Daily Horoscop: ಸಿದ್ಧಿ ಯೋಗದಿಂದ ನಾಲ್ಕು ರಾಶಿಯವರಿಗೆ ಧನ ಲಾಭ; ಸಂತೋಷ ಸಮೃದ್ಧಿಯ ದಿನ, 12ರಾಶಿಗಳ ನಿತ್ಯ ಭವಿಷ್ಯ
Daily Horoscope: ಇವತ್ತು ಮಧ್ಯಾಹ್ನ 12.36ದವರೆಗೆ ಅಶ್ವಿನಿ ಕೃಷ್ಣ ಪಕ್ಷದ ಐದನೇ ದಿನ ಇರುವುದು. ನಂತರ ಆರನೇ ದಿನ ಪ್ರಾರಂಭವಾಗುವುದು. ಇಡೀ ದಿನ ರೋಹಿಣಿ ನಕ್ಷತ್ರ ಇರುವುದು. ಚಂದ್ರನು ಕೂಡಾ ಇಡೀ ದಿನ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಇವತ್ತು ಸಿದ್ಧಿ ಯೋಗ, ಲಕ್ಷ್ಮೀನಾರಾಯಣ ಯೋಗ, ಪಾರಿಜಾತ ಯೋಗ, ಬುದ್ಧಾದಿತ್ಯ ಯೋಗ ಮತ್ತು ಮಾಳವ್ಯ ಯೋಗದ ಫಲ ಇರುವುದು.
ಮೇಷ ರಾಶಿ (Aries)
ಸಿದ್ಧಿ ಯೋಗವು ಅಪೇಕ್ಷಿತ ಯಶಸ್ಸನ್ನು ತರುವುದು. ಆಸ್ತಿ ಸಂಬಂಧಿತ ಯೋಜನೆ ಅಥವಾ ಹೂಡಿಕೆ ಮಾಡಲು ಹೆಚ್ಚು ಅನುಕೂಲಕರವಾಗಿರುವುದು. ಫೈನಾನ್ಶಿಯಲ್ ರಿಸ್ಕ್ ತೆಗೆದುಕೊಳ್ಳಬೇಡಿ. ಕಚೇರಿ ರಾಜಕೀಯದಿಂದ ದೂರವಿರಿ. ಹಠಾತ್ ಖರ್ಚುಗಳನ್ನು ತಪ್ಪಿಸಿ.

ವೃಷಭ ರಾಶಿ (Taurus)
ಸಾರ್ವಜನಿಕ ವಲಯ ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ದಿನ. ಸಿದ್ಧಿ ಯೋಗದ ಪ್ರಭಾವದಿಂದಾಗಿ, ಕ್ಯಾಂಪಸ್ ಪ್ಲೇಸ್ಮೆಂಟ್ ನಲ್ಲಿ ವಿದ್ಯಾರ್ಥಿಗಳು ಆಯ್ಕೆ ಆಗಬಹುದು. ಕೆಲಸದ ಹೊರೆ ಕಡಿಮೆ ಮಾಡಲು ಪ್ರಯತ್ನಿಸಿ. ವಿಶೇಷ ವ್ಯಕ್ತಿಯ ಆಗಮನದೊಂದಿಗೆ ಮನೆ ವಾತಾವರಣ ಸಂತೋಷದಿಂದ ಕೂಡಿರುವುದು. ಆರ್ಥಿಕ ಪರಿಸ್ಥಿತಿ ಸಹಜವಾಗಿರುವುದು.
ಮಿಥುನ ರಾಶಿ (Gemini)
ವಹಿಸಿರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡುವಿರಿ. ಕಚೇರಿ ಕೆಲಸದಲ್ಲಿ ಯಾರನ್ನೂ ಹಸ್ತಕ್ಷೇಪ ಮಾಡಲು ಬಿಡಬೇಡಿ. ಮಗುವಿನ ಸಾಧನೆ ಸಂತೋಷ ತರುವುದು. ಹಣ ಖರ್ಚು ಮಾಡುವಾಗ ಎಚ್ಚರ ಇರಲಿ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.
ಕರ್ಕಾಟಕ ರಾಶಿ (Cancer)
ಹೊಸ ಉಪಕರಣ ಅಥವಾ ಯಂತ್ರೋಪಕರಣ ಖರೀದಿಸುವ ಯೋಜನೆ ಇದ್ದರೆ ಯಶಸ್ಸು ಸಿಗುವುದು. ಮಧ್ಯಾಹ್ನದ ನಂತರ ಪರಿಸ್ಥಿತಿ ಅನುಕೂಲಕರವಾಗಿರುವುದು.ಕೆಲವು ಸಣ್ಣ ಪುಟ್ಟ ತಪ್ಪುಗಳು ಸಮಸ್ಯೆಗಳನ್ನು ಸೃಷ್ಟಿಸಬಹುದು. ಗಂಡ ಹೆಂಡತಿ ನಡುವಿನ ಸಂಬಂಧ ಮಧುರವಾಗಿರುವುದು. ಕುಟುಂಬದ ವಾತಾವರಣ ಸಂತೋಷವಾಗಿರುವುದು.
