AI ಸ್ಟಾರ್ಟ್ಅಪ್‌ನಿಂದ ಕೆಲವೇ ನಿಮಿಷಗಳಲ್ಲಿ ಉದ್ಯೋಗ ನೇಮಕಾತಿ
ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಜಾಗತಿಕವಾಗಿ ದಿನಕ್ಕೊಂದು ಬದಲಾವಣೆಗಳು ನಡೆಯುತ್ತಿವೆ. ಬೂಟ್‌ಸ್ಟ್ರಾಪ್ಡ್ AI-ಚಾಲಿತ ನೇಮಕಾತಿ ವೇದಿಕೆಯಾದ ಟ್ಯಾಲೆಂಟೊ.ಎಐ (Tallento.ai) ಸದ್ಯ 1 ಮಿಲಿಯನ್ ನೋಂದಾಯಿತ ವೃತ್ತಿಪರರನ್ನು ದಾಟಿದ್ದು, ಭಾರತದಾದ್ಯಂತ 5,500ಕ್ಕೂ ಹೆಚ್ಚು ಉದ್ಯೋಗದಾತರೊಂದಿಗೆ ಪಾಲುದಾರಿಕೆ ಹೊಂದಿದೆ. ಉದ್ಯೋಗಗಳಿಗೆ ಪ್ರತಿಭಾವಂತರನ್ನು ಪತ್ತೆ ಹಚ್ಚುವುದು, ಪರಿಶೀಲನೆ ಮತ್ತು ನೇಮಕಕ್ಕೆ ಸೇತುವೆಯಾಗುತ್ತಿದ್ದು, ಈ ಮೂಲಕ ಭಾರತದ ತ್ವರಿತ ನೇಮಕಾತಿ ವೇದಿಕೆ ಎಂದು ಕರೆಸಿಕೊಂಡಿದೆ.
ಕೃತಕ ಬುದ್ಧಿಮತ್ತೆ, ಗೇಮಿಫಿಕೇಶನ್ ಮೂಲಕ ಕಂಪನಿಯು ಉದ್ಯೋಗಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ವಾರಗಳಿಂದ ನಿಮಿಷಗಳಿಗೆ ಕಡಿಮೆ ಮಾಡಿದೆ. ಐಐಟಿ ಗುವಾಹಟಿ, ಎನ್ಐಟಿ ಮತ್ತು ಐಐಎಂಬಿಯ ಹಳೆಯ ವಿದ್ಯಾರ್ಥಿಗಳಿಂದ ಸ್ಥಾಪಿಸಲ್ಪಟ್ಟ ಟ್ಯಾಲೆಂಟೊ.ಎಐ ಸಾಂಪ್ರದಾಯಿಕ ಉದ್ಯೋಗ ಪೋರ್ಟಲ್‌ಗಳಿಗೆ ಪರ್ಯಾಯವಾಗಿ ಹೊರಹೊಮ್ಮಿದೆ. ಇದು ಕೃತಕ ಬುದ್ಧಿಮತ್ತೆ-ಚಾಲಿತ ಅಲ್ಗಾರಿದಮ್‌ಗಳು, ಗೇಮಿಫೈಡ್ ಉದ್ಯೋಗವನ್ನು ಸಂಯೋಜಿಸಿ ಕಂಪನಿಗಳು ಕೆಲವೇ ನಿಮಿಷಗಳಲ್ಲಿ ಪ್ರತಿಭೆಯನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಮೂಲಕ ನೇಮಕ ಮಾಡಿಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ.

ನಾವು ಒಂದು ಸರಳ ಪ್ರಶ್ನೆಯನ್ನು ಕೇಳಿದ್ದೇವೆ. ದಿನಸಿ ವಸ್ತುಗಳು ಮತ್ತು ಕ್ಯಾಬ್‌ಗಳು 10 ನಿಮಿಷಗಳಲ್ಲಿ ಬರಬಹುದಾದರೆ, ನೇಮಕಾತಿ ಇನ್ನೂ 30 ದಿನಗಳನ್ನು ಏಕೆ ತೆಗೆದುಕೊಳ್ಳುತ್ತದೆ? ಎಂದು ಸಹ-ಸಂಸ್ಥಾಪಕ ಸಂದೀಪ್ ಬೂರ ಹೇಳಿದ್ದಾರೆ. ನಾವು ವೇಗ, ಪ್ರಸ್ತುತತೆ ಮತ್ತು ಘನತೆಗಾಗಿ ಇದನ್ನು ಪರಿಹರಿಸುತ್ತಿದ್ದೇವೆ. ವಿಶೇಷವಾಗಿ ಕಾರ್ಯಪಡೆಗೆ ಪ್ರವೇಶಿಸುವ ಯುವ ವೃತ್ತಿಪರರಿಗಾಗಿ ಇದರಿಂದ ಅನುಕೂಲ ಎಂದಿದ್ದಾರೆ.
ಇನ್ನು ಆರಂಭದಲ್ಲಿ ಎಡ್‌ಟೆಕ್ ನೇಮಕಾತಿಯ ಮೇಲೆ ಕೇಂದ್ರೀಕರಿಸಿದ್ದ ಟ್ಯಾಲೆಂಟೊ.ಎಐ ಈಗ ಅಲೆನ್, ಆಕಾಶ್ ಇನ್‌ಸ್ಟಿಟ್ಯೂಟ್, ಫಿಸಿಕ್ಸ್‌ವಲ್ಲಾ ಮತ್ತು ಬೈಜುಸ್ ಸೇರಿದಂತೆ ಉನ್ನತ ಬ್ರ್ಯಾಂಡ್‌ಗಳ ಸಹಯೋಗದಲ್ಲಿ ಕೆಲಸ ಮಾಡುತ್ತಿದೆ. ಇದು ಭಾರತದಾದ್ಯಂತ ಶಿಕ್ಷಕರು ಮತ್ತು ಕಾರ್ಯಾಚರಣೆಗಳ ನೇಮಕಾತಿಗಳಿಗೆ ಅನುಕೂಲ ಮಾಡಿಕೊಡುತ್ತದೆ. 120ಕ್ಕೂ ಹೆಚ್ಚು ತಂಡದ ಸದಸ್ಯರಿಂದಾಗಿ ಕಂಪನಿಯು ಲಾಭದಾಯಕವಾಗಿ ಬೆಳೆದಿದೆ. ಇದು ಬಲವಾದ ಮಾರುಕಟ್ಟೆ ಬೇಡಿಕೆ ಮತ್ತು ಬಳಕೆದಾರರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
AI ರಚಿತ ಟ್ರಸ್ಟ್ ಸ್ಕೋರ್‌ಗಳಿಂದ ಬೆಂಬಲಿತವಾದ ಉದ್ಯೋಗದಾತರಿಗೆ ಒಂದು-ಕ್ಲಿಕ್ ಪರಿಶೀಲಿಸಿದ ನೇಮಕಾತಿ ಸೇವೆ ನೀಡುತ್ತಿದೆ. ನೇಮಕಾತಿ ಇನ್ನು ಮುಂದೆ ಕೇವಲ ವಹಿವಾಟಿನದ್ದಲ್ಲ ಎಂದು ಸಹ-ಸಂಸ್ಥಾಪಕಿ ನೇಹಾ ಗೋಪಾಲ್ ಠಾಕೂರ್ ಹೇಳಿದ್ದಾರೆ. ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ, ಮಾನಸಿಕ ಯೋಗಕ್ಷೇಮವನ್ನು ಬೆಂಬಲಿಸುವ ಮತ್ತು ಕಂಪನಿಗಳು ಸರಿಯಾದ ಪ್ರತಿಭೆಯನ್ನು ವೇಗವಾಗಿ ಕಂಡುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ. ಭಾರತದ ಯುವಕರಿಗೆ ವೇಗದ, ನ್ಯಾಯಯುತ ಮತ್ತು ಭವಿಷ್ಯಕ್ಕೆ ಸಿದ್ಧವಾದ ನೇಮಕಾತಿಯ ಅಗತ್ಯವಿದೆ ಎಂದು ಸಹ-ಸಂಸ್ಥಾಪಕ ತುಷಾರ್ ಸರಾಫ್ ಹೇಳಿದ್ದಾರೆ.
Tallento.ai ಹಿನ್ನೆಲೆ ಏನು?
Tallento.ai ನವದೆಹಲಿ ಮೂಲದ ನೇಮಕಾತಿ ಮತ್ತು ವೃತ್ತಿ ವೇದಿಕೆಯಾಗಿದೆ. ಇದು ಭಾರತದಲ್ಲಿ ನೇಮಕಾತಿಗಳಿಗೆ ಕೃತಕ ಬುದ್ಧಿಮತ್ತೆ ಬಳಸುತ್ತದೆ. ಇದು 1 ಮಿಲಿಯನ್ ವೃತ್ತಿಪರರು ಮತ್ತು 5,500ಕ್ಕೂ ಹೆಚ್ಚು ಉದ್ಯೋಗದಾತರಿಗೆ ಸೇವೆ ಸಲ್ಲಿಸುತ್ತದೆ. ನೈಜ-ಸಮಯದ ಉದ್ಯೋಗ ಹೊಂದಾಣಿಕೆ, ಪರಿಶೀಲಿಸಿದ ನೇಮಕಾತಿ ಮತ್ತು ವಿವಿಧ ವಲಯಗಳಲ್ಲಿ ಗೇಮಿಫೈಡ್ ಅಭ್ಯರ್ಥಿಗಳ ಸಂಪರ್ಕ ನೀಡುತ್ತದೆ.












Click it and Unblock the Notifications