Shukraditya Yoga 2024: ಸಿಂಹದಲ್ಲಿ ಸುಕ್ರಾದಿತ್ಯ ಯೋಗ- ಈ 4 ರಾಶಿಯವರ ಜೀವನದಲ್ಲಿ ರಾಜಯೋಗ
ಗ್ರಹಗಳ ರಾಶಿ ಬದಲಾವಣೆಯನ್ನು ಜ್ಯೋತಿಷ್ಯದಲ್ಲಿ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಕೆಲವೊಮ್ಮೇ ಒಂದೇ ರಾಶಿಯಲ್ಲಿ ಹಲವಾರು ಗ್ರಹಗಳು ಸಂಚಾರ ಮಾಡುವುದರಿಂದ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ.
ಅಂದಹಾಗೆ ಶುಕ್ರನನ್ನು ಪ್ರೀತಿ, ಸೌಂದರ್ಯ, ಆಕರ್ಷಣೆ ಮತ್ತು ಐಷಾರಾಮಿ ಗ್ರಹವೆಂದು ಕರೆಯಲಾಗುತ್ತದೆ. ಶುಕ್ರ ಗುರು ಅಥವಾ ಶನಿಯಂತೆ ಸಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ರಾಶಿಯನ್ನು ಬದಲಾಯಿಸಲು ಒಂದು ತಿಂಗಳು ಅಥವಾ 28 ದಿನಗಳನ್ನು ತೆಗೆದುಕೊಳ್ಳುತ್ತದೆ. ಈಗ 31 ಜುಲೈ 2024 ರಂದು, ಶುಕ್ರವು ಒಂದು ವರ್ಷದ ನಂತರ ಸಿಂಹ ರಾಶಿಯನ್ನು ಪ್ರವೇಶಿಸಿದೆ.
ಅಲ್ಲದೆ 19 ಜುಲೈ 2024 ರಂದು ಬುಧ ಕೂಡ ಸಿಂಹರಾಶಿಯಲ್ಲಿ ಸಾಗುತ್ತಿದೆ. ಆದ್ದರಿಂದ 31 ಜುಲೈ 2024 ರಂದು ಸಿಂಹದಲ್ಲಿ ಬುಧ ಮತ್ತು ಶುಕ್ರನ ಸಂಯೋಗವಾಗಿದೆ. ಅಲ್ಲದೆ ಸೂರ್ಯ ಗ್ರಹ 16 ಆಗಸ್ಟ್ 2024 ರಂದು ಸಂಜೆ 07:32ಕ್ಕೆ ಸಿಂಹರಾಶಿಗೆ ಚಲಿಸಲಿದೆ. ಇದರಿಂದಾಗಿ ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗದಿಂದಾಗಿ ಸುಕ್ರಾದಿತ್ಯ ಯೋಗ ರೂಪಗೊಳ್ಳುತ್ತದೆ. ಸೂರ್ಯನು ಸಿಂಹ ರಾಶಿಗೆ ಸೇರಿದವನು. ಆದ್ದರಿಂದ ಸೂರ್ಯನು ತನ್ನದೇ ಆದ ರಾಶಿಯನ್ನು ಪ್ರವೇಶಿಸಿದಾಗ, ಅದರ ಪ್ರಭಾವ ಹೆಚ್ಚಾಗಿರುತ್ತದೆ. ಸೆಪ್ಟೆಂಬರ್ 16 ರವರೆಗೆ ಸೂರ್ಯನು ಸಿಂಹರಾಶಿಯಲ್ಲಿರುತ್ತದೆ.
ಸಿಂಹ ಮತ್ತು ಬುಧ - ಶುಕ್ರ ಸಂಯೋಗದಲ್ಲಿ ಸೂರ್ಯ ಮತ್ತು ಶುಕ್ರನ ಉಪಸ್ಥಿತಿಯು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ. ಹಾಗಾದರೆ ಸಿಂಹರಾಶಿಗೆ ಸೂರ್ಯ ಮತ್ತು ಶುಕ್ರ ಪ್ರವೇಶ ಮಾಡುವುದರಿಂದ ಯಾವ ರಾಶಿಯವರಿಗೆ ರಾಜಯೋಗ ಇರಲಿದೆ ಎಂದು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಐದನೇ ಮನೆಯಲ್ಲಿ ಶುಕ್ರ ಸಂಚಾರ ನಡೆಯಲಿದೆ. ಈ ಅವಧಿಯಲ್ಲಿ ಮೇಷ ರಾಶಿಯವರ ಪ್ರೇಮ ಸಂಬಂಧ ಶಾಂತಿ ಮತ್ತು ಸಂತೋಷದಿಂದ ತುಂಬಿರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಅವರು ಕೆಲಸದ ಸ್ಥಳದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.
ವ್ಯಾಪಾರದಲ್ಲಿರುವವರು ಹೆಚ್ಚಿನ ಹಣವನ್ನು ಗಳಿಸಲು ಅವಕಾಶವನ್ನು ಪಡೆಯುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೊಡ್ಡ ಲಾಭವನ್ನು ಗಳಿಸುತ್ತಾರೆ. ಅವರು ತಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ. ಇದು ಪ್ರೀತಿಯ ಜೀವನಕ್ಕೆ ಉತ್ತಮ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ಮೇಷ ರಾಶಿ ಅವರ ಆರೋಗ್ಯ ಉತ್ತಮವಾಗಿರುತ್ತದೆ.

ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ವೃಷಭ ರಾಶಿಯ ನಾಲ್ಕನೇ ಮನೆಗೆ ಶುಕ್ರ ಪ್ರವೇಶಿಸಲಿದೆ. ಇದರಿಂದ ಅದೃಷ್ಟದ ಸಮಯ ನಿಮ್ಮ ದಾರಿಯಲ್ಲಿ ಬರಲಿದೆ. ವ್ಯಾಪಾರಿಗಳು ಹೊಸ ವ್ಯವಹಾರಗಳು ಅಥವಾ ಯೋಜನೆಗಳನ್ನು ಪಡೆಯಬಹುದು. ಅದ್ದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದು. ನೀವು ಬಹುನಿರೀಕ್ಷಿತ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಬಹುದು.
ವೃಷಭ ರಾಶಿಯವರು ಆರೋಗ್ಯ ಅದ್ಬುತವಾಗಿರುತ್ತದೆ. ಅವರ ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುವಿರಿ. ಈ ಅವಧಿಯು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ.

ಮಿಥುನ ರಾಶಿ
ಶುಕ್ರ ಮಿಥುನ ರಾಶಿಯವರ ಮೂರನೇ ಮನೆಗೆ ಪ್ರವೇಶಿಸುವುದರಿಂದ ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು. ಹೆಚ್ಚಿನ ಲಾಭವನ್ನು ಪಡೆಯಬಹುದು. ಅವರು ತಮ್ಮ ತಾತ್ಕಾಲಿಕ ಹೂಡಿಕೆಗಳಿಂದ ಉತ್ತಮ ಆದಾಯವನ್ನು ಪಡೆಯುವರು. ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಪಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿಯ ಸ್ಥಳೀಯರು ಷೇರು ಮಾರುಕಟ್ಟೆಯಲ್ಲಿ ಲಾಭವನ್ನು ನಿರೀಕ್ಷಿಸಬಹುದು ಮತ್ತು ಅವರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಅವರು ಎಷ್ಟೇ ಅದೃಷ್ಟವಂತರಾಗಿದ್ದರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಸಾರ್ವಜನಿಕವಾಗಿ ಹೊರಗಡೆ ತಿನ್ನುವುದನ್ನು ತಪ್ಪಿಸಬೇಕು.

ತುಲಾ ರಾಶಿ
ತುಲಾ ರಾಶಿಯ ಆಡಳಿತ ಗ್ರಹ ಶುಕ್ರವಾಗಿದೆ. ಹೀಗಾಗಿ ತುಲಾ ರಾಶಿ ಅವರು ತಮ್ಮ ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯಬಹುದು. ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಕಂಪನಿಯಲ್ಲಿ ಅವಕಾಶ ಸಿಗುತ್ತದೆ. ಉದ್ಯಮಿಗಳ ಆದಾಯ ಸುಧಾರಿಸುತ್ತದೆ. ಅವರು ಬಹಳಷ್ಟು ಹಣವನ್ನು ಉಳಿಸಬಹುದು.
ಈ ಅವಧಿಯಲ್ಲಿ ನೀವು ನಿಮ್ಮ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ನೀವು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದು ಈಗ ಸುಧಾರಿಸಲು ಪ್ರಾರಂಭಿಸುತ್ತದೆ. ಅವಿವಾಹಿತರು ಸೂಕ್ತ ಸಂಗಾತಿಯನ್ನು ಕಂಡುಕೊಳ್ಳಬಹುದು. ವಿವಾಹಿತರ ಮನೆಯ ಜೀವನ ತುಂಬಾ ಅದ್ಬುತವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications