ಡೂಮ್ಸ್‌ಡೇ ಸಂಭವಿಸುತ್ತದೆ. ಡೂಮ್ಸ್‌ಡೇ ನವೆಂಬರ್13ರ ಶುಕ್ರವಾರ ಬರಲಿದೆ.

ಈ ಭವಿಷ್ಯವಾಣಿಗಿದೆ ಒಂದು ಲೆಕ್ಕಾಚಾರ

ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಮೂವರು ಪ್ರಮುಖ ಶಿಕ್ಷಣ ತಜ್ಞರಾದ ಹೈಂಜ್ ವಾನ್ ಫೋಸ್ಟರ್, ಪೆಟ್ರೀಷಿಯಾ ಎಂ. ಮೋರಾ ಮತ್ತು ಲಾರೆನ್ಸ್ ಡಬ್ಲ್ಯೂ. ಅಮಿಯಟ್, ಸಂಭಾವ್ಯ ಅಪೋಕ್ಯಾಲಿಪ್ಟಿಕ್ ಘಟನೆ ಸಮೀಪಿಸುತ್ತಿರುವ ಬಗ್ಗೆ ಎಚ್ಚರಿಸಿದ್ದಾರೆ. ಪಾಶ್ಚಿಮಾತ್ಯ ನಾಗರಿಕತೆಯ ಮಾದರಿಗಳನ್ನು ಪರಿಶೀಲಿಸಿದ ನಂತರ, ಅವರು ಜಗತ್ತು ಕೊನೆಗೊಳ್ಳಬಹುದು ಎಂಬ ಭಯಾನಕ ತೀರ್ಮಾನಕ್ಕೆ ಬಂದಿದ್ದಾರೆ.

ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿದ್ದಂತೆ ಭೂಮಿಯು ಅಷ್ಟು ಜನರನ್ನು ತನ್ನ ಮೇಲೆ ಹೊತ್ತುಕೊಳ್ಳಬಹುದಾದ ಮಿತಿಯನ್ನು ಮೀರಬಹುದು ಎನ್ನುವ ಕಲ್ಪನೆ ಅವರ ಊಹೆಗೆ ಕಾರಣವಾಗಿತ್ತು. ಈ ಅಧ್ಯಯನ ಬಿಡುಗಡೆಯಾದಾಗ, ವಿಶ್ವದ ಜನಸಂಖ್ಯೆಯು ಸರಿಸುಮಾರು 3 ಬಿಲಿಯನ್ ಆಗಿತ್ತು. ಈಗ ಅದು 8.3 ಬಿಲಿಯನ್ ಆಗಿದೆ.

AI ಕಲ್ಪನೆಗೂ ಮುನ್ನವೇ ಎಚ್ಚರಿಸಿದ್ದ ವಿಜ್ಞಾನಿ

ವಿಶ್ವವಿನಾಶವಾಗುವ ಮುನ್ಸೂಚನೆ ಇದೇ ಮೊದಲಲ್ಲ. ಜನರು ಯುಗಯುಗಗಳಿಂದ ಭೂಮಿಯ ಅಂತ್ಯವನ್ನು ಊಹಿಸಿಕೊಂಡು ಬಂದಿದ್ದಾರೆ. ಆದರೆ, ಇಲ್ಲಿ ವಾನ್ ಫೋರ್ಸ್ಟರ್ ಅವರ ಭವಿಷ್ಯವಾಣಿಯು ವೈಜ್ಞಾನಿಕ ವಿಶ್ಲೇಷಣೆಯಿಂದ ಹೊರ ಬಂದಿರುವಂಥದ್ದು. ಹಾಗಾಗಿ ಇದು ವಿಶೇಷವಾಗಿ ನಿರ್ಣಾಯಕವಾಗಿದೆ. ಈ ಭವಿಷ್ಯವಾಣಿಯ ಬಗ್ಗೆ ಭಯ ಪಡಲು ಇರುವ ಮತ್ತೊಂದು ಕಾರಣವೆಂದರೆ, AI ನಮ್ಮ ಜೀವನದ ಒಂದು ಭಾಗವಾಗುವ ಮೊದಲೇ ವಾನ್ ಫೋರ್ಸ್ಟರ್ ಅದರ ಸಂಭಾವ್ಯ ಅಪಾಯಗಳ ಬಗ್ಗೆ ಮುನ್ಸೂಚನೆ ನೀಡಿದ್ದರು.

1995 ರಲ್ಲಿ, ವಾನ್ ಫೋರ್ಸ್ಟರ್ ಎಐ ಬಗ್ಗೆ ಚರ್ಚಿಸಲು ದಿ ಇನ್ಫರ್ಮೇಷನ್ ಫಿಲಾಸಫರ್ ಜೊತೆ ಕುಳಿತುಕೊಂಡರು. ಅಂದ ಹಾಗೆ ಈ ಚರ್ಚೆ ನಡೆದದ್ದು ಎಐ, ಚಾಟ್‌ಜಿಪಿಟಿ, ಎಲ್‌ಎಲ್‌ಎಂ, ಚಾಟ್‌ಬಾಟ್‌ ಇವುಗಳೆಲ್ಲಾ ಡೆವಲಪ್‌ ಆಗುವುದಕ್ಕೆ ಹಲವು ವರ್ಷಗಳ ಮೊದಲು. ಮನುಷ್ಯರು ಯಾವ ರೀತಿ ಯೋಚಿಸುತ್ತಾರೆ AI ಕೂಡಾ ಅದೇ ರೀತಿಯಲ್ಲಿ ಯೋಚಿಸುತ್ತದೆ ಎಂದು ಊಹಿಸುವುದು ಅಪಾಯಕಾರಿ ಎಂದು ಭೌತಶಾಸ್ತ್ರಜ್ಞರು ಆಗಲೇ ಹೇಳಿದ್ದರು. ಈ ಯಂತ್ರಗಳ ಕಾರ್ಯಕ್ಷಮತೆ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿರುವುದು ಎನ್ನುವುದರ ಬಗ್ಗೆಯೂ ಹೇಳಿದ್ದರು.

ನಮ್ಮಲ್ಲಿ ಹಾಸು ಹೊಕ್ಕಾಗಿರುವ ಎಐ

ಇಂದಿನ ಜಗತ್ತಿನಲ್ಲಿ ಕೃತಕ ಬುದ್ದಿ ಮತ್ತೆ ಎನ್ನುವುದು ನಮ್ಮ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿದೆ. ಜನರು AI ಸಿಸ್ಟಮ್‌ಗಳೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಕೆಲವರಂತೂ ವೈಯಕ್ತಿಕ ಮಾಹಿತಿ ಮತ್ತು ಸಮಸ್ಯೆಗಳನ್ನೂ ಶೇರ್‌ ಮಾಡುತ್ತಾರೆ. ಇದನ್ನು ವೈದ್ಯರಿಗೆ ಪರ್ಯಾಯವಾಗಿ ಬಳಸುವವರೂ ಇದ್ದಾರೆ.

AI ಬಗ್ಗೆ ವಾನ್ ಫೋರ್ಸ್ಟರ್ ಅವರ ನಿಖರವಾದ ಭವಿಷ್ಯವಾಣಿಯು ಅವರ ಅಪೋಕ್ಯಾಲಿಪ್ಟಿಕ್ ಮುನ್ಸೂಚನೆಯನ್ನು ಆತಂಕಕಾರಿಯನ್ನಾಗಿ ಮಾಡುತ್ತದೆ. ಅಂದ ಹಾಗೆ ಪತ್ರಿಕೆಯ ನಂತರ, ಜನಸಂಖ್ಯಾ ಬೆಳವಣಿಗೆಯ ದರಗಳು ನಿಧಾನಗೊಂಡಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೇ ಜನಸಂಖ್ಯೆ ಕುಸಿದಿದೆ. ಜನನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಈ ಭವಿಷ್ಯವಾಣಿ ನಿಜವಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ, ಅವರ ಭವಿಷ್ಯವಾಣಿಗಳು ಜನರು ಈ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+