Surya Grahan 2024: ನಾಳೆ ಮಹಾಲಯ ಅಮವಾಸ್ಯೆಯೊಂದಿಗೆ ಸೂರ್ಯಗ್ರಹಣ: ಈ ರಾಶಿಗೆ ಗಂಡಾಂತರ!
ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಕ್ರಮಣ ಶುಭ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಹೀಗೆ ಅಕ್ಟೋಬರ್ 2ರಂದು ಕನ್ಯಾ ರಾಶಿಯಲ್ಲಿ ಸೂರ್ಯ ಸಂಕ್ರಮಣವಾಗಲಿದೆ. ಈಗಾಗಲೇ ಕನ್ಯಾ ರಾಶಿಯಲ್ಲಿ ಕೇತು ಇರುವುದರಿಂದ ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಕಂಡು ಬರಲಿದೆ.
ಇದಲ್ಲದೆ ವರ್ಷದ ಕೊನೆಯ ಹಾಗೂ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2 ಮಹಾಲಯ ಅಮಾವಸ್ಯೆಯಂದು ಸಂಭವಿಸುತ್ತಿದೆ. ಅಕ್ಟೋಬರ್ 2 ರಾತ್ರಿ 09.13ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಿ ಅಕ್ಟೋಬರ್ 03 ರಂದು ಮುಂಜಾನೆ 3.17ಕ್ಕೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸುವುದರಿಂದ ಗೋಚರಿಸುವುದಿಲ್ಲ.
ಆದರೆ ಸೂರ್ಯಗ್ರಹಣದ ಪ್ರಭಾವ ಎಲ್ಲಾ 12 ರಾಶಿಯವರ ಜೀವನದಲ್ಲಿ ಗೋಚರಿಸುತ್ತದೆ. ಮುಖ್ಯವಾಗಿ ಗ್ರಹಣದ ಸಂದರ್ಭದಲ್ಲಿ ಒಂದು ತಿಂಗಳ ಅವಧಿಯಲ್ಲಿ ಇದರ ಪ್ರಭಾವ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹೀಗಾಗಿ ಅಮವಾಸ್ಯೆಯಂದು ಸೂರ್ಯಗ್ರಹಣ ಹಾಗೂ ಗ್ರಹಗಳ ಸಂಕ್ರಮಣ ಕೆಲ ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡಲಿದೆ. ಹಾಗಾದರೆ ನಾಳೆ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಸೂರ್ಯಗ್ರಹಣ ಹಾಗೂ ಗ್ರಹಗಳ ಸಂಕ್ರಮಣ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಹೀಗಾಗಿ ಕರ್ನಾಟಕ ರಾಶಿಯವರು ಜಾಗರೂಕರಾಗಿರುವುದು ಒಳ್ಳೆಯದು. ಕರ್ಕಾಟಕದ 3ನೇ ಮನೆಯಲ್ಲಿ ಕೇತು ಸೂರ್ಯನು ಸಂಕ್ರಮಣವಾಗಲಿದೆ. ಸೂರ್ಯಗ್ರಹಣದ ಸಮಯದಲ್ಲಿ ಈ ಸಂಕ್ರಮಣ ಸಂಭವಿಸುವುದರಿಂದ ಆರ್ಥಿಕ ನಷ್ಟ ಉಂಟಾಗಲಿದೆ. ಅಲ್ಲದೆ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಕುಗ್ಗಲಿದೆ. ಸಣ್ಣಪುಟ್ಟ ಕಾರ್ಯಗಳು ಕಷ್ಟಪಡಬೇಕಾಗುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಅಕ್ಟೋಬರ್ 2 ಕಠಿಣ ದಿನವಾಗಿದೆ. ಸೂರ್ಯಗ್ರಹಣದ ಸಮಯದಲ್ಲಿ ಕೇತು ಸೂರ್ಯನ ಸಂಯೋಗ ತುಲಾ ರಾಶಿಯ 12ನೇ ಮನೆಯಲ್ಲಿ ಸಂಭವಿಸುತ್ತದೆ. ಇದರಿಂದಾಗಿ ವ್ಯಾಪಾರಿಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಡಬಹುದು. ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.
ಚಾಲನೆ ಮಾಡುವಾಗ ಎಚ್ಚರ ವಹಿಸಿ. ಆರೋಗ್ಯ ಸಮಸ್ಯೆ ಇದ್ದಲ್ಲಿ ನಿರ್ಲಕ್ಷ್ಯ ತೋರುವುದು ಒಳ್ಳೆಯದಲ್ಲ. ಯಾರನ್ನೂ ನಂಬಿ ಹಣ ನೀಡಬೇಡಿ. ಈ ಸಮಯದಲ್ಲಿ ನೀಡಿದ ಹಣ ಮತ್ತೆಂದೂ ವಾಪಸ್ಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಯಾರಿಗೇ ಹಣ ನೀಡುವುದನ್ನು ಈ ಸಮಯದಲ್ಲಿ ತಪ್ಪಿಸಿ.

ಮಕರ ರಾಶಿ
ಅಕ್ಟೋಬರ್ 2 ಮಕರ ರಾಶಿಯವರಿಗೆ ನರಕದ ದರ್ಶನ ಮಾಡಿಸಲಿದೆ. ಅಕ್ಋಒಬರ್ ತಿಂಗಳು ಮಕರ ರಾಶಿಯವರು ಜಾಗರೂಕರಾಗಿರುವುದು ಒಳ್ಳೆಯದು. ಸೂರ್ಯಗ್ರಹಣದ ಸಮಯದಲ್ಲಿ ಮಕರ ರಾಶಿಯ 9 ನೇ ಮನೆಯಲ್ಲಿ ಕೇತು ಸೂರ್ಯನ ಸಂಯೋಗ ಸಂಭವಿಸುತ್ತದೆ. ಹೀಗಾಗಿ ಸಮಸ್ಯೆಗಳು ಬೆನ್ನೇರುವ ಸಾಧ್ಯತೆ ಇದೆ.
ಕೈಗೊಂಡ ಕಾರ್ಯಗಳು ವಿಳಂಬವಾಗಲಿವೆ. ಹೀಗಾಗಿ ಮನಸ್ಸಿನಲ್ಲಿ ಕೋಪ ಮತ್ತು ಕಿರಿಕಿರಿ ಉಂಟಾಗುತ್ತದೆ. ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರದಿಂದಿರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಫಲಿತಾಂಶಗಳು ಅನುಕೂಲಕರವಾಗಿರುವುದಿಲ್ಲ. ಅನಗತ್ಯ ಖರ್ಚುಗಳಿಂದ ತೊಂದರೆ ಅನುಭವಿಸುವಿರಿ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
(ಗಮನಿಸಿ: ಈ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications