Moon Saturn Conjunction 2025: ಶನಿ ಚಂದ್ರ ಸಂಯೋಗ- ಈ ರಾಶಿಗೆ ಹಣದ ಕೊರತೆಯಿಂದ ಜೀವನ ಕಷ್ಟ

ನವಗ್ರಹಗಳಲ್ಲಿ ಶನಿ ಸ್ಥಾನವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಶನಿ ದುಃಖ, ಅನಾರೋಗ್ಯ, ಸಾವು ಮತ್ತು ಬಡತನ ಇತ್ಯಾದಿಗಳಿಗೆ ಕಾರಣವಾಗುವ ಗ್ರಹ. ಅಂದರೆ ಕರ್ಮಕ್ಕೆ ತಕ್ಕ ಫಲ ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ಜಾತಕದಲ್ಲಿ ಶನಿ ಸ್ಥಾನ ಬಲವಾಗಿಲ್ಲದೇ ಇದ್ದರೆ ಅಂತವರು ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಜಾತಕದಲ್ಲಿ ಶನಿ ಸ್ಥಾನ ಉತ್ತಮವಾಗಿದ್ದರೆ ಅಂಥವರು ಸಂತೋಷದ ಜೀವನ ನಡೆಯುತ್ತಾರೆ. ಅಂದಹಾಗೆ ಮಾರ್ಚ್ ತಿಂಗಳಲ್ಲಿ ಶನಿ ರಾಶಿಯನ್ನು ಬದಲಾಯಿಸುತ್ತದೆ. ಮೀನ ರಾಶಿಯಲ್ಲಿ ಸಾಗುವ ಶನಿ ಚಂದ್ರನನ್ನು ಭೇಟಿ ಮಾಡುತ್ತದೆ. ಈ ಸಂಯೋಗ 12 ರಾಶಿಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹಾಗಾದರೆ ಶನಿ ಚಂದ್ರ ಸಂಯೋಗ ಯಾವ ದಿನಾಂಕ ಸಂಭವಿಸುತ್ತದೆ? ಈ ಸಂಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು?

ಚಂದ್ರ-ಶನಿ ಸಂಯೋಗ ದಿನಾಂಕ

ಮಾರ್ಚ್ 28ರಂದು ಸಂಜೆ 4:47ಕ್ಕೆ ಚಂದ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರನು ತನ್ನ ರಾಶಿಚಕ್ರವನ್ನು ಬದಲಾಯಿಸಿದ ಒಂದು ದಿನದ ನಂತರ ಮಾರ್ಚ್ 29 (2025) ರಾತ್ರಿ 11:01ಕ್ಕೆ ಶನಿ ಸಹ ಮೀನ ರಾಶಿಗೆ ಸಾಗುತ್ತಾನೆ. ಚಂದ್ರ-ಶನಿಯ ಸಂಯೋಗವು ಮಾರ್ಚ್ 29ರಂದು ಸಂಜೆ 04:47ಕ್ಕೆ ಮೀನ ರಾಶಿಯಲ್ಲಿ ಸಂಭವಿಸುತ್ತದೆ. ಹಾಗಾದರೆ ಈ ಸಂಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಮದು ತಿಳಿಯೋಣ.

ಯಾವ ರಾಶಿಗಳಿಗೆ ಈ ಸಂಯೋಜನೆ ಅಶುಭ?

astrology moon-saturn conjunction 2025 these 3 zodiac signs should be careful

ಮೇಷ ರಾಶಿ

ಚಂದ್ರ ಮತ್ತು ಶನಿಯ ಸಂಯೋಗ ಮೇಷ ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲಸದ ಸ್ಥಳದಲ್ಲಿ ವಿವಾದ ಉಂಟಾಗಬಹುದು. ಇದರಿಂದಾಗಿ ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತದೆ.

ತಪ್ಪು ತಿಳುವಳಿಕೆಯಿಂದಾಗಿ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಯಾವುದೇ ತಪ್ಪು ನಿರ್ಧಾರದಿಂದಾಗಿ ಉದ್ಯಮಿಗಳು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ವಿವಾಹಿತರ ಸಂಬಂಧ ನಿಮ್ಮ ತಪ್ಪುಗಳಿಂದ ಮುರಿದು ಬೀಳಬಹುದು. ಮುಂಬರುವ ದಿನಗಳಲ್ಲಿ ಕುಟುಂಬಸ್ಥರ ಆರೋಗ್ಯ ಉತ್ತಮವಾಗಿರುವುದಿಲ್ಲ.

astrology moon-saturn conjunction 2025 these 3 zodiac signs should be careful

ಮಿಥುನ ರಾಶಿ

ಮೀನ ರಾಶಿಯಲ್ಲಿ ಚಂದ್ರ ಮತ್ತು ಶನಿಯ ಸಂಯೋಗ ಮಿಥುನ ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ವೈಯಕ್ತಿಕ ಜೀವನದಲ್ಲಿ ಒತ್ತಡದ ವಾತಾವರಣ ಇರುತ್ತದೆ. ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ.

ಹಳೆಯ ಹೂಡಿಕೆಗಳಿಂದಾಗಿ ಉದ್ಯಮಿಗಳು ಭಾರಿ ನಷ್ಟವನ್ನು ಅನುಭವಿಸುತ್ತಾರೆ. ಉದ್ಯಮಿಗಳು ಭವಿಷ್ಯದಲ್ಲಿ ಸಾಲ ಮರುಪಾವತಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೆಲ ಆರೋಗ್ಯ ಸಮಸ್ಯೆಗಳು ವಯಸ್ಸಾದವರನ್ನು ಕಾಡಬಹುದು. ಕೆಲವು ಪ್ರಮುಖ ವೆಚ್ಚಗಳಿಂದಾಗಿ ಕೂಡಿಟ್ಟ ಹಣ ಹಾಳಾಗಬಹುದು.

astrology moon-saturn conjunction 2025 these 3 zodiac signs should be careful

ಸಿಂಹ ರಾಶಿ

ಮೇಷ ಮತ್ತು ಮಿಥುನ ರಾಶಿಯವರಲ್ಲದೆ ಚಂದ್ರ ಮತ್ತು ಶನಿಯ ಸಂಯೋಗದ ಅಶುಭ ಪರಿಣಾಮ ಸಿಂಹ ರಾಶಿಯ ಜನರ ಮೇಲೂ ಬೀಳುತ್ತದೆ. ಹತ್ತಿರದ ಸಂಬಂಧಿಯೊಬ್ಬರ ಕಾರಣದಿಂದಾಗಿ ಮನೆಯ ವಾತಾವರಣ ಹದಗೆಡಬಹುದು.

ವೃತ್ತಿಜೀವನದಲ್ಲಿ ಹಠಾತ್ ಅಡೆತಡೆಗಳು ಎದುರಾಗುತ್ತವೆ. ಬಡ್ತಿ ಅಥವಾ ಹೊಸ ಉದ್ಯೋಗ ಸಿಗುವಲ್ಲಿ ವಿಳಂಬವಾಗಬಹುದು. ಈ ಅವಧಿಯಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಹೆಚ್ಚಿರುವುದರಿಂದ ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+