ಸಿಂಹ ರಾಶಿ (Leo)
ಮಾಧ್ಯಮ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭವಾಗುವುದು. ಹಣ ಇಲ್ಲದೆ ನಿಂತು ಹೋಗಿರುವ ಕೆಲಸವನ್ನು ಮತ್ತೆ ಶುರು ಮಾಡಬಹುದು. ಹಣದ ಸಮಸ್ಯೆ ನಿವಾರಣೆಯಾಗುವುದು. ದೇಹದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹ ಇರುವುದು.
ಕನ್ಯಾ ರಾಶಿ (Virgo)
ಸಿದ್ಧಿ ಯೋಗದ ಪರಿಣಾಮವಾಗಿ ವ್ಯವಹಾರದಲ್ಲಿ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ನಿರಂತರವಾಗಿ ಸುಧಾರಿಸುವುದು.ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಮುಂದುವರೆಯುವಿರಿ. ಪರಸ್ಪರ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಆರೋಗ್ಯ ಸಮಸ್ಯೆ ಕಾಡಬಹುದು.
ತುಲಾ ರಾಶಿ (Libra)
ಯಾವುದೇ ಒಪ್ಪಂದ ಅಥವಾ ಅಗತ್ಯ ದಾಖಲೆಗೆ ಸಹಿ ಹಾಕುವ ಮೊದಲು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಹಣ ಖರ್ಚು ಮಾಡುವ ಮೊದಲು ಸರಿಯಾಗಿ ಯೋಚನೆ ಮಾಡಿ. ಕೌಟುಂಬಿಕ ಸಂತೋ ಹೆಚ್ಚಾಗುವುದು. ವಿದ್ಯಾರ್ಥಿಗಳು ಸೋಮಾರಿತನ ಮಾಡುವರು.
ವೃಶ್ಚಿಕ ರಾಶಿ (Scorpio)
ಕಚೇರಿ ಕೆಲಸ ಉತ್ತಮವಾಗಿ ಸಿಗುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಮಡಬಹುದು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ಸಿದ್ಧಿ ಯೋಗದಿಂದ ಹಣಕಾಸಿನ ಸ್ಥಿತಿ ಬಲಗೊಳ್ಳುವುದು. ಹೊರಗೆ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು. ಆರೋಗ್ಯ ಉತ್ತಮವಾಗಿರುವುದು.
ಧನು ರಾಶಿ (Sagitarius)
ಹೂಡಿಕೆ ಮಾಡುವುದಕ್ಕೆ ಸಮಯ ಅನುಕೂಲಕರವಾಗಿರುವುದು. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗುವುದು. ತಂತ್ರಜ್ಞಾನ, ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುವವರು ಉತ್ತಮ ಲಾಭ ಗಳಿಸುವರು.ಆದಾಯದ ಹೊಸ ಮೂಲ ತೆರೆದುಕೊಳ್ಳುವುದು. ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.
ಮಕರ ರಾಶಿ(Capricorn)
ಬಡ್ತಿ ಸಿಕ್ಕಿ ವೇತನ ಹೆಚ್ಚಾಗುವುದು. ಮನಸ್ಸಿನ ಸಂತೋಷ ಹೆಚ್ಚಾಗುವುದು. ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು. ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಮಯ ಕಳೆಯುವಿರಿ. ಅತಿಯಾದ ಕೆಲಸ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ವ್ಯವಹಾರ ಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು. ಆರೋಗ್ಯ ಉತ್ತಮವಾಗಿರುವುದು.
ಕುಂಭ ರಾಶಿ (Aquarius)
ಇವತ್ತಿನ ಗ್ರಹ ಸ್ಥಾನ ವ್ಯಾಪಾರಕ್ಕೆ ಉತ್ತಮ ಸಮಯವನ್ನು ಒದಗಿಸುವುದು. ಇವತ್ತು ಮಾತನಾಡುವಾಗ ಎಚ್ಚರ ಇರಲಿ. ಮಾತಿನಿಂದಲೇ ಸಮಸ್ಯೆಯಾಗಬಹುದು. ಪ್ರತಿಷ್ಠೆ ಹೆಚ್ಚಾಗುವುದು. ವೈವಾಹಿಕ ಜೀವನ ನೆಮ್ಮದಿಯಂದ ಇರುವುದು. ವ್ಯಾಪಾರ ವಿಸ್ತರಣೆ ಲಾಭ ತರುವುದು. ಆರೋಗ್ಯ ಕಾಳಜಿ ಇರಲಿ.
ಮೀನ ರಾಶಿ (Pisces)
ಸಿದ್ಧಿ ಯೋಗದಿಂದ ವ್ಯವಹಾರ ಮತ್ತು ವ್ಯವಹಾರಗಳಲ್ಲಿ ಲಾಭವಾಗುವುದು. ಇವತ್ತು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುವುದು.ಪೂರ್ವಜರ ಆಸ್ತಿ ಲಾಭ ತರುವುದು. ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯಬಹುದು. ಆಸ್ತಿ ಖರೀದಿ ಮತ್ತು ಮಾರಾಟ ಲಾಭಕ್ಕೆ ಕಾರಣವಾಗುವುದು. ಆರೋಗ್ಯ ಉತ್ತಮವಾಗಿರುವುದು.


Click it and Unblock the Notifications
