Astro Remedies 2025: ರಾಹು, ಕೇತು, ಶನಿ ಗ್ರಹಗಳ ರಾಶಿ ಬದಲಾವಣೆ- ಹೊಸ ವರ್ಷಕ್ಕೂ ಮುನ್ನ ಈ ಪರಿಹಾರ ಮಾಡಿ- ಪ್ರಗತಿ, ಲಾಭ ಪಕ್ಕಾ!

2025ನೇ ವರ್ಷ ಗ್ರಹಗಳ ಸಂಚಾರಕ್ಕೆ ಸಂಬಂಧಿಸಿದಂತೆ ತುಂಬಾ ಮಹತ್ವದ್ದಾಗಿದೆ. 2025ರಲ್ಲಿ ಅನೇಕ ಗ್ರಹಗಳು ಏಕಕಾಲದಲ್ಲಿ ಸಂಚಾರ ಮಾಡಲಿವೆ. ದೇಶ ಮತ್ತು ಪ್ರಪಂಚದ ಮೇಲೆ ಇದರ ಪ್ರಭಾವ ಕಂಡುಬರುತ್ತದೆ. ಹಾಗಾದರೆ 2025ರಲ್ಲಿ ಯಾವ ಪ್ರಮುಖ ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ? ಇದರ ಪರಿಣಾಮ ಯಾವ ರಾಶಿಗಳ ಮೇಲಾಗಲಿದೆ? ಇದರಿಂದ ಪರಿಹಾರಗಳೇನು ಎಲ್ಲವನ್ನೂ ಈಗ ತಿಳಿಯೋಣ.

2025ರಲ್ಲಿ ರಾಹು, ಶನಿ, ಮಂಗಳ, ಗುರು ಮತ್ತು ಕೇತುಗಳು ರಾಶಿಯನ್ನು ಬದಲಾಯಿಸಲಿವೆ. ಇದರಿಂದಾಗಿ ಹೊಸ ವರ್ಷದಲ್ಲಿ ನೀವು ಯಾವುದೇ ರೀತಿಯ ತೊಂದರೆ ಅನುಭವಿಸುವುದನ್ನ ತಪ್ಪಿಸಲು ಕೆಲ ಪರಿಹಾರಗಳನ್ನು ಈಗಲೇ ಅನುಸರಿಸುವುದು ಮುಖ್ಯ. ಹಾಗಾದರೆ ಯಾವ ಕ್ರಮಗಳಿಂದ ನೀವು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ ಎಂದು ತಿಳಿಯುವುದಕ್ಕಿಂತ ಮುಂಚೆ 2025 ರಲ್ಲಿ ಯಾವ ಗ್ರಹ ಯಾವ ದಿನಾಂಕದಂದು ಸಾಗುತ್ತದೆ ಎಮದು ತಿಳಿಯೋಣ.

astro remedies 2025 rahu ketu shani changes zodiac signs in 2025- do these remedies for profit

2025ರಲ್ಲಿ ಪ್ರಮುಖ ಗ್ರಹಗಳ ಸಾಗಣೆ ಹೀಗಿದೆ...

*ಗ್ರಹಗಳಲ್ಲಿ ಅತ್ಯಂತ ಅಶುಭ ಗ್ರಹವೆಂದು ಪರಿಗಣಿಸಲಾಗುವ ಶನಿಯು 2025ರ ಆರಂಭದಲ್ಲಿ ಕುಂಭ ರಾಶಿಯನ್ನು ತೊರೆದು ಮಾರ್ಚ್ 29, 2025 ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

* ಗುರು ಗ್ರಹ ವೃಷಭ ರಾಶಿಯಿಂದ ಹೊರಬಂದು 14 ಮೇ 2025 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.

* ರಾಹು ಮೀನ ರಾಶಿಯಿಂದ ಹೊರಬಂದು ಮೇ 18, 2025 ರಂದು ಕುಂಭ ರಾಶಿಯನ್ನು ತಲುಪುತ್ತಾನೆ.

* ಕೇತು ಮೇ 18, 2025 ರಂದು ಸಿಂಹದಲ್ಲಿ ಸಾಗುತ್ತದೆ.

ಈ 4 ದೊಡ್ಡ ಗ್ರಹಗಳು 2025ರಲ್ಲಿ ರಾಶಿಯನ್ನು ಬದಲಾಯಿಸಲಿವೆ. ಇದು 12 ರಾಶಿಯವರ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ಈ ಸಮಸ್ಯೆಗಳಿಂದ ಪಾರಾಗಲು ಹೊಸ ವರ್ಷ ಪ್ರಾರಂಭವಾಗುವ ಮೊದಲು ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಹೊಸ ವರ್ಷವು ನಿಮಗೆ ಮಂಗಳಕರವಾಗಿರುತ್ತದೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ಪಡೆಯುವಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ಹಾಗಾದರೆ ನಿಮಗೆ ಸರಳ ಪರಿಹಾರಗಳನ್ನು ಹೇಳುತ್ತೇವೆ ಅದು ಎಲ್ಲಾ ರಾಶಿಗಳಿಗೆ ಪ್ರಯೋಜನಕಾರಿಯಾಗಿದೆ.

