Diwali 2023: ದೀಪಾವಳಿಗೂ ಮುನ್ನ ನಿಮ್ಮ ರಾಶಿಗೆ ತಕ್ಕಂತೆ ವಸ್ತುಗಳನ್ನು ಖರೀದಿಸಿ.. ಜೀವನದಲ್ಲಿ ಹಣಕ್ಕೆ ಕಷ್ಟವಾಗದು..!
ಉತ್ತರ ಭಾರತವನ್ನು ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಮನೆಯನ್ನು ದೀಪಗಳಿಂದ ಅಲಂಕಾರ ಮಾಡುವ ಮೂಲಕ ಲಕ್ಷ್ಮಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ದೀಪಾವಳಿಯಂದು ಶ್ರದ್ಧೆ ಹಾಗೂ ಭಕ್ತಿಯಿಂದ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸದಾ ಹಣ ತುಂಬಿರುತ್ತದೆ.
ನವೆಂಬರ್ 10 ರಂದು ಧನತೇರಸ್ ದಿನವಾಗಿದೆ. ಈ ಧನತೇರಸ್ ದಿನದಂದು ಏನನ್ನು ಖರೀದಿಸಿದರೆ ಅದು ವರ್ಷವಿಡೀ ಮನೆಯಲ್ಲಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಚಿನ್ನ, ಬೆಳ್ಳಿ, ಮನೆ, ವಾಹನ ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಈ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ.

ಧನತೇರಸ್ ದಿನದಂದು ನಿಮ್ಮ ರಾಶಿಯ ಪ್ರಕಾರ ವಸ್ತುಗಳನ್ನು ಖರೀದಿಸಿದರೆ ಅಂಥವರು ಲಕ್ಷ್ಮಿ ಮತ್ತು ಕುಬೇರನ ಆಶೀರ್ವಾದವನ್ನು ಬಹುಬೇಗ ಪಡೆಯುತ್ತಾರೆ ಮತ್ತು ವರ್ಷವಿಡೀ ಸಂಪತ್ತನ್ನು ಪಡೆಯುತ್ತಾರೆ. ಜೊತೆಗೆ ಅದೃಷ್ಟವು ಹೊಳೆಯುತ್ತದೆ ಮತ್ತು ಹಣದ ಕೊರತೆ ದೂರವಾಗುತ್ತದೆ. ಹಾಗಾದರೆ ಧನತೇರಸ್ ದಿನದಂದು ಯಾವ ರಾಶಿಯವರು ಯಾವ ವಸ್ತುಗಳನ್ನು ಖರೀದಿಸಬೇಕು ಎಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯ ಜನರು ಧನತೇರಸ್ ದಿನದಂದು ಬೆಳ್ಳಿ ಆಭರಣಗಳು, ನಾಣ್ಯಗಳು ಅಥವಾ ಪಾತ್ರೆಗಳನ್ನು ಖರೀದಿಸುವುದು ತುಂಬಾ ಒಳ್ಳೆಯದು. ಇದರ ಹೊರತಾಗಿ ನೀವು ಚಿನ್ನ ಅಥವಾ ಹಿತ್ತಾಳೆಯ ವಸ್ತುಗಳನ್ನು ಸಹ ಖರೀದಿಸಬಹುದು. ಈ ರೀತಿ ಕೊಳ್ಳುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಉತ್ತಮ ಪ್ರಗತಿಯಾಗುತ್ತದೆ.

ವೃಷಭ ರಾಶಿ
ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ. ಈ ರಾಶಿಯವರು ಧನತೇರಸ್ ದಿನದಂದು ಬೆಳ್ಳಿ ವಸ್ತುಗಳನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ. ಇದರ ಹೊರತಾಗಿ ವಜ್ರದ ಆಭರಣಗಳನ್ನು ಖರೀದಿಸುವುದು ಉತ್ತಮ. ಆದ್ದರಿಂದ ನೀವು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಇವುಗಳಲ್ಲಿ ಯಾವುದನ್ನಾದರೂ ಖರೀದಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ. ಈ ಮಿಥುನ ರಾಶಿಯವರು ಧನತೇರಸ್ ದಿನದಂದು ಕಂಚಿನ ವಸ್ತುಗಳು, ಚಿನ್ನ ಇತ್ಯಾದಿಗಳನ್ನು ಖರೀದಿಸುವುದು ಉತ್ತಮ ಫಲಿತಾಂಶವನ್ನು ತರುತ್ತದೆ. ಅವರಿಗೆ ಸೂಕ್ತವಾದ ರತ್ನವನ್ನೀ ಈ ದಿನ ಖರೀದಿ ಮಾಡಬಹುದು. ಇವುಗಳಲ್ಲಿ ಯಾವುದನ್ನಾದರೂ ಖರೀದಿಸುವುದು ಉತ್ತಮ ಪ್ರಗತಿಯನ್ನು ತರುತ್ತದೆ.

ಕರ್ಕಟಕ ರಾಶಿ
ಚಂದ್ರನು ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ಆದ್ದರಿಂದ ಈ ಕರ್ಕಾಟಕ ರಾಶಿಯವರು ಧನತೇರಸ್ ದಿನದಂದು ಬೆಳ್ಳಿಯ ಆಭರಣಗಳು, ಬೆಳ್ಳಿಯ ಲಕ್ಷ್ಮಿ ಗಣೇಶನ ವಿಗ್ರಹ, ಬೆಳ್ಳಿ ಯಂತ್ರ, ಮುತ್ತಿನ ಹಾರ, ಬೆಳ್ಳಿ ಉಂಗುರ ಮುಂತಾದ ಬೆಳ್ಳಿ ವಸ್ತುಗಳನ್ನು ಖರೀದಿಸಬೇಕು. ಇದು ಅವರಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದಾನೆ. ಈ ರಾಶಿಯವರು ಧನತೇರಸ್ ದಿನದಂದು ಚಿನ್ನವನ್ನು ಖರೀದಿಸುವುದು ತುಂಬಾ ಒಳ್ಳೆಯದು. ನಿಮಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಚಿನ್ನದ ಲೇಪಿತ ವಸ್ತುಗಳನ್ನು ಖರೀದಿಸಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧನಾಗಿದ್ದಾನೆ. ಈ ರಾಶಿಯವರು ಧನತೇರಸ್ ದಿನದಂದು ಕಂಚು ಅಥವಾ ಹೂವಿನ ಕುಂಡಗಳನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ. ಹೀಗೆ ಕೊಳ್ಳುವುದರಿಂದ ಜಾತಕದಲ್ಲಿ ಬಲಹೀನನಾದ ಬುಧ ಬಲಗೊಳ್ಳುತ್ತಾನೆ. ಅಲ್ಲದೆ ಈ ರಾಶಿಚಕ್ರದ ಅದೃಷ್ಟದ ಕಲ್ಲುಗಳು ಪಚ್ಚೆ ಮತ್ತು ಮುತ್ತು. ಇವುಗಳನ್ನೂ ಕೊಳ್ಳುವುದರಿಂದ ಜೀವನ ಸುಖಮಯವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರನು ಆಳುತ್ತಾನೆ. ಈ ರಾಶಿಯ ಜನರು ಧನತೇರಸ್ ದಿನದಂದು ಬೆಳ್ಳಿ ಆಭರಣಗಳು ಮತ್ತು ಬೆಳ್ಳಿ ಪಾತ್ರೆಗಳನ್ನು ಖರೀದಿಸಬೇಕು. ಹೀಗೆ ಖರೀದಿಸಿದಾಗ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳವಾಗಿದೆ. ಈ ರಾಶಿಯವರು ಧನತೇರಸ್ ದಿನದಂದು ತಾಮ್ರದ ಪಾತ್ರೆಗಳು, ಬೆಳ್ಳಿಯ ಆಭರಣಗಳು ಅಥವಾ ಪಾತ್ರೆಗಳನ್ನು ಖರೀದಿಸುವುದು ಸೂಕ್ತ. ಈ ಮೂಲಕ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಧನು ರಾಶಿ
ಧನು ರಾಶಿಯ ಅಧಿಪತಿ ಗುರುವಾಗಿದೆ. ಈ ರಾಶಿಯ ಜನರು ಧನತೇರಸ್ ದಿನದಂದು ಚಿನ್ನಾಭರಣ, ಚಿನ್ನದ ನಾಣ್ಯಗಳು, ಹಿತ್ತಾಳೆಯ ಪಾತ್ರೆಗಳು ಇತ್ಯಾದಿಗಳನ್ನು ಖರೀದಿಸಬೇಕು. ಹೀಗೆ ಖರೀದಿಸುವುದರಿಂದ ಜೀವನದುದ್ದಕ್ಕೂ ಹಣದ ಕೊರತೆ ಇರುವುದಿಲ್ಲ.

ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿಯಾಗಿದ್ದಾನೆ. ಈ ಮಕರ ರಾಶಿಯವರು ಧನತೇರಸ್ ದಿನದಂದು ಕಬ್ಬಿಣದ ವಸ್ತುಗಳನ್ನು ಅಥವಾ ವಾಹನಗಳನ್ನು ಖರೀದಿಸುವುದು ಉತ್ತಮ. ಹೀಗೆ ಕೊಂಡುಕೊಂಡರೆ ವರ್ಷವಿಡೀ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತೀರಿ.

ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿಯಾಗಿದ್ದಾನೆ. ಈ ಕುಂಭ ರಾಶಿಯವರು ಧನತೇರಸ್ ದಿನದಂದು ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಅಥವಾ ವಾಹನಗಳನ್ನು ಖರೀದಿಸಬೇಕು. ಇದಲ್ಲದೆ ನೀವು ಚಿನ್ನ ಮತ್ತು ಬೆಳ್ಳಿಯನ್ನು ಸಹ ಖರೀದಿಸಬಹುದು. ಇದು ನಿಮಗೆ ಮಂಗಳಕರವಾಗಿದೆ.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರುವಾಗಿದ್ದಾನೆ. ಈ ಮೀನ ರಾಶಿಯವರಿಗೆ ಧನತೇರಸ್ ದಿನದಂದು ಚಿನ್ನ ಅಥವಾ ಹಿತ್ತಾಳೆ ವಸ್ತುಗಳನ್ನು ಖರೀದಿಸುವುದು ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ. ಮತ್ತು ಈ ರೀತಿಯ ವಸ್ತುಗಳನ್ನು ಖರೀದಿಸುವುದು ವರ್ಷವಿಡೀ ಸಂತೋಷ ಮತ್ತು ಸಂಪತ್ತನ್ನು ತರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications