ಜ್ಯೋತಿಷ್ಯ: ನಿಮ್ಮ ಪ್ರಶ್ನೆ ಕೇಳಿ, ಜ್ಯೋತಿಷಿಗಳಿಂದ ಉತ್ತರ ಪಡೆಯಿರಿ

Posted By:
Subscribe to Oneindia Kannada

ಒನ್ಇಂಡಿಯಾ ಕನ್ನಡದ ಓದುಗರೊಬ್ಬರು ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪ್ರಶ್ನೆ ಕಳುಹಿಸಿದ್ದರು. ಅದಕ್ಕೆ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಉತ್ತರ ನೀಡಿದ್ದಾರೆ. ಈ ಪರಿಪಾಠವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಇದ್ದು, ಓದುಗರ ಆಯ್ದ ಕೆಲ ಪ್ರಶ್ನೆಗಳಿಗೆ ಜ್ಯೋತಿಷಿಗಳು ಉತ್ತರ ನೀಡಲಿದ್ದಾರೆ.

ಅಂದಹಾಗೆ ನೀವು ಕೂಡ ಸಮಸ್ಯೆಯನ್ನು ವಿವರಿಸಿ, ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ astrology.kannada@oneindia.co.in ಮೂಲಕ ಕಳುಹಿಸಿದರೆ, ಆಯ್ದ ಪ್ರಶ್ನೆಗಳಿಗೆ ಪರಿಹಾರ ಸಹಿತವಾಗಿ ಜ್ಯೋತಿಷಿಗಳು ಉತ್ತರ ನೀಡುತ್ತಾರೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

Astrology: Answer to Oneindia Kannada reader question

ಇನ್ನು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ


ಪ್ರಶ್ನೆ: 16/17-6-1975 ರಾತ್ರಿ 12.30. ನನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕಿದೆ. ದಯವಿಟ್ಟು ತಿಳಿಸಿ.

ಜ್ಯೋತಿಷಿಗಳ ಉತ್ತರ: ನಿಮ್ಮದು ಉತ್ತರಾಫಲ್ಗುಣಿ ನಕ್ಷತ್ರ, ಮೂರನೇ ಪಾದ, ಕನ್ಯಾ ರಾಶಿ. 14-4-2013ರಿಂದ 14-4-2029ರವರೆಗೆ ನಿಮಗೆ ಗುರು ಮಹಾದಶೆ ನಡೆಯಲಿದೆ. ನಿಮ್ಮ ಜಾತಕದಲ್ಲಿ ಗಜಕೇಸರೀ ಯೋಗ, ಗುರು-ಮಂಗಲ ಯೋಗ, ಶಶಿ- ಮಂಗಲ ಯೋಗ ಇತ್ಯಾದಿ ಅತ್ಯಂತ ಶುಭ ಯೋಗಗಳಿವೆ.

ಅದರೆ, ನಿಮ್ಮ ಜನ್ಮ ಲಗ್ನದಲ್ಲೇ ಕುಜ ಇರುವುದರಿಂದ ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು 2017ರ ಜನವರಿ 26ರಿಂದ ಅರ್ಧಾಷ್ಟಮ ಶನಿ ಪ್ರಾರಂಭ ಆಗಿದ್ದು, ಇನ್ನು ಐದು ವರ್ಷ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಿಮಗೆ ಸಾಧ್ಯವಾದಲ್ಲಿ ಶನಿ ಶಾಂತಿ ಹೋಮ ಮಾಡಿಸಿ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಇನ್ನೊಂದು ವಿಚಾರ ನೆನಪಿಡಿ, ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ ಹಾಗೂ ಸಾಲ ಕೊಡಬೇಡಿ. ದೊಡ್ಡ ಹೂಡಿಕೆಯಂತೂ ಮಾಡಲೇಬೇಡಿ. ಇನ್ನೊಂದು ಪರಿಹಾರ ಏನೆಂದರೆ, ಉತ್ತಮ ಗುಣಮಟ್ಟದ ಕನಕ ಪುಷ್ಯರಾಗ ರತ್ನವನ್ನು ತ್ರಿದಿನ ಪೂಜಿಸಿ, ಅಭಿಮಂತ್ರಿಸಿ ಬೆಳ್ಳಿಯಲ್ಲಿ ಧರಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Astrologer Pandit Vittal Bhat gives answer to Oneindia Kannada reader question about the future.
Please Wait while comments are loading...