Akshay Tritiya Donate: ಅಕ್ಷಯ ತೃತೀಯದಂದು ರಾಶಿಗನುಸಾರ ಈ ವಸ್ತುಗಳನ್ನು ಮಾಡಿ... ಆರ್ಥಿಕ ಸಮಸ್ಯೆಗಳು ಹತ್ತಿರ ಸುಳಿಯಲ್ಲ..
ಅಕ್ಷಯ ತೃತೀಯ ಹಬ್ಬವನ್ನು ಪ್ರತಿ ವರ್ಷ ಶುಕ್ಲ ಪಕ್ಷದ ಮೂರನೇ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 10 ಅಂದರೆ ನಾಳೆ ಶುಕ್ರವಾರ ಅಕ್ಷಯ ತೃತೀಯ ಶುಭ ಸಮಯ ಮುಂಜಾನೆ 4.17ಕ್ಕೆ ಪ್ರಾರಂಭವಾಗುತ್ತದೆ. ಇದು ಮೇ 11 ರಂದು ಮಧ್ಯಾಹ್ನ 2:50 ಕ್ಕೆ ಕೊನೆಗೊಳ್ಳುತ್ತದೆ. ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಈ ಸಮಯ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ.
ಅಕ್ಷಯ ತೃತಿಯಂದು ಅನೇಕ ಜನರು ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ವಾಡಿಕೆ ಇದೆ. ಅಲ್ಲದೆ ಒಳ್ಳೆಯ ಕಾರ್ಯಗಳನ್ನು ಮಾಡಲು ಇದು ಅತ್ಯಂತ ಮಂಗಳಕರ ದಿನವಾಗಿದೆ. ಈ ಮಂಗಳಕರ ದಿನದಂದು ಹೊಸ ಉದ್ಯೋಗಗಳು ಮತ್ತು ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದೂ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಮತ್ತಿತರ ಅಮೂಲ್ಯ ವಸ್ತುಗಳನ್ನು ಖರೀದಿಸಲಾಗುತ್ತದೆ. ಅಲ್ಲದೆ ದಾನ ನೀಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ಯಾವ ರಾಶಿಯವರು ಇಂದು ಯಾವ ವಸ್ತುಗಳನ್ನು ದಾನ ಮಾಡಿದರೆ ಉತ್ತಮ? 12 ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ
ಮೇಷ ರಾಶಿಯವರು ಅಕ್ಷಯ ತೃತಿಯಂದು ಕೆಂಪು ಬಣ್ಣದ ವಸ್ತುಗಳನ್ನು ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಖರೀದಿಸಬೇಕು. ಇದನ್ನು ಮಾಡುವುದರಿಂದ ನೀವು ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಶಾಂತಿ ನೆಮ್ಮದಿಯನ್ನು ಪಡೆಯಬಹುದು.

ವೃಷಭ ರಾಶಿ
ವೃಷಭ ರಾಶಿಯವರು ಅಕ್ಷಯ ತೃತಿಯಂದು ಸಣ್ಣ ಧಾನ್ಯಗಳು ಅಥವಾ ಅಕ್ಕಿಯನ್ನು ಖರೀದಿಸಬೇಕು. ಇದನ್ನು ಅಗತ್ಯ ಇರುವವರಿಗೆ ದಾನ ಮಾಡಬೇಕು. ಇದರಿಂದ ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಸಂಪತ್ತನ್ನು ಹೆಚ್ಚಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರು ಅಕ್ಷಯ ತೃತಿಯಂದು ಹೊಸ ಬಟ್ಟೆಗಳನ್ನು ಖರೀದಿಸಬೇಕು. ಸಾಧ್ಯವಾದಷ್ಟು ಅಗತ್ಯ ಇರುವವರಿಗೆ ದಾನ ಮಾಡಬೇಕು ಇದರಿಂದ ಜೀವನದಲ್ಲಿ ಎಂದಿಗೂ ಸಮಸ್ಯೆ ಬರುವುದಿಲ್ಲ. ಒಂದು ವೇಳೆ ಬಂದರೂ ನಿಮಗೆ ಅವುಗಳನ್ನು ನಿಭಾಯಿಸುವ ಶಕ್ತಿ ಒಲಿಯಲಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಅಧಿಪತಿ ಚಂದ್ರನಾಗಿರುವುದರಿಂದ.. ಕರ್ಕ ರಾಶಿಯವರು ಅಕ್ಷಯ ತೃತಿಯ ದಿನದಂದು ಅಕ್ಕಿ ಅಥವಾ ಹಾಲು ಖರೀದಿಸಬೇಕು. ಇನ್ನಿತರ ಬಿಳಿ ಬಣ್ಣದ ಆಹಾರ ಪದಾರ್ಥಗಳು ಅಥವಾ ಬಟ್ಟೆಗಳನ್ನು ಖರೀದಿ ಮಾಡಿ ದಾನ ಮಾಡುವುದರಿಂದ ವೈಯಕ್ತಿಕ ಜೀವನ ಸುಧಾರಿಸುತ್ತದೆ. ಆದರೆ ನೆನಪಿಡಿ ದಾನಕ್ಕಾಗಿ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಳಕೆ ಮಾಡಬೇಡಿ.

ಸಿಂಹ ರಾಶಿ
ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುವುದರಿಂದ.. ಸಿಂಹ ರಾಶಿಯ ಜನರು ಅಕ್ಷಯ ತೃತಿಯಂದು ತಾಮ್ರದ ಪಾತ್ರೆಗಳನ್ನು ಅಥವಾ ಕೆಂಪು ಬಣ್ಣದ ವಸ್ತುಗಳನ್ನು ಖರೀದಿಸಬೇಕು. ಇವುಗಳನ್ನು ದಾನ ಮಾಡಬೇಕು. ಇದು ನಿಮಗೆ ನಿಮಗೆ ಗೊತ್ತಿಲ್ಲದಂತಹ ಉತ್ತಮ ಫಲ ನೀಡುತ್ತದೆ. ಅಪಘಾತ, ಅನಾರೋಗ್ಯದಿಂದ ಈ ಪುಣ್ಯದ ಕಾರ್ಯಗಳು ನಿಮ್ಮನ್ನು ರಕ್ಷಿಸುತ್ತವೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಅಕ್ಷಯ ತೃತಿಯಂದು ಬೇಳೆಕಾಳು ಮತ್ತು ಕಾಳುಗಳನ್ನು ಖರೀದಿಸಬೇಕು. ಇದನ್ನು ಅಗತ್ಯ ಇರುವವರಿಗೆ ನಿರ್ಗತಿಕರಿಗೆ ದಾನವಾಗಿ ನೀಡಬೇಕು. ಹೀಗೆ ಮಾಡಿದರೆ ನಿಮ್ಮ ಜೀವನ ಖಂಡಿತಾ ಸುಧಾರಿಸುತ್ತದೆ. ಜೀವನದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ. ಅದೃಷ್ಟ ನಿಮ್ಮನ್ನು ಹಿಂಬಾಲಿಸಲಿದೆ.

ತುಲಾ ರಾಶಿ
ತುಲಾ ರಾಶಿಯವರು ಅಕ್ಷಯ ತೃತಿಯಂದು ಅಕ್ಕಿ ಅಥವಾ ಸಕ್ಕರೆಯನ್ನು ಖರೀದಿಸಬೇಕು. ಇದನ್ನು ದಾನ ಮಾಡಬೇಕು. ಇದು ನಿಮ್ಮ ಜೀವನವನ್ನು ಸಂತೋಷಪಡಿಸುತ್ತದೆ. ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳು ಇದರಿಂದ ದೂರವಾಗುತ್ತವೆ. ಅಂದುಕೊಂಡ ಕಾರ್ಯಗಳು ಬಹುಬೇಗ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತವೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಅಕ್ಷಯ ತೃತೀಯ ದಿನದಂದು ಬೆಲ್ಲ ಅಥವಾ ಶುದ್ಧ ಕುಡಿಯುವ ನೀರನ್ನು ಖರೀದಿಸಬೇಕು. ಇದನ್ನು ದಾನವಾಗಿ ಅಗತ್ಯ ಇರುವವರಿಗೆ ನೀಡುವುದರಿಂದ ಅಂದುಕೊಂಡಿದ್ದೆಲ್ಲವೂ ನೆರವೇರುತ್ತದೆ. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಧನು ರಾಶಿ
ಧನು ರಾಶಿಯವರಿಗೆ ಗುರು ಅಧಿಪತಿಯಾಗಿರುವುದರಿಂದ..ಧನು ರಾಶಿಯವರು ಅಕ್ಷಯ ತೃತೀಯ ದಿನದಂದು ಬಾಳೆಹಣ್ಣು ಅಥವಾ ಹಳದಿ ಅಕ್ಕಿಯನ್ನು ಖರೀದಿಸಬೇಕು. ಇದನ್ನು ಅಗತ್ಯ ಇರುವವರಿಗೆ ನೀಡಬೇಕು. ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಮಕರ ರಾಶಿ
ಮಕರ ರಾಶಿಯವರಿಗೆ ಶನಿಯು ಅಧಿಪತಿಯಾಗಿರುವುದರಿಂದ ಮಕರ ರಾಶಿಯವರು ಅಕ್ಷಯ ತೃತೀಯ ದಿನದಂದು ಬೇಳೆಕಾಳುಗಳನ್ನು ಖರೀದಿಸಬೇಕು. ಅದನ್ನು ದೇವಸ್ಥಾನದ ಬಳಿ ಇರುವ ಅಂಗವಿಕಲರಿಗೆ, ಭಿಕ್ಷುಕರಿಗೆ ದಾನವಾಗಿ ನೀಡಬೇಕು. ನೀವು ಇದನ್ನು ಮಾಡುವುದರಿಂದ ದೇವನು ದೇವತೆಗಳ ಆಶೀರ್ವಾದ ಪಡೆಯುತ್ತೀರಿ. ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆಗಳು ಆಗಮಿಸುವುದಿಲ್ಲ.

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿಯಾಗಿರುವುದರಿಂದ.. ಕುಂಭ ರಾಶಿಯವರು ಅಕ್ಷಯ ತೃತೀಯ ದಿನದಂದು ಕಪ್ಪು ಎಳ್ಳು ಅಥವಾ ಕಪ್ಪು ಬಣ್ಣದ ಬಟ್ಟೆಗಳನ್ನು ಖರೀದಿಸಬೇಕು. ಇದನ್ನು ದಾನ ಮಾಡುವುದರಿಂದ ಅಂದುಕೊಂಡ ಕೆಲಸಗಳು ಸುಲಭವಾಗಿ ನಡೆಯುತ್ತವೆ.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು ಆಗಿರುವುದರಿಂದ.. ಅಕ್ಷಯ ತೃತೀಯ ದಿನದಂದು ಶುದ್ಧ ತುಪ್ಪ ಖರೀದಿಸುವುದು ಈ ರಾಶಿಯವರಿಗೆ ಉತ್ತಮ ಫಲಿತಾಂಶವನ್ನು ತರುತ್ತದೆ. ತುಪ್ಪ, ಆರೋಗ್ಯಕರ ಪದಾರ್ಥಗಳನ್ನು ಮೀನ ರಾಶಿಯವರು ಈ ಅಕ್ಷಯ ತೃತೀಯದಂದು ದಾನವಾಗಿ ನೀಡುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications