ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ- ವೃತ್ತಿ ಯಶಸ್ಸಿಗೆ ಜ್ಯೋತಿಷ್ಯ ಟಿಪ್ಸ್, ಶನಿ ಆರಾಧನೆ ಮಹತ್ವ

By ದೈವಜ್ಞ ಶಂಕರ್ ಭಟ್
|
Google Oneindia Kannada News

Recommended Video

ಉದ್ಯೋಗ ಹಾಗು ವೃತ್ತಿ ಜೀವನದ ಯಶಸ್ಸಿಗೆ ಜ್ಯೋತಿಷ್ಯ ಟಿಪ್ಸ್ | Oneindia Kannada

ಭಾರತೀಯ ಜ್ಯೋತಿಷ್ಯ ರೀತಿ ವೃತ್ತಿ ಮತ್ತು ಉದ್ಯೋಗ ಜೀವನದಲ್ಲಿ ಶನಿ ಗ್ರಹವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಜೀವನದಲ್ಲಿ ಅಡೆತಡೆ ಒದಗಿಸುವ ಮತ್ತು ಸಮಸ್ಯೆಗಳನ್ನು ತಂದೊಡ್ಡುವ ಗ್ರಹವೆಂದೇ ಶನಿ ಬಗ್ಗೆ ಅಭಿಪ್ರಾಯವಿದೆ. ಒಂದು ವೇಳೆ ಜನ್ಮ ಜಾತಕದಲ್ಲಿ ಶನಿ ಗ್ರಹವು ಪ್ರತಿಕೂಲ ಸ್ಥಿತಿಯಲ್ಲಿದ್ದರೆ ಸಾಲು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಆದರೆ, ಶನಿ ಗ್ರಹವು ಜೀವನದ ಪಾಠ ಕಲಿಸುವ ಒಳ್ಳೆ ಮೇಷ್ಟರು ಅನ್ನೋದನ್ನು ಮರೆಯಬಾರದು. ಶನಿ ಗ್ರಹವು ಅಪಾರವಾದ ಸಮಸ್ಯೆಗಳನ್ನು ಮತ್ತು ವಿಳಂಬವನ್ನು ತಂದೊಡ್ಡುತ್ತದೆ. ಇವೆಲ್ಲ ಜೀವನದ ಪಾಠಗಳು ಎಂಬುದನ್ನು ಮಾತ್ರ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲ ಕಷ್ಟಗಳು ಈ ಹಿಂದಿನ ಜನ್ಮದ ಕರ್ಮ ಫಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಅದಹಾಗೆ ಜನ್ಮ ಜಾತಕದಲ್ಲಿ ಲಗ್ನ ಸ್ಥಾನದಿಂದ ಹತ್ತನೇ ಮನೆಯು ಯಾವುದೇ ವ್ಯಕ್ತಿಯ ವೃತ್ತಿ ಹಾಗೂ ಉದ್ಯೋಗ ಜೀವನವನ್ನು ಸೂಚಿಸುತ್ತದೆ. ಈ ಸ್ಥಾನದೊಂದಿಗೆ ಶನಿಗೆ ವಿಶೇಷವಾದ ಸಂಬಂಧವಿದೆ. ಒಂದು ವೇಳೆ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ ಗ್ರಹ ಸ್ಥಿತವಾಗಿದ್ದರೆ ಅಥವಾ ಹತ್ತನೇ ಮನೆಯ ಮೇಲೆ ಲಗ್ನ ಅಥವಾ ನಾಲ್ಕನೇ ಸ್ಥಾನದ ಶನಿಯ ದೃಷ್ಟಿಯಿದ್ದರೆ ಅಂದುಕೊಂಡ ಉದ್ಯೋಗ ಅಥವಾ ವೃತ್ತಿ ಕೈಗೊಳ್ಳಲು ಕಷ್ಟಗಳು ಎದುರಾಗುತ್ತವೆ.

ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!

ಆ ವ್ಯಕ್ತಿ ಒಳ್ಳೆಯ ಶಿಕ್ಷಣ ಪಡೆದಿದ್ದರೂ ಆರಂಭದಿಂದಲೂ ನಾನಾ ಸವಾಲುಗಳನ್ನು ಎದುರಿಸಿದ ನಂತರವೇ ಉದ್ಯೋಗ ಅಥವಾ ವೃತ್ತಿ ಜೀವನದಲ್ಲಿ ಮೇಲೇರುವುದಕ್ಕೆ ಸಾಧ್ಯ. ಒಂದು ವೇಳೆ ಲಗ್ನದಿಂದ ಎಂಟನೇ ಮನೆಯಲ್ಲಿ ಶನಿಯಿದ್ದರೂ ಜೀವನದಲ್ಲಿ ಹಲವು ಬಗೆಯ ಕಷ್ಟ-ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಉತ್ತಮ ಉದ್ಯೋಗ ಅಥವಾ ವೃತ್ತಿ ಬದುಕಿಗೆ ಶನಿ ಅನುಗ್ರಹ ಮುಖ್ಯ.

ಯಾರಿಗೆ ಅಕೌಂಟೆನ್ಸಿ, ಶಿಕ್ಷಕ ವೃತ್ತಿ ಹಾಗೂ ಬ್ಯಾಂಕಿಂಗ್ ವಲಯ?

ಯಾರಿಗೆ ಅಕೌಂಟೆನ್ಸಿ, ಶಿಕ್ಷಕ ವೃತ್ತಿ ಹಾಗೂ ಬ್ಯಾಂಕಿಂಗ್ ವಲಯ?

ಹತ್ತನೇ ಸ್ಥಾನದ ಅಧಿಪತಿ ಲಗ್ನದಲ್ಲಿ ಇದ್ದರೆ ಸ್ವಂತ ಉದ್ಯೋಗದಲ್ಲಿ ನಿಧಾನ ಗತಿ ಇರುತ್ತದೆ. ಅದೇ ರೀತಿ ಹತ್ತನೇ ಸ್ಥಾನಾಧಿಪತಿಯು ಲಗ್ನಕ್ಕೆ ಎರಡನೇ ಸ್ಥಾನದಲ್ಲಿದ್ದರೆ ಅಕೌಂಟೆನ್ಸಿ, ಶಿಕ್ಷಕ ವೃತ್ತಿ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಮಾಡುವ ಯೋಗ ಬರುತ್ತದೆ. ಹತ್ತನೇ ಸ್ಥಾನಾಧಿಪತಿ ಮೂರನೇ ಮನೆಯಲ್ಲಿದ್ದರೆ ಕಮ್ಯೂನಿಕೇಷನ್, ಪ್ರಕಟಣೆ ಅಥವಾ ಕಂಪ್ಯೂಟರ್ ಗೆ ಸಂಬಂಧಿಸಿದ ವೃತ್ತಿ ಕೈಗೊಳ್ಳುವ ಸಾಧ್ಯತೆ ಇರುತ್ತದೆ.

ರಿಯಲ್ ಎಸ್ಟೇಟ್ ಹಾಗೂ ಭೂಮಿಗೆ ಸಂಬಂಧಿಸಿದ ವ್ಯವಹಾರ

ರಿಯಲ್ ಎಸ್ಟೇಟ್ ಹಾಗೂ ಭೂಮಿಗೆ ಸಂಬಂಧಿಸಿದ ವ್ಯವಹಾರ

ಇನ್ನು ಹತ್ತನೇ ಮನೆಯ ಅಧಿಪತಿ ನಾಲ್ಕರಲ್ಲಿದ್ದರೆ ರಿಯಲ್ ಎಸ್ಟೇಟ್, ಕೃಷಿ, ಭೂಮಿಗೆ ಸಂಬಂಧಪಟ್ಟ ವ್ಯವಹಾರವನ್ನು ಸೂಚಿಸುತ್ತದೆ. ದಶಮಾಧಿಪತಿ ಐದರಲ್ಲಿದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ಆಸಕ್ತಿ ಮೂಡುತ್ತದೆ ಮತ್ತು ಆರನೇ ಮನೆಯಲ್ಲಿದ್ದರೆ ವಕೀಲರು, ಕಾನೂನು ಸಲಹೆಗಾರರು ಅಥವಾ ಸೈನ್ಯದಲ್ಲಿ ಕಾರ್ಯ ನಿರ್ವಹಿಸುವುದನ್ನು ಸೂಚಿಸುತ್ತದೆ.

ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು

ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು

ಹತ್ತನೇ ಸ್ಥಾನಾಧಿಪತಿ ಲಗ್ನದಿಂದ ಏಳನೇ ಮನೆಯಲ್ಲಿದ್ದರೆ ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು ಪಡೆಯುತ್ತಾರೆ. ಇನ್ನು ಎಂಟನೇ ಸ್ಥಾನದಲ್ಲಿದ್ದರೆ ಸಂಶೋಧನೆಗೆ ಸಂಬಂಧಿಸಿದ ವೃತ್ತಿ ಅಥವಾ ನಿಗೂಢ ವಿದ್ಯೆಯ ಮೂಲಕ ಆದಾಯವನ್ನು ಸೂಚಿಸುತ್ತದೆ. ಒಂಬತ್ತನೆ ಸ್ಥಾನದಲ್ಲಿ ದಶಮಾಧಿಪತಿ ಇದ್ದರೆ ಪ್ರವಾಸದ ಏಜೆಂಟ್, ಪ್ರೊಫೆಸರ್, ಲೆಕ್ಚರರ್ ಗಳು ಆಗಬಹುದು.

ವಿದೇಶ ವ್ಯವಹಾರ ಅಥವಾ ವೈದ್ಯಕೀಯ ವೃತ್ತಿ

ವಿದೇಶ ವ್ಯವಹಾರ ಅಥವಾ ವೈದ್ಯಕೀಯ ವೃತ್ತಿ

ದಶಮಾಧಿಪತಿಯು ಹತ್ತನೇ ಮನೆಯಲ್ಲೇ ಇದ್ದರೆ ಸರಕಾರಿ ಕೆಲಸ ಅಥವಾ ಮ್ಯಾನೇಜ್ ಮೆಂಟ್ ಕ್ಷೇತ್ರವನ್ನು ಸೂಚಿಸುತ್ತದೆ. ಹನ್ನೊಂದನೇ ಸ್ಥಾನದಲ್ಲಿದ್ದರೆ ಫೈನಾನ್ಸ್ ಅಥವಾ ಟ್ರೇಡ್ ಗೆ ಸಂಬಂಧಿಸಿದ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಹತ್ತನೇ ಸ್ಥಾನಾಧಿಪತಿ ಹನ್ನೆರಡರಲ್ಲಿದ್ದರೆ ವಿದೇಶೀ ವ್ಯವಹಾರ ಅಥವಾ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಉದ್ಯೋಗ ಅಥವಾ ವೃತ್ತಿಯಲ್ಲಿನ ಯಶಸ್ಸಿಗೆ ಏನು ಮಾಡಬೇಕು?

ಉದ್ಯೋಗ ಅಥವಾ ವೃತ್ತಿಯಲ್ಲಿನ ಯಶಸ್ಸಿಗೆ ಏನು ಮಾಡಬೇಕು?

ಉದ್ಯೋಗದಲ್ಲಿ ಇರುವವರು ತಾವು ಕೂರು ಕುರ್ಚಿಯ ಹಿಂಭಾಗದ ಗೋಡೆ ಮೇಲೆ ಬೆಟ್ಟ- ಗುಡ್ಡಗಳು ಅಥವಾ ಪರ್ವತಗಳ ಚಿತ್ರಗಳನ್ನು ನೇತು ಹಾಕಿಕೊಳ್ಳಬೇಕು. ಯಾವುದೇ ವೃತ್ತಿಯಲ್ಲಿರುವವರು ಸೀಲಿಂಗ್ ನ ಬೀಮ್ ಅಡಿಯಲ್ಲಿ ಕೂರಬಾರದು. ಗೋಡೆಗೆ ನೇರವಾಗಿ ಕುರ್ಚಿಯಲ್ಲಿ ಕೂರಬಾರದು. ನೀವು ಕೂರುವ ಮುಂಭಾಗದಲ್ಲಿ ಜಾಗವಿರಬೇಕು. ಇದರಿಂದ ನಿಮ್ಮ ಶಕ್ತಿ ವೃದ್ಧಿ ಆಗುತ್ತದೆ. ಉದ್ಯೋಗ ಅಥವಾ ವೃತ್ತಿ ಬದುಕು ಚೆನ್ನಾಗಿ ಆಗುತ್ತದೆ.

English summary
Astrology tips for career and profession growth, here is an effective remedies for career and professional obstacles. How Saturn plays an important role in a native's horoscope? Explains Kannada well known astrologer Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X