astro remedies 2025 rahu ketu shani changes zodiac signs in 2025- do these remedies for profit

ಶನಿಯ 2025 ದುಷ್ಪರಿಣಾಮಗಳನ್ನು ತಪ್ಪಿಸಲು ಹೀಗೆ ಮಾಡಿ:-

*2025ರಲ್ಲಿ ಶನಿ ಮೀನ ರಾಶಿಗೆ ಸಾಗಲಿದೆ. ಸಕ್ಕರೆ ಮತ್ತು ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಪ್ರತಿ ಶನಿವಾರ ಆಲದ ಮರದ ಬೇರಿಗೆ ಅರ್ಪಿಸಿ. ಸೂರ್ಯೋದಯಕ್ಕೆ ಮುಂಚೆಯೇ ನೀವು ಈ ಪರಿಹಾರವನ್ನು ಮಾಡಬೇಕು. ಈ ಪರಿಹಾರವನ್ನು ಮಾಡುವುದರಿಂದ ಶನಿಯು ನಿಮ್ಮನ್ನು ಆಶೀರ್ವದಿಸುತ್ತಾನೆ. ಇದರಿಂದ ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ.

*ನಿಮಗೆ ಈ ಪರಿಹಾರವನ್ನು ಮಾಡಲು ಸಾಧ್ಯವಾಗದಿದ್ದರೆ ಶನಿವಾರದಂದು ಶನಿದೇವನ ಮಂತ್ರಗಳನ್ನು ಪಠಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಓಂ ಪ್ರಾಂ ಪ್ರೀಂ ಪ್ರೌಂ ಸ: ಶನೈಶ್ಚರಾಯ ನಮಃ: ಎಂದು ಪ್ರತಿ ಶನಿವಾರ ಕನಿಷ್ಠ 108 ಬಾರಿ ಈ ಮಂತ್ರವನ್ನು ಪಠಿಸುವುದು ಮಂಗಳಕರ ಫಲಿತಾಂಶ ನೀಡುತ್ತದೆ. ಈ ಪರಿಹಾರವನ್ನು ಮಾಡುವುದರಿಂದ ನೀವು ಶನಿಗ್ರಹದ ಸಾಡೇಸಾತಿಯಿಂದ ಪರಿಹಾರ ಪಡೆಯುವಿರಿ. ಧೈಯದಿಂದ ಜೀವನದಲ್ಲಿ ಸಾಗುವಿರಿ.

*ಇದಲ್ಲದೇ ಶನಿ ದೇವಸ್ಥಾನಕ್ಕೆ ತೆರಳಿ ಶನಿದೇವನ ಮುಂದೆ ಸಾಸಿವೆ ಎಣ್ಣೆಯಲ್ಲಿ ಕರಿ ಎಳ್ಳನ್ನು ಬೆರೆಸಿ ದೀಪ ಹಚ್ಚುವುದು ಕೂಡ ಒಳ್ಳೆಯದು. ಈ ಪರಿಹಾರ ಶನಿದೇವನ ಕೋಪದಿಂದ ಸ್ವಲ್ಪ ಪರಿಹಾರವನ್ನು ನೀಡುವುದು ಮಾತ್ರವಲ್ಲದೆ ಸವಾಲನ್ನು ಎದುರಿಸುವ ಶಕ್ತಿ ನಿಮಗೆ ಸಿಗಲಿದೆ.

ರಾಹು ಸಂಕ್ರಮಣ 2025 ಪರಿಹಾರಗಳು ಹೀಗಿದೆ...

*ಜ್ಯೋತಿಷ್ಯದಲ್ಲಿ ರಾಹುವನ್ನು ಪಾಪದ ಗ್ರಹವೆಂದು ಕರೆಯಲಾಗುತ್ತದೆ. ಹೀಗಾಗಿ ರಾಹುವನ್ನು ಮೆಚ್ಚಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಮೇ 18 ರಂದು ರಾಹು ಮೀನ ರಾಶಿಯಿಂದ ಕುಂಭ ರಾಶಿಗೆ ಸಾಗಲಿದೆ. ಇದಕ್ಕೂ ಮೊದಲು ರಾಹುವನ್ನು ಮೆಚ್ಚಿಸಲು ನೀವು ಕೆಲವು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕು.

*ಓಂ ರಾ ರಹ್ವೇ ನಮಃ ಎಂಬ ಮಂತ್ರವನ್ನು ಪ್ರತಿದಿನ ಒಂದು ಜಪಮಾಲೆಯನ್ನು ಹಿಡಿದು ಪಠಿಸಲು ಪ್ರಾರಂಭಿಸಿ. ಇದಲ್ಲದೇ ಪ್ರತಿನಿತ್ಯ ಪಕ್ಷಿಗಳಿಗೆ ಆಹಾರ ನೀಡಿ. ಇದಲ್ಲದೆ ಶನಿವಾರ ಕಪ್ಪು ನಾಯಿಗೆ ಏನಾದರೂ ತಿನ್ನಿಸಿ. ಜೊತೆಗೆ ಸೋಮವಾರ ಬೆಳಗ್ಗೆ ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅರ್ಪಿಸುವುದು ತುಂಬಾ ಉತ್ತಮ ಫಲವನ್ನು ನೀಡುತ್ತದೆ.

