Shani Sade Sati: 2025ರಲ್ಲಿ ಈ ರಾಶಿಗಳಿಗೆ ಶನಿಯ ಸಾಡೇಸಾತ್ ಆರಂಭ: ಅತ್ಯಂತ ಸರಳ ಪರಿಹಾರಗಳು ಇಲ್ಲಿದೆ...

2025ರಲ್ಲಿ ಶನಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಕರ್ಮವನ್ನು ನೀಡುವ ಶನಿ ಗ್ರಹ ಯಾವುದೇ ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಸೂರ್ಯನಿಂದ ಆರನೇ ಗ್ರಹ ಮತ್ತು ಗುರುವಿನ ನಂತರ ಸೌರವ್ಯೂಹದ ಎರಡನೇ ಅತಿದೊಡ್ಡ ಗ್ರಹವಾದ ಶನಿಯು ಮುಂದಿನ ವರ್ಷ ತನ್ನ ರಾಶಿಯನ್ನು ಬದಲಾಯಿಸಲಿದೆ. ಈ ಕಾರಣದಿಂದಾಗಿ 2025 ವರ್ಷ ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಿರುತ್ತದೆ. ಜೊತೆಗೆ ಕೆಲ ರಾಶಿಯವರಿಗೆ ತೊಂದರೆ ತರುತ್ತದೆ.

2025ರಲ್ಲಿ ಶನಿಯ ಸಂಕ್ರಮಣದಿಂದಾಗಿ ಕೆಲವು ರಾಶಿಗಳು ಸಾಡೇಸಾತ್ ಮತ್ತು ಪನೌಟಿ ಪ್ರಭಾವದಿಂದ ಮುಕ್ತರಾದರೆ ಇನ್ನೂ ಕೆಲ ರಾಶಿಯವರು ಸಾಡೇಸಾತ್‌ ಮತ್ತು ಪನೌಟಿ ಪರಿಣಾಮಗಳಿಗೆ ಒಳಗಾಗುತ್ತದೆ. ಮುಂಬರುವ ವರ್ಷ ಶನಿಯ ಸಾಡೇಸಾತ್ ಹಾಗೂ ಪನೌಟಿ ಪ್ರಭಾವ ಮೂರು ರಾಶಿಗಳ ಮೇಲೆ ಪ್ರಾರಂಭ ಬೀರಲಿದೆ. ಹಾಗಾದರೆ 2025ರಲ್ಲಿ ಯಾವ ರಾಶಿಯವರ ಮೇಲೆ ಸಾಡೇಸಾತ್ ಪ್ರಭಾವ ಬೀರುತ್ತದೆ ಮತ್ತು ಇದರ ಪ್ರಭಾವವನ್ನು ಕಡಿಮೆ ಮಾಡಲು ಯಾವ ಸರಳ ಮಾರ್ಗಗಳನ್ನು ಅನುಸರಿಸಬೇಕು ಎಂದು ತಿಳಿಯೋಣ.

Astrology shani sade sati period start for these zodiac signs in 2025 here are the simplest remedies

2025ರಲ್ಲಿ ಶನಿ ಸಂಚಾರ ಯಾವಾಗ?

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯ ಸಂಕ್ರಮಣದೊಂದಿಗೆ, ಶನಿಯ ಸಾಡೇಸಾತಿ ಮತ್ತು ಧೈಯಾವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಾರಂಭವಾಗುತ್ತದೆ, ಆದರೆ ಅದರ ಪರಿಣಾಮವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಕೊನೆಗೊಳ್ಳುತ್ತದೆ.

2025 ಮಾರ್ಚ್ 29ರಂದು ಶನಿಯು ಕುಂಭ ರಾಶಿಯಿಂದ ಹೊರಬಂದು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಶನಿಯ ಸಾಡೇಸಾತ್ ಮತ್ತು ಪನೌಟಿಯ ಪ್ರಭಾವ 3 ರಾಶಿಗಳಿಗೆ ಪ್ರಾರಂಭವಾಗಲಿದೆ. ಹಾಗಾದರೆ ಯಾವ ರಾಶಿಯವರಿಗೆ ಶನಿಯ ಸಾಡೇಸಾತ್ ಮತ್ತು ಪನೌಟಿಯ ಪ್ರಭಾವ ಇದೆ. ಯಾವ ರಾಶಿಯವರಿಗೆ ಶನಿಯ ಸಾಡೇಸಾತ್ ಮತ್ತು ಪನೌಟಿಯ ಪ್ರಭಾವ ಮುಕ್ತಾಯವಾಗಲಿದೆ ಎಂದು ಈಗ ತಿಳಿಯೋಣ.

Astrology shani sade sati period start for these zodiac signs in 2025 here are the simplest remedies

ಈ 3 ರಾಶಿಗಳ ಮೇಲೆ ಶನಿಯ ಸಾಡೇಸಾತ್ ಆರಂಭ!

2025ರಲ್ಲಿ ಶನಿಯ ಸಂಕ್ರಮಣದೊಂದಿಗೆ ಮೇಷ ರಾಶಿಯವರಿಗೆ ಶನಿಯ ಸಾಡೇಸಾತ್ ಆರಂಭವಾಗಲಿದೆ. ಮೀನ ರಾಶಿಯ ಮೇಲೆ ಎರಡನೇ ಹಂತದ ಸಾಡೇಸಾತ್ ಇರುತ್ತದೆ. ಕುಂಭ ರಾಶಿಯವರಿಗೆ ಮೂರನೇ ಮತ್ತು ಕೊನೆಯ ಹಂತದ ಸಾಡೇಸಾತ್ ನಡೆಯಲಿದೆ. ಜೊತೆಗೆ ಮಕರ ರಾಶಿಗೆ ಸಾಡೇಸಾತ್ ಅಂತ್ಯವಾಗಲಿದೆ.

ಶನಿಯ ಪ್ರಭಾವ ಈ ರಾಶಿಗಳ ಮೇಲೆ ಪ್ರಾರಂಭ

ಮೀನ ರಾಶಿಗೆ ಶನಿದೇವನ ಪ್ರವೇಶ ವೃಶ್ಚಿಕ ರಾಶಿಯ ಪನೌಟಿ ಪ್ರಭಾವವನ್ನು ಕೊನೆಗೊಳಿಸುತ್ತದೆ. ಆದರೆ ಶನಿ ಪನೌಟಿ ಧನು ರಾಶಿ, ಕರ್ಕಾಟಕ ಮತ್ತು ಸಿಂಹ ರಾಶಿಯಲ್ಲಿ ಪ್ರಾರಂಭವಾಗಲಿದೆ.

ಶನಿಯ ಸಾಡೇಸಾತ್ ಎಷ್ಟು ವರ್ಷಗಳವರೆಗೆ ಇರುತ್ತದೆ?

ಶನಿಯ ಸಾಡೇಸಾತಿಯು 07.05 ವರ್ಷಗಳವರೆಗೆ ಇರುತ್ತದೆ. ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಅದನ್ನು ತಲಾ ಎರಡೂವರೆ ವರ್ಷ ವಿಂಗಡಿಸಲಾಗುತ್ತದೆ. ಯಾವುದೇ ರಾಶಿಯವರಿಗೆ ಜೀವಿತಾವಧಿಯಲ್ಲಿ ಸಾಡೇಸಾತ್ ಎರಡು ಬಾರಿ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಸಾಡೇಸಾತ್ ಪರಿಹಾರಗಳೇನು?

ಶನಿಸಾಡೇಸಾತಿಯ ಅವಧಿಯಲ್ಲಿಸುಲಭವಾದ ಜೀವನವನ್ನು ಮರೆತುಬಿಡಿ. ಬಿಂದಾಸ್‌ ಜೀವನ, ಸುಲಭವಾಗಿ ಕೈಗೆ ಬರುವ ಹಣ ಎಲ್ಲವೂ ಹಿಂದೆ ಸರಿಯುತ್ತದೆ. ಕಠಿಣ ಪರಿಶ್ರಮವು ಇಂದಿನ ಅಗತ್ಯವಾಗಿದೆ ಮತ್ತು ಈ ಅವಧಿಯಲ್ಲಿ ಯಾವುದೇ ಸೋಮಾರಿತನವನ್ನು ತೋರಿಸಿದರೂ ಅದರ ಫಲ ತಕ್ಷಣವೇ ಪಡೆಯುತ್ತೀರಿ.

* ಸಾಡೇಸಾತ್ ಮತ್ತು ಪನೌಟಿ ವೇಳೆ ಕೆಲ ವಿಷಯಗಳಿಂದ ದೂರವಿರಬೇಕು. ಧೂಮಪಾನ, ಮದ್ಯಮಾಪ ಮಾಡುವುದು, ಮಾಂಸಾಹಾರ ಸೇವನೆ ಶನಿದೇವನಿಗೆ ಇಷ್ಟವಾಗುವುದಿಲ್ಲ. ಶನಿ ಕಾಟವಿದ್ದಾಗ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದರಿಂದ ನಿಮ್ಮ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಲಿದೆ.

*ಸಾಡೇಸಾತ್ ಸಮಯದಲ್ಲಿ ಶನಿದೇವನನ್ನು ಪೂಜಿಸಬೇಕು. ಇದರಿಂದ ಶನಿ ಕೋಪ ಪ್ರಭಾವ ಕಡಿಮೆಯಾಗುತ್ತದೆ.

* ಶನಿವಾರದಂದು ಎಣ್ಣೆಯ ದೀಪವನ್ನು ಬೆಳಗಿಸುವುದು ತುಂಬಾ ಉತ್ತಮ ಫಲಗಳನ್ನು ನೀಡುತ್ತದೆ.

*ಇದಲ್ಲದೇ ಶನಿವಾರದಂದು ಹಾಲಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ.

* ಪ್ರತೀ ಶನಿವಾರ ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿಯಿಂದ ಪೂಜಿಸಿ ನವಗ್ರಹಗಳಿಗೆ ಪ್ರದಕ್ಷಣೆ ಹಾಕಿ.

* ಪ್ರತೀ ಮಂಗಳವಾದ ಗಣೇಶನ ದೇವಸ್ಥಾನಕ್ಕೆ ಹೋಗುವುದು ಕೂಡ ಸಾಡೇಸಾತ್ ಪ್ರಭಾವವನ್ನು ಕಡಿಮೆ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+