Horoscope Today: ದಿನ ಭವಿಷ್ಯ ಏಪ್ರಿಲ್ 8- ಈ ರಾಶಿಗೆ ಹನುಮನಿಂದ ಶಕ್ತಿ, ಸಂಪತ್ತು
ಏಪ್ರಿಲ್ 8 ಮಂಗಳವಾರ ರಾಹುಕಾಲದ ಸಮಯ ಮದ್ಯಾಹ್ನ 3:25 ರಿಂದ ಸಂಜೆ 4:57ರವರೆಗೆ ಇರುತ್ತದೆ. ಈ ದಿನದ ಜಾತಕ ಹೇಗಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಮೂಲಕ 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಅನಗತ್ಯವಾಗಿ ಓಡಾಟ ತಪ್ಪಿಸಬೇಕು. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಖರ್ಚು ಕೂಡ ಹೆಚ್ಚಾಗಲಿದೆ. ಮನೆ ಬದಲಾವಣೆಯ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಆತ್ಮೀಯತೆ ಕಡಿಮೆಯಾಗುವುದು. ಬೆಳಿಗ್ಗೆ ಸೂರ್ಯ ಮಂತ್ರವನ್ನು ಪಠಿಸಿ. ಈ ದಿನ ಹನುಮನನ್ನು ಪೂಜಿಸುವುದು ತುಂಬಾ ಉತ್ತಮ ಫಲವನ್ನು ನೀಡುತ್ತದೆ.
ಪರಿಹಾರ: ಹನುಮಾನ್ ಚಾಲೀಸಾ ಪಠಿಸಿ ಮತ್ತು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಸೂರ್ಯನಿಗೆ ಅರ್ಪಿಸಿ.

ವೃಷಭ ರಾಶಿ
ವೈಯಕ್ತಿಕ ಸಂತೋಷದಲ್ಲಿ ಅಡಚಣೆ ಉಂಟಾಗಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನೀವು ಕೆಲವು ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಮಾತಿನಲ್ಲಿ ಮಾಧುರ್ಯ ಇರಲಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಬೆಳಿಗ್ಗೆ ಸೂರ್ಯ ಮಂತ್ರವನ್ನು ಪಠಿಸಿ. ಬಡ ಹುಡುಗಿಗೆ ಬಟ್ಟೆ ದಾನ ಮಾಡಿದರೆ ಹನುಮನ ಆಶೀರ್ವಾದ ಸುಲಭವಾಗಿ ಪಡೆಯಬಹುದು.
ಪರಿಹಾರ: ಬಾಳೆ ಮರಕ್ಕೆ ನೀರನ್ನು ಅರ್ಪಿಸಿ ಮತ್ತು 'ಓಂ ಬೃಮ್ ಬೃಹಸ್ಪತಯೇ ನಮಃ' ಎಂಬ ಮಂತ್ರವನ್ನು 108 ಬಾರಿ ಪಠಿಸಿ.
ಮಿಥುನ ರಾಶಿ
ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಹ್ಲಾದಕರ ಪ್ರಯಾಣದ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ. ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರಗೊಳ್ಳುತ್ತವೆ.
ಪರಿಹಾರ: ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ ಮತ್ತು 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸಿ.
ಕರ್ಕಾಟಕ ರಾಶಿ
ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಆರ್ಥಿಕ ವಿಷಯಗಳಲ್ಲಿ ಲಾಭ ಗಳಿಸಲು ಹೆಚ್ಚು ಶ್ರಮಪಡಬೇಕು. ರಾಜಕೀಯಕ್ಕೆ ಸೇರುವ ಆಸೆ ಹೊಂದಿರುವವರಿಗೆ ಇದು ಶುಭ ದಿನ. ಕುಟುಂಬದಲ್ಲಿ ವಾತಾವರಣ ಹಿತವಾಗಿರಲು ನಿತ್ಯ ಸೂರ್ಯದೇವನನ್ನು ಪೂಜಿಸಿ. ನಿಮ್ಮ ಮಾತನ್ನು ನಿಯಂತ್ರಿಸಿ. ಬೆಳಿಗ್ಗೆ ಹನುಮಾನ್ ಚಾಲೀಸ ಪಠಿಸಿ. ಇದರಿಂದ ಕೆಲಸದಲ್ಲಿನ ಅಡೆತಡೆಗಳು ಶತ್ರು ಕಾಟ ದೂರವಾಗಲಿದೆ.
ಪರಿಹಾರ: ಶಿವಲಿಂಗಕ್ಕೆ ಹಸಿ ಹಾಲನ್ನು ಅರ್ಪಿಸಿ ಮತ್ತು 'ಓಂ ಚಂದ್ರಾಯ ನಮಃ' ಮಂತ್ರವನ್ನು ಪಠಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ನಿಮಗೆ ಪ್ರಗತಿ ಹೆಚ್ಚಾಗಲಿದೆ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶುಭ ಉತ್ಸವಗಳಲ್ಲಿ ಭಾಗವಹಿಸುವಿಕೆ ಇರುತ್ತದೆ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಧಾರ್ಮಿಕ ಒಲವು ಹೆಚ್ಚಾಗುತ್ತದೆ.
ಪರಿಹಾರ: ಅರಳಿ ಮರವನ್ನು ಪ್ರದಕ್ಷಿಣೆ ಹಾಕಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.
ಕನ್ಯಾ ರಾಶಿ
ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಮನಸ್ಸು ಈ ದಿನ ಚಂಚಲದಿಂದ ಕೂಡಿರುತ್ತದೆ. ಪ್ರೇಮ ಪ್ರಯತ್ನಗಳು ಫಲ ನೀಡುವುದಿಲ್ಲ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ.
ಪರಿಹಾರ: ಗಣಪತಿಯನ್ನು ಪೂಜಿಸಿ ಮತ್ತು 'ಓಂ ಕೇತವೇ ನಮಃ' ಎಂದು ಜಪಿಸಿ.
ತುಲಾ ರಾಶಿ
ತುಲಾ ರಾಶಿಯವರ ರಾಜಕೀಯಕ್ಕೆ ಸೇರುವ ಆಸೆ ಈಡೇರುವುದಿಲ್ಲ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನಸ್ಸು ಚಂಚಲವಾಗಿರುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಇಂದು ಬೆಳಗ್ಗೆ ಹನುಮಾನ್ ಚಾಲೀಸ ಪಠಿಸಿ. ಇದರಿಂದ ನಿಮ್ಮ ಎಲ್ಲಾ ಪ್ರಯತ್ನಗಳು ಫಲ ನೀಡುತ್ತವೆ.
ಪರಿಹಾರ: ದುರ್ಗಾ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ ಮತ್ತು 'ಓಂ ಹ್ರೀಂ ದುರ್ಗಾಯೈ ನಮಃ' ಎಂಬ ಮಂತ್ರವನ್ನು ಪಠಿಸಿ.
ವೃಶ್ಚಿಕ ರಾಶಿ
ಈ ರಾಶಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಕೆಲಸದಲ್ಲಿ ಯಾರ ಬೆಂಬಲ ಕೂಡ ನಿಮಗೆ ಇರುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಗಾಗಿ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಬೆಳಗ್ಗೆ ಹನುಮಾನ್ ಚಾಲೀಸಾ ಪಠಿಸಿ. ಕೋತಿಗೆ ಆಹಾರ ನೀಡಿ. ಇದರಿಂದ ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗುತ್ತವೆ.
ಪರಿಹಾರ: ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ ಮತ್ತು 'ಓಂ ಅಂಗರ್ಕಾಯ ನಮಃ' ಎಂದು ಜಪಿಸಿ.
ಧನು ರಾಶಿ
ಧನು ರಾಶಿಯವರು ಸಂಪತ್ತು ಹೆಚ್ಚಾಗಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಈ ದಿನ ನಿಮ್ಮ ಆತ್ಮಗೌರವ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳಿಗೆ ಫಲ ಸಿಗುವುದು ಸುಲಭವಲ್ಲ. ನೀವು ಆರ್ಥಿಕವಾಗಿ ಸದೃಢರಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವ್ಯಾಪಾರ ಪ್ರಯತ್ನಗಳು ಫ ನೀಡಬಹುದು. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ.
ಪರಿಹಾರ: ವಿಷ್ಣು ಸಹಸ್ರನಾಮ ಪಠಿಸಿ ಮತ್ತು ಅಗತ್ಯವಿರುವವರಿಗೆ ಹಳದಿ ವಸ್ತುಗಳನ್ನು ದಾನ ಮಾಡಿ.
ಮಕರ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಅಧಿಕಾರಿ ಅಥವಾ ಮನೆಯ ಮುಖ್ಯಸ್ಥರಿಂದ ನೀವು ಒತ್ತಡವನ್ನು ಎದುರಿಸಬಹುದು. ಮನಸ್ಸು ಗೊಂದಲಮಯವಾಗಿ ಇರುತ್ತದೆ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ಸೂರ್ಯನಿಗೆ ಪೂಜೆ ಮಾಡಿ ದಿನವನ್ನು ಶುರು ಮಾಡಿದರೆ ಉತ್ತಮ.
ಪರಿಹಾರ: ಶನಿ ದೇವಾಲಯದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ 'ಓಂ ಶಂ ಶನೈಶ್ಚರಾಯ ನಮಃ' ಎಂದು ಜಪಿಸಿ.
ಕುಂಭ ರಾಶಿ
ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಕೆಲಸದಲ್ಲಿ ಶತ್ರುಗಳ ಕಾಟ ಇರುವುದಿಲ್ಲ. ಶತ್ರುಗಳೆಲ್ಲಾ ಮಿತ್ರರಾಗುವ ಸಮಯ ಇದು. ಸೂರ್ಯನಿಗೆ ಪೂಜೆ ಮಾಡಿ. ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಪರಿಹಾರ: ಹರಿಯುವ ನೀರಿನಲ್ಲಿ ತೆಂಗಿನಕಾಯಿಯನ್ನು ತೇಲಿಸಿ 'ಓಂ ರಹವೇ ನಮಃ' ಎಂದು ಜಪಿಸಿ.
ಮೀನ ರಾಶಿ
ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಈ ದಿನವನ್ನು ಆರಂಭ ಮಾಡುವ ಮುನ್ನ ದೇವಸ್ಥಾನಕ್ಕೆ ತೆರಳುವುದು ತುಂಬಾ ಒಳ್ಳೆಯದು.
ಪರಿಹಾರ: ಶಿವನನ್ನು ಆರಾಧಿಸಿ. ಇದರೊಂದಿಗೆ, 'ಓಂ ನಮಃ ಶಿವಾಯ' ಎಂದು ಜಪಿಸಿ ಮತ್ತು ಬಿಳಿ ಹೂವುಗಳನ್ನು ಅರ್ಪಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications