Horoscope Today: ದಿನ ಭವಿಷ್ಯ ಏಪ್ರಿಲ್ 12- ಈ ರಾಶಿಗೆ ಶನಿ ಅನುಗ್ರಹದಿಂದ ಸುಖ ಸಮೃದ್ಧಿ
ಏಪ್ರಿಲ್ 12 ಶನಿವಾರ ಬ್ರಹ್ಮ ಮುಹೂರ್ತ ಬೆಳಗ್ಗೆ 04:29 ರಿಂದ ಬೆಳಗ್ಗೆ 05:14ರವೆರೆಗೆ, ಅಭಿಜಿತ್ ಕಾಲ ಬೆಳಗ್ಗೆ 11:56 ರಿಂದ ಮಧ್ಯಾಹ್ನ 12:48ರವರೆಗೆ, ವಿಜಯ ಮುಹೂರ್ತ ಸಂಜೆ 06:44 ರಿಂದ ಸಂಜೆ 07:06ರವರೆಗೆ ಇರುತ್ತದೆ. ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ನಿಮಗೆ ಈ ದಿನ ಏರಿಳಿತಗಳಿಂದ ಕೂಡಿರುತ್ತದೆ. ಆರೋಗ್ಯದ ಕೊರತೆಯಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಕುಟುಂಬದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಪತ್ನಿಯೊಂದಿಗೆ ವಾದ ಉಂಟಾಗಬಹುದು. ಹೀಗಾಗಿ ನಿಮ್ಮ ಮಾತನ್ನು ನಿಯಂತ್ರಿಸಿ. ಈ ಎಲ್ಲಾ ಸಮಸ್ಯೆಗಳಿಂದ ದೂರವಾಗಲು ಇಂದು ಹನುಮಾನ್ ಚಾಲೀಸವನ್ನು ಪಠಿಸಿ. ಸಾಧ್ಯವಾದರೆ ಶನಿ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ.

ವೃಷಭ ರಾಶಿ
ಈ ರಾಶಿಗಳ ಜನರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು. ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಕೊಡಿ. ಕುಟುಂಬದಲ್ಲಿ ಶುಭ ಕಾರ್ಯಕ್ರಮವೊಂದರ ಯೋಜನೆ ರೂಪಿಸಲಾಗುವುದರಿಂದ ಮನಸ್ಸಿನಲ್ಲಿ ಉತ್ಸಾಹ ತುಂಬುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಶುಭವಾಗಲಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ವ್ಯವಹಾರದಲ್ಲಿ ಹೆಚ್ಚು ಹಣವನ್ನು ಸ್ವೀಕರಿಸುವಿರಿ. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಕುಟುಂಬ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಪೂರ್ವಜರ ಆಸ್ತಿ ದೊರೆಯಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನವಾಗಿದೆ. ಗಂಡ ಹೆಂಡತಿಯ ನಡುವಿನ ಇದ್ದ ನಿರಂತರ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ವ್ಯವಹಾರದಲ್ಲಿ ಲಾಭ ಗಳಿಸುವ ಅವಕಾಶ ಸಿಗುವುದು. ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.
ಸಿಂಹ ರಾಶಿ
ಈ ದಿನ ನೀವು ಕೆಲವು ಚರ್ಚೆಯಲ್ಲಿ ಭಾಗಿಯಾಗಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ. ಕೆಲವು ಪ್ರಮುಖ ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು. ಆರೋಗ್ಯ ಹದಗೆಡಬಹುದು. ದೀರ್ಘ ಪ್ರಯಾಣ ಇತ್ಯಾದಿಗಳನ್ನು ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಾಗರೂಕರಾಗಿರಿ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಮಾನಸಿಕ ಒತ್ತಡ ಕಾಡಬಹುದು. ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಏನಾದರೂ ವಿವಾದ ಉಂಟಾಗಬಹುದು. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಯಾಕೆಂದರೆ ನಷ್ಟವಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಈ ದಿನ ತುಲಾ ರಾಶಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ತುಂಬಾ ಮುಖ್ಯ. ಈ ದಿನ ನಿಮಗೆ ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಕಚೇರಿಯಲ್ಲಿ ಬಾಸ್ ಜೊತೆ ಜಗಳವಾಗಬಹುದು. ಎದುರಾಳಿಗಳು ಪ್ರಾಬಲ್ಯ ಸಾಧಿಸುತ್ತಾರೆ. ನೀವು ನಿಮ್ಮ ವಿರೋಧಿಗಳಿಗೆ ತಲೆಬಾಗಬೇಕಾಗಬಹುದು. ನಿಮ್ಮ ಕುಟುಂಬ ಸದಸ್ಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
ವೃಶ್ಚಿಕ ರಾಶಿ
ವ್ಯಾಪಾರ ಮಾಡುವವರು ಇಂದು ಜಾಗರೂಕರಾಗಿರಬೇಕು. ನೀವು ದೊಡ್ಡ ವ್ಯವಹಾರದಲ್ಲಿ ಮೋಸ ಹೋಗಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಯಾವುದೇ ಅಪರಿಚಿತರಿಗೆ ಹಣವನ್ನು ಸಾಲವಾಗಿ ನೀಡಬೇಡಿ. ಯಾಕೆಂದರೆ ನೀವು ನಷ್ಟ ಅನುಭವಿಸಬೇಕಾಗಬಹುದು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಪತ್ನಿಯೊಂದಿಗೆ ವಿವಾದ ಉಂಟಾಗಬಹುದು.
ಧನು ರಾಶಿ
ನೀವು ಯಾವುದೋ ಪಿತೂರಿಯ ಬಲಿಪಶುವಾಗಬಹುದು. ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುವ ಸಾಧ್ಯತೆ ಇದೆ. ಹೊಸ ಕೆಲಸ ಪ್ರಾರಂಭಿಸಲು ಈಗ ಸರಿಯಾದ ಸಮಯವಲ್ಲ. ಕುಟುಂಬ ಸದಸ್ಯರನ್ನು ಸಂತೋಷವಾಗಿಡಿ. ದಾಂಪತ್ಯದಲ್ಲಿ ಸಂತೋಷ ಇರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಲು ಶನಿದೇವನನ್ನು ಪೂಜಿಸಿ.
ಮಕರ ರಾಶಿ
ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಆರೋಗ್ಯದಲ್ಲಿ ನೀವು ಪ್ರಯೋಜನಗಳನ್ನು ಅನುಭವಿಸುವಿರಿ. ನಿಮಗೆ ಹತ್ತಿರವಿರುವ ಯಾರೊಬ್ಬರ ಬಗ್ಗೆ ದುಃಖದ ಸುದ್ದಿ ಸಿಗುತ್ತದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಬಹುದು. ಈ ಸಮಯದಲ್ಲಿ ಹೊಸ ವಾಹನ ಇತ್ಯಾದಿ ಖರೀದಿಸಬೇಡಿ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ವಾದಗಳಿಂದ ದೂರವಿರಿ. ನಿಮ್ಮ ಮಾತನ್ನು ನಿಯಂತ್ರಿಸಿ.
ಕುಂಭ ರಾಶಿ
ಈ ದಿನ ನಿಮಗೆ ಶುಭ ಸೂಚನೆಗಳನ್ನು ತರುತ್ತಿದೆ. ಕೆಲಸ ಪೂರ್ಣಗೊಳ್ಳಲು ನೀವು ಶ್ರಮಪಡಬೇಕು. ವಿಶೇಷ ವ್ಯಕ್ತಿಯನ್ನು ಭೇಟಿಯಾಗುವುದರಿಂದ ವ್ಯವಹಾರ ಕ್ಷೇತ್ರದಲ್ಲಿ ಹೊಸ ಕೆಲಸ ಸಿಗಬಹುದು. ಕುಟುಂಬದಲ್ಲಿ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆ ಇರುತ್ತದೆ. ಇಂದು ಶನಿದೇವನನ್ನು ಪೂಜಿಸಿ. ಇದರಿಂದಾಗಿ ನೀವು ನಿಮ್ಮ ಭವಿಷ್ಯದಲ್ಲಿ ಹೆಚ್ಚು ಲಾಭ ಪಡೆಯುವಿದಿ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ತುಂಬಿದ ದಿನವಾಗಿರುತ್ತದೆ. ನೀವು ಆರೋಗ್ಯದಲ್ಲಿ ಕ್ಷೀಣತೆಯನ್ನು ಅನುಭವಿಸುವಿರಿ. ನೀವು ಪ್ರಾರಂಭಿಸಲು ಬಯಸುವ ಯಾವುದೇ ಹೊಸ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ. ನಿಮಗೆ ಹತ್ತಿರವಿರುವ ಯಾರೊಬ್ಬರ ಬಗ್ಗೆ ದುಃಖದ ಸುದ್ದಿ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications