Get Updates
Get notified of breaking news, exclusive insights, and must-see stories!

2021 Career, Job Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

2021ನೇ ಇಸವಿಯ ವರ್ಷ ಭವಿಷ್ಯದ ಬಗ್ಗೆ ಎಲ್ಲ ಅಂಶಗಳನ್ನು ಒಳಗೊಂಡಂತೆ ಲೇಖನ ಪ್ರಕಟಿಸಲಾಗಿದೆ. ಇನ್ನು ಪ್ರೀತಿ- ಪ್ರೇಮ, ಮದುವೆ ಭವಿಷ್ಯ ಹೇಗಿರುತ್ತದೆ ಅಂತಲೂ ವರ್ಷ ಭವಿಷ್ಯ ಪ್ರಕಟಿಸಲಾಗಿದೆ. ಆ ಹಿನ್ನೆಲೆಯಲ್ಲಿ ಈ ವರ್ಷ ಮೇಷದಿಂದ ಕನ್ಯಾ ರಾಶಿ ತನಕ ಉದ್ಯೋಗ, ವೃತ್ತಿಗೆ ಸಂಬಂಧಿಸಿದಂತೆ ಭವಿಷ್ಯ ಹೇಗಿರುತ್ತದೆ ಎಂಬ ಬಗೆಗಿನ ಲೇಖನ ಇದು.

ಅಂದ ಹಾಗೆ, ಜನವರಿಯಿಂದ ಏಪ್ರಿಲ್ ಆರಂಭದ ತನಕ ಗುರು ಮಕರ ರಾಶಿಯಲ್ಲಿದ್ದು, ಆ ನಂತರ ಕುಂಭ ರಾಶಿಗೆ ಪ್ರವೇಶ ಆಗುತ್ತದೆ. ಸೆಪ್ಟೆಂಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಮಕರ ರಾಶಿಯಲ್ಲಿದ್ದು, ಮತ್ತೆ ಕುಂಭಕ್ಕೆ ಪ್ರವೇಶ ಆಗುತ್ತದೆ. ವರ್ಷದ ಕೊನೆಯ ತನಕ ಗುರು ಕುಂಭ ರಾಶಿಯಲ್ಲಿ ಇದ್ದರೆ, ಶನಿ ಮಕರ ರಾಶಿಯಲ್ಲಿ, ರಾಹು ವೃಷಭ ಹಾಗೂ ಕೇತು ವೃಶ್ಚಿಕದಲ್ಲಿ ವರ್ಷ ಪೂರ್ತಿ ಇರುತ್ತವೆ.

ಆದ್ದರಿಂದ ಪ್ರಮುಖ ಗ್ರಹಗಳು ಎನಿಸಿದ ಗುರು, ಶನಿ, ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ರಾಶಿ ಭವಿಷ್ಯದ ಬಗ್ಗೆ ತಿಳಿಸಲಾಗುತ್ತಿದೆ. ಇನ್ನು ಆಯಾ ವ್ಯಕ್ತಿಯ ಜನ್ಮ ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿ ಹಾಗೂ ದಶಾ ಕಾಲ ಮುಖ್ಯವಾಗುತ್ತದೆ. ಆದ್ದರಿಂದ ವೈಯಕ್ತಿಕ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಬಾಧೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜುಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ್, ಬೆಂಗಳೂರು. ಮೊ. 99866 23344.

ಮೇಷ

ಮೇಷ

ವರ್ಷದ ಶುರುವಿಗೆ ಮೊದಲ ಮೂರು ತಿಂಗಳಲ್ಲಿ ಉದ್ಯೋಗ ಸ್ಥಳದಲ್ಲಿ ವಿಪರೀತ ಒತ್ತಡ ಇರುತ್ತದೆ. ಹಣಕಾಸಿನ ಸಮಸ್ಯೆ ಆಗಲಿದೆ, ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡರೂ ಸಾಧ್ಯವಾಗುವುದಿಲ್ಲ. ಇನ್ನೇನು ಕೆಲಸ ಸಿಕ್ಕೇಬಿಡ್ತು ಎನ್ನುವಷ್ಟರಲ್ಲಿ ಮುಂದಕ್ಕೆ ಹೋಗುತ್ತದೆ. ಸಾಲ ತೀರಿಸುವ ಒತ್ತಡದ ಕಾರಣಕ್ಕೆ ಶತಾಯಗತಾಯ ಪ್ರಯತ್ನಿಸುತ್ತೀರಿ. ಆದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಏಪ್ರಿಲ್ ನಂತರ ಸೆಪ್ಟೆಂಬರ್ ಮಧ್ಯೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉದ್ಯೋಗ ಬದಲಾವಣೆಗೆ ಅವಕಾಶ ದೊರೆಯಲಿದೆ. ಅಷ್ಟೇ ಅಲ್ಲ, ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳು ಯಶಸ್ವಿ ಆಗಲಿವೆ. ವೃತ್ತಿನಿರತರಿಗೆ ದೊಡ್ಡ ಸಂಸ್ಥೆಗಳ ಜತೆಗೆ ವ್ಯಾವಹಾರಿಕ ಒಪ್ಪಂದಗಳು ಆಗಲಿವೆ. ಆದರೆ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಲಿದ್ದು, ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಸ್ನೇಹಿತರ ಮೂಲಕ ಆಗುವ ಪರಿಚಯದಿಂದ ಅನುಕೂಲ ಇದೆ. ಆದರೆ ಯಾವ ಕಾರಣಕ್ಕೂ ನಿಮ್ಮ ವ್ಯವಹಾರದ ಒಳಗುಟ್ಟನ್ನು ಬಿಟ್ಟುಕೊಡದಿರಿ.

ವೃಷಭ

ವೃಷಭ

ವರ್ಷದ ಶುರುವಿನಲ್ಲಿ ನಿಮ್ಮ ಆಲಸ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕೈಯಾರೆ ಕಳೆದುಕೊಳ್ಳುತ್ತೀರಿ. ಒಂದೇ ಕೆಲಸವನ್ನು ನಾಲ್ಕಾರು ಬಾರಿ ಮಾಡಬೇಕಾಗುತ್ತದೆ. ತಂದೆ ಅಥವಾ ತಂದೆ ಕಡೆಯ ಸಂಬಂಧಿಕರ ಮೂಲಕ ತಿಳಿದುಬರುವ ಅವಕಾಶಗಳು ದಕ್ಕಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಪಡಬೇಕಾಗುತ್ತದೆ. ಚಾರ್ಟರ್ಡ್ ಅಕೌಂಟೆಂಟ್, ಬ್ಯೂಟಿಷಿಯನ್ ಗಳಾಗಿದ್ದು, ಸ್ವಂತ ಕಚೇರಿ ಆರಂಭಿಸಲು ಆಲೋಚನೆ ಮಾಡುತ್ತಿದ್ದಲ್ಲಿ ಏಪ್ರಿಲ್ ಮೊದಲ ವಾರದ ನಂತರ ಪ್ರಯತ್ನಿಸಿ. ಒಂದು ವೇಳೆ ಸೆಪ್ಟೆಂಬರ್ ಮೊದಲ ವಾರ ದಾಟಿದರೆ ನವೆಂಬರ್ ಕಳೆಯುವ ತನಕ ಕಾಯಬೇಕು. ಚಿತ್ರರಂಗದಲ್ಲಿ ಇರುವವರಿಗೆ ನಿಮ್ಮ ಯೋಜನೆಗಳನ್ನು ಬೇರೆಯವರು ತಮ್ಮದೆಂದು ಹೇಳಿಕೊಂಡು, ಕೀರ್ತಿ- ಹಣ ಲಪಟಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಯಾರನ್ನೂ ಕುರುಡಾಗಿ ನಂಬದಿರಿ. ಏಪ್ರಿಲ್ ನಂತರ ಕೆಲಸ ಬದಲಾವಣೆ ಮಾಡುವುದಿದ್ದರೆ ಅದಕ್ಕೆ ಅವಕಾಶ ದೊರೆಯಲಿದೆ. ಆದರೆ ಸಿಕ್ಕಾಪಟ್ಟೆ ಶ್ರಮ ಹಾಕಲೇಬೇಕು. ಇನ್ನು ವಿದೇಶಗಳಲ್ಲಿ ಉದ್ಯೋಗ ಸೇರಬೇಕು ಎಂದಿದ್ದರೆ ನೀವು ಸೇರಲಿರುವ ಕಂಪೆನಿಯ ಬಗ್ಗೆ ಕೂಲಂಕಷವಾಗಿ ವಿಚಾರಿಸಿ, ಮುಂದುವರಿಯಿರಿ.

ಮಿಥುನ

ಮಿಥುನ

ವರ್ಷದ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ನಿಮಗೆ ಅವಮಾನ ಆಯಿತು ಅಂತಲೋ ಅಥವಾ ಕೆಲಸದ ಒತ್ತಡ ಎಂಬ ಕಾರಣಕ್ಕೋ ಉದ್ಯೋಗವನ್ನು ಬಿಡದಿರಿ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನೀವು ಈ ಹಿಂದೆ ಮಾಡಿದ್ದ ಹೂಡಿಕೆಯ ಲಾಭ ಬರಬಹುದು ಅಥವಾ ನಿಮ್ಮ ತಂದೆಯವರು ಹಣ ನೀಡಬಹುದು. ಅದನ್ನು ಬಳಸಿ ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡಲು ಹೊರಟು ನಿಲ್ಲದಿರಿ. ಏಕೆಂದರೆ ಅಷ್ಟಮ ಶನಿಯ ಪ್ರಭಾವ ಬಹಳ ಕ್ರೂರವಾಗಿರುತ್ತದೆ. ಇದರ ಜತೆಗೆ ಹನ್ನೆರಡನೇ ಮನೆಯ ರಾಹುವಿನ ಪ್ರಭಾವವೂ ಇರುತ್ತದೆ. ಆದರೆ ಕೇತು, ಗುರುವಿನ ಅನುಕೂಲ ಇದೆಯಾದ್ದರಿಂದ ಆಗಾಗ ಹಣದ ಅನುಕೂಲ ಆಗುತ್ತದೆ. ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡುವಂತೆ ಸಲಹೆ ಬಂತೆಂದು ಮುಂದುವರಿಯದಿರಿ. ಹಾಗಿದ್ದರೆ ಏನು ಮಾಡಬೇಕು ಅಂತೀರಾ? ಒತ್ತಡ ಮಾಡಿಕೊಳ್ಳದಂತೆ ಕೆಲಸದಲ್ಲಿ ಮುಂದುವರಿಯಿರಿ. ಸಾಲಗಳನ್ನು ತೀರಿಸಿಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಮಾತನ್ನು ಆತ್ಮಾಭಿಮಾನಕ್ಕೆ ಬಿದ್ದ ಪೆಟ್ಟು ಎಂದು ಪರಿಗಣಿಸದಿರಿ. ವೃತ್ತಿಪರರು ಇರುವ ಅವಕಾಶದಲ್ಲೇ ಮುಂದುವರಿಯುವುದಕ್ಕೆ ಆಲೋಚಿಸಿ.

ಕರ್ಕಾಟಕ

ಕರ್ಕಾಟಕ

ಜನವರಿಯಿಂದ ಮಾರ್ಚ್ ಕೊನೆಗೆ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ನಿಮಗಾಗದವರ ಪಿತೂರಿಯಿಂದ ಕೆಲಸ- ಕಾರ್ಯಗಳಿಗೆ ಅಡೆತಡೆ ಎದುರಾಗುತ್ತದೆ. ಇದರ ಜತೆಗೆ ಅದೃಷ್ಟ ಕೂಡ ಕೈ ಕೊಡುವುದಕ್ಕೆ ಶುರು ಆಗುತ್ತದೆ. ನಿಮ್ಮ ಮಾತು ಹೇಗೆ ಇರುತ್ತದೋ ಆ ರೀತಿಯಲ್ಲಿ ನೆಮ್ಮದಿ ಆಧಾರ ಪಟ್ಟಿರುತ್ತದೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲವು ಕಾನೂನು ಅಡೆತಡೆಗಳು ಎದುರಾಗಬಹುದು. ದಾಖಲೆ ಪತ್ರಗಳು ಜೋಪಾನವಾಗಿ ಇಟ್ಟುಕೊಳ್ಳಿ. ಕಾನೂನು ವಿರುದ್ಧವಾಗಿ ಅಥವಾ ಮೀರಿ ವರ್ತಿಸದಿರಿ. ಇದರಿಂದ ಬಹಳ ಸಮಯ ತೊಂದರೆ ಎದುರಿಸಬೇಕಾಗುತ್ತದೆ. ವೃತ್ತಿಪರರು ಪಾರ್ಟನರ್ ಷಿಪ್ ನಲ್ಲಿ ಮುಂದುವರಿಸುತ್ತಿದ್ದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟು, ನಷ್ಟ ಕಾಣುವಂತಾಗುತ್ತದೆ. ನೆನಪಿನಲ್ಲಿಡಿ, ಈಗ ಹೊಸದಾಗಿ ಯಾವುದೇ ಪಾರ್ಟನರ್ ಷಿಪ್ ವ್ಯವಹಾರ ಆರಂಭಿಸದಿರಿ. ನಯವಾದ ಮಾತುಗಳಿಗೆ ಪಿಗ್ಗಿ ಬಿದ್ದರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಉದ್ಯೋಗಸ್ಥರಿಗೆ ಏಕಾಗ್ರತೆ ಬಹಳ ಕಷ್ಟವಾಗಲಿದೆ. ಏರಿಳಿತಗಳು ಕಾಣಲಿದ್ದೀರಿ. ನಿಮ್ಮ ಬಗ್ಗೆ ಇತರರು ಅನುಮಾನ ಪಡದಿರುವಂತೆ ಪಾರದರ್ಶಕವಾಗಿ ಇರುವುದು ಉತ್ತಮ.

ಸಿಂಹ

ಸಿಂಹ

ನೀವೇ ಮಾಡಿಕೊಂಡ ಯಡವಟ್ಟುಗಳು ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ಬಹಳ ಕಾಡುತ್ತವೆ. ಆರೋಗ್ಯದ ಬಗ್ಗೆ ಬಹಳ ಗಮನ ನೀಡಬೇಕು. ಅದರಲ್ಲೂ ನಿಮ್ಮ ತೂಕದ ಕಡೆಗೆ ಲಕ್ಷ್ಯ ಕೊಡಬೇಕು. ಏಕೆಂದರೆ, ಕೆಲಸದ ಮಧ್ಯೆ ಆರೋಗ್ಯದ ಕಡೆ ನಿಗಾ ಮಾಡಲಾಗದೆ ಅದು ಔದ್ಯೋಗಿಕ ಮತ್ತು ವೃತ್ತಿ ಬದುಕಿನ ಮೇಲೂ ಪರಿಣಾಮ ಬೀರಲಿದೆ. ಇನ್ನು ಏಪ್ರಿಲ್ ನಂತರ ಸೆಪ್ಟೆಂಬರ್ ತನಕ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಆದಾಯ ಮೂಲ ಹೆಚ್ಚಳಕ್ಕೆ ದಾರಿ ಸಿಗಲಿದೆ. ಪಾರ್ಟನರ್ ಷಿಪ್ ವ್ಯವಹಾರದಲ್ಲಿ ಲಾಭ ಸಿಗಲಿದೆ. ವ್ಯಾಪಾರ ಆರಂಭಿಸಿದ್ದಲ್ಲಿ ವಿಸ್ತರಣೆಗೆ ಅವಕಾಶಗಳು ದೊರೆತು, ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶಗಳು ಸಹ ಇವೆ. ಉದ್ಯೋಗದಲ್ಲಿ ಬಡ್ತಿ, ನೀವು ಕೇಳಿದ ಕಡೆಗೆ ವರ್ಗಾವಣೆ, ವೇತನ ಹೆಚ್ಚಳವನ್ನು ನಿರೀಕ್ಷಿಸಬಹುದು. ಆದರೆ ಮೊದಲೇ ಹೇಳಿದಂತೆ ವರ್ಷದ ಶುರು ಹಾಗೂ ಸೆಪ್ಟೆಂಬರ್ ಮತ್ತು ನವೆಂಬರ್ ಮಧ್ಯೆ ಯಾರನ್ನೂ ಎದುರು ಹಾಕಿಕೊಳ್ಳದಿರಿ. ಈ ಅವಧಿಯಲ್ಲಿ ಗುರು ಆರಾಧನೆಯನ್ನು ಮಾಡಿ.

ಕನ್ಯಾ

ಕನ್ಯಾ

ಉದ್ಯೋಗ ಹಾಗೂ ವೃತ್ತಿಯಲ್ಲಿ ಬಹಳ ಸವಾಲಿನ ಸಮಯ ಇದು. ಗಡುವಿನೊಳಗೆ ಕೆಲಸ ಮುಗಿಸುವುದಕ್ಕೆ ಶತಾಯಗತಾಯ ಪ್ರಯತ್ನಿಸಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸು- ಹೆಸರಿಗೆ ಧಕ್ಕೆ ಆಗಬಹುದು. ಆದಾಯದಲ್ಲಿ ಗಣನೀಯವಾಗಿ ಇಳಿಕೆ ಆಗಲಿದೆ. ಆ ಆತಂಕದಲ್ಲಿ ಸಾಲ ತಂದು ದೊಡ್ಡ ವ್ಯಾಪಾರ- ವ್ಯವಹಾರಗಳಿಗೆ ಹಣ ತೊಡಗಿಸಬೇಡಿ. ತಾಳ್ಮೆ- ಸಂಯಮ ಬಹಳ ಅಗತ್ಯ. ಉದ್ಯೋಗ, ವ್ಯಾಪಾರ ಅಥವಾ ವ್ಯವಹಾರ ಯಾವುದೇ ಆದಲ್ಲಿ ನಿಮ್ಮ ವರ್ಚಸ್ಸನ್ನು ಕಳೆದುಕೊಳ್ಳದಿರಿ. ಈಗಾಗಲೇ ಹಣ ತೊಡಗಿಸಿದ ವ್ಯಾಪಾರದಲ್ಲಿ ದೊಡ್ಡ ನಷ್ಟ ಎದುರಾಗಬಹುದು. ನಿಮ್ಮ ಮೂಲ ಸ್ವಭಾವದಲ್ಲಿ ಬದಲಾವಣೆ ಆಗಬೇಕಿದೆ. ಎಲ್ಲವೂ ಹೀಗೇ ಆಗಬೇಕು ಎಂಬ ನಿಮ್ಮ ಧೋರಣೆಯಲ್ಲಿ ರಾಜೀ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ಆದ್ದರಿಂದ ಎಲ್ಲಿ ಅಗತ್ಯವೋ ಅಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಿ. ಸುಲಭಕ್ಕೆ ದುಡ್ಡು ಮಾಡುವ ದಾರಿ ಗೋಚರಿಸಿತು ಅಂದುಕೊಂಡು, ಅದರ ಹಿಂದೆ ಹೋಗದಿರಿ. ಆ ರೀತಿಯ ದಾರಿ ತೋರಿಸುವ ಸ್ನೇಹಿತರು ಈ ಸಂದರ್ಭದಲ್ಲಿ ಪರಿಚಯ ಆಗಲಿದ್ದಾರೆ. ಅದರಿಂದ ಸಮಸ್ಯೆ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆಯೇ ವಿನಾ ಸುಧಾರಣೆ ಕಾಣಲ್ಲ.

(ಮುಂದಿನ ಭಾಗದಲ್ಲಿ ತುಲಾದಿಂದ ಮೀನ ರಾಶಿ ತನಕ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+