2020 ರ ಬಗ್ಗೆ ಆ ಕಾಲಜ್ಞಾನಿ ಹೇಳಿದ ಕರಾಳ ಭವಿಷ್ಯ ನಿಜವಾಗ್ತಿದ್ಯಲ್ಲಾ!

ಚೀನಾದಲ್ಲಿ ಹುಟ್ಟಿಕೊಂಡ ಮಾರಣಾಂತಿಕ ಕೊರೊನಾ ವೈರಸ್ ಈಗ ವಿಶ್ವದಾದ್ಯಂತ ಜನರನ್ನು ಬೆಂಬಿಡದೆ ಬಾಧಿಸುತ್ತಿದೆ. ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಸಾವು-ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ಭೀತಿಯಿಂದಾಗಿ, ಎಲ್ಲರೂ ಮನೆಯಲ್ಲಿ ಅವಿತು ಕೂರುವ ಹಾಗಾಗಿದೆ. ಒಟ್ನಲ್ಲಿ, ಕೋವಿಡ್-19 ರೋಗದಿಂದ ಈ ವರ್ಷ ಎಲ್ಲರ ನೆಮ್ಮದಿ ಹಾಳಾಗಿದೆ.

2020 ರ ಈ ಕರಾಳ ಪರಿಸ್ಥಿತಿಯನ್ನ ಖ್ಯಾತ ಭವಿಷ್ಯಕಾರ ನಾಸ್ಟ್ರಡಾಮಸ್ ನೂರಾರು ವರ್ಷಗಳ ಹಿಂದೆಯೇ ಸರಿಯಾಗಿ ಊಹಿಸಿದ್ದರು ಎನ್ನಲಾಗಿದೆ. ಈಗ ಜಗತ್ತಿನಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ನಾಸ್ಟ್ರಡಾಮಸ್ ಹೇಳಿರುವುದು ನಿಜವೆನಿಸುತ್ತಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ನಾಸ್ಟ್ರಡಾಮಸ್ ಜಗದ್ವಿಖ್ಯಾತ ಭವಿಷ್ಯಕಾರ. ಫ್ರಾನ್ಸ್ ಮೂಲದ ನಾಸ್ಟ್ರಡಾಮಸ್ 'ದಿ ಪ್ರೋಫೆಸೀಸ್' ಎಂಬ ಪುಸ್ತಕದಲ್ಲಿ ಕಾವ್ಯಾತ್ಮಕ ಸಾಲುಗಳಿಂದ ಇಡೀ ಭೂಮಂಡಲದ ಬಗ್ಗೆಯೇ ಭವಿಷ್ಯ ನುಡಿದಿದ್ದರು. ಈ ಪುಸ್ತಕ 1555 ರಲ್ಲಿ ಪ್ರಕಟಗೊಂಡಿತ್ತು.

ನಾಸ್ಟ್ರಡಾಮಸ್ ನುಡಿದಿರುವ ಭವಿಷ್ಯಗಳಲ್ಲಿ ಬಹುತೇಕ ವಿಚಾರಗಳು ಜರುಗಿ ನಿಂತಿವೆ. ಹೀಗಾಗಿ, ಆತನ ನುಡಿಗಳೆಲ್ಲವೂ ವಾಸ್ತವಕ್ಕೆ ಹತ್ತಿರ ಎಂಬ ಭರವಸೆ ಮೂಡಿಸಿದೆ. ಸದ್ಯ 2020 ರ ವಿಶ್ವದ ಪರಿಸ್ಥಿತಿ ನೋಡ್ತಿದ್ರೆ, ನಾಸ್ಟ್ರಡಾಮಸ್ ಶತಮಾನಗಳ ಹಿಂದೆ ಊಹಿಸಿದ್ದು ಸರಿಯಾಗೇ ಇದೆ ಅಂತ ಹೇಳಲಾಗುತ್ತಿದೆ.!

202೦ ರ ಬಗ್ಗೆ ನಾಸ್ಟ್ರಡಾಮಸ್ ಹೇಳಿದ್ದೇನು.?

202೦ ರ ಬಗ್ಗೆ ನಾಸ್ಟ್ರಡಾಮಸ್ ಹೇಳಿದ್ದೇನು.?

ನಾಸ್ಟ್ರಡಾಮಸ್ ಭವಿಷ್ಯದ ಪ್ರಕಾರ, ''2020 ಮನುಕುಲದ ಹಿಂಸಾತ್ಮಕ ವರ್ಷ ಆಗಿರಲಿದೆ''. ಅದ್ಯಾವ ಅರ್ಥದಲ್ಲಿ ನಾಸ್ಟ್ರಡಾಮಸ್ ಈ ಸಾಲನ್ನ ಬರೆದಿದ್ದರೋ ಗೊತ್ತಿಲ್ಲ. ಆದರೆ ಇಡೀ ಮನುಕುಲಕ್ಕೆ ಮಹಾಮಾರಿಯಾಗಿ ಕೊರೊನಾ ವೈರಸ್ ಕಾಣಿಸಿಕೊಂಡು ಜನಸಾಗರವನ್ನೇ ಹಿಂಸೆಗೀಡು ಮಾಡಿರುವುದು ಅತಿಶಯೋಕ್ತಿಯೇನಲ್ಲ.

ವಿಶ್ವದ ಎಲ್ಲೆಡೆ ಮಹಾ ಆರ್ಥಿಕ ಕುಸಿತ!

ವಿಶ್ವದ ಎಲ್ಲೆಡೆ ಮಹಾ ಆರ್ಥಿಕ ಕುಸಿತ!

''ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ಆರ್ಥಿಕ ಕುಸಿತ 2020 ರಲ್ಲಿ ಉಂಟಾಗಲಿದೆ. ವ್ಯಾಪಾರಿ ವಲಯ ನೆಲಕಚ್ಚಲಿದೆ. ಸಾಲ ತೀರಿಸುವ ಶಕ್ತಿಯನ್ನು ಜನರು ಕಳೆದುಕೊಳ್ಳಲಿದ್ದಾರೆ. ಭಾರಿ ಆರ್ಥಿಕ ದಿವಾಳಿ ವಿಶ್ವದೆಲ್ಲೆಡೆ ಕಾಣಲಿದೆ'' ಎಂದು ಶತಮಾನಗಳ ಹಿಂದೆಯೇ ನಾಸ್ಟ್ರಡಾಮಸ್ ಊಹಿಸಿದ್ದರಂತೆ. ಈಗ ನೋಡಿದ್ರೆ, ಪ್ರತಿ ದಿನ ಜಾಗತಿಕ ಷೇರು ಮಾರುಕಟ್ಟೆ ಕುಸಿಯುತ್ತಿದೆ. ಸೆನ್ಸೆಕ್ಸ್ ಪಾತಾಳಕ್ಕೆ ಬೀಳುತ್ತಲೇ ಇದೆ. ಆರ್ಥಿಕತೆಯ ಬುಡ ಅಲುಗಾಡುತ್ತಿದೆ.!

ಭಾರತದಲ್ಲಿ ತೀವ್ರ ಆಂತರಿಕ ಕಲಹ

ಭಾರತದಲ್ಲಿ ತೀವ್ರ ಆಂತರಿಕ ಕಲಹ

''ಭಾರತದಲ್ಲೂ ಬಹುವಾಗಿ ಆಂತರಿಕ ಜಗಳಗಳು ನಡೆಯುತ್ತವೆ. ಮತೀಯ ಗಲಭೆಗಳು ಹೆಚ್ಚಲಿವೆ. ಆರ್ಥಿಕ ಸಂಕಷ್ಟಕ್ಕೆ ಭಾರತ ತುತ್ತಾಗುತ್ತದೆ. ಪ್ರಾಕೃತಿಕ ಹಾನಿಗಳು ಬಹುಮಟ್ಟಿಗೆ 2020 ರಲ್ಲಿ ಸಂಭವಿಸುತ್ತವೆ'' ಎಂದು ನಾಸ್ಟ್ರಡಾಮಸ್ ಹೇಳಿದ್ದರಂತೆ. ಕಾಕತಾಳೀಯವೆಂಬಂತೆ ಹಿಂಸಾತ್ಮಕ ಪ್ರತಿಭಟನೆಗಳು ಈ ವರ್ಷ ಭಾರತದಲ್ಲಿ ಜರುಗಿವೆ.

ಹೊಸ ತಲೆಮಾರಿನ ಹುಟ್ಟು

ಹೊಸ ತಲೆಮಾರಿನ ಹುಟ್ಟು

''ಇವಿಷ್ಟೇ ಅಲ್ಲದೇ, 2020 ಹೊಸ ಘಟನೆಗಳಿಗೂ ಸಾಕ್ಷಿ ಆಗುತ್ತಂತೆ. ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವ ಹೊಸ ತಲೆಮಾರಿನ ಉದಯವೂ ಇದೇ ವರ್ಷ ಆಗುತ್ತೆ'' ಎಂದು ಪುಸ್ತಕದಲ್ಲಿ ನಾಸ್ಟ್ರಡಾಮಸ್ ಉಲ್ಲೇಖಿಸಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+