ಕೇತು ಸಂಕ್ರಮಣ 2025 ಪರಿಹಾರಗಳು ಹೀಗಿದೆ....

*ಕೇತುದೋಷದಿಂದ ಮುಕ್ತಿ ಹೊಂದಲು ಧರ್ಮಕಾರ್ಯಗಳನ್ನು ಮಾಡುವುದು ತುಂಬಾ ಒಳ್ಳೆಯದು. ಕೇತುವಿನ ಶುಭಫಲಗಳನ್ನು ಪಡೆಯಲು ಕಂಬಳಿ, ಬೆಚ್ಚನೆಯ ಬಟ್ಟೆ, ಛತ್ರಿ, ಆಹಾರ ಇತ್ಯಾದಿಗಳನ್ನು ದಾನ ಮಾಡಬೇಕು.

*ಅಲ್ಲದೆ ಕೇತುವನ್ನು ಮೆಚ್ಚಿಸಲು ಕಪ್ಪು ಅಥವಾ ಬಿಳಿ ನಾಯಿಗೆ ಆಹಾರ ನೀಡುವುದು ಕೂಡ ಒಳ್ಳೆಯ ಫಲ ನೀಡುತ್ತದೆ. ಇದಲ್ಲದೇ ಪ್ರತಿ ಶನಿವಾರ ಆಲದ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ. ಈ ಪರಿಹಾರದಿಂದ ಕೇತು ಸಂತೋಷಪಡುತ್ತಾನೆ. ನಿಮಗೆ ಆಶೀರ್ವದಿಸುತ್ತಾನೆ.

ಗುರು ಸಂಚಾರ 2025 ಪರಿಹಾರಗಳು ಹೀಗಿವೆ....

* 2025ರಲ್ಲಿ ಗುರು ಗ್ರಹ ಮಿಥುನ ರಾಶಿಯಲ್ಲಿ ಸಾಗಲಿದೆ. ಮೇ 14, 2025 ರಂದು ಗುರುವು ಮಿಥುನ ರಾಶಿಗೆ ಸಾಗುವುದರಿಂದ ಗುರುವನ್ನು ಮೆಚ್ಚಿಸುವುದು ಕೂಡ ತುಂಬಾ ಮುಖ್ಯವಾಗಿದೆ. ಗುರುವಾರದಿಂದ 3, 5 ಅಥವಾ 16 ಮಣಿ ಇರುವ ಜಪಮಾಲೆಯನ್ನು ಹಿಡಿದು 'ಓಂ ಗ್ರಾನ್ ಗ್ರೀನ್ ಗ್ರಾನ್ ಸ: ಗುರ್ವೇ ನಮಃ' ಎಂಬ ಮಂತ್ರವನ್ನು ಜಪಿಸಿ. ಇದು ಗುರು ದೇವರನ್ನು ಮೆಚ್ಚಿಸುವುತ್ತದೆ. ನಿಮ್ಮ ಜಾತಕದಲ್ಲಿ ಗುರು ಬಲವನ್ನು ಹೆಚ್ಚಿಸುತ್ತದೆ.

*ಇದಲ್ಲದೆ ಗುರುವಾರ ಸ್ನಾನ ಮಾಡುವಾಗ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ, ಹೀಗೆ ಮಾಡುವುದರಿಂದ ಗುರು ದೇವ ನಿಮ್ಮಿಂದ ಪ್ರಸನ್ನರಾಗುತ್ತಾರೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.

*ಗುರು ಗ್ರಹವನ್ನು ಬಲಪಡಿಸಲು ಸುಲಭವಾದ ಮತ್ತೊಂದು ಮಾರ್ಗವೆಂದರೆ ನಿಮ್ಮ ಗುರುವಿನ ಪಾದಗಳನ್ನು ಸ್ಪರ್ಶಿಸುವುದು. ಹೌದು ಪ್ರತಿದಿನ ನಿಮ್ಮ ಗುರುವಿನ ಪಾದಕ್ಕೆ ನಮಸ್ಕಾರ ಮಾಡುವುದು ಗುರು ದೇವನ ಮೆಚ್ಚುಗೆಯನ್ನು ಪಡೆಯಲು ಅನುವು ಮಾಡುತ್ತದೆ. ಇದರೊಂದಿಗೆ ನೀವು ಗುರುವಾರದಂದು ಉಪವಾಸವನ್ನು ಮಾಡಬಹುದು. ವಿಧಿಗಳ ಪ್ರಕಾರ ವಿಷ್ಣುವನ್ನು ಪೂಜಿಸಿ ಜಾತಕದಲ್ಲಿ ಗುರು ಬಲವನ್ನು ಹೆಚ್ಚಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+