Budhaditya Yoga 2025: ಬುಧಾದಿತ್ಯ ಯೋಗ- ಈ ರಾಶಿಗೆ ಸೂರ್ಯ ದೇವನ ಅನುಗ್ರಹದಿಂದ ಎಲ್ಲವೂ ಸುಲಭ
ವೈದಿಕ ಜ್ಯೋತಿಷ್ಯದ ಪ್ರಕಾರ ಆದಿತ್ಯ ಎಂಬ ಪದವು ಸೂರ್ಯನಿಗೆ ಸಮಾನಾರ್ಥಕವಾಗಿದೆ. ಜಾತಕದಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಇರುವಾಗ ಬುಧಾದಿತ್ಯ ಯೋಗ ರೂಪಗೊಳ್ಳುತ್ತದೆ. ಇದು ರಾಜಯೋಗಕ್ಕೆ ಸಮಾನವಾಗಿರುವ ಯೋಗವಾಗಿದ್ದು, ಬುಧಾದಿತ್ಯ ಯೋಗ ರೂಪುಗೊಂಡಾಗಲೆಲ್ಲಾ ಕೆಲವು ರಾಶಿಗಳು ಅದರಿಂದ ಶುಭ ಪ್ರಯೋಜನ ಪಡೆಯುತ್ತವೆ.
ಮಾರ್ಚ್ 28 ಶುಕ್ರವಾರ ಬುಧ ಮತ್ತು ಸೂರ್ಯ ಒಟ್ಟಿಗೆ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತವೆ. ಮೀನ ರಾಶಿಯಲ್ಲಿ ಬುಧ ಹಾಗೂ ಸೂರ್ಯನ ಸಂಯೋಗವಾಗಿ ಬುಧಾದಿತ್ಯ ಎಂಬ ಶುಭ ಯೋಗ ರೂಪಗೊಳ್ಳುತ್ತದೆ. ಇದು ಹಲವಾರು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಹಾಗಾದರೆ ಯಾವ ರಾಶಿಗಳು ಅದರ ಶುಭ ಪರಿಣಾಮವನ್ನು ಪಡೆಯುತ್ತಾರೆ? ಯಾರು ಹಣ ಗಳಿಸುವ ಸಾಧ್ಯತೆಯಿದೆ ಎಂದು ಈಗ ತಿಳಿಳಿಯೋಣ.
ಬುಧಾದಿತ್ಯ ಯೋಗದ ಪ್ರಯೋಜನಗಳು:-
ಬುಧಾದಿತ್ಯ ಯೋಗ ವ್ಯಕ್ತಿಯನ್ನು ಬುದ್ಧಿವಂತ, ಯಶಸ್ವಿ ವೃತ್ತಿಜೀವನ, ಒಳ್ಳೆಯ ಹೆಸರು, ತೀಕ್ಷ್ಣ ಮನಸ್ಸು, ಉತ್ತಮ ವಿಶ್ಲೇಷಣಾತ್ಮಕ ಸಾಮರ್ಥ್ಯ, ಹೆಚ್ಚಿನ ಶಕ್ತಿಯ ಮಟ್ಟಗಳು, ಮಾನಸಿಕವಾಗಿ ಬಲಿಷ್ಠನನ್ನಾಗಿ ಮಾಡುತ್ತದೆ. ಅದರ ಪ್ರಭಾವದಿಂದಾಗಿ ಆ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಸಿಗುವ ಉತ್ತಮ ಅವಕಾಶಗಳು ಸಿಗುತ್ತವೆ. ವ್ಯವಹಾರದ ಮೂಲಕ ಲಕ್ಷಾಂತರ ಸಂಪಾದಿಸಲು ಸಹಾಯ ಮಾಡುತ್ತದೆ. ಅದರ ಶುಭ ಪರಿಣಾಮದಿಂದಾಗಿ ವ್ಯಕ್ತಿಯು ಬೇಗನೆ ಕಲಿಯುವ ಸಾಮರ್ಥ್ಯವನ್ನು ಪಡೆಯುತ್ತಾನೆ.
ರಾಶಿಗಳ ಮೇಲೆ ಬುಧಾದಿತ್ಯ ಯೋಗದ ಶುಭ ಪರಿಣಾಮ:-

ಮಿಥುನ ರಾಶಿ
ಮಾರ್ಚ್ 28ರಂದು ರೂಪುಗೊಳ್ಳುತ್ತಿರುವ ಬುಧಾದಿತ್ಯ ಯೋಗದಿಂದಾಗಿ ಮಿಥುನ ರಾಶಿಯವರಿಗೆ ಆರ್ಥಿಕ ಪ್ರಗತಿಯ ಲಕ್ಷಣಗಳಿವೆ. ಕೆಲಸದಲ್ಲಿ ಕೆಲವು ಅಡೆತಡೆಗಳು ಇದ್ದಲ್ಲಿ ಅವುಗಳನ್ನು ಸಹ ನಿವಾರಣೆಯಾಗಲಿವೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಜೀವನ ಅತ್ಯಾದ್ಭುತವಾಗಿರುತ್ತದೆ. ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ ಇದಾಗಿದೆ.

ಕರ್ಕಾಟಕ ರಾಶಿ
ಬುಧಾದಿತ್ಯ ಯೋಗದ ಪರಿಣಾಮದಿಂದಾಗಿ ಕರ್ಕಾಟಕ ರಾಶಿಯ ಜನರು ಆರ್ಥಿಕ ಲಾಭವನ್ನು ಪಡೆಯುತ್ತಿದ್ದಾರೆ. ಅವರ ಆದಾಯವೂ ಹೆಚ್ಚಾಗುತ್ತದೆ. ನಿಮ್ಮ ಹಣದ ಸಮಸ್ಯೆಗೆ ಪರಿಹಾರವನ್ನು ಕೆಲವು ಅಪರಿಚಿತ ವ್ಯಕ್ತಿಯಿಂದ ಕಂಡುಹಿಡಿಯಬಹುದು. ಶೈಕ್ಷಣಿಕ ಕೆಲಸದಲ್ಲಿ ನಿಮಗೆ ಗೌರವ ಸಿಗುತ್ತದೆ. ಹೊಸ ಮನೆ, ಕಾರು ಖರೀದಿಗೆ ಅವಕಾಶ ಇದೆ.

ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಬುಧ ಮತ್ತು ಸೂರ್ಯನ ಈ ಶುಭ ಸಂಯೋಜನೆಯು ಹಠಾತ್ ಪ್ರಯೋಜನಗಳನ್ನು ತರುತ್ತದೆ. ಪಾಲುದಾರಿಕೆ ಕೆಲಸಗಳು ವೇಗಗೊಳ್ಳುತ್ತವೆ. ಸಮಾಜದಲ್ಲಿ ಸ್ಥಾನಮಾನ ಮತ್ತು ಅಂತಸ್ತು ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಜೀವನ ಸಂಗಾತಿಯನ್ನು ಹುಡುಕಲು ಇದು ಉತ್ತಮ ಸಮಯ. ಪ್ರೇಮ ಜೀವನ ಕೂಡ ನೀವಂದುಕೊಂಡಂತೆ ಇರಲಿದೆ.

ಧನು ರಾಶಿ
ಬುಧಾದಿತ್ಯ ಯೋಗದ ಶುಭ ಪರಿಣಾಮದಿಂದಾಗಿ ಧನು ರಾಶಿಯ ಜನರು ವ್ಯವಹಾರದಲ್ಲಿ ಲಾಭ ಪಡೆಯಲಿದ್ದಾರೆ. ಹೊಸದನ್ನು ಮಾಡುವ ನಿಮ್ಮ ಪ್ರಯತ್ನ ಫಲ ನೀಡುತ್ತದೆ. ನೀವು ಯಾರಿಂದಲೂ ಹಣವನ್ನು ಪಡೆಯುವಿದಿಲ್ಲ. ಹಣ ನೀಡುವ ಮಟ್ಟಿಗೆ ಬೆಳೆಯುತ್ತೀರಿ. ಇದರಿಂದಾಗಿ ನಿಮ್ಮ ಆರ್ಥಿಕ ಜೀವನ ಸುಖಮಯವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications